ಹರಿಪಾದ ಸೇರಿದ ಶಿರೂರು ಶ್ರೀ ; ವಿಷಪ್ರಾಶನ ಶಂಕೆ – ಕಹಳೆ ನ್ಯೂಸ್
ಉಡುಪಿ: ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಯತಿ ಪರಂಪರೆಯಲ್ಲಿ 30ನೆಯವರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು (55) ಹರಿಪಾದ ಸೇರಿದ್ದಾರೆ. ತೀವ್ರ ಅಸ್ವಸ್ಥಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಗುರುವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದು, ವಿಷಪ್ರಾಶನ ಶಂಕೆ ವ್ಯಕ್ತವಾಗಿದೆ. ಚುನಾವಣೆ ಸ್ಪರ್ಧೆ, ವಿವಾದಾತ್ಮಕ ಹೇಳಿಕೆ, ಅಷ್ಟಮಠದ ಇತರ ಸ್ವಾಮೀಜಿಗಳ ಜತೆಗಿನ ಭಿನ್ನಾಭಿಪ್ರಾಯದಿಂದ ಇತ್ತೀಚಿನ ದಿನಗಳಲ್ಲಿ ವಿವಾದ ಸೃಷ್ಟಿಸಿದ್ದ ಶ್ರೀಗಳ ಆರೋಗ್ಯ ಕೆಲ ಸಮಯದಿಂದ ಆಗಾಗ ಕೈಕೊಡುತ್ತಿತ್ತು. ಹೀಗಿದ್ದರೂ ಜುಲೈ 17ರಂದು ಆರೋಗ್ಯವಾಗಿ ಉತ್ಸಾಹದಿಂದಲೇ...






