Recent Posts

Thursday, June 18, 2026
ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಕೇಪು ವಲಯದ ಮಾಣಿಲ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ರೂ.1 ಲಕ್ಷ ಮೊತ್ತ ಮಂಜೂರು – ಕಹಳೆ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ವಿಟ್ಲ ಯೋಜನಾ ಕಚೇರಿ ವ್ಯಾಪ್ತಿಯ ಕೇಪು ವಲಯದ ಮಾಣಿಲ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ಅನುದಾನದ ರೂ.1 ಲಕ್ಷ ಮೊತ್ತದ ಡಿ ಡಿ ಯನ್ನು ಹಸ್ತಾಂತರಿಸಲಾಯಿತು.

ಜಾಹೀರಾತು
ಜಾಹೀರಾತು


ಈ ಸಂದರ್ಭದಲ್ಲಿಮಾಣಿಲ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಸೀತಾರಾಮ ಬಳ್ಳಾಲ್ ಚಿಪ್ಪಾರು, ಕಾರ್ಯದರ್ಶಿ ಶ್ರೀ ಗಂಗಾಧರ್ ಬಲ್ಲಾಲ, ಉಪಾಧ್ಯಕ್ಷರಾದ ಮುರಳಿದರ ಬಳ್ಳಾಲ್ , ಜಯರಾಜ ಬಳ್ಳಾಲ್, ಲವಕುಮಾರ್, ಯೋಜನೆಯ ಮಾಣಿಲ ಒಕ್ಕೂಟದ ಮಾಜಿ ಅಧ್ಯಕ್ಷರಾದ ಅನಂದ ಬಂಗೇರ, ಕೇಪು ಶ್ರೀ ಉಳ್ಳಾಲ್ತಿ ಶೌರ್ಯ ಘಟಕದ ಅಧ್ಯಕ್ಷರಾದ ಈಶ್ವರ ನಾಯ್ಕ್, ಅಡ್ಯನಡ್ಕ ಒಕ್ಕೂಟದ ಅಧ್ಯಕ್ಷರಾದ ಪುಷ್ಪಕರ್ ರೈ, ಕೃಷಿ ಮೇಲ್ವಿಚಾರಕ ಚಿದಾನಂದ್, ಕೇಪು ವಲಯ ಮೇಲ್ವಿಚಾರಕ ಜಗದೀಶ್, ಸೇವಾಪ್ರತಿನಿಧಿಗಳಾದ ಗಾಯತ್ರಿ, ಮತ್ತು ಗುಲಾಬಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು