Thursday, May 14, 2026

archivekahale news

ಸುದ್ದಿ

ರೂಪಾಯಿ ಮೌಲ್ಯ ಕುಸಿತ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ನೆರವು ಪಡೆಯಲು ಚಿಂತನೆ – ಕಹಳೆ ನ್ಯೂಸ್

ದೆಹಲಿ: ದಿನದಿಂದ ದಿನಕ್ಕೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿದ್ದು, ಇದನ್ನು ಸರಿದೂಗಿಸಲು ಭಾರಿ ಕಸರತ್ತು ನಡೆಸುತ್ತಿರುವ ಕೇಂದ್ರ ಸರಕಾರ ಇದೀಗ ವಿದೇಶಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ನೆರವು ಪಡೆಯಲು ಚಿಂತನೆ ನಡೆಸಿದೆ. ನೂತನ ಯೋಜನೆಯಲ್ಲಿ, ವಿದೇಶದಲ್ಲಿ ನೆಲೆಸಿರುವ ಭಾರತೀಯರಿಂದ ಸಹಾಯ ಪಡೆಯುವ ಬಗ್ಗೆ ಚರ್ಚೆ ನಡೆಸಿದ್ದು, ಬಾಂಡ್ ಖರೀದಿ ಹಾಗೂ ಡಾಲರ್ ಡೆಪಾಸಿಟ್ ಮಾಡುವಂತೆ ಮನವಿ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ಆರ್ಥಿಕ ಇಲಾಖೆ ಅಧಿಕಾರಿಗಳು ಹಾಗೂ...
ಸುದ್ದಿ

ಉಡುಪಿ ಕಾಪುವಿನ ಬ್ರಹ್ಮ ಬೈದರ್ಕಳ ಪೊಯ್ಯ ಪೊಡಿಕಲ್ಲ ಗರಡಿಯಲ್ಲಿ ಬೆಳೆಯುವ ಮರದ ಕುದುರೆ – ಕಹಳೆ ನ್ಯೂಸ್

ಉಡುಪಿ: ನಿರ್ಜೀವ ವಸ್ತುಗಳು ಯಾವತ್ತಾದ್ರೂ ಬೆಳೆಯೋದನ್ನು ನೀವು ಕಂಡಿದ್ದೀರಾ. ಯಾವತ್ತಿದ್ರೂ ಅದು ಅಸಾಧ್ಯನೇ ಸರಿ.. ಆದ್ರೆ ಇಲ್ಲೊಂದು ಮರದಿಂದ ಕೆತ್ತಿರೋ ಪುರಾತನ ಕುದುರೆಯೊಂದಿದೆ.. ಈ ಕುದುರೆ ವರುಷದಿಂದ ವರುಷಕ್ಕೆ ಇಂಚಿಂಚಾಗಿ ಬೆಳೆಯುತ್ತಲೇ ಬಂದಿದೆಯಂತೆ.. ಅಂದಹಾಗೆ ಈ ಕುದುರೆ ಇರೋದಾದ್ರೂ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ. ಹೌದು, ನೀವು ಇದನ್ನ ಅಚ್ಚರಿ ಅಂತೀರೋ ಅಥವಾ ಪವಾಡ ಅಂತೀರೋ. ಆದ್ರೆ ಇಲ್ಲಿ ಕಾಣುತ್ತಿರೋ ಈ ಮರದಿಂದ ರಚಿಸಲ್ಪಟ್ಟ ಕುದುರೆ ವರುಷದಿಂದ ವರುಷಕ್ಕೆ...
ಸುದ್ದಿ

ಕಣ್ಣಿರಲ್ಲೇ ದಿನ ದೂಡುತ್ತಿರುವ ಕುಟುಂಬ: ಬಂಟ್ವಾಳದಲ್ಲೊಂದು ಮನಕಲುಕುವ ದೃಶ್ಯ – ಕಹಳೆ ನ್ಯೂಸ್

ಒಂದು ಕಡೆ ವಾಸಿಸಲು ಸ್ವಂತ ಮನೆಯೇ ಇಲ್ಲ, ಇನ್ನೊಂದು ಕಡೆಯಲ್ಲಿ ಅನಾರೋಗ್ಯ ಪೀಡಿತ ತಾಯಿ, ದುಡಿಯಲು ಶಕ್ತಿಹೀನಳಾದ ಮಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದ್ದು ಕಣ್ಣಿರಲ್ಲೇ ಕೈತೊಳೆಯುವ ಕುಟುಂಬದ ವ್ಯಥೆಯನ್ನು ಹೇಳುತ್ತೆ ಈ ಸ್ಟೋರಿ. ಇನ್ನು ಮುಂದೆ ತನ್ನಿಂದ ದುಡಿದು ಜೀವನ ಸಾಗಿಸಲು ಸಾಧ್ಯವಿಲ್ಲ. ದಿನಂದಿಂದ ದಿನಕ್ಕೆ ತಾಯಿಯ ಆರೋಗ್ಯ ಕ್ಷೀಣಿಸುತ್ತಿದೆ. ತಮ್ಮ ಕಷ್ಟವನ್ನು ಕೇಳುವವರು ಯಾರೂ ಇಲ್ಲ. ನಮಗಿಬ್ಬರಿಗೆ ಜೀವನವೇ ಸಾಕಾಗಿದೆ... ಎಂಬ ಕೂಗು ಕೇಳಿ ಕೇಳಿಬರುತ್ತಿರುವ ದೃಶ್ಯ ಬಂಟ್ವಾಳ...
ಸುದ್ದಿ

ಮಂಗಳೂರಲ್ಲಿ ಶಬರಿಮಲೆ ಉಳಿಸಲು ಬೃಹತ್ ಜಾಗೃತಿ ಸಮಾವೇಶ – ಕಹಳೆ ನ್ಯೂಸ್

ಮಂಗಳೂರು: ಶಬರಿಮಲೆಗೆ ಮಹಿಳೆಯರು ಪ್ರವೇಶಿಸಬಹುದು ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಮಂಗಳೂರಲ್ಲಿ ವಿರೋಧ ವ್ಯಕ್ತವಾಗಿದೆ. ಈ ಪ್ರಯುಕ್ತ ಮಂಗಳೂರಲ್ಲಿ ಶಬರಿಮಲೆ ಉಳಿಸಲು ಅಯ್ಯಪ್ಪ ಸೇವಾ ಸಮಿತಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಮಂಗಳೂರಿನ ಕದ್ರಿ ಮೈದಾನದಲ್ಲಿ ನಡೆದ ಶಬರಿಮಲೆ ಉಳಿಸಿ ಬೃಹತ್ ಜಾಗೃತಿ ಸಮಾವೇಶದ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಭಾಗಿಯಾಗಿದ್ದವು. ಜೊತೆಗೆ ನೂರಾರು ಮಹಿಳೆಯರು ಭಾಗಿಯಾಗಿದ್ದರು. ಈ ವೇಳೆ ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ನ ತೀರ್ಪು ಆಘಾತಕಾರಿಯಾಗಿದೆ. ಹಿಂದೂ...
ಸುದ್ದಿ

ಕಸಾಯಿಖಾನೆ ವಿವಾದ: ಸಚಿವ ಯುಟಿ ಖಾದರ್ ಪರ ನಿಂತ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ – ಕಹಳೆ ನ್ಯೂಸ್

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಕುದ್ರೋಳಿ ಕಸಾಯಿಖಾನೆ ಅಭಿವೃದ್ಧಿ ಸೇರ್ಪಡೆ ವಿಚಾರವೂ ವಿವಾದಗೊಳ್ಳುತ್ತಿರುವ ಮಧ್ಯೆಯೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಪರ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ನಿಂತಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ನಡೆಸಿದ ಜೆಡಿಎಸ್ ಜಿಲ್ಲಾಧ್ಯಕ್ಷ ಮಹಮ್ಮದ್ ಕುಂಞಿ ಕಸಾಯಿಖಾನೆಯ ವಿಚಾರದಲ್ಲಿ ಸಚಿವ ಖಾದರ್ ಸಲಹೆ ನಷ್ಟೇ ನೀಡಿದ್ದಾರೆ ಅವರು ಏಕಪಕ್ಷೀಯವಾಗಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ . ಕಸಾಯಿಖಾನೆಯ ಅಭಿವೃದ್ಧಿಗೆ ಹದಿನೈದು ಕೋಟಿ...
ಸುದ್ದಿ

ಸಮುದ್ರದ ಅಲೆಯ ಹೊಡೆತಕ್ಕೆ ಜಾರಿ ಬಿದ್ದ ಶಾಸಕ – ಕಹಳೆ ನ್ಯೂಸ್

ಉಡುಪಿ: ಸಮುದ್ರದ ಅಲೆಗೆ ಬಡವ ಶ್ರೀಮಂತ ಅನ್ನೋ ಬೇದ ಭಾವವಿಲ್ಲ, ಯಾರೇ ಆಗ್ಲಿ ಅಲೆಗೆ ಸಿಕ್ಕರೆ ಬಿದ್ದೇ ಬೀಳಿಸುತ್ತೆ. ಹಾಗೆ ಅಲೆಯ ಹೊಡೆತಕ್ಕೆ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಬಿದ್ದ ಘಟನೆ ನಡೆದಿದೆ. ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಉಡುಪಿಯ ತ್ರಾಸಿ ಬೀಚ್‌ಗೆ ಮುಳುಗುಸ್ನಾನಕ್ಕೆ ಇಳಿದಿದ್ದ ಶಾಸಕನನ್ನು ಅಲೆಯು ಬೀಳುವಂತೆ ಮಾಡಿದ್ದು ಬಿದ್ದ ರಭಸಕ್ಕೆ ಪಂಚೆ ಜಾರಿ ಹೋಗಿದೆ. ಈ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ....
ಸುದ್ದಿ

ಸುರತ್ಕಲ್‌ನಲ್ಲಿ ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಅ.22ರಿಂದ ಅನಿರ್ದಿಷ್ಟ ಧರಣಿ – ಕಹಳೆ ನ್ಯೂಸ್

ಆಗಸ್ಟ್ ಮೂವತ್ತರ ನಂತರ ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಕೇಂದ್ರದಲ್ಲಿ ಸುಂಕ ಸಂಗ್ರಹಿಸಬಾರದು, ಕೂಳೂರು ಸೇತುವೆಯನ್ನು ತಕ್ಷಣ ದುರಸ್ತಿಗೊಳಿಸಿ ಹೊಸ ಸೇತುವೆ ನಿರ್ಮಾಣಗೊಳ್ಳುವವರೆಗೆ ಸಂಚಾರಕ್ಕೆ ಯೋಗ ಗೊಳಿಸಬೇಕು ಎಂದು ಒತ್ತಾಯಿಸಿ ಅಕ್ಟೋಬರ್ 22ರಿಂದ ಸುರತ್ಕಲ್ ಜಂಕ್ಷನ್‌ನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದೆಂದು ಮುನೀರ್ ಕಾಟಿಪಳ್ಳ ಎಚ್ಚರಿಕೆಯ ಸೂಚನೆ ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತಾಡಿದ ಮುನೀರ್ ಸಂಸದರ ಜನ ವಿರೋಧಿ ನಡೆ ಹೆದ್ದಾರಿ ಗುತ್ತಿಗೆದಾರರ ಪರವಾದ ನಿಲುವನ್ನು ಹೋರಾಟ...
ಸುದ್ದಿ

ಹಸ್ತಾಂತರವನ್ನು ಮಧ್ಯದಲ್ಲೇ ನಿಲ್ಲಿಸಿತೇ ರಾಜಕೀಯ ಒತ್ತಡ..?! – ಕಹಳೆ ನ್ಯೂಸ್

ಸರ್ವೋಚ್ಚ ನ್ಯಾಯಾಲಯದ ಆದೇಶದ ಅನ್ವಯ ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ದಿನಾಂಕ 06.10.2018 ರಂದು ತಾಲ್ಲೂಕು ಅಧಿಕಾರಿಗಳಿಗೆ ಗೋಕರ್ಣ ಮಹಾಬಲೇಶ್ವರ ದೇವಾಲಯದ ಸಮಗ್ರ ಆಡಳಿತವನ್ನು ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸುವಂತೆ ಸೂಚಿಸಿದ್ದು, ಆ ಆದೇಶದ ಮೇರೆಗೆ ದೇವಾಲಯದ ನಿರ್ವಹಣಾಧಿಕಾರ ಇಂದು ಬೆಳಗ್ಗೆ ಶ್ರೀಮಠಕ್ಕೆ ಹಸ್ತಾಂತರವಾಗುತ್ತಿತ್ತು, ಆದರೆ ರಾಜಕೀಯ ಒತ್ತಡದ ಕಾರಣದಿಂದಾಗಿ ಪ್ರಕ್ರಿಯೆಯನ್ನು ಅರ್ಧಕ್ಕೆ ನಿಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸರ್ಕಾರೀ ವ್ಯವಸ್ಥೆಯ ದುರ್ಬಳಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಉತ್ತರ ಕನ್ನಡದ ಜಿಲ್ಲಾಧಿಕಾರಿಗಳು ಗೋಕರ್ಣ ದೇವಾಲಯವನ್ನು ಶ್ರೀಮಠಕ್ಕೆ...
1 1,348 1,349 1,350 1,351 1,352 1,459
Page 1350 of 1459