Recent Posts

Saturday, May 9, 2026

archivekahale news

ಸುದ್ದಿ

ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸರ್ಜಿಕಲ್ ಸ್ಟ್ರೈಕ್ ದಿನ

ಪುತ್ತೂರು: ವಿವೇಕಾನಂದ ಕಾನೂನು ಕಾಲೇಜಿನ ರಾಷ್ರೀಯ ಸೇವಾ ಯೋಜನೆ ಮತ್ತು ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ದಿನಾಂಕ 29-09-2018ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಭಾರತೀಯ ಸೇನೆಯಲ್ಲಿ ಸೇವೆಯನ್ನು ಸಲ್ಲಿಸಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡಿ, ಭಾರತೀಯ ಸೈನ್ಯವು ಐತಿಹಾಸಿಕ ಪರಂಪರೆಯನ್ನು ಹೊಂದಿದ್ದು, ಸ್ವಾತಂತ್ರ್ಯದ ನಂತರದಲ್ಲಿ ಬಲಿಷ್ಠವಾಗಿ ಬೆಳೆದು ನಿಂತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಸೈನ್ಯದ ಪರಾಕ್ರಮವು ಜನರಿಗೆ ತಲುಪುವ ಕೆಲಸ ನಡೆಯುತ್ತಿದೆ. ಆ...
ಸುದ್ದಿ

ಬದಲಾವಣೆ ಎದುರಿಸಲು ಸಿದ್ಧರಿಲ್ಲದಿದ್ದಾಗ ದುಃಖ ಉಂಟಾಗುತ್ತದೆ: ರಾಘವೇಶ್ವರ ಶ್ರೀ

ಮಂಗಳೂರು: ಬರುವ ಬದಲಾವಣೆಗಳನ್ನು ಎದುರಿಸಲು ಸಿದ್ದರಿಲ್ಲದೇ ಇದ್ದಾಗ ಮನುಷ್ಯ ದುಃಖವನ್ನು - ತೊಂದರೆಯನ್ನು ಅನುಭವಿಸುತ್ತಾನೆ. ಜೀವನದಲ್ಲಿ ಬರುವ ತಿರುವುಗಳನ್ನು ಎದುರಿಸಲು ಸಿದ್ಧರಾಗಿದ್ದಾಗ ಯಾವುದೇ ದುಃಖ ಬಾಧಿಸುವುದಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗಿರಿನಗರದ ಶಾಖಾಮಠದಲ್ಲಿ ಗೋಸ್ವರ್ಗ ಚಾತುರ್ಮಾಸ್ಯದ "ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳು, ಚಾತುರ್ಮಾಸ್ಯದ ತಯಾರಿ 4-5 ತಿಂಗಳ ಮೊದಲೇ ಆರಂಭಿಸಬೇಕು. ಆದರೆ ಈ ಬಾರಿಯ ಚಾತುರ್ಮಾಸ್ಯ 4-5...
ಸುದ್ದಿ

ಮೂರು ಮಂದಿಯ ತಂಡದಿಂದ ಯುವಕನಿಗೆ ಚೂರಿ ಇರಿತ – ಕಹಳೆ ನ್ಯೂಸ್

ಮಂಗಳೂರು: ಕುಡಿದ ಮತ್ತಿನಲ್ಲಿ ಮೂರು ಮಂದಿ ಯುವಕರು ಹಾವೇರಿ ಮೂಲದ ರಮೇಶ್ ಎಂಬಾತನ ಮೇಲೆ ಚೂರಿ ಇರಿತ ಮಾಡಿದ ಘಟನೆ ಉಳ್ಳಾಲ ಅಸೈಗೋಳಿಯ ಜಂಕ್ಷನ್‌ನ ಬಾರ್‌ನ ಬಳಿ ನಡೆದಿದೆ. ಬಾರ್‌ನಿಂದ ಕುಡಿದು ಪಾನಮತ್ತರಾಗಿ ಹೊರಬಂದ ಶಮೀರ್, ಶವಾಝ್, ಇಲ್ಯಾಸ್, ರಮೇಶ್ ಎಂಬಾತನಲ್ಲಿ ಹಣೆಯಲ್ಲಿ ನಾಮಧಾರಣೆ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ರಮೇಶ್ ನಾನು ಹಿಂದು ಅದಕ್ಕೆ ನಾಮ ಹಾಕಿದ್ದದೇನಿನ ಎಂದಿದ್ದಾನೆ. ಈ ಕ್ಷುಲ್ಲಕ ವಿಷಯವನ್ನೆ ಗಟ್ಟಿಯಾಗಿ ಹಿಡಿದ ಕುಡುಕರು ಯುವಕನ ಮೇಲೆ ಹಲ್ಲೆ...
ಸುದ್ದಿ

ವಿದ್ಯಾರ್ಥಿನಿಗೆ ಜೀವ ಬೆದರಿಕೆ ಮತ್ತು ಅಪಹರಣಕ್ಕೆ ಯತ್ನ – ಕಹಳೆ ನ್ಯೂಸ್

ಸುಬ್ರಮಣ್ಯ: ವಿದ್ಯಾರ್ಥಿನಿಯ ಜುಟ್ಟುಹಿಡಿದು ಜೀವ ಬೆದರಿಕೆ ಹಾಕಿದ ಘಟನೆಯು ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾದಲ್ಲಿ ನಡೆದಿದೆ. ವಿದ್ಯಾರ್ಥಿನಿ ತರಗತಿ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಬೊಲೆರೋ ಕಾರಿನಲ್ಲಿ ಆಗಮಿಸಿದ್ದ ಐವರ ತಂಡ ವಿದ್ಯಾರ್ಥಿನಿಯ ಜುಟ್ಟು ಹಿಡಿದು ಅಪಹರಣಕ್ಕೆ ಯತ್ನಿಸಿದ್ದಾರೆ. ಮತ್ತು ತಂದೆಯನ್ನು ಜೀವ ಸಹಿತ ಉಳಿಸಲ್ಲವೆಂದು ಭಯಹುಟ್ಟಿಸಿದ್ದಾರೆ. ಮಹಮ್ಮದ್, ಅಶ್ರಫ್, ಆದಂ ಹಾಗೂ ಇತರ ಇಬ್ಬರ ಮೇಲೆ ಕಡಬದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಬಾಲಕಿ ದೂರಿನಂತೆ ಆರೋಪಿಗಳ ವಿರುದ್ಧ...
ಸುದ್ದಿ

ಬಾಳ್ತಿಲ ಗ್ರಾಂ ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ – ಕಹಳೆ ನ್ಯೂಸ್

ಮಂಗಳೂರು: ಕರ್ನಾಟಕ ಸರಕಾರ ಗ್ರಾಮ ಪಂಚಾಯತ್‌ಗಳ ವಾರ್ಷಿಕ ಪ್ರಗತಿಯನ್ನು ಆಧರಿಸಿಕೊಂಡು ಕೊಡುವ ಸಾಂಸ್ಥಿಕ ಮತ್ತು ಪ್ರಗತಿ ಸೂಚ್ಯಂಕಗಳ ಆಧಾರದ ಮೇಲೆ 2017-18ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮ ಪಂಚಾಯತ್ ಆಯ್ಕೆಯಾಗಿದೆ. ರಾಜ್ಯದ 30 ಜಿಲ್ಲೆಗಳ 176 ತಾಲೂಕುಗಳಲ್ಲಿ ತಲಾ ಮೂರು ಗ್ರಾಮ ಪಂಚಾಯತ್‌ಗಳನ್ನು ಆಯ್ಕೆ ಮಾಡಿ ಅವುಗಳಲ್ಲಿ ಒಂದು ಗ್ರಾಮ ಪಂಚಾಯತ್‌ನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತೆ. ಈ ಬಾರಿಯೂ ಬಂಟ್ವಾಳ ತಾಲೂಕಿನ...
ಸುದ್ದಿ

ಹಳದಿ ಕಾಯಿಲೆಗೆ ತುತ್ತಾಗಿ ಪಿಯು ವಿದ್ಯಾರ್ಥಿನಿ ಸಾವು – ಕಹಳೆ ನ್ಯೂಸ್

ಮಂಗಳೂರು: ಜ್ವರ, ಹಳದಿ ಕಾಯಿಲೆಗೆ ತುತ್ತಾಗಿ ಪ್ರಥಮ ಪಿಯು ವಿದ್ಯಾರ್ಥಿನಿಯೋರ್ವೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಕೊಂಬರು ಶಾಲಾ ಮುಖ್ಯೋಪಾಧ್ಯಯರಾದ ಕೊಂಬಾರು ಹೊಸಬೀಡು ನಿವಾಸಿ ಚಿದಾನಂದ ಗೌಡ ಎಂಬುವವರ ಪುತ್ರಿ ಹರ್ಷಾ ಕೆಸಿ ಎಂದು ಗುರುತಿಸಲಾಗಿದೆ. 2017ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 609 ಅಂಕಗಳನ್ನು ಪಡೆಯುವ ಮೂಲಕ ಕಡಬದ ಕಾನ್ನಾಯ ಜ್ಯೋತಿ ವಿದ್ಯ ಸಂಸ್ಥೆಯ ಟಾಪರ್ ಆಗಿದ್ದ ಈಕೆ, ಬಳಿಕ ಮಂಗಲುರಿನ ಶಾರದಾ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ...
ಸುದ್ದಿ

ನರಿಯನ್ನು ನುಂಗಿದ ಹೆಬ್ಬಾವು – ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹೆಬ್ಬಾವು ಕಾಡಿಗೆ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಉಪಾಯಬಲ್ಲ ನರಿಯನ್ನು ಬೃಹತ್ ಹೆಬ್ಬಾವೊಂದು ಚಾಣಾಕ್ಯದಿಂದ ಬಲೆಗೆ ಸಿಲುಕಿಸಿ ನುಂಗಿದ್ದು ತದನಂತರದಲ್ಲಿ ಗ್ರಾಮಸ್ಥರು ಆ ಹೆಬ್ಬಾವನ್ನು ಹಿಡಿದು ಸೆಲ್ಫಿ ತೆಗೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ನಡೆದಿದೆ. ಈ ಬಗ್ಗೆ ಒಂದು ವರದಿ ಇಲ್ಲಿದೆ. ಕಡಬ ತಾಲೂಕಿನ ಹಳೆ ಸ್ಟೇಷನ್ ಸಮೀಪದ ಬೆದ್ರಾಜೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ನರಿಯೊಂದನ್ನು ಹಿಡಿದು ನುಂಗಲು ಯತ್ನಿಸಿತ್ತು. ಈ ವೇಳೆ ನರಿಯು ತಪ್ಪಿಸಿಕೊಳ್ಳಲಾಗದೆ ಮೃತಪಟ್ಟಿತ್ತು. ಸ್ಥಳೀಯ ವ್ಯಕ್ತಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳ...
ಸುದ್ದಿ

ಪೊಲೀಸರ ಮೇಲೆ ಹಲ್ಲೆ ನಡೆಸಿದ ಪಾನಮತ್ತ ತಂಡ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಪಾನಮತ್ತ ನಾಲ್ವರ ತಂಡ ಪೊಲೀಸರಿಗೆ ಹಲ್ಲೆ ನಡೆಸಿದ ಘಟನೆ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಳಿ ನಡೆದಿದೆ. ಮರ್ಧಾಳ ಸಮೀಪದ ಚಾಕೋಟೆಕೆರೆಯಲ್ಲಿರುವ ಮದ್ಯದಂಗಡಿಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಕಡಬ ಠಾಣಾ ಉಪನಿರೀಕ್ಷಕ ಪ್ರಕಾಶ್ ದೇವಾಡಿಗ, ಸಿಬ್ಬಂದಿಗಳಾದ ಪುಟ್ಟಸ್ವಾಮಿ, ಶಿವಪ್ರಸಾದ್, ಶ್ರಿಶೈಲ, ಗೃಹರಕ್ಷಕ ದಳದ ಸಿಬ್ಬಂದಿ ಯೋಗೀಸ್ ಮಧ್ಯಪಾನ ಮಾಡಿರುವುದನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಪಾನಮತ್ತರಾಗಿ ಆಗಮಿಸಿದ ನೂಜಿಬಾಳ್ತಿಲ ನಿವಾಸಿಗಳಾದ ರತ್ನಾಕರ, ಹರೀಶ್, ದಿನೇಶ್, ಪ್ರಸಾಂತ್...
1 1,364 1,365 1,366 1,367 1,368 1,459
Page 1366 of 1459