Recent Posts

Saturday, May 9, 2026

archivekahale news

ಸುದ್ದಿ

ಕುಂದಾಪುರದಲ್ಲಿ ಭಾರೀ ಆಲಿಕಲ್ಲು ಮಳೆ: ಪ್ರಕೃತಿ ವಿಸ್ಮಯಕ್ಕೆ ಪುಳಕಗೊಂಡ ಜನತೆ –

ಉಡುಪಿ: ಕುಂದಾಪುರದಲ್ಲಿ ಭಾರೀ ಆಲಿಕಲ್ಲು ಮಳೆಯಾದ ಘಟನೆ ಗೋಳಿಯಂಗಡಿ ಪ್ರದೇಶದಲ್ಲಿ ನಡೆದಿದೆ. ನಿನ್ನೆ ಸಂಜೆ ಸುರಿದಿದ್ದ ಭಾರೀ ಮಳೆಯಲ್ಲಿ ಭಾರೀ ಗಾತ್ರದ ಆಲಿಕಲ್ಲು ನೋಡಿ ಜನರು ಬೆರಗಾಗಿದ್ದಾರೆ. ಮಂಜುಗಡ್ಡೆ ಮಾದರಿಯ ಬೃಹತ್ ಆಲಿಕಲ್ಲುಗಳನ್ನು ಕೈಯಲ್ಲಿ ಹಿಡಿದು ಸ್ಥಳೀಯರು ಫೋಟೋ ತೆಗೆದು ಪ್ರಕೃತಿ ವಿಸ್ಮಯಕ್ಕೆ ಗೋಳಿಯಂಗಡಿ ಪ್ರದೇಶದ ಜನರು ಪುಳಕೊಂಡ ಘಟನೆ ನಡೆದಿದೆ....
ಸುದ್ದಿ

ಕಣ್ಣಿನಲ್ಲಿದ್ದ ಜೀವಂತ ಹುಳವನ್ನು ಶಸ್ತ್ರ ಚಿಕಿತ್ಸೆಯಿಂದ ಹೊರತೆಗೆದ ವೈದ್ಯರು – ಕಹಳೆ ನ್ಯೂಸ್

ಉಡುಪಿ: ನೋಡಿದ್ರೆ ಮೈ ಜುಮ್ ಅನ್ನಿಸೋ ದೃಶ್ಯವಿದು. ಹೌದು ಕುಂದಾಪುರದ 60 ವರ್ಷದ ವ್ಯಕ್ತಿಯೊಬ್ರು ಹಲವು ದಿನಗಳಿಂದ ಬಲಗಣ್ಣಿನ ನೋವಿನಿಂದ ಬಳಲುತ್ತಿದ್ರು. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನ್ಯೂ ಮೆಡಿಕಲ್ ಸೆಂಟರಿನ ನೇತ್ರ ತಜ್ಞ ಡಾ.ಶ್ರಿಕಾಂತ್ ಶೆಟ್ಟಿಯವರಿಗೆ ವ್ಯಕ್ತಿ ತಮ್ಮ ಕಣ್ಣನ್ನು ತೋರಿಸಿದ್ದಾರೆ. ವೈದ್ಯರು ಕಣ್ಣಿನ ತಪಾಸಣೆ ಮಾಡಿದಾಗ ಬಲಗಣ್ಣಿನ ಒಳಗೆ ಜೀವಂತವಾಗಿ ಹರಿದಾಡುತ್ತಿರುವ ಹುಳವನ್ನು ಪತ್ತೆಹಚ್ಚಿದ್ದಾರೆ. ಕಣ್ಣಿನ ಒಳಗಿರುವ ಹುಳವನ್ನು ಔಷಧಗಳ ಮೂಲಕ ಸಾಯಿಸಿ ತೆಗೆದರೆ ಕಣ್ಣಿನ ಒಳಗೆ...
ಸುದ್ದಿ

ಗೌರಿ ಲಂಕೇಶ್ ಹತ್ಯೆ ಪ್ರಕರಣ, ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು: ಶ್ರೀ ರಾಮಸೇನೆ – ಕಹಳೆ ನ್ಯೂಸ್

ಮಂಗಳೂರು: ಗೌರಿ ಹತ್ಯೆಯ ಆರೋಪಿಗಳು ಎಂದು ಬಿಂಬಿಸಲ್ಪಟ್ಟ ಪರಶುರಾಮ್ ವಾಗ್ಮೊರೆ ಹಾಗೂ ಮನೋಹರ ಯಡವಿಯವರು ಎಸ್.ಐ.ಟಿ ಯ ವಿರುದ್ಧ ಮಾಧ್ಯಮದ ಮುಂದೆ ಹೇಳಿದಂತಹ ಸ್ಪೋಟಕ ಹೇಳಿಕೆಯ ಅನುಸಾರ ಶ್ರೀ ರಾಮಸೇನೆಯ ರಾಜ್ಯ ಸಮಿತಿಯಿಂದ ಬೆಂಗಳೂರಿನಲ್ಲಿ ಇಂದು ಮಾನ್ಯ ರಾಜಪಾಲರಿಗೂ ಹಾಗೂ ಮಾನ್ಯ ಗೃಹ ಮಂತ್ರಿಗಳಿಗೆ ಸೂಕ್ತ ತನಿಖೆ ಆಗಬೇಕು, ಯಾವುದೇ ಕಾರಣಕ್ಕೂ ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು ಎಂದು ಆಗ್ರಹಿಸಿ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ರಾಜ್ಯದ ಕಾರ್ಯಾದ್ಯಕ್ಷರಾದ ಗಂಗಾಧರ್ ಕುಲಕರ್ಣಿ, ರಾಜ್ಯ ಪ್ರಧಾನ...
ಸುದ್ದಿ

ಬೈಕ್ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ: ಸವಾರ ಮೃತ್ಯು – ಕಹಳೆ ನ್ಯೂಸ್

ಮಂಗಳೂರು: ಬೈಕ್ ಚಲಾಯಿಸುತ್ತಿದ್ದ ವೇಳೆ ವ್ಯಕ್ತಿಯೋರ್ವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಕೊಲ್ಯದಲ್ಲಿ ನಡೆದಿದೆ. ಉಳ್ಳಾಲ ಬೈಲು ನಿವಾಸಿ ದೇವದಾಸ್ ಶ್ರೀಯಾನ್ ಹೃದಯಾಘಾತಕ್ಕೆ ಬಲಿಯಾದವರು. ನಿನ್ನೆ ಸಂಜೆ ಮನೆಯಿಂದ ಕೋಟೆಕಾರಿಗೆ ತೆರಳಿ ಮನೆಗೆ ಹಿಂತಿರುಗುವಾಗ ಘಟನೆ ನಡೆದಿದೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದಾರಿ ಮಧ್ಯದಲ್ಲೇ ಮೃತಪಟ್ಟರು ಎಂದು ತಿಳಿದುಬಂದಿದೆ. ಕೋಟೆಕಾರ್ ಪಟ್ಟಣ ಪಂಚಾಯತಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕಾರ್ಯನಿರ್ವಾಹಿಸುತ್ತಿದ್ದ ಶ್ರೀಯಾನ್, ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ....
ಸುದ್ದಿ

ಅಮಾನುಷ ಕೃತ್ಯದಿಂದ ಜನಿಸಿದ ಎಳೆ ಶಿಶುವನ ಕೊಲೆ – ಕಹಳೆ ನ್ಯೂಸ್

ಬೆಳ್ತಂಗಡಿ: ಮಗು ಮಡಿಲಿಗೆ ಬಂದ್ರೆ ಎಲ್ಲಿಲ್ಲದ ಖುಷಿ ಆದರೆ ಇಲ್ಲೊಂದು ಜೋಡಿ ಮಾತ್ರ ತಮ್ಮ ಅಮಾನುಷ ಕೃತ್ಯದಿಂದ ಜನಿಸಿದ ಎಳೆ ಶಿಶುವನ್ನೆ ಕೊಂದ ಘಟನೆ ನಡೆದಿದೆ. ಅಕ್ರಮ ಸಂಬಂಧದಿಂದ ಜನಿಸಿದ ಗಂಡು ಶಿಶುವನ್ನು ಪ್ರಿಯಕರನ ಜೊತೆ ಸೇರಿ ಯುವತಿಯು ಕೊಲೆ ಮಾಡಿದ್ದಾಳೆ. ಧರ್ಮಸ್ಥಳ ಠಾಣಾ ವ್ಯಾಪ್ತಿಯ ಬೆಳ್ತಂಗಡಿಯಲ್ಲಿ ಪ್ರಿಯಕರ ಶಿವಪ್ಪ ಎಂಬಾತ ಪಟ್ರಮೆ ಗ್ರಾಮದಲ್ಲಿ ಶಿಶುವಿನ ಮೃತದೇಹವನ್ನು ಮಣ್ಣಿನೊಳಗೆ ಹೂತಿದ್ದಾನೆ. ಈ ಬಗ್ಗೆ ಠಾಣೆಯಲ್ಲಿ ವ್ಯಕ್ತಿಯೋರ್ವರು ದೂರನ್ನು ದಾಖಲಿಸಿದ್ರು. ಈ...
ಸುದ್ದಿ

ನಾಳೆಯಿಂದ ಶಿರಾಡಿ ಘಾಟಿ ರಸ್ತೆಯಲ್ಲಿ ವಾಹನಗಳ ಸಂಚಾರ: ಶಶಿಕಾಂತ್ ಸೆಂಥಿಲ್ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಯಲ್ಲಿ ಬಸ್‌ಗಳ ಸಂಚಾರಕ್ಕೆ ಕೊನೆಗೂ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ಅ. 3ರ ಬೆಳಗ್ಗಿನಿಂದ ಎಲ್ಲ ಪ್ರಯಾಣಿಕ ವಾಹನಗಳೂ ಸಂಚರಿಸಬಹುದು ಎಂದು ದ.ಕ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಹಾಸನ ಜಿಲ್ಲಾಧಿಕಾರಿಯವರೊಂದಿಗೆ ಚರ್ಚಿಸಿದ್ದೇನೆ. ಅಲ್ಲದೆ ನಮ್ಮ ಪೊಲೀಸ್ ತಂಡ ಶಿರಾಡಿಯಲ್ಲಿ ಪರಿಶೀಲನೆ ನಡೆಸಿದೆ. ಅದರಂತೆ ವೋಲ್ವೊ, ರಾಜಹಂಸ ಸಹಿತ ಎಲ್ಲ ಬಸ್‌ಗಳೂ ಶಿರಾಡಿ ಘಾಟಿಯಲ್ಲಿ ಸಂಚರಿಸಬಹುದು. ಮುನ್ನೆಚ್ಚರಿಕೆ ಕ್ರಮವಾಗಿ...
ಸುದ್ದಿ

ದೈವಾರಾಧನೆಯನ್ನು ಕೀಳುಮಟ್ಟಕ್ಕೆ ಇಳಿಸುವ ಪ್ರಯತ್ನ ಸೂಕ್ತವಲ್ಲ: ಅಭಯಚಂದ್ರ ಜೈನ್

ಮೂಡುಬಿದಿರೆ: ಇಂದು ದೈವಾರಾಧನೆಯನ್ನು ಕೀಳುಮಟ್ಟಕ್ಕೆ ಇಳಿಸಲಾಗುವಂತಹ ಪ್ರಯತ್ನಗಳು ನಡೆಯುತ್ತಿದ್ದು ಇದಕ್ಕೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು. ಅವರು ಮೂಡುಬಿದಿರೆ ಸಮಾಜಮಂದಿರ ಸಭಾದಲ್ಲಿ ಭಾನುವಾರ ತುಳುನಾಡ ದೈವರಾದನಾ ರಕ್ಷಣಾ ಚಾವಡಿ ಮೂಡುಬಿದಿರೆ ವಲಯದ ಆಶ್ರಯದಲ್ಲಿ ನಡೆದ ದೈವಾರಾಧಕರ ಬೃಹತ್ ಸಮಾವೇಶದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದರು. ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಸ್ವಾತಂತ್ರ್ಯ ದೊರಕಿದ ಫಲವಾಗಿ...
ಸುದ್ದಿ

ರಾಜಕೀಯ ವೈಶಮ್ಯ: ಗುಂಡಿನ ಧಾಳಿ‌ಗೆ ಬಿಜೆಪಿ ಕಾರ್ಯಕರ್ತ ಬಲಿ – ಕಹಳೆ ನ್ಯೂಸ್

ಮಡಿಕೇರಿ: ಗುಂಡಿನ ದಾಳಿಗೆ ಬಿಜೆಪಿ ಕಾರ್ಯದರ್ಶಿ ವ್ಯಕ್ತಿಯೊಬ್ಬರು ಮೃತ ಪಟ್ಟಿರುವ ಘಟನೆ ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮದಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಮರಗೋಡು ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಕಾನಡ್ಕ ತಿಲಕರಾಜ್ (40) ಮೃತ ದುರ್ದೈವಿ. ಆರೋಪಿ ಜೆಡಿಎಸ್ ಬೆಂಬಲಿತ ಗ್ರಾ.ಪಂ ಸದಸ್ಯ ಮುಂಡೋಡಿ ನಂದಾ ನಾಣಯ್ಯ ತಲೆ ಮರೆಸಿಕೊಂಡಿದ್ದಾನೆ. ಮೃತರು ಪತ್ನಿ, ಒಬ್ಬ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಸೋಮವಾರ ಸಂಜೆ 6.30 ಗಂಟೆ ಸುಮಾರಿಗೆ ಮರಗೋಡು ಜಂಕ್ಷನ್ ಬಳಿ...
1 1,362 1,363 1,364 1,365 1,366 1,459
Page 1364 of 1459