Monday, April 27, 2026

archivekahale news

ರಾಜಕೀಯ

ಅಪುಲ್ ಆಳ್ವ ಕ್ಲಿಕ್ಕಿಸಿದ ಮೋದಿ ಫೋಟೋ, ಮೋದಿ ಕೈಗೆ ; ಇದೊಂದು ನಿಜಕ್ಕೂ ನನ್ನ ಸೌಭಾಗ್ಯ ಎಂದ ಆಳ್ವ – ಕಹಳೆ ನ್ಯೂಸ್

ಮಂಗಳೂರು : ಉಡುಪಿಗೆ ನರೇಂದ್ರಮೋದಿ ಆಗಮಿಸಿದ್ದ ಸಂದರ್ಭದಲ್ಲಿ ಛಾಯಾಗ್ರಹಕ ಅಪುಲ್ ಆಳ್ವ ಇರಾ ತೆಗೆದಿದ್ದ ಮೋದಿಯವರ ಫೋಟೋವನ್ನು ಮೋದಿಯವರಿಗೆ ನಿನ್ನೆ ಸಂಸದ ನಳಿನ್ ಕುಮಾರ್ ಕಟೀಲ್ ನೀಡಿದ್ದಾರೆ. ಈ ಕುರಿತಂತೆ ಫೋಸ್ಬುಕ್ ನಲ್ಲಿ " ಇದು ದಿನ ನನ್ನ ಪಾಲಿಗೆ ಅವಿಸ್ಮರಣೀಯ. ನನ್ನ ಸೌಭಾಗ್ಯ ಎಂದು ಬರೆದುಕೊಂಡಿದ್ದಾರೆ. ಅಪುಲ್ ಕ್ಲಿಕಿಸಿದ ಮೋದಿ ಫೋಟೋ : ಅಪುಲ್ ಆಳ್ವಾ ಇರಾ :...
ರಾಜಕೀಯ

ನಾಳೆ ಶ್ರೀಕರ್ ಪ್ರಭು ಬಳಗದಿಂದ ಮಹಿಳಾ ಸಮಾವೇಶ ; ಶ್ರೀಕರ್ ಪ್ರಭುವಿಗೆ ತಾಯಂದಿರಿಂದ ಭಾರಿ ಬೆಂಬಲ ನಿರೀಕ್ಷೆ – ಕಹಳೆ ನ್ಯೂಸ್

ಮಂಗಳೂರು ದಕ್ಷಿಣ ವಿಧಾನಸಭಾ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಅವರ ಅಭಿಮಾನಿ ಬಳಗದ ಮಹಿಳಾ ಮತದಾರರ ಬ್ರಹತ್ ಸಮಾವೇಶ 06-05-2018 ಆದಿತ್ಯವಾರ ಸಂಜೆ 5:30 ಇಂದ 6:45ರ ತನಕ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ಸಿ. ವಿ. ನಾಯಕ್ ಹಾಲ್ ನಲ್ಲಿ ಜರಗಲಿದೆ. ಈ ಸಮಾವೇಶದಲ್ಲಿ ಬಾರಿ ಸಂಖ್ಯೆಯ ಮಹಿಳಾ ಮತದಾರರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದು, ಶ್ರೀಕರ್ ಪ್ರಭು ಅವರು ಅಭಿಮಾನಿಗಳನ್ನು ಉದ್ದೇಶಿಸಿ ತಮ್ಮ ಚುನಾವಣಾ ಪ್ರಚಾರ ಬಾಷಣ ಮಾಡಲಿದ್ದಾರೆಂದು...
ರಾಜಕೀಯ

ಹಿಂದೂ ವಿರೋಧಿ ಕಾಂಗ್ರೆಸ್ ತಿರಸ್ಕರಿಸಿ – ಹಿಂದೂ ಪರ ಪಕ್ಷಕ್ಕೆ ಮತ ಹಾಕಿ : ವಿಎಚ್‌ಪಿ ಮುಖಂಡ ಗೋಪಾಲ್

ಮಂಗಳೂರು : ಕಾಂಗ್ರೆಸ್ ನಾಯಕರು ಚುನಾವಣೆ ಸಂದರ್ಭದಲ್ಲಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿರುವುದು ಕೇವಲ ನಾಟಕ ಎಂದು ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಗೋಪಾಲ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳು ಆಚರಿಸುವ ಹಬ್ಬಗಳನ್ನು ತಡೆಯುವ ಹಾಗೂ ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಮಾಡಿದ್ದು ಮತಾಂಧ ಶಕ್ತಿಗಳೊಂದಿಗೆ ಕೈ ಜೋಡಿಸಿ ಹಿಂಸೆಗೆ ಪ್ರಚೋದನೆ ನೀಡಿದೆ. ಮನೆಗಳ ಹಟ್ಟಿಗಳಿಂದ ಹಾಗೂ ಗೋಶಾಲೆಗಳಿಂದ ಮಾರಕಾಸ್ತ್ರಗಳ ಮೂಲಕ ಬೆದರಿಸಿ...
ರಾಜಕೀಯ

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾಗಿದೆ ತುಳುನಾಡು – ಕಹಳೆ ನ್ಯೂಸ್

ಮಂಗಳೂರು: ಮತ್ತೊಂದು ಹೈವೋಲ್ಟೇಜ್ ಚುನಾವಣಾ ಪ್ರಚಾರಕ್ಕೆ ಮಂಗಳೂರು ನಗರ ಸಜ್ಜಾಗಿದೆ. ಮೇ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿ ಚುನಾವಣಾ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಲಿದ್ದು ಸಮಾವೇಶ ನಡೆಯಲಿರುವ ಕೇಂದ್ರ ಮೈದಾನದಲ್ಲಿ ಸಿದ್ದತೆ ಭರದಿಂದ ಸಾಗಿದೆ. ಮೋದಿ ಸಮಾವೇಶಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ವಿಶೇಷ ಭದ್ರತಾ ಸಿಬ್ಬಂದಿ ಈಗಾಗಲೇ ಮಂಗಳೂರು ತಲುಪಿದ್ದು, ವೇದಿಕೆ ಹಾಗೂ ಸಭಾಂಗಣ ನಿರ್ಮಾಣ ಮಾಡುವಲ್ಲಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮೈದಾನದ ಸುತ್ತ ಸಿಸಿ ಕ್ಯಾಮರಾ...
ರಾಜಕೀಯ

ನಾಳೆ ಪ್ರಧಾನಿ ಮೋದಿ ಮಂಗಳೂರಿಗೆ : ವ್ಯಾಪಕ ಬಂದೋಬಸ್ತ್ ; ನಗರದ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ – ಕಹಳೆ ನ್ಯೂಸ್

ಮಂಗಳೂರು : ಕರ್ನಾಟಕ ವಿಧಾನ ಸಭಾ ಚುನಾವಣಾ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲು ನಾಳೆ ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಮಂಗಳೂರಿನ ನೆಹರೂ ಮೈದಾನಕ್ಕೆ ಆಗಮಿಸಿ ವಾಪಸ್ ವಿಮಾನ ನಿಲ್ದಾಣಕ್ಕೆ ಸಂಚರಿಸುವ ಸಮಯದಲ್ಲಿ ವಿವಿಐಪಿ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 9...
ರಾಜಕೀಯ

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 30 ದಿನಗಳಲ್ಲಿ ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು – ನಾಗರಾಜ ಶೆಟ್ಟಿ

ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ 30 ದಿನಗಳ ಒಳಗೆ ಮಂಗಳೂರು ನಗರದ ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿಯವರ ಹೆಸರು ಇಡಲಾಗುವುದು ಎಂದು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ನಾಗರಾಜ ಶೆಟ್ಟಿ ತಿಳಿಸಿದ್ದಾರೆ. ಬಿಜೆಪಿ ಮಂಗಳೂರು ದಕ್ಷಿಣ ಪ್ರಚಾರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಾಜ ಶೆಟ್ಟಿ, ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲೇ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ನಾಮಕರಣವಾಗಿ, ರಾಜ್ಯ ಸರಕಾರದಿಂದ ಅಧಿಸೂಚನೆಯೂ...
ರಾಜಕೀಯ

ರಥಬೀದಿಯಲ್ಲಿ ಶ್ರೀಕರ ಪ್ರಭು ರೋಡ್ ಶೋ ; ಯುವಕರ ರಣೋತ್ಸಾಹ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿರುವಂತೆಯೇ ಪಕ್ಷೇತರ ಅಭ್ಯರ್ಥಿ ಶ್ರೀಕರ ಪ್ರಭು ಕೂಡ ತಮ್ಮಪ್ರಚಾರವನ್ನು ತೀವ್ರಗೊಳಿಸಿದ್ದಾರೆ. ಮನೆ ಮನೆ ಭೇಟಿಯ ಬಳಿಕ ಐದನೇ ಹಂತದಲ್ಲಿ ರೋಡ್ ಶೋ ನಡೆಸುವ ಮೂಲಕ ತಮ್ಮ ಪ್ರಬಲ ಜನಬೆಂಬಲವನ್ನು ಸಾಬೀತುಪಡಿಸಿದ್ದಾರೆ. ಗೌಡ ಸಾರಸ್ವತ ಬ್ರಾಹ್ಮಣ ಬಾಹುಳ್ಯದರಥಬೀದಿಯಲ್ಲಿ ತಮ್ಮ ಬೃಹತ್ ಪಾದಯಾತ್ರೆಯ ಅಭಿಯಾನಕ್ಕೆ ಚಾಲನೆ ನೀಡಿದ ಶ್ರೀಕರ ಪ್ರಭು ಮತದಾರರನ್ನು ಸೆಳೆಯುವ ಎಲ್ಲ ಲಕ್ಷಣಗಳನ್ನು ಪ್ರದರ್ಶಿಸಿದ್ದಾರೆ. ತಮ್ಮ ಚುನಾವಣಾ ಚಿಹ್ನೆಯಾದ ಆಟೋ ರಿಕ್ಷಾದಮಾದರಿಯನ್ನು ರಿಕ್ಷಾ ಚಾಲಕರಿಗೆ ನೀಡುವ ಮೂಲಕ ಶ್ರೀಕರ ಪ್ರಭು ತಮ್ಮ ಮತಬೇಟೆಯ ಅಭಿಯಾನವನ್ನು ಅದ್ದೂರಿಯಾಗಿ ಆರಂಭಿಸಿದ್ದಾರೆ. ಇನ್ನು 5 ದಿನಗಳ ಕಾಲ ಮಂಗಳೂರಿನ ಪ್ರಮುಖ ಬೀದಿಗಳಲ್ಲಿ ಶ್ರೀಕರ ಪ್ರಭುರೋಡ್ ಶೋ ನಡೆಸುವ ಮೂಲಕ ಎಲ್ಲರ ಗಮನ ಸೆಳೆಯಲಿದ್ದಾರೆ. * ಅದ್ದೂರಿ ಪ್ರಚಾರಕ್ಕೆ ಶ್ರೀಕರ ಪ್ರಭು ಚಾಲನೆ * ಶ್ರೀಕರ ಪ್ರಭುವಿಗೆ ಜ್ಯೂ. ನರೇಂದ್ರ ಮೋದಿ ಸಾಥ್ * ರೋಡ್ ಶೋಗೆ ಯುವಕರ ರಣೋತ್ಸಾಹ * ಮೊದಲ ದಿನ ರಥಬೀದಿಯಲ್ಲಿ ಭರ್ಜರಿ ಮತಬೇಟೆ * ಗಮನ ಸೆಳೆಯುತ್ತಿರುವ ಪಕ್ಷೇತರ ಅಭ್ಯರ್ಥಿ ಗಮನ ಸೆಳೆದ ಜ್ಯೂನಿಯರ್ ನರೇಂದ್ರ ಮೋದಿ   ರಥಬೀದಿಯಲ್ಲಿ ನರೇಂದ್ರ ಮೋದಿಯನ್ನು ಕಂಡು ಜನ ಹೌಹಾರಿದರು.  ನರೇಂದ್ರ ಮೋದಿ ಅವರನ್ನು ಹೋಲುವ ಜ್ಯೂನಿಯರ್ ನರೇಂದ್ರ ಮೋದಿ @ರಥಬೀದಿಯ ವಸಂತ ಪ್ರಭು ಅವರು ಎಲ್ಲರ ಗಮನಸೆಳೆದಿದ್ದಾರೆ. ಪಕ್ಷೇತರಅಭ್ಯರ್ಥಿ ಶ್ರೀಕರ ಪ್ರಭು ಅವರ ಪರ ಪ್ರಚಾರದಲ್ಲಿ ತೊಡಗಿರುವ ಮಂಗಳೂರಿನ ಜ್ಯೂನಿಯರ್ ಮೋದಿ ಎಂದೇ ಖ್ಯಾತಿ ಪಡೆದ ವಸಂತ ಪ್ರಭು ಒಂದು ಕೈಯಲ್ಲಿ ರಿಕ್ಷಾದ ಪ್ರತಿಕೃತಿ ಇನ್ನೊಂದು ಕೈಯಲ್ಲಿ ಪ್ಯಾಂಪ್ಲೆಟ್ ಹಿಡಿದುರೋಡ್ ಶೋದಲ್ಲಿ ಹೆಜ್ಜೆ ಹಾಕಿದರು. ಜ್ಯೂನಿಯರ್ ಮೋದಿಯನ್ನು ನೋಡಲು ಜನ ಮುತ್ತಿಹಾಕಿದರು. ಕೈ ಕುಲುಕಿ ಸೆಲ್ಫಿ ಪಡೆದು ಖುಷಿ ಪಟ್ಟರು. ರೋಡ್ ಶೋದಲ್ಲಿ ಪ್ರಧಾನ ಆಕರ್ಷಣೆಯಾಗಿ ವಸಂತ್ ಪ್ರಭು ಎಲ್ಲರಗಮನಸೆಳೆದರು. ಪ್ರಮುಖ ಎರಡು ಪಕ್ಷಗಳನ್ನು ಬಿಟ್ಟರೆ ಉಳಿದ ಯಾವ ಅಭ್ಯರ್ಥಿಯೂ ಇಷ್ಟೊಂದು ಭರ್ಜರಿಯಾದ ಪ್ರಚಾರವನ್ನು ನಡೆಸಿಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಮೊದಲನೇ ದಿನವೇ ತಮ್ಮ ಪರವಾಗಿಹವಾ ಸೃಷ್ಟಿಸಿಕೊಳ್ಳುವಲ್ಲಿ ಶ್ರೀಕರ ಪ್ರಭು ಯಶಸ್ವಿಯಾಗಿದ್ದು ಮತ್ತೊಂದು ಗಮನಾರ್ಹ ಸಂಗತಿ. ಪ್ರಾರಂಭದಲ್ಲಿ ಶ್ರೀಕರ್ ಪ್ರಭು ಅವರ ಕುಟುಂಬ ಮತ್ತು ಬಾರಿ ಸಂಖ್ಯೆಯ ಅಭಿಮಾನಿಗಳು ಮತ್ತು ಚುನಾವಣಾ ಉಸ್ತುವಾರಿಸದಸ್ಯರ ಸಹಿತ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಂಕಷ್ಟಹರ ಚತುರ್ಥಿಯ ಪರ್ವದಿನದಂದು ವಿಶೇಷ ಪೂಜೆ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಶ್ರೀಕರ ಪ್ರಭು ಅಭಿಮಾನಿ ಬಳಗದ ಅದ್ಯಕ್ಷರದ ಕೆ.ಪಿ. ಶೆಟ್ಟಿಬೇಡೆಮಾರ್, ಕಾರ್ಯದರ್ಶಿ ಪ್ರೇಮ್ ಚಂದ್ರ, ಉಸ್ತುವಾರಿ ಸುರೇಶ ಶೆಟ್ಟಿ, ಸಂಯೋಜಕ ಅವಿನಾಶ್ ಶೆಟ್ಟಿ, ಚಿತ್ರಕಲಾ ಪ್ರಭು, ಸೀಮಾ ಪ್ರಭು, ಐಶ್ವರ್ಯ ನಾಯಕ್, ಮಾಯಾ ನಾಯಕ್, ಶರತ್ ಅಮೀನ್, ನಿತಿನ್ ಸುವರ್ಣ,ಅಶ್ವಿತ್ ಕುಮಾರ್, ವಸಂತ್ ಪ್ರಭು, ಭಾಸ್ಕರ್ ಗಟ್ಟಿ, ಅನಿಲ್ ಕುಮಾರ್, ಆನಂದ ಶೆಟ್ಟಿ, ವೆಂಕಟರಮಣ ಮಲ್ಯ, ಜೈರಾಮ್ ಕಾಮತ, ರಾಮ್ ಮೋಹನ್, ಮಹೇಶ್ ಭಟ್, ಸೂರಜ್ ಪ್ರಭು, ರಘುನಾಥ್, ಮತ್ತಿತರುಉಪಸ್ಥಿತರಿದ್ದರು. ​...
ಸುದ್ದಿ

ಸಿರಿಜಾತ್ರೆಯಲ್ಲಿ ದಲಿತ ಮಹಿಳೆಯರಿಗೆ ಜಾತಿನಿಂದನೆ, ಅಪಮಾನದ ವಿರುದ್ಧ ಸಿಡಿದೆದ್ದ ಬಾಳೆಕೋಡಿ ಮಠದ ಶಶಿಕಾಂತಮಣಿ ಸ್ವಾಮೀಜಿ – ಕಹಳೆ ನ್ಯೂಸ್

ಉಡುಪಿ/ದ.ಕ. : ಕಬತ್ತಾರು ಸಿರಿ ಜಾತ್ರೆಯಲ್ಲಿ ದಲಿತ ಮಹಿಳೆಯರಿಗಾದ ಅಪಮಾನ, ಜಾತಿ ನಿಂದನೆ ವಿರುದ್ಧವಾಗಿ ಬಾಳೆಕೋಡಿ ಮಠದ ಶಶಿಕಾಂತಮಣಿ ಸ್ವಾಮೀಜಿ ಖಂಡಿಸಿ ಖಂಡನಾ ನಿರ್ಣಯ ಕೈಗೊಂಡಿದ್ದಾರೆ. ಖಂಡನಾ ನಿರ್ಣಯದ ಪ್ರತಿ :...
1 1,432 1,433 1,434 1,435 1,436 1,459
Page 1434 of 1459