Monday, April 27, 2026

archivekahale news

ರಾಜಕೀಯ

ಸಚಿವ ಹೆಚ್.ಸಿ. ಮಹದೇವಪ್ಪಗೆ ಐ.ಟಿ. ಶಾಕ್ – ಕಹಳೆ ನ್ಯೂಸ್

ಮೈಸೂರು: ವಿಧಾನಸಭೆ ಚುನಾವಣೆ ಹೊತ್ತಲ್ಲೇ ಸಚಿವ ಹೆಚ್.ಸಿ. ಮಹದೇವಪ್ಪ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರು ವಿಜಯನಗರದಲ್ಲಿರುವ ಮಹದೇವಪ್ಪ ಅವರ ನಿವಾಸದ ಮೇಲೆ ಬೆಳಿಗ್ಗೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಮಹದೇವಪ್ಪ ಮನೆಯಲ್ಲಿಯೇ ಇದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತ ಸಚಿವರಾಗಿರುವ ಮಹದೇವಪ್ಪ ಅವರ ನಿವಾಸದ ಮೇಲೆ ಚುನಾವಣೆ ವೇಳೆಯಲ್ಲೇ ದಾಳಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ....
ಸುದ್ದಿ

ಪುತ್ತೂರಿನ ಬಸ್ ನಿಲ್ದಾಣದ ಬಳಿ ಕಟ್ಟಡ ಕುಸಿತ ; ರಕ್ಷಣೆಗೆ ಸಹಕರಿಸಿ ಮಾನವೀಯತೆ ಮೆರೆದ ಪುತ್ತೂರಿನ ಫಯರ್ ಬ್ರ್ಯಾಂಡ್ ಅರುಣ್ ಕುಮಾರ್ ಪುತ್ತಿಲ – ಕಹಳೆ ನ್ಯೂಸ್

ಪುತ್ತೂರು : ನಗರದ ಬಸ್ಸು ನಿಲ್ದಾಣದ ಬದಿಯಲ್ಲಿ ಕೆಲಸದ ಹಂತದಲ್ಲಿರುವ ಕಟ್ಟಡದ ಧರೆ ಕುಸಿದು ಮಣ್ಣಿನಡಿಯಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಾಣಾ ಕಾರ್ಯ ನಡೆಯುತ್ತಿದ್ದು ರಕ್ಷಣಾ ಕಾರ್ಯದಲ್ಲಿ ಭಾಗಿ ಹಿಂದೂ ಫಯರ್ ಬ್ರ್ಯಾಂಡ್ ಅರುಣ್ ಕುಮಾರ್ ಪುತ್ತಿಲ ಭಾಗಿಯಾಗಿದ್ದಾರೆ. ವಿಡಿಯೋ : https://youtu.be/RguN-pEgke8...
ರಾಜಕೀಯ

ಬಿ.ಜೆ.ಪಿ. ಅಭ್ಯರ್ಥಿ ಕಾರಿಗೆ ದುಷ್ಕರ್ಮಿಗಳಿಂದ ಬೆಂಕಿ – ಕಹಳೆ ನ್ಯೂಸ್

ಕೋಲಾರ: ವಿಧಾನಸಭೆ ಚುನಾವಣೆ ಕಾವು ಏರತೊಡಗಿರುವಂತೆಯೇ ಕೋಲಾರದಲ್ಲಿ ದ್ವೇಷದ ರಾಜಕಾರಣ ಶುರುವಾಗಿದೆ. ತಡರಾತ್ರಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದು ಬಿ.ಜೆ.ಪಿ. ಅಭ್ಯರ್ಥಿ ಕಾರಿಗೆ ಬೆಂಕಿ ಹಚ್ಚಿದ್ದಾರೆ. ಕೋಲಾರದ ಕಠಾರಿಪಾಳ್ಯದಲ್ಲಿ ಬಿ.ಜೆ.ಪಿ. ಅಭ್ಯರ್ಥಿ ಓಂಶಕ್ತಿ ಚಲಪತಿ ಅವರ ಮನೆ ಮುಂದೆ ನಿಲ್ಲಿಸಲಾಗಿದ್ದ ಇನ್ನೋವಾ ಮತ್ತು ಮಾರುತಿ 800 ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಕೋಲಾರ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ....
ರಾಜಕೀಯ

ಕರಾವಳಿಗೆ ಬರಲಿದ್ದಾರೆ ಕಾಂಗ್ರೆಸ್ ಸ್ಟಾರ್ ಪ್ರಚಾರಕಿ ಪ್ರಿಯಾಂಕಾ ಗಾಂಧಿ – ಕಹಳೆ ನ್ಯೂಸ್

ಮಂಗಳೂರು: ಕಾಂಗ್ರೆಸ್ ಪಾಲಿನ ಸ್ಟಾರ್ ಪ್ರಚಾರಕಿ, ಇಂದಿರಾ ಗಾಂಧಿಯ ಪಡಿಯಚ್ಚು ಅಂತಲೇ ಖ್ಯಾತಿ ಗಳಿಸಿರುವ ಪ್ರಿಯಾಂಕಾ ಗಾಂಧಿ ಕರಾವಳಿಗೆ ಪ್ರ್ರಚಾರಕ್ಕೆ ಬರುವುದು ಖಚಿತವಾಗಿದೆ. ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಪ್ರಿಯಾಂಕಾರನ್ನು ಅಂತಿಮ ಹಂತದಲ್ಲಿ ಪ್ರಚಾರ ಕಣಕ್ಕಿಳಿಸುವುದು ಖಚಿತವಾಗಿದ್ದು, ಇದೇ ವೇಳೆ ಕರಾವಳಿ ಭಾಗಕ್ಕೂ ಭೇಟಿ ನೀಡಲಿದ್ದಾರೆ. ಮೇ 1ರಿಂದ ಪ್ರಧಾನಿ ನರೇಂದ್ರ ಮೋದಿಯೂ ಪ್ರಚಾರಕ್ಕೆ ಬರಲಿದ್ದು ಈಗಾಗಲೇ ಪ್ರವಾಸ ದಿನಾಂಕ ನಿಗದಿಯಾಗಿದೆ. ಬಿಜೆಪಿ ಕೊನೆ ಕ್ಷಣದಲ್ಲಿ ಪ್ರಧಾನಿ ಮೋದಿಯನ್ನು ಪ್ರಚಾರ ಕಣಕ್ಕಿಳಿಸುವ ಮಾದರಿಯಲ್ಲೇ...
ಸಿನಿಮಾ

ಸ್ಕರ್ಟ್ ಎಳೆದು, ಇದರ ಕೆಳಗೆ ಏನಿದೆ ತೋರಿಸು: ಮಾಡೆಲ್‍ಗೆ ಕಾಮುಕರ ಕಿರುಕುಳ – ಕಹಳೆ ನ್ಯೂಸ್

ಇಂದೋರ್: ಯುವಕರಿಬ್ಬರು ಬೈಕಿನಲ್ಲಿ ಬಂದು ಮಾಡೆಲ್‍ನ ಸ್ಕರ್ಟ್ ಎಳೆದು ಇದರ ಕೆಳಗೆ ಏನಿದೆ ತೋರಿಸು ಎಂದು ಅಸಭ್ಯವಾಗಿ ವರ್ತಿಸಿದ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ. ತನ್ನ ಜೊತೆ ಆದ ಈ ಘಟನೆ ಬಗ್ಗೆ ರೂಪದರ್ಶಿ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರು ಯುವಕರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ನಂತರ ಒಬ್ಬರು ಹಿರಿಯ ವ್ಯಕ್ತಿ ನನ್ನ ಹತ್ತಿರ ಬಂದು ನೀನು ಸ್ಕರ್ಟ್ ಹಾಕಿದೀಯಾ. ಹಾಗಾಗಿ ಅವರು ನಿನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು...
ಆರೋಗ್ಯ

ಮಣ್ಣಿನ ಚಿಕಿತ್ಸೆಯಿಂದ ರೋಗಗಳು ಮಾಯ – ಡಾ. ಶ್ರೀಲತಾ ಪದ್ಯಾಣ

 ಪರಿಸರ ಹಾಗೂ ಭೂಮಿ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ 'ವಿಶ್ವ ಭೂಮಿ ದಿನ'ವನ್ನುಆಚರಿಸಲಾಗುತ್ತಿದ್ದು ಅದನ್ನು ಕಾರ್ಯಾಚರಣೆಗೆ ತರಬೇಕಾಗಿದೆ.ಅಭಿವೃದ್ಧಿಯ ದುರಾಸೆಯಿಂದ ಭೂಮಿಯನ್ನು ನಾಶಪಡಿಸಿದರೆ ಕೊನೆಗೆ ಆಪತ್ತು ಕಟ್ಟಿಟ್ಟ ಬುತ್ತಿ. ಹುಟ್ಟಿನಿಂದ ಸಾವಿನವರೆಗೂ ಮಣ್ಣಿನಲ್ಲೇ ಬದುಕುವ ನಾವು ಇದನ್ನೆಲ್ಲ ಮನದಟ್ಟು ಮಾಡಿಕೊಳ್ಳುವುದರ ಮೂಲಕ ಭೂ ಸಂರಕ್ಷಣೆ ಮಾಡಬೇಕು.              ಪಂಚಮಹಾಭೂತಗಳಲ್ಲಿ ಒಂದಾದ ಪೃಥ್ವಿ ಅಥವಾ ಭೂಮಿಯಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.ಪ್ರಾಕೃತಿಕ ಮಣ್ಣನ್ನು ಚಿಕಿತ್ಸೆಗಾಗಿ ಬಳಸಲಾಗುತ್ತಿದ್ದು ಅದರಲ್ಲಿ ಹಲವಾರು ಔಷಧೀಯ ಅಂಶಗಳು...
ರಾಜಕೀಯ

ಮೋಹಿದ್ಧೀನ್ ಬಾವರನ್ನು ಸುತ್ತುವರಿದು ಮೋದಿ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು – ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಉತ್ತರ ( ಸುರತ್ಕಲ್) ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹಿದ್ಧೀನ್ ಬಾವ ಅವರು ಸೋಮವಾರ ಬೆಳಿಗ್ಗೆ ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಹೊರಬಂದ ಬಳಿಕ ಮಾಧ್ಯಮದೊಂದಿಗೆ ಮಾತನಾಡಲು ಸಿದ್ದಗೊಳ್ಳುತ್ತಿದ್ದ ಸಂದರ್ಭ ಸ್ಥಳದಲ್ಲಿದ್ದ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮಾತ್ ಅವರ ಬೆಂಬಲಿಗರು ( ಬಿಜೆಪಿ ಕಾರ್ಯಾಕರ್ತರು) ಮೋದಿ ಮೋದಿ ಎಂದು ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಬಾವ ಅವರು ತಮ್ಮ ಬೆಂಬಲಿಗರೊಂದಿಗೆ...
ರಾಜಕೀಯ

ಮೇ 1ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ ಪ್ರಧಾನಿ ಮೋದಿ – ಕಹಳೆ ನ್ಯೂಸ್

ಉಡುಪಿ, ಏ 23:  ಮೇ 1ರಂದು ಉಡುಪಿಗೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಲಿದ್ದಾರೆ ಎಂದು  ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.  ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಮೇ 1ರಂದು ಮೋದಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಆದಿ ಉಡುಪಿ ಹೆಲಿಪ್ಯಾಡ್‌ ಮೂಲಕ ಉಡುಪಿಗೆ ಆಗಮಿಸಲಿದ್ದಾರೆ. ಬಳಿಕ ಶ್ರೀಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ, ಪರ್ಯಾಯ ಶ್ರೀವಿದ್ಯಾಧೀಶ ತೀರ್ಥ...
1 1,436 1,437 1,438 1,439 1,440 1,459
Page 1438 of 1459