Recent Posts

Saturday, April 25, 2026
ಬಂಟ್ವಾಳಸುದ್ದಿ

ಬಂಟ್ವಾಳ ಕಂದಾಯ ಇಲಾಖೆಯಲ್ಲಿ ನಡೆದ ತಾಲೂಕು ಮಟ್ಟದ ಸರ್ವಜ್ಞ ಜಯಂತಿ ಕಾರ್ಯಕ್ರಮ –ಕಹಳೆ ನ್ಯೂಸ್

ಬಂಟ್ವಾಳ: ಬಂಟ್ಚಾಳ ತಾಲೂಕು ಮಟ್ಟದ ಸರ್ವಜ್ಞ ಜಯಂತಿ ಆಚರಣೆ ಕಾರ್ಯಕ್ರಮ ಬಿಸಿರೋಡಿನ ಕಂದಾಯ ಇಲಾಖೆಯಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಶಿಲ್ದಾರ್ ಅರ್ಚನಾ ಭಟ್ ವಹಿಸಿ ಮಾತನಾಡಿ, ಯಾವುದೇ ಒಂದು ಸರ್ವಜ್ಞ ಸಮುದಾಯಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ಅವರು ಸರ್ವರಿಗೂ ಆದರ್ಶಪ್ರಾಯವಾದ ಶ್ರೇಷ್ಠ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.
ಸರ್ವಜ್ಞ ಶ್ರೇಷ್ಠ ಜ್ಞಾನವನ್ನು ಮುಂದಿನ ಜನಾಂಗಕ್ಕೆ ಹೇಗೆ ತಿಳಿಸಿಕೊಡಬಹುದು ಎಂಬ ವಿಚಾರದ ಬಗ್ಗೆ ಯೋಚನೆ ಮಾಡಬೇಕಾಗಿದೆ.
ಸರಕಾರ ಇಂತಹ ಶ್ರೇಷ್ಠ ವ್ಯಕ್ತಿಗಳ ಆಚರಣೆ ಮಾಡಿರುವ ಸಂಗತಿ ಅತ್ಯಂತ ಸಂತಸದ ವಿಚಾರ ಎಂದು ತಿಳಿಸಿದರು.
ವಕೀಲರಾದ ಸುರೇಶ್ ನಾವೂರ ಮಾತನಾಡಿ, ಸಮಾಜದ ಅಂಕುಡೊAಕುಗಳ ನಿವಾರಣೆಗಾಗಿ ಹೋರಾಟ ಮಾಡಿದ ಮಹಾನುಭಾವ ಸರ್ವಜ್ಞರು ಎಂದು ಅವರು ತಿಳಿಸಿದರು.
ಇಂತಹ ಶ್ರೇಷ್ಠ ವ್ಯಕ್ತಿಗಳ ವ್ಯಕ್ತಿತ್ವವನ್ನು, ಆದರ್ಶಗಳನ್ನು ಅಳವಡಿಸಿಕೊಂಡರೆ ಜೀವನ ಮೌಲ್ಯ ವೃದ್ದಿಯಾಗುತ್ತದೆ,ಕಾರ್ಯಕ್ರಮಗಳು ಅರ್ಥಪೂರ್ಣವಾಗಬಹುದು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಹಿರಿಯ ನಾಗರಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಯ್ಯ ಹನೈನಡೆ, ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಯುವ ವೇದಿಕೆ ಅದ್ಯಕ್ಷ ನಿತೀಸ್ ಪಲ್ಲಿಕಂಡ, ರಾಜ್ಯ ಕುಲಾಲ ಕುಂಬಾರ ಮಹಿಳಾ ಸಂಘದ ಅದ್ಯಕ್ಷೆ ನಳಿನಿಮಹಾಬಲ ಯುವ ವೇದಿಕೆ ಮಹಿಳಾ ಸಂಘದ ಅಧ್ಯಕ್ಷೆ ವಿಜಯಶ್ರೀ ಪುರುಷೋತ್ತಮ , ಕೇಂದ್ರ ಸ್ಥಾನೀಯ ಉಪತಹಶೀಲ್ದಾರ್ ನರೇಂದ್ರನಾಥ ಮಿತ್ತೂರು, ಉಪತಹಶೀಲ್ದಾರ್ ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕ ವಿಜಯ ಆರ್,ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಕಂದಾಯ ನಿರೀಕ್ಷಕ ಜನಾರ್ದನ ಜೆ.ಸ್ವಾಗತಿಸಿದರು.
ಶ್ರೀಕಲಾ ವಂದಿಸಿದರು.
ಕAದಾಯ ನಿರೀಕ್ಷಕ ನವೀನ್ ಬೆಂಜನಪದವು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು