Saturday, May 9, 2026

archivekahale news

ಸುದ್ದಿ

ಸಿಡಿಲು ಬಡಿದು ವ್ಯಕ್ತಿ ಸಾವು – ಕಹಳೆ ನ್ಯೂಸ್

ಚಿಕ್ಕಮಗಳೂರು: ಭಾರೀ ಮಳೆಗೆ ಸಿಡಿಲು ಬಡಿದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಸ್ಕೆಮನೆ ಗ್ರಾಮದ ದೇವದಾನ ಎಸ್ಟೇಟ್‍ನಲ್ಲಿ ನಡೆದಿದೆ. ಕಾಫಿ ಎಸ್ಟೇಟ್‍ನಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೂಲತ: ಬಳ್ಳಾರಿ ಮೂಲದ ಹೂವಿನ ಹಡಗಲಿ ಗ್ರಾಮದ ಶಿವಪ್ಪ ಮೃತಪಟ್ಟ ದುರ್ದೈವಿ. ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ....
ಸುದ್ದಿ

ತುಳುನಾಡೋಚ್ಛಯ ಅಂಗವಾಗಿ ತುಳುನಾಡ ಬಾಲೆ ಬಂಗಾರ್- 2018, ಮಕ್ಕಳ ಫೋಟೋ ಸ್ಪರ್ಧೆ – ಕಹಳೆ ನ್ಯೂಸ್

ಮಂಜೇಶ್ವರ:- ತುಳುನಾಡ ಬಾಲೆ ಬಂಗಾರ್ ಸಮಿತಿ ತುಳುವೆರೆ ಆಯನೊ ಕೂಟ ಮಂಜೇಶ್ವರ ಇದರ ಆಶ್ರಯದಲ್ಲಿ ಬಸ್ರೂರಿನಲ್ಲಿ ನಡೆಯಲಿರುವ ತುಳುನಾಡೋಚ್ಛಯ-2018 ರ ಅಂಗವಾಗಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಾರ್ಕ್ @ ಅರ್ಪಿಸುವ ತುಳುನಾಡ ಬಾಲೆ ಬಂಗಾರ್- 2018 ಮುದ್ದು ಮಕ್ಕಳ ಫೋಟೋ ಸ್ಪರ್ಧೆ- ಸೀಸನ್ 3 ಕಾರ್ಯಕ್ರಮ ನಡೆಯಲಿದೆ. ಸ್ಪರ್ಧೆಯಲ್ಲಿ 4 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ಭಾಗವಹಿಸಲು ಅವಕಾಶ, ಭಾಗವಹಿಸುವ ಮಕ್ಕಳ ಪೋಷಕರು ತಮ್ಮ ಮಕ್ಕಳ ಭಾವಚಿತ್ರವನ್ನು 6ಘಿ9 ಸೈಜ್...
ಸುದ್ದಿ

ಹೊಸಂಗಡಿ ಒಕ್ಕೂಟದ ಸದಸ್ಯರಿಗೆ ಸೆಲ್ಕೋ ಸೋಲಾರ್ ಕಂಪೆನಿಯ ಉಪಕರಣ ವಿತರಣೆ – ಕಹಳೆ ನ್ಯೂಸ್

ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ಆಶ್ರಯದಲ್ಲಿ ತಲಪಾಡಿ ವಲಯವನ್ನು ಸೋಲಾರ್ ಗ್ರಾಮ ಮಾಡುವ ಉದ್ದೇಶದಿಂದ ಹೊಸಂಗಡಿ ಒಕ್ಕೂಟದ ಸದಸ್ಯರಿಗೆ ಸೆಲ್ಕೋ ಸೋಲಾರ್ ಕಂಪೆನಿಯ ಉಪಕರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿಯ ಮುಖಾಂತರ ಮಜಿಬೈಲ್ ಸರ್ವೀಸ್ ಕೋ-ಆಪರೇಟಿವ್ ಬ್ಯಾಂಕ್ ಹಾಲ್‍ನಲ್ಲಿ ವಿತರಿಸಲಾಯಿತು. ಕಾರ್ಯಕ್ರಮವನ್ನು ಮಜಿಬೈಲ್ ಬ್ಯಾಂಕಿನ ಮನೇಜರ್ ರಾಮಕೃಷ್ಣ ಕಡಂಬಾರ್‍ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸೆಲ್ಕೋ ಸೋಲಾರ್ ಸಂಸ್ಥೆಯ ಅಧಿಕಾರಿಯಾದ ನಿತಿನ್ ಮಾನ್ಯ, ಹೊಂಸಗಡಿ...
ಸುದ್ದಿ

ಶ್ರೀ ರಾಮ್ ಸಮಾಜಸೇವಾ ಸಂಸ್ಥೆಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ – ಕಹಳೆ ನ್ಯೂಸ್

ಮಂಜೇಶ್ವರ: ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ ಸೆಪ್ಟಂಬರ್ ತಿಂಗಳ 18ನೇ ಯೋಜನೆಯನ್ನು ಮಂಗಲ್ಪಾಡಿ ಬಳಿಯ ಅಗರ್ತಿಮೂಲೆ ನಿವಾಸಿ ದಿ.ಗಿರೀಶ್‍ರವರ ಪತ್ನಿ ಮಂಜುಳಾರಿಗೆ ನೀಡಲಾಯಿತು. ಮೇಸ್ತ್ರೀ ಕೆಲಸ ಮಾಡುತ್ತಿದ್ದ ಗಿರೀಶ್‍ರವರು 4 ತಿಂಗಳ ಹಿಂದೆ ನಿಧನರಾಗಿದ್ದು, ಇವರ ಮನೆ ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಮನೆಗೆ ಹಾಕಿದ ಸಿಮೆಂಟ್ ಶೀಟ್‍ಗಳು ಹಾರಿ ಹೋಗಿ ಮನೆಯ ಛಾವಣಿ ಕೂಡ ಕುಸಿದಿತ್ತು. ಇಬ್ಬರು ಮಕ್ಕಳ ಜೊತೆ ಇದೀಗ ಸಂಸಾರ ಸಾಗಿಸುವ ಮಂಜುಳರ...
ಸುದ್ದಿ

ಕರ್ನಾಟಕದ ಪೋಲಿಯೋ ಲಸಿಕೆಯಲ್ಲಿ ವೈರಸ್ ಇಲ್ಲ, ಸ್ಪಷ್ಟನೆ ನೀಡಿದ ಸರ್ಕಾರ – ಕಹಳೆ ನ್ಯೂಸ್

ಪೋಲಿಯೋ ಲಸಿಕೆಯಲ್ಲೇ ಪೋಲಿಯೋ ವೈರಸ್ ಇದೆ ಎಂಬ ಸುದ್ದಿ ರಾಜ್ಯದಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಇದೆಕ್ಕೆಲ್ಲಾ ಕಾರಣವೆಂದರೆ ಉತ್ತರ ಪ್ರದೇಶದಲ್ಲಿ ಪೋಲಿಯೋ ರೋಗ ನಿವಾರಣೆಗಾಗಿ ಮಕ್ಕಳಿಗೆ ನೀಡಲಾಗುವ ಪೋಲಿಯೋ ಲಸಿಕೆಯಲ್ಲಿ ಟೈಪ್ 2 ಪೋಲಿಯೋ ವೈರಾಣು ಪತ್ತೆಯಾಗಿತ್ತು. ಜನವರಿ 18 ಮತ್ತು 22 ಪೋಲಿಯೋ ದಿನ ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಬಯೋಮೆಡ್ ಕಂಪನಿ ಉತ್ಪಾದಿಸಿರುವ ಲಸಿಕೆಯಲ್ಲಿ ಭಾರತ ಸೇರಿದಂತೆ ವಿಶ್ವಾದ್ಯಂತ ನಿರ್ಮೂಲನೆಯಾಗಿರುವ ಪೋಲಿಯೋ ಟೈಪ್ 2 ಪತ್ತೆಯಾಗಿದೆ. ಈ...
ಸುದ್ದಿ

ವೆಲ್ಡಿಂಗ್ ಕೆಲಸ ಮಾಡುವ ವೇಳೆ ತಾಂತ್ರಿಕ ಕಾರಣಗಳಿಂದ ಸಾವು – ಕಹಳೆ ನ್ಯೂಸ್

ಮಂಗಳೂರು: ವೆಲ್ಡಿಂಗ್ ಕೆಲಸ ಮಾಡುವ ವೇಳೆ ತಾಂತ್ರಿಕ ಕಾರಣಗಳಿಂದ ಗಂಭೀರ ಗಾಯಗೊಂಡ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ಮದ್ಯರಾತ್ರಿ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ. ಕಾಮಾಜೆ ನಿವಾಸಿ ಸುರೇಶ್ ಕುಲಾಲ್ ಅವರು ಮ್ರತ ದುರ್ದೈವಿ. ಸುರೇಶ್ ಕುಲಾಲ್ ಅವರು ಮಂಗಳೂರು ಖಾಸಗಿ ವೆಲ್ಡಿಂಗ್ ಶಾಪ್ ನಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಕಳೆದ ಶುಕ್ರವಾರವೂ ಎಂದಿನಂತೆ ಲೀಕೇಜ್ ಸಮಸ್ಯೆ ಗೆ ಸಂಬಂಧಿಸಿದಂತೆ ಪೆಟ್ರೋಲ್ ಟ್ಯಾಂಕರ್ ಒಂದರ ಮೇಲೆ ಕುಳಿತು...
ಸುದ್ದಿ

ಗುರಿ ತಲುಪಲು ಏಕಾಗ್ರತೆ, ಸತತ ಪರಿಶ್ರಮ ಅಗತ್ಯ: ರೋನಾಲ್ಡ್ ಪಿಂಟೋ – ಕಹಳೆ ನ್ಯೂಸ್

ಪುತ್ತೂರು: ಜೀವನದಲ್ಲಿ ನಿರ್ದಿಷ್ಟ ಗುರಿಯಿರಬೇಕು. ನಾವು ನಮ್ಮ ಗುರಿಯನ್ನು ತಲುಪಬೇಕಾದರೆ ಏಕಾಗ್ರತೆ ಹಾಗು ಸತತ ಪರಿಶ್ರಮದ ಅಗತ್ಯವಿದೆ. ದೇಶ ಕಂಡ ಮಹಾನ್ ವ್ಯಕ್ತಿ ಅಬ್ದುಲ್ ಕಲಾಮ್ ನುಡಿಯಂತೆ ದೊಡ್ಡದಾದ ಕನಸನ್ನು ಕಾಣಬೇಕು, ಆ ಕನಸನ್ನು ನನಸಾಗಿಸಲು ಪ್ರತಿ ನಿಮಿಷ ಪ್ರಯತ್ನಿಸಬೇಕು. ಐಫೆಲ್ ಟವರ್‍ಗೆ ಹತ್ತಿ ನಕ್ಷತ್ರ ನೋಡುವಷ್ಟು ಮಹಾ ಯೋಜನೆ ಇರಬೇಕು ಎಂದು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ವ್ಯಕ್ತಿತ್ವ ವಿಕಸನದ ನಿರ್ದೆಶಕ ರೋನಾಲ್ಡ್ ಪಿಂಟೊ ಹೇಳಿದರು....
ಸುದ್ದಿ

ಮೈಸೂರು ದಸರಾ ಖಾಸಗಿ ದರ್ಬಾರ್‍ಗೆ ಸಿದ್ದವಾಯಿತು ‘ಸಿಂಹಾಸನ’ – ಕಹಳೆ ನ್ಯೂಸ್

ಮೈಸೂರು ದಸರಾ ಮಹೋತ್ಸವದಲ್ಲಿ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಅದರಲ್ಲಿ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್ ಪ್ರಮುಖವಾಗಿದೆ. ಈ ಬಗ್ಗೆ ಒಂದು ವರದಿ ನಿಮಗಾಗಿ.. ಖಾಸಗಿ ದರ್ಬಾರ್ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನಡೆಸಿಕೊಡುತ್ತಿದ್ದು, ಅದಕ್ಕಾಗಿಯೇ ರತ್ನಖಚಿತ ಸಿಂಹಾಸನ ಜೋಡಣೆಗೊಂಡು ಸಕಲ ರೀತಿಯಲ್ಲಿ ಸಿದ್ದಗೊಂಡಿದೆ. ನವರಾತ್ರಿ ಆರಂಭವಾಗುತ್ತಿದ್ದಂತೆಯೇ ರತ್ನಖಚಿತ ಸಿಂಹಾಸನದಲ್ಲಿ ರಾಜಗಾಂಭೀರ್ಯದಲ್ಲಿ ಆಸೀನರಾಗಿ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಭಾರ್ ನಡೆಸಿಕೊಡುತ್ತಿದ್ದು, ಈ ವೇಳೆ ಗತ...
1 1,356 1,357 1,358 1,359 1,360 1,459
Page 1358 of 1459