Recent Posts

Saturday, May 9, 2026

archivekahale news

ಸುದ್ದಿ

ಇಂದು ಸಚಿವ ಡಿಕೆಶಿ ಐಟಿ ವಿಚಾರಣೆ – ಕಹಳೆ ನ್ಯೂಸ್

ಬೆಂಗಳೂರು: ಸಚಿವ ಡಿ.ಕೆ ಶಿವಕುಮಾರ್ ಐಟಿ ವಿಚಾರಣೆ ಹಿನ್ನೆಲೆಯಲ್ಲಿ ಇಂದು ಇನ್‍ಕಮ್‍ಟ್ಯಾಕ್ಸ್ ಕಚೇರಿಗೆ ಬಿಗಿ ಭದ್ರತೆ ನಿಯೋಜನೆ ಮಾಡಲಾಗಿದೆ. ಇಂದು ಡಿಕೆಶಿ ಐಟಿ ವಿಚಾರಣೆ ನಡೆಯಲಿದ್ದು, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇನ್ ಕಾಮ್‍ಟ್ಯಾಕ್ಸ್ ಕಚೇರಿ ಎದುರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದ್ದು, ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಬಿಜೆಪಿ ಐಟಿಯನ್ನು ದುರ್ಬಳಕೆ ಮಾಡುತ್ತಿದೆ. ಕಾಂಗ್ರೆಸ್ ವಿರುದ್ಧ ಐಟಿ ಅಸ್ತ್ರದಿಂದ ದಬ್ಬಾಳಿಕೆ ನಡೆಸುತ್ತಿದೆ ಎಂದು ಅರೋಪಿಸಿ ಯೂತ್ ಕಾಂಗ್ರೆಸ್ ನ...
ಸುದ್ದಿ

ಮೈತ್ರಿ ಸರ್ಕಾರ ಬೀಳುವ ಅವಕಾಶವೇ ಇಲ್ಲ – ಹೆಚ್.ಡಿ.ದೇವೇಗೌಡ – ಕಹಳೆ ನ್ಯೂಸ್

ಚಿಕ್ಕಮಗಳೂರು: ಪ್ರಸ್ತುತ ರಾಜಕೀಯಕ್ಕೆ ನಾನು ಫುಲ್ ಸ್ಟಾಪ್ ಹಾಕಿದ್ದೇನೆ, ವಿರೋಧ ಪಕ್ಷ, ಕಾಂಗ್ರೆಸ್ ಸ್ನೇಹಿತರು, ಬೇರೆ ಬೇರೆ ರೀತಿ ಮಾತನಾಡುತ್ತಾರೆ, ನಾನು ಅದಕ್ಕೆಲ್ಲ ಉತ್ತರ ನೀಡಲ್ಲ, ಬಹುಶ: ಇದಲ್ಲಾ ಅಂತ್ಯವಾಗುತ್ತೆ ಎಂಬ ನಂಬಿಕೆ ನನಗಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ಇನ್ನು ಒಂದು ತಿಂಗಳಲ್ಲಿ ಮೈತ್ರಿ ಸರ್ಕಾರದ ಗೊಂದಲಗಳೆಲ್ಲಾ ಬಗೆಹರಿಯುತ್ತದೆ, ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೀಟ್ ಹೊಂದಾಣಿಕೆ ಮಾಡಿಕೊಳ್ಳುವ ಉದ್ದೇಶಕ್ಕಾದ್ರು ಅಂತ್ಯವಾಗುತ್ತದೆ ಅಂತಾ ಅಂದುಕೊಂಡಿದ್ದೇನೆ, ಮೈತ್ರಿ...
ಸುದ್ದಿ

ಹೃದಯಾಘಾತ: ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಇನ್ಸ್ ಪೆಕ್ಟರ್ ನಿಧನ – ಕಹಳೆ ನ್ಯೂಸ್

ಉಡುಪಿ: ಬೆಳ್ಳಂಬೆಳ್ಳಗೆ ಹೃದಯಾಘಾತದಿಂದ ಇನ್ಸ್‍ಪೆಕ್ಟರ್ ನಿಧನವಾದ ಘಟನೆ ಉಡುಪಿಯ ಮೂಲ್ಕಿಯಲ್ಲಿ ನಡೆದಿದೆ. ಉಡುಪಿ ವಲಯದ ಹೆಜಮಾಡಿ ಕೋಸ್ಟಲ್ ಸೆಕ್ಯೂರಿಟಿ ಪೊಲೀಸ್ ಇನ್ಸ್‍ಪೆಕ್ಟರ್ ಆಗಿದ್ದ 55 ವರ್ಷ ಪ್ರಾಯದ ಹರಿಶ್ಚಂದ್ರ ಮೂಲ್ಕಿಯ ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ವಿಧಿವಶರಾಗಿದ್ದಾರೆ. ಕೂಡಲೇ ಶವವನ್ನು ಮಂಗಳೂರಿನ ಮುಕ್ಕ ಆಸ್ಪತ್ರೆಗೆ ರವಾನಿಸಲಾಗಿದೆ....
ಸುದ್ದಿ

ನಟ ದರ್ಶನ್‍ ಮೈಸೂರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ – ಕಹಳೆ ನ್ಯೂಸ್

ಮೈಸೂರು: ನಟ ದರ್ಶನ್‍ಗೆ ಆಕ್ಸಿಡೆಂಟ್ ಆಗೀರೋದು ಗೊತ್ತೇ ಇದೆ. ಅಪಘಾತವಾದ ಬಳಿಕ ಆರು ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ದರ್ಶನ್ ಕಳೆದ ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಡಾಕ್ಟರ್ ಒಂದು ತಿಂಗಳು ವಿಶ್ರಾಂತಿಯನ್ನು ಹೇಳಿದ್ದು, ದರ್ಶನ್ ಈ ನಡುವೆ ತಾಯಿಯ ದೇಗುಲಕ್ಕೆ ಹೋಗಿದ್ದಾರೆ. ಈಗ ಮೈಸೂರಿನ ದೇವಿ ಚಾಮುಂಡೇಶ್ವರಿಯ ದೇವಲಯಕ್ಕೆ ಭೇಟಿ ನೀಡಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಜೊತೆಗೆ ಚಾಮುಂಡೇಶ್ವರಿ ಸನ್ನಿಧಿಗೆ ಹೋಗಿ ದರ್ಶನ್ ತಾಯಿಯ ಆಶೀರ್ವಾದ ಪಡೆದುಕೊಂಡು ಬಂದಿದ್ದಾರೆ. ಅಪಘಾತವಾದ...
ಸುದ್ದಿ

ಅಡ್ಯನಡ್ಕ: ಭಿಕ್ಷಾಟನೆ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ – ಕಹಳೆ ನ್ಯೂಸ್

ಅಡ್ಯನಡ್ಕ: ಬಂಟ್ವಾಳ ತಾಲೂಕು ಅಡ್ಯನಡ್ಕದ ಅಡ್ಯನಡ್ಕ ವಿದ್ಯಾವರ್ಧಕ ಸಂಘದಿಂದ ನಡೆಸಲ್ಪಡುವ ಜನತಾ ವಿದ್ಯಾಸಂಸ್ಥೆಗಳ ವತಿಯಿಂದ ಇಂದು ಅ. 2ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ 'ಭಿಕ್ಷಾಟನೆ ನಿರ್ಮೂಲನಾ ಜಾಗೃತಿ ಕಾರ್ಯಕ್ರಮ' ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಸಾಹಿತಿ ಮತ್ತು ಸಂಘಟಕ ಭಾಸ್ಕರ ಅಡ್ವಳ ಅವರು ಆಗಮಿಸಿ ಉಪನ್ಯಾಸ ನೀಡಿದರು. ಸಮಾಜದಲ್ಲಿರುವ ಕಳಂಕವನ್ನು ನಿವಾರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಭಿಕ್ಷಾಟನೆಯು ಸಮಾಜದ ಪ್ರಗತಿಗೆ ತಡೆಯೊಡ್ಡುತ್ತಿರುವ ಒಂದು ಜ್ವಲಂತ ಸಮಸ್ಯೆಯಾಗಿದೆ. ಸತ್ಪಾತ್ರರಿಗೆ...
ಸುದ್ದಿ

ಮಂಗಳೂರಿನ ಪುರಭವನದಲ್ಲಿ ಗಾಂಧಿ ಜಯಂತಿ ಆಚರಣೆ – ಕಹಳೆ ನ್ಯೂಸ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಗಾಂಧಿ ಜಯಂತಿಯನ್ನ ಸಂಭ್ರಮದಿಂದ ಆಚರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ ಇದರ ಸಂಯುಕ್ತಾಶ್ರಯದಲ್ಲಿ ಗಾಂಧಿ ಜನ್ಮದಿನಾಚರಣೆ ಕಾರ್ಯಕ್ರಮ ನಡಿಯಿತು. ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ.ವೇದವ್ಯಾಸ ಕಾಮತ್‌ರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಪುರಭವನದಲ್ಲಿ ಈ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉಸ್ತುವಾರಿ ಸಚಿವ ಯು.ಟಿ.ಖಾದರ್...
ಸುದ್ದಿ

ಬಿಸಿಸಿಐಗೂ ಮಾಹಿತಿ ಹಕ್ಕು ಕಾಯ್ದೆ ಅನ್ವಯ – ಕಹಳೆ ನ್ಯೂಸ್

ದೆಹಲಿ: ಎಲ್ಲಾ ಕ್ಷೇತ್ರಗಳಿಗೂ ಮಾಹಿತಿ ಹಕ್ಕು ಕಾಯ್ದೆ ಅನ್ವಯವಾಗುತ್ತಾ ಇದೆ. ಈ ಆರ್‌ಟಿಐ ಕಾಯ್ದೆಯಡಿಯಲ್ಲಿ ಕೇಳಲಾಗುವ ಪ್ರಶ್ನೆಗಳಿಗೆ ಇನ್ಮುಂದೆ ಬೋರ್ಡ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಉತ್ತರಿಸಬೇಕಿದೆ. ಮಾಹಿತಿ ಹಕ್ಕು ಕಾಯ್ದೆ ಅನ್ವಯ ಯಾವನೇ ಒಬ್ಬ ಮಾಹಿತಿಯನ್ನು ಕೇಳಿದ್ರೂ ಸರಿಯಾದ ಮಾಹಿತಿಯನ್ನೆ ಕೊಡಬೇಕು. ಈ ಆ್ಯಕ್ಟ್ಗೆ ಈಗ ಬಿಸಿಸಿಐ ಕೂಡ ಒಳಪಟ್ಟಿದೆ. ನಿನ್ನೆಯಿಂದ ಭಾರತೀಯ ಕ್ರಿಕೆಟ್ ಮಂಡಳಿಯನ್ನೂ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ತರಲಾಯಿತು. ಹೀಗಾಗಿ ದೇಶಿಗರು ಕ್ರಿಕೆಟ್ ಮಂಡಳಿಗೆ...
ಸುದ್ದಿ

ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಥಾನಕ್ಕೆ ಬಂದಿದೆ ಕುತ್ತು – ಕಹಳೆ ನ್ಯೂಸ್

ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿ ತಣ್ಣಗಾಗಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಜಾರಕೀಹೊಳಿ ಸಹೋದರರ ಫೈಟ್ ಇನ್ನೂ ಕೂಡ ಬೂದಿ ಮುಚ್ಚಿದ ಕೆಂಡದಂತಿದ್ದು ಲಕ್ಷ್ಮಿಗೆ ಈಗ ಮತ್ತೊಂದು ಸಂಕಟ ಎದುರಾದಂತಿದೆ ಎಂದು ಹೇಳುತ್ತೆ ಈ ರಿಪೋರ್ಟ್. ಸಮ್ಮಿಶ್ರ ಸರಕಾರ ಇನ್ನೇನು ಬಿದ್ದು ಹೋಯಿತು ಎನ್ನುವಷ್ಟರ ಮಟ್ಟಿಗೆ ತಾರಕಕ್ಕೇರಿದ್ದ ಕಾಂಗ್ರೆಸ್ ರಾಜಕೀಯವನ್ನು, ಸದ್ಯದ ಮಟ್ಟಿಗೆ ತಣ್ಣಗಾಗಿಸುವವಲ್ಲಿ ಯಶಸ್ವಿಯಾಗಿದ್ದದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯೇ ಹೊರತು, ಕಾಂಗ್ರೆಸ್ ಮುಖಂಡರಲ್ಲ ಎನ್ನುವುದು ಗಮನಿಸಬೇಕಾದ ಅಂಶ. ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ...
1 1,361 1,362 1,363 1,364 1,365 1,459
Page 1363 of 1459