Recent Posts

Saturday, May 9, 2026

archivekahale news

ಸುದ್ದಿ

ಅಕ್ರಮ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರ ಬಂಧನ – ಕಹಳೆ ನ್ಯೂಸ್

ಉಡುಪಿ: ಅಕ್ರಮ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಹೆರ್ಗಾ ಗ್ರಾಮದ ಈಶ್ವರ ನಗರ ಎಂಬಲ್ಲಿರುವ ಐಡಿಯಲ್ ಅಪಾರ್ಟ್ ಮೆಂಟ್ ಬಳಿಇಂದು ಮುಂಜಾನೆ ಸುಮಾರು 11 ಗಂಟೆಗೆ ಬಂಧಿಸಿದ್ದಾರೆ. ತೆಲಂಗಾಣ ರಾಜ್ಯದ ರಾಜ್ ಪ್ರಶಾಂತ್ ಸಿಂಗ್, ಶಾಂತನ್ ರೆಡ್ಡಿ ಬಂಧಿತ ಆರೋಪಿಗಳು. ಇವರಿಂದ ಒಂದು ಕಿಲೋ 166 ಗ್ರಾಂ ತೂಕದ ಗಾಂಜಾ, ಬ್ಯಾಗ್ ಮತ್ತು ಎರಡು ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ...
ಸುದ್ದಿ

ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅಸ್ತು – ಕಹಳೆ ನ್ಯೂಸ್

ನವದೆಹಲಿ: ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಅಸಿಂಧು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಮಹಿಳೆಯರು ಅಬಲೆ ಅಲ್ಲ ಎಂದು ಅಭಿಪ್ರಾಯಪಟ್ಟಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ಸದಸ್ಯ ಪೀಠ, ಶತಮಾನಗಳಿಂದ ಮಹಿಳೆ ಮೇಲೆ ಶೋಷಣೆ ನಡೆದಿದೆ ಎಂದು ಅಭಿಪ್ರಾಯಪಟ್ಟಿದೆ. ಅಯ್ಯಪ್ಪ ಭಕ್ತರು ಪ್ರತ್ಯೇಕ ಧಾರ್ಮಿಕ ಪಂಗಡವಲ್ಲ. ಮಹಿಳೆಯರಿಗೆ ಪ್ರವೇಶವನ್ನು ನಿರಾಕರಿಸುವುದು ಧಾರ್ಮಿಕ ಸ್ವಾತಂತ್ರ್ಯದ ಹರಣವಾಗಿದೆ. ಪ್ರವೇಶವನ್ನು ನಿಷೇಧಿಸುವುದು ಧಾರ್ಮಿಕ ವಿಶ್ವಾಸದ ಭಾಗವೂ...
ಸುದ್ದಿ

ಮತ್ತೆ ಮೊಳಗಿದ ಲಿಂಗಾಯುತ ಪ್ರತ್ಯೇಕ ಧರ್ಮದ ಹೋರಾಟ – ಕಹಳೆ ನ್ಯೂಸ್

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಭಾರಿ ಕೋಲಾಹಲ ಎಬ್ಬಿಸಿದ್ದ ಲಿಂಗಾಯುತ ಪ್ರತ್ಯೇಕ ಧರ್ಮ ವಿವಾದವು ಆ ನಂತರ ತಣ್ಣಗಾದಂತೆ ಕಂಡಿತ್ತು. ಆದರೆ ಈಗ ಮತ್ತೆ ತಲೆ ಎತ್ತಿದೆ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮವನ್ನಾಗಿ ಪರಿಗಣಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿ ಕೇಂದ್ರಕ್ಕೆ ಪ್ರಸ್ತಾವವನ್ನು ರವಾನಿಸಿತ್ತು. ಆದರೆ ಅದಿನ್ನೂ ಕೇಂದ್ರದ ಅಂಗಳದಲ್ಲಿಯೇ ಇದೆ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಆಗ್ರಹಿಸಿ 'ಮುನ್ನುಗ್ಗಿ ದೆಹಲಿಗೆ ಕಾರ್ಯಕ್ರಮವನ್ನು ಲಿಂಗಾಯತ ಪ್ರತ್ಯೇಕ...
ಸುದ್ದಿ

ರಾತ್ರಿ ಸುರಿದ ಭಾರೀ ಮಳೆಗೆ ಮನೆ ಕುಸಿದು ವ್ಯಕ್ತಿ ಸಾವು – ಕಹಳೆ ನ್ಯೂಸ್

ಚಿಕ್ಕಮಗಳೂರು: ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮನೆ ಕುಸಿದು ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸೀತಾಪುರ ಗ್ರಾಮದಲ್ಲಿ ನಡೆದಿದೆ. ಮಾಯವನ್ ಎಂಬುವವನು ಮೃತಪಟ್ಟ ವ್ಯಕ್ತಿ. ರಾತ್ರಿ ಸುರಿದ ಭಾರೀ ಮಳೆಯಿಂದ ಮನೆಯು ಸಂಪೂರ್ಣ ಕುಸಿದು ಬಿದ್ದ ಕಾರಣದಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ....
ಸುದ್ದಿ

ಮಲೆನಾಡಿನಲ್ಲಿ ಮತ್ತೆ ಮಳೆಯ ಅಬ್ಬರ: ಸಣ್ಣ ಕಾಲುವೆ ಸೇತುವೆ ಕುಸಿತ – ಕಹಳೆ ನ್ಯೂಸ್

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮತ್ತೆ ಮಳೆಯ ಅವಾಂತರವಾಗಿದ್ದು, ರಾತ್ರಿ ಸುರಿದ ಭಾರೀ ಮಳೆಗೆ ಸೇತುವೆ ಕುಸಿದು ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಮಾರಿದಿಬ್ಬ ಬಳಿ ನಡೆದಿದೆ. ಭದ್ರಾ ನದಿಗೆ ಸೇರುವ ಸಣ್ಣ ಕಾಲುವೆಗೆ ಕಟ್ಟಿದ್ದ ಸೇತುವೆ ಸುಮಾರು ಹತ್ತು ಅಡಿ ಕುಸಿದಿದ್ದು, ಈ ಕಾರಣದಿಂದಾಗಿ ಎನ್‌ಆರ್‌ಪುರದ ಸಂಚಾರ ಸ್ಥಗಿತವಾಗಿದೆ. ಇದರಿಂದಾಗಿ ಇಲ್ಲಿನ ಹಲವು ಗ್ರಾಮಗಳು ಸಂಪರ್ಕ ಕಳೆದುಕೊಂಡಿದೆ....
ಸುದ್ದಿ

ಪಾನಿಪೂರಿ ತಯಾರಿಕಾ ಘಟಕಕ್ಕೆ ನಗರಸಭೆಯ ಅಧಿಕಾರಿಗಳ ದಾಳಿ – ಕಹಳೆ ನ್ಯೂಸ್

ಪುತ್ತೂರು:  ಸ್ವಚ್ಛತೆ ರಹಿತವಾಗಿ, ಅನುಮತಿ ಪಡೆದುಕೊಳ್ಳದೆ ಕಾರ್ಯಾಚರಿಸುತ್ತಿದ್ದ ಪಾನಿಪೂರಿ ತಯಾರಿಕಾ ಘಟಕವೊಂದರ ಮೇಲೆ ನಗರಸಭೆಯ ಅಧಿಕಾರಿಗಳು ಗುರುವಾರ ದಾಳಿ ನಡೆಸಿ, ಪಾನಿ ಪೂರಿ ತಯಾರಿಕೆಗೆ ಬಳಸಲಾಗುತ್ತಿದ್ದ ಸ್ವತ್ತುಗಳನ್ನು ವಶಪಡಿಸಿಕೊಂಡು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಪಾನಿಪೂರಿ ತಯಾರಿಕಾ ಘಟಕದ ಮಾಲಕನಿಗೆ ನೋಟಿಸ್ ನೀಡಿದ್ದಾರೆ. ಪುತ್ತೂರು ನಗರದ ಕೊಂಬೆಟ್ಟು ಎಂಬಲ್ಲಿರುವ ಆದಂ ಎಂಬವರ ಮಾಲಕತ್ವದ ಬಾಡಿಗೆ ಕೋಣೆಯಲ್ಲಿ ಉತ್ತರ ಭಾರತ ಮೂಲದವರಾದ ರೂಪ್ ಸಿಂಗ್, ಅವರ ಸಹೋದರ ಕುಲ್‍ದೀಪ್ ಸಿಂಗ್ ಎಂಬವರು ಸೇಲು,...
ಸುದ್ದಿ

ವಿದ್ಯಾರ್ಥಿಗಳಿಂದ ದೂರು: ಡ್ರೈವರ್‌ಗಳು ಮತ್ತು ಕಂಡಕ್ಟರ್‌ಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕಿ – ಕಹಳೆ ನ್ಯೂಸ್

ಖಾನಾಪುರ: ಪಾಸ್‌ ಹೊಂದಿದ್ದ ವಿದ್ಯಾರ್ಥಿಗಳಿಗೆ ಬಸ್‌ ನಿಲ್ಲಿಸದೆ ಸತಾಯಿಸುತ್ತಿದ್ದ ಬಸ್‌ ಡ್ರೈವರ್‌ಗಳು ಮತ್ತು ಕಂಡಕ್ಟರ್‌ಗಳನ್ನು ಖಾನಾಪುರ ಶಾಸಕಿ ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.  ವಿದ್ಯಾರ್ಥಿಗಳಿಂದ ದೂರು ಬಂದ ಹಿನ್ನಲೆಯಲ್ಲಿ ಬಸ್ಸುಗಳನ್ನು ಬೆನ್ನಟ್ಟಿದ ಶಾಸಕಿ ಬಸ್ಸನ್ನು ಅಡ್ಡಗಟ್ಟಿದ್ದು ಕಂಡಕ್ಟರ್‌ಗಳು ಮತ್ತು ಡ್ರೈವರ್‌ಗಳನ್ನು ಸಂಸ್ಪೆಂಡ್‌ ಮಾಡುವುದಾಗಿ ಎಚ್ಚರಿಕೆ ನೀಡಿದರು. ಬಸ್‌ಗಳು ಖಾಲಿ ಇದ್ದರೂ ಪಾಸ್‌ ಹೊಂದಿದ್ದ ವಿದ್ಯಾರ್ಥಿಗಳಿಗೆ ನಿಲ್ಲಿಸದೆ ಸಿಬ್ಬಂದಿಗಳು ಜನರನ್ನು ಮಾತ್ರ ಹತ್ತಿಸಿಕೊಳ್ಳುತ್ತಿದ್ದರು. ಇದರಿಂದಾ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗುತ್ತಿತ್ತು....
ಸುದ್ದಿ

ಇಸ್ಲಾಂನಲ್ಲಿ ಮಸೀದಿ ಅವಿಭಾಜ್ಯ ಅಂಗ ಅಲ್ಲ: ಸುಪ್ರೀಂ ಕೋರ್ಟ್ – ಕಹಳೆ ನ್ಯೂಸ್

ನವದೆಹಲಿ :  ಮಸೀದಿಯು ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಈ ಮೂಲಕ ಮುಸ್ಲಿಮರು ಪ್ರಾರ್ಥನೆ ಮಾಡಲು ಮಸೀದಿಯೇ ಆಗಬೇಕೆಂದಿಲ್ಲ ಎಂಬ 1994ರ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ವಿಸ್ತೃತ ಸಾಂವಿಧಾನಿಕ ಪೀಠಕ್ಕೆ ಈ ವಿಚಾರವನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಹೇಳಿದ್ದು, ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ 1994ರ ತೀರ್ಪನ್ನೇ ಮತ್ತೊಮ್ಮೆ ಎತ್ತಿ ಹಿಡಿದಿದೆ. 1994 ರಲ್ಲಿ ನಮಾಜನ್ನು ಎಲ್ಲಾದರೂ ಮಾಡಬಹುದು. ಮಸೀದಿಯಲ್ಲೇ ಮಾಡಬೇಕಿಲ್ಲ....
1 1,369 1,370 1,371 1,372 1,373 1,459
Page 1371 of 1459