Wednesday, May 13, 2026

archivekahale news

ಸುದ್ದಿ

ಗ್ಯಾಸ್ ಪೈಪ್ ಸ್ಫೋಟ: ಆರು ಮಂದಿ ಸ್ಥಳದಲ್ಲೇ ಸಾವು – ಕಹಳೆ ನ್ಯೂಸ್

ರಾಯ್ ಪುರ: ಛತ್ತೀಸ್ ಗಡದ ದುರ್ಗಾ ಜಿಲ್ಲೆಯ ಭಿಲಾಯಿ ಸ್ಟೀಲ್ ಪ್ಲಾಂಡ್ ನಲ್ಲಿ ನಡೆದ ಗ್ಯಾಸ್ ಪೈಪ್ ಸ್ಪೋಟದಲ್ಲಿ ಆರು ಮಂದಿ ಮೃತಪಟ್ಟು, 14 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ. ಕೋಕ್ ಓವನ್ ಸೆಕ್ಷನ್ ನ ಪ್ಲಾಂಡ್ ಸಮೀಪವಿರುವಂತಹ ಪೈಪ್ ಲೈನ್ ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದಿಂದಾಗಿ ಗಂಭೀರವಾಗಿ ಗಾಯಗೊಂಡರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಲ್ಲಿ 13 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು...
ಸುದ್ದಿ

ಹದಕೆಟ್ಟ ಸುಬ್ರಹ್ಮಣ್ಯ ಪೋಲೀಸ್ ಠಾಣೆ ರಸ್ತೆ ದುರಸ್ತಿ ಪಡಿಸಲು ಮುಂದಾದ ವಿದ್ಯಾಪ್ರಸನ್ನ ತೀರ್ಥ ಶ್ರೀ – ಕಹಳೆ ನ್ಯೂಸ್

ಸುಬ್ರಮಣ್ಯ : ಕುಕ್ಕೇ ಸುಬ್ರಮಣ್ಯ ಪೊಲೀಸ್ ಠಾಣೆಯ ರಸ್ತೆ ಮಳೆ ಬಂದು ಸಂಪೂರ್ಣವಾಗಿ ಹದಗೆಟ್ಟಿತ್ತು,. ಈ ಸಮಯದಲ್ಲಿ ಪೊಲೀಸರು ಸಂಪುಟ ನರಸಿಂಹ ಸ್ವಾಮಿ ಸುಬ್ರಮಣ್ಯ ಮಠವನ್ನು ಸಂಪರ್ಕ ಮಾಡಿ ಸಹಾಯವನ್ನು ಕೇಳಿದ್ದಾರೆ. ಈ ವೇಳೆ ಮಠದ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀ ಗುರುಗಳು ಜೆ ಸಿ ಬಿ ಮತ್ತು ಟ್ರ್ಯಾಕ್ಟರ್ ನೀಡಿ ರಸ್ತೆಯನ್ನು ರಿಪೇರಿ ಮಾಡಿಕೊಟ್ಟಿದ್ದಾರೆ. ಹಾಗೇ ರಸ್ತೆಯ ಎರಡು ಬದಿಯಲ್ಲಿ ಚರಂಡಿ ಮಾಡಿಕೊಟ್ಟಿರುತ್ತಾರೆ. ಸಂಚಾರಕ್ಕೆ ಯೋಗ್ಯ ರೀತಿಯಲ್ಲಿ...
ಸುದ್ದಿ

ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಧರಣಿ – ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ಪಂಪ್‌ವೆಲ್, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲು ಮತ್ತು ಹೆದ್ದಾರಿ ಅವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಸರ್ವಿಸ್ ರಸ್ತೆಗಳ ಮತ್ತು ನಂತೂರು ಮೇಲ್ಸೇತುವೆ ನಿರ್ಮಿಸಲು ಒತ್ತಾಯಿಸಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಪಂಪ್‌ವೆಲ್ ಮೇಲ್ಸೇತುವೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಪಂಪ್‌ವೆಲ್ ಮೇಲ್ಸೇತುವೆ ಬಳಿ ಧರಣಿ ನಡೆಯಿತು. ಮಂಗಳೂರಿನ ಹೃದಯಭಾಗವಾದ ಪಂಪುವೆಲ್‌ನಲ್ಲಿ ಈ ಹಿಂದೆ ಇದ್ದ ಸರ್ಕಲ್ ಭಾರೀ ಹೆಸರುವಾಸಿಯಾಗಿತ್ತು. ಹೊರರಾಜ್ಯ, ಜಿಲ್ಲೆಗಳಿಂದ ಬರುವಂತಹ ಪ್ರಯಾಣಿಕರಿಗೆ ಪಂಪುವೆಲ್ ಸರ್ಕಲ್ ಗುರುತಿನ ಕೇಂದ್ರವಾಗಿತ್ತು. ಇಲ್ಲಿ...
ಸುದ್ದಿ

ಒಂದು ದಿನದ ಮಟ್ಟಿಗೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಆದ ಇಷಾ ಬೆಹಲ್ – ಕಹಳೆ ನ್ಯೂಸ್

ದೆಹಲಿ: ನೋಯ್ಡಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಇಷಾ ಬೆಹಲ್ ಅವರು ಒಂದು ದಿನದ ಮಟ್ಟಿಗೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಆಗುವ ಅತ್ಯಪೂರ್ವ ಸಾಧನೆಯನ್ನು ಮಾಡಿ ದೇಶದ ಜನತೆಯ ಗಮನವನ್ನು ಸೆಳೆದಿದ್ದಾರೆ. ನೋಯ್ಡಾ ವಿವಿಯಲ್ಲಿ ಪಾಲಿಟಿಕಲ್ ಸಯನ್ಸ್ ವಿದ್ಯಾರ್ಥಿಯಾಗಿರುವ ಇಷಾ ಮೊನ್ನೆ ಭಾನುವಾರ 24 ತಾಸುಗಳ ಮಟ್ಟಿಗೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಆದರು. ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಅಂಗವಾಗಿ ಬ್ರಿಟಿಷ್ ಹೈಕಮಿಷನರ್ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಈಕೆ ಗೆದ್ದು ಒಂದು ದಿನದ ಮಟ್ಟಿಗೆ...
ಸುದ್ದಿ

ಫೇಸ್‌ಬುಕ್‌ನಲ್ಲಿ ಖಾದರ್ ಬಗ್ಗೆ ಅವಹೇಳನಕಾರಿ ಪೋಸ್ಟ್: ಅಭಿಮಾನಿ ಬಳಗದಿಂದ ದೂರು – ಕಹಳೆ ನ್ಯೂಸ್

ಮಂಗಳೂರು: ಕಸಾಯಿಖಾನೆ ವಿವಾದದ ಬಳಿಕ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕುರಿತು ಫೇಸ್ ಬುಕ್‌ನಲ್ಲಿ ಚಿತ್ರ ವಿರೂಪಗೊಳಿಸಿ ಅವಹೇಳನಕಾರಿಯಾಗಿ ಬರೆಯಲಾಗಿದ್ದು , ತಪ್ಪಿತಸ್ಥರನ್ನು ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿ ಪೋಲಿಸ್ ಆಯುಕ್ತರಿಗೆ ದೂರು ನೀಡಲಾಗಿದೆ. ‘ಹನಿ ಹಿಂದೂಸ್ತಾನಿ ಮಂಗಳೂರು ಹಿಂದು’ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಲ್ಲಿ ಸಚಿವ ಯು.ಟಿ.ಖಾದರ್ ಅವರನ್ನು ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿ, ಸಚಿವರ ಮಾನಹಾನಿ ಗೈಯಲಾಗಿದೆ ಎಂದು ಆರೋಪಿಸಿ, ಯು.ಟಿ.ಖಾದರ್ ಅಭಿಮಾನಿ ಬಳಗದ...
ಸುದ್ದಿ

ಭಾರತದ ಇತಿಹಾಸಗಳ ಅಧ್ಯಯನ ಲೇಖಕರ ಆದ್ಯ ಕರ್ತವ್ಯ: ಪೂಜಾ.ವೈ.ಡಿ

ಪುತ್ತೂರು: ಕನ್ನಡ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳು ಬೆಳೆದು ಬಂದಿದೆ.ಅದರಲ್ಲಿ ಅನುವಾದವು ಒಂದು. ಬೇರೆ ಭಾಷೆಗಳಿಂದ ಯಾವುದೇ ತಪ್ಪುಗಳಿಲ್ಲದೇ ಅನುವಾದ ಮಾಡಿ ಕೃತಿ ರಚಿಸುವುದು ಕಠಿಣಕರವಾದ ವಿಚಾರ. ಆಳವಾದ ಅಧ್ಯಯನದ ಜೊತೆಗೆ ಓದುಗರ ಮನಮುಟ್ಟುವಂತಹ ಶಬ್ದಗಳನ್ನು ಬಳಸಿ ಭಾಷಾಂತರ ಮಾಡುವುದು ನಿಜವಾದ ಸವಾಲು ಎಂದು ವಿವೇಕಾನಂದ ಕಾಲೇಜಿನ ಹಿಂದಿ ಉಪನ್ಯಾಸಕಿ ಪೂಜಾ.ವೈ.ಡಿ ಹೇಳಿದರು. ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಕನ್ನಡ ಸಂಘ ಮತ್ತು ತೃತೀಯ ವರ್ಷದ ಐಚ್ಚಿಕ ವಿದ್ಯಾರ್ಥಿಗಳು ಆಯೋಜಿಸುವ...
ಸುದ್ದಿ

ಪತ್ರಕರ್ತನಾಗಿ ಕ್ಷೇತ್ರಕ್ಕಿಳಿದಾಗ ವರ್ತಮಾನದ ಸವಾಲುಗಳ ಅನುಭವ : ಜಯಶಂಕರ್

ಪುತ್ತೂರು: ಪತ್ರಕರ್ತನಾಗಿ ಕ್ಷೇತ್ರಕ್ಕಿಳಿದಾಗ ವರ್ತಮಾನದ ಸವಾಲುಗಳು ಕಾಡಲಾರಂಭಿಸುತ್ತವೆ. ತರಗತಿಯ ಒಳಗೆ ಕುಳಿತು ನೋಡುವ ಪತ್ರಿಕೋದ್ಯಮಕ್ಕೂ, ಹೊರಗೆ ಕಾಣುವ ಪತ್ರಿಕೋದ್ಯಮಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಗಡುವುಗೆರೆಯ ಮಹತ್ವ ಪತ್ರಕರ್ತರಾದಾಗ ಸರಿಯಾಗಿ ಅರ್ಥವಾಗುತ್ತದೆ. ನಮ್ಮನ್ನು ನಾವು ಎಷ್ಟು ವೇಗವಾಗಿ ರೂಪಿಸಿಕೊಳ್ಳುತ್ತೇವೆ ಎನ್ನುವುದು ಪತ್ರಿಕೋದ್ಯಮದಲ್ಲಿ ಮುಖ್ಯವೆನಿಸುತ್ತದೆ ಎಂದು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿ, ಮಡಿಕೇರಿಯ ಪತ್ರಕರ್ತ ಜಯಶಂಕರ್ ಜೆ ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ...
ಸುದ್ದಿ

ವಿವೇಕಾನಂದದಲ್ಲಿ ತುಳು ಸಾಹಿತ್ಯ ಅಧ್ಯಯನ ಕಾರ್ಯಕ್ರಮ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಭಾಷಾ ಅಭಿವೃದ್ಧಿಯ ನೆಲೆಯಲ್ಲಿ ತುಳು ಲಿಪಿ ಅಧ್ಯಯನ ತರಬೇತಿ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಆರಂಭಿಸಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯವೂ ಪ್ರಸ್ತುತ ವರ್ಷ ತುಳು ಎಂ.ಎ ತರಗತಿಗಳನ್ನು ಶುರು ಮಾಡಿದ್ದು, ಮುಂದಿನ ವರ್ಷ ಪದವಿ ಹಂತದಲ್ಲೂ ತುಳು ಶಿಕ್ಷಣ ಜಾರಿಗೊಳ್ಳಲು ಸಿದ್ಧತೆ ನಡೆದಿದೆ. ಕ್ರಮೇಣ ಪಿ.ಯು ಶಿಕ್ಷಣದಲ್ಲೂ ತುಳು ಆಧ್ಯಯನ ತರಭೇಕೆಂಬ ಇರಾದೆ ಇದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ ಹೇಳಿದರು. ಅವರು...
1 1,349 1,350 1,351 1,352 1,353 1,459
Page 1351 of 1459