Tuesday, April 28, 2026

archivekahale news

ಸುದ್ದಿ

ತಲಪಾಡಿ – ಕಾಸರಗೋಡು ಹೆದ್ದಾರಿ ಗುಂಡಿ ; ಸಂಚಾರ ಸಮಸ್ಯೆ – ಕಹಳೆ ನ್ಯೂಸ್

ಕುಂಬಳೆ: ಮಳೆಗೆ ಹೆದ್ದಾರಿಯಲ್ಲಿ ಹೊಂಡಗಳಾಗಿ ವಾಹನಗಳಿಗೆ ಸಂಚರಿಸಲು ಅಸಾಧ್ಯವಾಗಿದೆ. ಆದರೆ ಇದು ತಮಗೆ ಸಂಬಂಧ ಪಟ್ಟದಲ್ಲವೆಂದು  ಇಲಾಖೆ ಅಧಿಕಾರಿಗಳು ಬೆಚ್ಚಗೆ  ಹೊದ್ದು ಮಲಗಿದ್ದಾರೆ. ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ತಲಪ್ಪಾಡಿಯಿಂದ ಕಾಸರಗೋಡು ತನಕ ರಸ್ತೆಯುದ್ದಕ್ಕೂ ಇಂಗು ಗುಂಡಿಗಳಾಗಿವೆ.ಕೆಲ ಕಡೆಗಳಲ್ಲಿ ರಸ್ತೆ ಮಧ್ಯೆ ದೊಡ್ಡ ಹಳ್ಳ ಸೃಷ್ಟಿಯಾಗಿದೆ.ತಲಪ್ಪಾಡಿ,ಮಂಜೇಶ್ವರ,ಉಪ್ಪಳ,ಕುಂಬಳೆ,ಪೆರ್ವಾಡು, ಮೊಗ್ರಾಲ್‌,ಚೌಕಿ,ಕೊಪ್ಪರಬಜಾರ್‌,ಅಡ್ಕತ್ತಬೈಲು,ತಾಳಿಪ್ಪಡು,ಕರಂದಕ್ಕಾಡು ಮೊದಲಾದೆಡೆಗಳಲ್ಲಿ ರಸ್ತೆ ಮಧ್ಯೆ ದೊಡ್ಡ ಹೊಂಡಗಳು ಸೃಷ್ಟಿಯಾಗಿ ವಾಹನಗಳಿಗೆ ಸಂಚರಿಸಲು ತೊಡಕಾಗಿದೆ.ಇದರಿಂದ  ರಸ್ತೆಯಲ್ಲಿ ವಾಹನಗಳು ಜೋಕಾಲಿಯಾಡುತ್ತಿದೆ.ಬಸ್‌ನಲ್ಲಿ ಪ್ರಯಾಣಿಕರು ಭಯದಿಂದ ಪ್ರಯಾಣಿಸಬೇಕಾಗಿದೆ. ಭಾರೀ ಹೊಂಡ...
ಸುದ್ದಿ

ಉಪ್ಪಿನಂಗಡಿಯ ನಾಡಕಚೇರಿ ನೂತನ ಕಟ್ಟಡದ ಕಾಮಗಾರಿಗೆ ಹಸಿರು ನಿಶಾನೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಹೋಬಳಿ ಮಟ್ಟದ ನಾಡಕಚೇರಿ ನೂತನ ಕಟ್ಟಡಕ್ಕೆ ಕೊನೆಗೂ ಹಸಿರು ನಿಶಾನೆ ದೊರೆತಿದೆ. ಪುತ್ತೂರು ತಾಲೂಕಿನ ಹಲವು ಗ್ರಾಮ ವ್ಯಾಪ್ತಿಯ ಈ ನಾಡಕಚೇರಿಯ ಕಟ್ಟಡ ನಾದುರಸ್ತಿಯಲ್ಲಿರುವ ಬಗ್ಗೆ ಮನವರಿಕೆಯಾಗಿದೆ. ಕಂದಾಯ ಇಲಾಖೆ ಬೇಡಿಕೆಯಂತೆ ಹೆಚ್ಚುವರಿ ಅನುದಾನವನ್ನು ಬಜೆಟ್‌ನಲ್ಲಿ ಕಾದಿರಿಸಲಾಗಿದೆ. ನಾಡಕಚೇರಿ ಕಟ್ಟಡಕ್ಕೆ ಮುಕ್ತಿ ನಿಚ್ಚಳಗೊಂಡಿದೆ. ಮಳೆಗಾಲ ಮುಗಿದ ಬಳಿಕ ನೂತನ ಕಟ್ಟಡದ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ. ಛಾವಣಿ ಸೋರಿಕೆಯಿಂದ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಾಂತರಕ್ಕೆ ಬದಲಿ ಸರಕಾರಿ ಕಟ್ಟಡ ಹುಡುಕಾಟದಲ್ಲಿ ತೊಡಗಿದ್ದಾರೆ. ನೂತನ ಕಟ್ಟಡದ ಕಾಮಗಾರಿಯು...
ಸುದ್ದಿ

ಕಾಸರಗೋಡು ನಗರದ ಹೊರವಲಯದಲ್ಲಿ ಸರಣಿ ಅಪಘಾತ ; ಐದು ವರ್ಷದ ಬಾಲಕ ಸಾವು – ಕಹಳೆ ನ್ಯೂಸ್

ಕಾಸರಗೋಡು, ಜು 23 : ಕಾಸರಗೋಡು ನಗರದ ಹೊರವಲಯದ ಅಡ್ಕತ್ತಬೈಲ್ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಜು. 22 ರ ಭಾನುವಾರ ರಾತ್ರಿ ನಡೆದ ಸರಣಿ ಅಪಘಾತದಲ್ಲಿ ಓರ್ವ ಮಗು ಮೃತಪಟ್ಟು ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದೆ. ಕಾರು , ಬಸ್ಸು ಮತ್ತು ಬೈಕ್ ನ ನಡುವೆ ಈ ಅಪಘಾತ ನಡೆದಿದೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಟೂರಿಸ್ಟ್ ಬಸ್ಸು , ಬೈಕ್ ಹಾಗೂ ಕುಂಬಳೆ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಅಪಘಾತ...
ಸುದ್ದಿ

ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧನ ದೇಹ 50 ವರ್ಷಗಳ ನಂತರ ಪತ್ತೆ – ಕಹಳೆ ನ್ಯೂಸ್

ಶಿಮ್ಲಾ: ಐವತ್ತು ವರ್ಷಗಳ ಹಿಂದೆ ನಡೆದಿದ್ದ ಭಾರತೀಯ ವಾಯುಪಡೆಯ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಯೋಧನ ಮೃತದೇಹ ಹಿಮಾಚಲ ಪ್ರದೇಶದ ಢಾಕಾ ಗ್ಲೇಷಿಯರ್​ ಕ್ಯಾಂಪ್​ ಬಳಿ ಹಿಮಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆಲ ಪರ್ವತಾರೋಹಿಗಳ ತಂಡ ಚಂದ್ರಭಾಗದ 13ನೇ ಶೃಂಗದ ಬಳಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಿದ್ದ ವೇಳೆ ಜು.1ರಂದು ಅವರಿಗೆ ಮೃತದೇಹ ಸಿಕ್ಕಿದೆ. ಇದೇ ವೇಳೆ ತಂಡಕ್ಕೆ ವಿಮಾನದ ಮತ್ತಷ್ಟು ಅವಶೇಷಗಳು ಸಿಕ್ಕಿವೆ. ಭಾರತದ ಪರ್ವತಾರೋಹಿಗಳ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸಿತ್ತು ಎನ್ನಲಾಗಿದೆ. 1968...
ಸುದ್ದಿ

ಪ್ರಜಾಪ್ರಭುತ್ವದ ಆಧಾರ ಸ್ಥಂಭವೇ ಮಾಧ್ಯಮ ; ಪತ್ರಿಕಾ ದಿನಾಚರಣೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಗಾಟಿಸಿ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್

ಪುತ್ತೂರು: ಪ್ರಜಾಪ್ರಭುತ್ವದ ಆಧಾರ ಸ್ಥಂಭವೇ ಈ ಮಾಧ್ಯಮ. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹತ್ತರ ಜವಬ್ದಾರಿ ಪತ್ರಕರ್ತರಿಗಿದೆ. ಭಾರತ ಪತ್ರಿಕೋದ್ಯಮ ಸವಾಲುಗಳನ್ನು ಎದುರಿಸಿ ಬೆಳೆದು ಬಂದಿದೆ. ತನ್ನ ಯೋಚನಾಧಾರೆಯನ್ನು ಕೇವಲ ಒಂದೇ ವಿಚಾರಧಾರೆಗೆ ಮೀಸಲಿಡದೇ ಸಮಗ್ರವಾಗಿ ಬೆಳೆಯಲಿ ಎಂದು ಪುತ್ತೂರಿನ ಶಾಸಕ ಸಂಜೀವ ಮಠಂದೂರು ಹೇಳಿದರು. ಅವರು ಪುತ್ತೂರು ತಾಲುಕು ಪತ್ರಕರ್ತರ ಸಂಘದ ವತಿಯಿಂದ ಆಯೋಜಿತವಾದ ಪತ್ರಿಕಾ ದಿನಾಚರಣೆ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಉದ್ಗಾಟಿಸಿ ಶನಿವಾರ ಮಾತನಾಡಿದರು. ಪತ್ರಿಕೋದ್ಯಮದ ಭವಿಷ್ಯ...
ಸುದ್ದಿ

Breaking News : ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! – ಕಹಳೆ ನ್ಯೂಸ್

ಅಂಕಪಟ್ಟಿ ವಿಚಾರವಾಗಿ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ. ಇನ್ಮುಂದೆ ಅಂಕಪಟ್ಟಿಗಾಗಿ ಪಿಯು ಬೋರ್ಡ್’ಗೆ ಅಲೆಯಬೇಕಿಲ್ಲ. ತಮ್ಮ ಅಂಕಪಟ್ಟಿಯನ್ನ ಆನ್’ಲೈನ್’ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವ ವ್ಯವಸ್ಥೆಯನ್ನು ಪಿಯು ಬೋರ್ಡ್ ಜಾರಿಗೆ ತಂದಿದೆ. ಡಿಜಿಲಾಕರ್ ಎನ್ನುವ ವ್ಯವಸ್ಥೆ ಜಾರಿಗೆ ತರಲಾಗಿದ್ದು ಇಲ್ಲಿ ವಿದ್ಯಾರ್ಥಿಗಳ ರಿಜಿಸ್ಟರ್ ನಂಬರ್, ಆಧಾರ್ ಕಾರ್ಡ್ ರಿಜಿಸ್ಟರ್ ಮಾಡಲಾಗಿರುತ್ತದೆ....
ಸುದ್ದಿ

Breaking News : ಸೆಪ್ಟೆಂಬರ್‌ ನಂತರ ಶಿರೂರು ಮಠಕ್ಕೆ ಶಿಷ್ಯ ಸ್ವೀಕಾರ ಪ್ರಕ್ರಿಯೆ ಆರಂಭ – ಕಹಳೆ ನ್ಯೂಸ್

ಉಡುಪಿ, ಜು21: ಆಷಾಢ ಮಾಸ ಹಾಗೂ ಚಾತುರ್ಮಾಸ್ಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್‌ ಬಳಿಕವಷ್ಟೇ ಶಿರೂರು ಮಠಕ್ಕೆ ಶಿಷ್ಯ ಸ್ವೀಕಾರ ಪ್ರಕ್ರಿಯೆ ಆರಂಭ ಸಾಧ್ಯ ಎಂದು ದ್ವಂದ್ವ ಮಠ ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಹೇಳಿದ್ದಾರೆ.  ಉಡುಪಿಯ ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಚರಾಸ್ತಿ, ಸ್ಥಿರಾಸ್ತಿ ಉಸ್ತುವಾರಿ ನಿರ್ವಹಣೆಗೆ ಐದು ಮಂದಿಯ ಸಮಿತಿ ನೇಮಿಸಲಾಗುವುದು. ಜೊತೆಗೆ ಶಿರೂರು ಮಠದ ಆಸ್ತಿ ಪಾಸ್ತಿ ಎಲ್ಲಿ, ಎಷ್ಟಿದೆ ಎನ್ನುವುದರ ದಾಖಲೆ ಕ್ರೋಡೀಕರಿಸಿ, ಪರಿಶೀಲಿಸಿ ಕಾಯ್ದುಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ...
ಸುದ್ದಿ

ಪೊಲೀಸ್ ವಶಕ್ಕೆ ಶಿರೂರು ಶ್ರೀ ಆಪ್ತ ಮಹಿಳೆ – ಕಹಳೆ ನ್ಯೂಸ್

ಉಡುಪಿ: ಶಿರೂರು ಶ್ರೀಗಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಅವರಿಗೆ ಇತ್ತೀಚೆಗೆ ಆಪ್ತರಾಗಿದ್ದ ಕಾರ್ಕಳದ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.  ಮಹಿಳೆಯ ಜತೆಗೆ ಆಕೆಯ ಕಾರನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಈ ಕಾರನ್ನು ಸ್ವಾಮೀಜಿ ಅವರೇ ನೀಡಿದ್ದರು. ಆಕೆ ಶಿರೂರು ಶ್ರೀಗಳಿಗೆ ಇದೇ ಕಾರಿನಲ್ಲಿ ಆಹಾರ ಕಳುಹಿಸಿಕೊಡುತ್ತಿದ್ದಳು ಅಥವಾ ತಾನೇ ಡ್ರೈವ್ ಮಾಡಿಕೊಂಡು ಆಹಾರ ತಂದುಕೊಡುತ್ತಿದ್ದಳು ಎಂಬ ಮಾಹಿತಿ ಇದೆ. ಈ ಹಿನ್ನೆಲೆಯಲ್ಲೇ ಪೊಲೀಸರು ಆಕೆಯ ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಆದರೆ, ಪೊಲೀಸರು...
1 1,397 1,398 1,399 1,400 1,401 1,459
Page 1399 of 1459