Breaking News : ಭಾರಿ ಭೂ ಕುಸಿತಕ್ಕೆ ಚಾರ್ಮಾಡಿ ಘಾಟಿ ಬಂದ್ ; ಮಧ್ಯದಲ್ಲಿ ಸಿಲುಕಿದ ಮೂವತ್ತಕ್ಕೂ ಅಧಿಕ ಪ್ರಯಾಣಿಕರ ಸ್ಥಿತಿ ಶೋಚನೀಯ – ಕಹಳೆ ನ್ಯೂಸ್
ಉಜಿರೆ : ರಾಜ್ಯಾದ್ಯಂತ ಮುಂದುವರಿದ ಮುಂಗಾರು ಅಬ್ಬರಕ್ಕೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿತವಾದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಇನ್ನು ಕೂಡಾ ಗುಡ್ಡ ಕುಸಿತ ಮುಂದುವರಿದೆ. ಘಾಟ್ನ ರಸ್ತೆಯ 2ನೇ ಮತ್ತು 3ನೇ ತಿರುವಿನಲ್ಲಿ ಮಂಗಳವಾರ ಗುಡ್ಡ ಕುಸಿತವಾಗಿದ್ದು, ಸದ್ಯ ಮಾರ್ಗ ಬದಲಾವಣೆ ಮಾಡಿ ಸಂಚಾರಕ್ಕೆ ಅನುಕೂಲ ಮಾಡಲಾಗಿದೆ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ಧರ್ಮಸ್ಥಳ ಹಾಗೂ ಉಜಿರೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ. ಸೋಮವಾರ ಸಂಜೆ 7 ಗಂಟೆಗೆ ಸುಮಾರಿಗೆ...







