ಬೆಂಗಳೂರುನಿಂದ ಶಾಲಾ ಬಾಲಕ ನಾಪತ್ತೆ, ಗುರುವಾಯನ ಕೆರೆಯಲ್ಲಿ ಬ್ಯಾಗ್ ಪತ್ತೆ – ಕಹಳೆ ನ್ಯೂಸ್
ಬೆಳ್ತಂಗಡಿ, ಜು 26: ಬೆಂಗಳೂರು ಮೂಲದ ಬಾಲಕನೋರ್ವ ಗುರುವಾಯನ ಕೆರೆಯಲ್ಲಿ ನಾಪತ್ತೆಯಾಗಿದ್ದಾನೆ. ಇಲ್ಲಿನ ಸನಿಹದ ಕೆರೆಯಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದ್ದು ಅಗ್ನಿ ಶಾಮಕ ದಳದವರು ಬುಧವಾರ ಸಂಜೆ ಶೋಧ ಕಾರ್ಯಾಚರಣೆ ನಡೆಸಿದರು. ಬೆಂಗಳೂರಿನ ಹೂಡಿ ಎಂಬಲ್ಲಿನ ಮುನಿಸ್ವಾಮಿ ಶೆಟ್ಟಿ ಲೇಔಟ್ ನಿವಾಸಿ ಎನ್.ವಿ. ಪ್ರೇಮ್ ಕುಮಾರ್ ಎಂಬುವರ ಪುತ್ರ ಬೆಂಗಳೂರು ದೂರವಾಣಿ ನಗರದ ಐಟಿಐ ವಿದ್ಯಾ ಮಂದಿರದ ೯ ನೇ ತರಗತಿ ವಿದ್ಯಾರ್ಥಿ ಯಶ್ವಂತ್ ಸಾಯಿ ಕೆ.ಪಿ ಎಂಬಾತ ಶಾಲೆಗೆ ಹೋಗದೆ...







