Monday, April 27, 2026

archivekahale news

ಸುದ್ದಿ

Breaking News : ‘ ಅಂದರ್ ಬಾಹರ್ ‘ ಜೂಗಾರಿ ಅಡ್ಡೆಗೆ ಪುತ್ತೂರಿನ ಇನ್ ಪೆಕ್ಟರ್ ಶರಣ ಗೌಡ ನೇತೃತ್ವದಲ್ಲಿ ಮಿಂಚಿನ ದಾಳಿ ; ಪ್ರತಿಷ್ಠಿತ ವ್ಯಕ್ತಿಗಳ ಅಪ್ತ ಮಹಿಳೆ ವಶಕ್ಕೆ ಸಾಧ್ಯತೆ – ಕಹಳೆ ನ್ಯೂಸ್

ಪುತ್ತೂರು : ನಗರದ ಬೊಳುವಾರಿನ ಶಾಲೆಯ ಮುಂಭಾಗದ ಪ್ರತಿಷ್ಠಿತ ಕಟ್ಟಡದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಜೂಜಿನ ಅಡ್ಡೆಯ ಮೇಲೆ ಎಸ್ಪಿಯವರ ನಿರ್ದೇಶನದಂತೆ ಪುತ್ತೂರಿನ ಪೊಲೀಸ್ ವೃತ್ತ ನಿರೀಕ್ಷರಾದ ಶರಣಾ ಗೌಡ ನೇತೃತ್ವದಲ್ಲಿ ಪುತ್ತೂರಿನ ಪೊಲೀಸರು ದಾಳಿ ನಡೆಸಿದ್ದಾರೆ. ಸುಮಾರು ಇಪ್ಪತೈದಕ್ಕೂ ಅಧಿಕ ಅರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮ ಅಡ್ಡೆ ನಡೆಸುತ್ತಿದ್ದವಳು ಎನ್ನಲಾಗುತ್ತಿದ್ದ ಪ್ರತಿಷ್ಠಿತ ವ್ಯಕ್ತಿಗಳ ಆಪ್ತೆ ಎನಿಸಿಕೊಂಡಿದ್ದ ಸುಜಿತಾ ಎಂಬವಳು ಸ್ಥಳದಲ್ಲೇ ಇದ್ದು ಅವಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ....
ಸುದ್ದಿ

ಫೇಸ್‌ಬುಕ್‌ ಪೇಜ್ ನಲ್ಲಿ ನಿಂದನಾತ್ಮಕ ಸಂದೇಶ ಪೋಸ್ಟ್ ಮಾಡಿದ ಪುಂಡ ಬಶೀರ್ ಅಡ್ಯಾರ್‌ ವಿರುದ್ಧ ದೂರು ದಾಖಲು – ಕಹಳೆ ನ್ಯೂಸ್

ಮಂಗಳೂರು, ಜೂ 18 : ಹಿಂದೂ ದೇವರ ಬಗ್ಗೆ ಬಶೀರ್ ಅಡ್ಯಾರ್‌ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್ ನಲ್ಲಿ ಅವಹೇಳನಕಾರಿ ಚಿತ್ರದ ಜತೆಗೆ ನಿಂದನಾತ್ಮಕ ಸಂದೇಶ ಪ್ರಕಟಿಸಿದ ಸಂಬಂಧಿಸಿ ಬರ್ಕೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಹನುಮಂತರಾಯಪ್ಪ ತಿಳಿಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಅಥವಾ ವಾಟ್ಸ್‌ಆಪ್‌ ಮೂಲಕ ಈ ರೀತಿಯ ಸಮಾಜದ ಶಾಂತಿಗೆ ಭಂಗ ತರುವ ಆಕ್ಷೇಪಾರ್ಹ ವಿಚಾರವನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಅಪರಾಧ ಎಂದು ಪರಿಗಣಿಸಲಾಗುತ್ತದೆ....
ಕ್ರೀಡೆಸುದ್ದಿ

ಪ್ರೊ ಕಬಡ್ಡಿ ಹರಾಜಿನಲ್ಲಿ ದಾಖಲೆ ಮಾಡಿದ ಪುತ್ತೂರಿನ ಮುತ್ತು ಪ್ರಶಾಂತ ರೈ – ಕಹಳೆ ನ್ಯೂಸ್

ಪುತ್ತೂರು : ಪ್ರೊ ಕಬಡ್ಡಿ ಲೀಗ್ ನ ಮೂಲಕ ಹುಟ್ಟೂರಿಗೆ ಹೆಮ್ಮೆ ತಂದ ಪುತ್ತೂರಿನ ಮುತ್ತು ಪ್ರಶಾಂತ್ ರೈ ಕಬಡ್ಡಿ ಆಟಗಾರರ ಹರಾಜಿನಲ್ಲಿ ಅತೀ ಹೆಚ್ಚು ದಾಖಲೆಯ ರೂ.೭೯ ಲಕ್ಷದ ಸೊತ್ತು ಎಂಬ ಹೆಗ್ಗಳಿಕೆಗೂ ಪ್ರಶಾಂತ್ ರೈ ಪಾತ್ರವಾಗಿದ್ದಾರೆ. ಪ್ರಸ್ತುತ ವಿಜಯ ಬ್ಯಾಂಕ್ ನ ಉದ್ಯೊÃಗಿಯಾಗಿರುವ ಪ್ರಶಾಂತ್ ರೈ , ಪುತ್ತುರು ಫಿಲೋಮಿನಾ ಕಾಲೇಜು ವಿದ್ಯಾರ್ಥಿಯಾಗಿದ್ದು, ಕಾಲೇಜು ಹಂತದಲ್ಲಿಯೇ ತನ್ನ ಚಾಣಾಕ್ಷತೆ ಹಾಗೂ ಪಾದರಸದಿಂದ ಕೂಡಿದ ಮಿಂಚಿನಗತಿಯ ರೈಡಿಂಗ್ ಮೂಲಕ...
ಸುದ್ದಿ

Breaking News : ಕಾಶ್ಮೀರವೇನು ಗೌರಿ ಲಂಕೇಶ್ ಅಪ್ಪನದಾ? ಕಾರ್ಯಕ್ರಮವೊಂದರಲ್ಲಿ ಮುತಾಲಿಕ್ ಘರ್ಜನೆ – ಕಹಳೆ ನ್ಯೂಸ್

ಬೆಂಗಳೂರು(ಜೂನ್​.17): ರಾಜ್ಯದಲ್ಲಿ ನಾಯಿ ಸತ್ತರೂ ಅದಕ್ಕೆ ಮೋದಿ ಕಾರಣ? ಎಂದು ಬುದ್ಧಿ ಜೀವಿಗಳು ಪ್ರಧಾನಿ ಮೋದಿ ಕಡೆಗೆ ಬೆಟ್ಟು ಮಾಡುತ್ತಾರೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ರಸ್ತೆಯಲ್ಲಿ ನಾಯಿ ಸತ್ತರೂ ಮೋದಿ ಉತ್ತರ ನೀಡಬೇಕಾ? ಕಾಶ್ಮೀರ ಏನು ಗೌರಿ ಲಂಕೇಶ್ ಅವರ ಅಪ್ಪನದಾ? ಎಂದು ಪ್ರಮೋದ್​ ಮುತಾಲಿಕ್​ ಅವರು ವ್ಯಂಗ್ಯವಾಡಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಪರಶುಮಾರ ವಾಗ್ಮರೆ ಬಂಧನವಾಗಿದೆ. ಈ ಹತ್ಯೆ ಹಿಂದೆ ಹಿಂದೂಪರ...
ಸುದ್ದಿ

ಅಯೋ ಕೃಷ್ಣ ಕಷ್ಣ !!! ಇದು ಉಡುಪಿ ಕೆಎಸ್.ಆರ್.ಟಿ.ಸಿ. ಬಸ್ ನಿಲ್ದಾಣವೋ ? ಕುಡುಕ ಕಾಮುಕರ ತಾಣವೋ ? – ಕಹಳೆ ನ್ಯೂಸ್

ಉಡುಪಿ: ರಾಜ್ಯದ ಹಲವು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ KSRTC ಬಸ್‌ ನಿಲುಗಡೆ ತಾಣ ಇಲ್ಲಿನದು. ದಿನಕ್ಕೆ 250ಕ್ಕೂ ಅಧಿಕ ಬಸ್‌ ಗಳು ಈ ನಿಲ್ದಾಣಕ್ಕೆ ಬಂದು ಹೋಗುತ್ತವೆ. ನಗರದ ಕೇಂದ್ರ ಭಾಗದಲ್ಲೇ ಈ ಬಸ್‌ ನಿಲ್ದಾಣವಿದೆ. ಆದರೆ ಇಲ್ಲಿನ ಪರಿಸರ ಮಾತ್ರ ಪುಂಡರ ತಾಣವಾಗಿದೆ. ಸ್ವಚ್ಛತೆಯೂ ಇಲ್ಲದೆ ಸ್ಥಳ ಸೊರಗಿದೆ. ಬಸ್‌ ಗಳಿಗೂ, ಪ್ರಯಾಣಿಕರಿಗೂ ಕಷ್ಟ  ಈ ಬಸ್‌ ನಿಲ್ದಾಣದಲ್ಲಿ ಬಸ್‌ ಗಳಿಗೂ ನಿಲ್ಲುವುದಕ್ಕೆ ಸೂಕ್ತ ಸ್ಥಳವಿಲ್ಲ. ಪ್ರಯಾಣಿಕರು ಕುಳಿತುಕೊಳ್ಳುವುದಕ್ಕೆ, ಕೊನೆಪಕ್ಷ...
ಸುದ್ದಿ

ಜುಲೈ 6,7ರಂದು ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗ ಮೇಳ – ಕಹಳೆ ನ್ಯೂಸ್

ಮೂಡುಬಿದಿರೆ: ಸಾಮಾಜಿಕ, ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕøತಿಕ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದಶಕದ ಸಂಭ್ರಮದೊಂದಿಗೆ “ಆಳ್ವಾಸ್ ಪ್ರಗತಿ- ಬೃಹತ್ ಉದ್ಯೋಗ ಮೇಳ”ಕ್ಕೆ ಸಜ್ಜಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಜುಲೈ06 ಕ್ಕೆ ಮೊದಲ ಸುತ್ತಿನ ಹಾಗೂ ಜುಲೈ 07 ಕ್ಕೇ ಕೊನೆಯ ಸುತ್ತಿನ ಆಯ್ಕೆ ಪ್ರಕ್ರಿಯೆಗಳು ಮೂಡಬಿದಿರೆಯ ವಿದ್ಯಾಗಿರಿಯ ಕ್ಯಾಂಪಸ್ನಲ್ಲಿ...
ಸುದ್ದಿ

ತುಳು ಚಲನಚಿತ್ರ ನಿರ್ಮಾಪಕ ಸಂಘ ಅಧ್ಯಕ್ಷರಾಗಿ ರಾಜೇಶ್ ಬ್ರಹ್ಮಾವರ್ – ಕಹಳೆ ನ್ಯೂಸ್

ಮಂಗಳೂರು: ತುಳು ಚಿಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷರಾಗಿ ರಾಜೇಶ್ ಬ್ರಹ್ಮಾವರ್ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಚುನಾವಣೆಯಲ್ಲಿ ಅವರು ಪ್ರತಿಸ್ಪರ್ಧಿ ಅಭ್ಯರ್ಥಿ ಧನ್‌ರಾಜ್ ಅವರನ್ನು ಸೋಲಿಸಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶರತ್ ಕದ್ರಿ, ಚಂದ್ರಹಾಸ್ ಸುವರ್ಣ, ಸುದೇಶ್ ಭಂಡಾರಿ, ಕಾರ್ಯದರ್ಶಿಯಾಗಿ ಶರ್ಮಿಳಾ ಡಿ. ಕಾಪಿಕಾಡ್ ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಸಚಿನ್ ಉಪ್ಪಿನಂಗಡಿ, ಶ್ರವಣ್ ಕದ್ರಿ ಮತ್ತು ಪ್ರಣವ್ ಹೆಗ್ಡೆ ಆಯ್ಕೆಯಾದರು. ಖಜಾಂಚಿಯಾಗಿ ಕಿಶೋರ್ ಕೊಟ್ಟಾರಿ ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿಜಯ್...
ಸುದ್ದಿ

ಸಿಪಿಐಗೆ ಕಾನೂನು ಪಾಠ ಹೇಳಿದ್ದಕ್ಕೆ ಸಿಂಗಂ ಖ್ಯಾತಿಯ ಪಿಎಸ್‍ಐ ಶ್ರೀನಿವಾಸ್‍ಗೆ ಅಮಾನತು ಭಾಗ್ಯ – ಕಹಳೆ ನ್ಯೂಸ್

ಚಿಕ್ಕಬಳ್ಳಾಪುರ: ದಂಧೆಕೋರರ ಪರವಾಗಿ ನಿಂತ ಸಿಪಿಐಗೆ ಕಾನೂನು ಪಾಠ ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದ್ದ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಪೊಲೀಸ್ ಠಾಣೆಯ ಪಿಎಸ್‍ಐ ಶ್ರೀನಿವಾಸ್ ಈಗ ಅಮಾನತುಗೊಂಡಿದ್ದಾರೆ. ಹಿರಿಯ ಅಧಿಕಾರಿಯ ಜೊತೆ ಅಸಭ್ಯ ವರ್ತನೆ ಆರೋಪದಡಿಯಲ್ಲಿ ಪಿಎಸ್‍ಐ ಶ್ರೀನಿವಾಸ್‍ರವರನ್ನು ಅಮಾನತುಗೊಳಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್‍ಪಿ ಭೀಮಾಶಂಕರ ಗುಳೇದ ಆದೇಶ ಹೊರಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಎಸ್‍ಪಿಯವರು, ಹಿರಿಯ ಅಧಿಕಾರಿ ಜೊತೆ ಅಸಭ್ಯ ವರ್ತನೆ ಅಲ್ಲದೇ ಹಲವು...
1 1,413 1,414 1,415 1,416 1,417 1,459
Page 1415 of 1459