Saturday, May 9, 2026

archivekahale news

ಸುದ್ದಿ

ಸೈಕಲ್ ತುಳಿದು ಸ್ವಚ್ಛ ಭಾರತ ಅಭಿಯಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ – ಕಹಳೆ ನ್ಯೂಸ್

ಹಾಸನ: ಮಂಗಳೂರು ಸಮೀಪದ ಗುರುಪುರ ಗ್ರಾಮದ 27 ವರ್ಷದ ಶ್ರವಣ್‌ಕುಮಾರ್ 9,300 ಕಿ.ಮೀ ಸೈಕಲ್ ತುಳಿದು 14 ರಾಜ್ಯ ಹಾಗೂ 2 ದೇಶಗಳನ್ನು ಸುತ್ತಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಶ್ರವಣ್ ಇಂಜಿನಿಯರಿಂಗ್ ವ್ಯಾಸಂಗ ಬಳಿಕ ದೆಹಲಿಯ ಇ ಕಾಮರ್ಸ್ ಕಂಪನಿಯಲ್ಲಿ ಟೀಂ ಲೀಡರ್ ಆಗಿ ಕೆಲಸ ಮಾಡುತ್ತಿದ್ದರು. ಹಾಗೊಂದು ದಿನ ಸ್ವಚ್ಛ ಭಾರತಕ್ಕೆ ತನ್ನದೊಂದು ಅಳಿಲು ಸೇವೆ ಸಲ್ಲಿಸಬೇಕೆಂಬ ಉದ್ದೇಶದಿಂದ...
ಸುದ್ದಿ

3.45 ಲಕ್ಷ ಕೋಟಿ ಮೌಲ್ಯದ ಆಸ್ತಿಯೊಂದಿಗೆ ಅಗ್ರಸ್ಥಾನ ಪಡೆದ ಮುಕೇಶ್ ಅಂಬಾನಿ – ಕಹಳೆ ನ್ಯೂಸ್

ನವದೆಹಲಿ: ರಿಲಾಯನ್ಸ್ ಸಮೂಹದ ಮುಕೇಶ್ ಅಂಬಾನಿ ಅವರು ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. 11ನೇ ಸಲ ಮುಕೇಶ್ ಅವರು ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಮುಕೇಶ್ ಅವರು 3.45 ಲಕ್ಷ ಕೋಟಿ ಮೌಲ್ಯದ ಆಸ್ತಿಯೊಂದಿಗೆ ಅಗ್ರಸ್ಥಾನ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. 1.53 ಲಕ್ಷ ಕೋಟಿ ಹೊಂದಿರುವ ವಿಪ್ರೋದ ಅಜೀಂ ಪ್ರೇಮ್ ಜಿ ಅವರು ಎರಡನೇ ಮತ್ತು ಲಕ್ಷ್ಮೀ ಮಿತ್ತಲ್ ಮೂರನೇ ಸ್ಥಾನದಲ್ಲಿದ್ದಾರೆ. ರಿಲಾಯನ್ಸ್ ಜಿಯೊ ಬ್ರಾಡ್...
ಸುದ್ದಿ

ಭಾರೀ ಕುತೂಹಲ ಮೂಡಿಸುತ್ತಿರುವ ‘ದಿ ವಿಲನ್’ – ಕಹಳೆ ನ್ಯೂಸ್

ಪ್ರೇಮ್ ನಿರ್ದೇಶನದ 'ದಿ ವಿಲನ್' ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಇಬ್ಬರು ಸ್ಟಾರ್ ನಟರು ಒಟ್ಟಿಗೆ ಅಭಿನಯಿಸಿರುವುದು ಇಷ್ಟೊಂದು ಹೈಪ್‍ಗೆ ಕಾರಣ. ಆದ್ರೆ, ಪ್ರೇಮ್ ಹೋದಲ್ಲಿ ಬಂದಲ್ಲಿ ಎಲ್ಲ ಕಡೆಯೂ ಎದುರಾಗುತ್ತಿರುವುದು ಒಂದೇ ಪ್ರಶ್ನೆ 'ವಿಲನ್' ಯಾರು.? ಈ ಬಗ್ಗೆ ಒಂದು ವರದಿ ಇಲ್ಲಿದೆ ನೋಡಿ. ಫಸ್ಟ್ ಲುಕ್, ಟೀಸರ್, ಹಾಡುಗಳು ಹೀಗೆ ಎಲ್ಲದರಲ್ಲಿಯೂ 'ವಿಲನ್' ಮತ್ತು 'ರಾವಣ' ಅಂತ ಹೇಳಿ ಹೇಳಿ ಪ್ರೇಮ್ ಕನ್ ಫ್ಯೂಸ್ ಮಾಡಿಬಿಟ್ಟಿದ್ದಾರೆ. ಯಾರು...
ಸುದ್ದಿ

ಶಬರಿಮಲೆಗೆ ಮಹಿಳೆಯರ ಪ್ರವೇಶ: ಸುಪ್ರೀಂ ತೀರ್ಪನ್ನು ವಿರೋಧಿಸಿ ಬ್ರಹತ್ ಪ್ರತಿಭಟನೆ – ಕಹಳೆ ನ್ಯೂಸ್

ಕಾಸರಗೋಡು: ಶಬರಿಮಲೆಗೆ ಮಹಿಳೆಯರು ಪ್ರವೇಶಾವಕಾಶದ ಸುಪ್ರೀಂ ತೀರ್ಪನ್ನು ವಿರೋಧಿಸಿ ಹಾಗೂ ಕೇರಳ ಸರಕಾರದ ನಿಲುವನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಸಂಘ ಪರಿವಾರ ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದು , ಯುವ ಮೋರ್ಚಾ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಬ್ರಹತ್ ಪ್ರತಿಭಟನೆ ನಡೆಯಿತು. ಶತಮಾನಗಳಿಂದ ಪಾಲಿಸಿಕೊಂಡು ಬರುವ ಆಚಾರ ಸಂಹಿತೆಯನ್ನು ಬುಡಮೇಲು ಗೊಳಿಸುವ ಕೇರಳ ಸರಕಾರದ ಹುನ್ನಾರವನ್ನು ಯಾವುದೇ ಬೆಲೆ ತೆತ್ತು ತಡೆಯಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ . ಶ್ರೀಕಾಂತ್ ಮುನ್ನೆಚ್ಚರಿಕೆ ನೀಡಿದರು....
ಸುದ್ದಿ

ಪೆಟ್ರೋಲ್-ಡೀಸೆಲ್ ದರ ಏರಿಕೆ: ತಪ್ಪುತ್ತಿಲ್ಲ ಜನಸಾಮಾನ್ಯರ ಬವಣೆ – ಕಹಳೆ ನ್ಯೂಸ್

ಮಂಗಳೂರು: ಪೆಟ್ರೋಲ್-ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ವಾಹನ ಸವಾರರು ತತ್ತರಿಸಿ ಹೋಗಿದ್ದಾರೆ. ಸಾಗಾಣಿಕೆ ವೆಚ್ಚದ ಕಾರಣಕ್ಕೆ ದೈನಂದಿನ ವಸ್ತುಗಳ ಬೆಲೆಯೂ ಏರಿಕೆಯಾಗಿದ್ದು, ಜನಸಾಮಾನ್ಯರು ಬವಣೆ ಪಡುವಂತಾಗಿದೆ. ಇಂದು ಕೂಡ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯಲ್ಲಿ 15 ಪೈಸೆ ಏರಿಕೆಯಾಗುವ ಮೂಲಕ ಪ್ರತಿ ಲೀಟರ್ ಗೆ 84 ರೂ. ತಲುಪಿದೆ. ಡೀಸೆಲ್ ಬೆಲೆಯಲ್ಲಿ 20 ಪೈಸೆ ಏರಿಕೆಯಾಗಿದ್ದು, ಈಗ 75.45 ರೂ. ಗಳಿಗೆ...
ಸುದ್ದಿ

ಬಿಸಿರೋಡಿನ ಸರ್ವಿಸ್ ರೋಡಿನಲ್ಲಿ ನೀರಿನ ಪೈಪ್ ಒಡೆದು ನೀರು ಪೋಲು – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ಕುಡಿಯಲು ನೀರಿಲ್ಲ ಆದರೆ ಕುಡಿಯವ ನೀರಿನ ಪೈಪ್ ಒಡೆದು ನೀರು ಪೋಲಾಗಿ ರಸ್ತೆಯುದ್ದಕ್ಕೂ ಹರಿದಾಡುವ ದೃಶ್ಯ ಕಂಡುಬರುತ್ತಿದೆ. ಬಂಟ್ವಾಳ ತಾಲೂಕಿನ ಹೃದಯಭಾಗವೆನಿಸಿದ ಬಿಸಿರೋಡಿನ ಸರ್ವೀಸ್ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಕುಡಿಯುವ ನೀರು ರಸ್ತೆಯಲ್ಲಿ ಸೇರಿ ಕೃತಕ ನೆರೆ ಉಂಟಾಗಿದೆ. ಒಂದು ಕಡೆ ಪುರಸಭಾ ವ್ಯಾಪ್ತಿಯಲ್ಲಿ ಅನೇಕ ವಾರ್ಡುಗಳಿಗೆ ಕುಡಿಯುವ ನೀರು ಪೂರೈಸದೆ ಟ್ಯಾಂಕರ್ ಮೂಲಕ ನೀರು ನೀಡಿದ ಘಟನೆ ಕಳೆದ ಅನೇಕ...
ಸುದ್ದಿ

ಹಿಂದೂ ಮುಖಂಡ ಹರೀಶ್ ಶೆಟ್ಟಿ ಕೊಲೆ ಯತ್ನ: ಮೂವರ ಬಂಧನ – ಕಹಳೆ ನ್ಯೂಸ್

ಮಂಗಳೂರು: ಕಡಲ ತಡಿಯಲ್ಲಿ ಮತ್ತೆ ತಲ್ವಾರ್ ಸದ್ದು ಮಾಡಿದ್ದು ಗೊತ್ತೇ ಇದೆ. ಮೂಡಬಿದ್ರೆ ಗಂಟಲ್ ಕಟ್ಟೆಯಲ್ಲಿ ಪ್ರಶಾಂತ್ ಪೂಜಾರಿ ಕೊಲೆ ಆರೋಪಿ ಇಮ್ತಿಯಾಜ್ ಹತ್ಯೆ ಯತ್ನ ನಡೆದಿತ್ತು. ಇದೇ ಬೆನ್ನಲ್ಲೇ ಇದಕ್ಕೆ ಪ್ರತೀಕಾರವೆಂಬಂತೆ ಹಿಂದೂ ಮುಖಂಡನ ಹತ್ಯೆಗೆ ದುಷ್ಕರ್ಮಿಗಳ ತಂಡವೊಂದು ಯತ್ನಿಸಿದ ಘಟನೆ ಮಂಗಳೂರಿನ ಸೂರಲ್ಪಾಡಿ ಸಮೀಪದಲ್ಲಿ ನಡೆದಿದ್ದು ಇದಕ್ಕೆ ಸಂಬಂಧಿಸಿದಂತೆ ಪೊಲಿಸರು ಮೂರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ. ಕೈಕಂಬದಲ್ಲಿ ಬಸ್ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪೊಳಲಿ ನಿವಾಸಿ ಹರೀಶ್...
ಸುದ್ದಿ

ಲಂಚ ಪಡೆಯುತ್ತಿದ್ದಾಗ ಎಸಿಬಿ ದಾಳಿ: ಅಧಿಕಾರಿ ವಶಕ್ಕೆ – ಕಹಳೆ ನ್ಯೂಸ್

ಮಂಗಳೂರು: ಲಂಚ ಪಡೆಯುತ್ತಿದ್ದಾಗ ಎಸಿಬಿ ದಾಳಿ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸರಕಾರದಿಂದ ದೊರೆಯುವ ಬಯೋ ಗ್ಯಾಸ್ ಸಬ್ಸಿಡಿಗೆ ಏಜೆನ್ಸಿ ಮಾಲಕರೊಬ್ಬರಿಂದ ಮಂಗಳೂರು ಜಿಲ್ಲಾ ಪಂಚಾಯತ್ ಕಛೇರಿಯಲ್ಲಿರುವ ಸಮಗ್ರ ಗ್ರಾಮೀಣ ಇಂಧನ ಯೋಜನೆಯ ಪ್ರಾಜೆಕ್ಟ್ ಇಂಜಿನಿಯರ್ ಆಗಿರುವ ಎನ್.ನಾಗೇಶ್ ಎಂಬುವವರು 50,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15,000ರೂ ನೀಡಿದ್ದು ಮತ್ತೆ 35,000ರೂ ನೀಡದಿದ್ದರೆ ಸಬ್ಸಿಡಿ ಹಣ ಬಿಡುಗಡೆ ಮಾಡುವುದಿಲ್ಲ ಎಂದು ಪೀಡಿಸುತ್ತಿದ್ದರಂತೆ. ಇದರಿಂದ ನೊಂದ ವ್ಯಕ್ತಿ ನೇರವಾಗಿ ಮಂಗಳೂರು...
1 1,358 1,359 1,360 1,361 1,362 1,459
Page 1360 of 1459