Thursday, May 14, 2026

archivekahale news

ಸುದ್ದಿ

ಕ್ರೀಡೆಗೆ ಪ್ರೋತ್ಸಾಹ: ಸಾಧನೆಗೈದ ವಿದಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ – ಕಹಳೆ ನ್ಯೂಸ್

ಮಂಗಳೂರು: ಕ್ರೀಡೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಸಾಧನೆಗೈದ ವಿದಾರ್ಥಿಗಳಿಗೆ ಉಚಿತ ಕ್ರೀಡಾ ಸಮವಸ್ತ್ರ ವಿತರಣೆ ಮಾಡಲಾಯಿತು. ಬಂಟ್ವಾಳ ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ 130 ವಿದ್ಯಾರ್ಥಿಗಳಿಗೆ ತಾ.ಪಂ. ವತಿಯಿಂದ ಉಚಿತವಾಗಿ ನೀಡುವ ಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯ ಕ್ರಮ ತಾ.ಪಂ.ನ ಎಸ್.ಜಿ.ಅರ್.ಎಸ್.ವೈ. ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ ಪಾಠದ...
ರಾಜಕೀಯಸುದ್ದಿ

ಸಚಿವ ಎನ್ ಮಹೇಶ್ ರಾಜೀನಾಮೆ: ಮೈತ್ರಿಗೂ ಘಟನೆಗೂ ಸಂಬಂಧವಿಲ್ಲ: ಬಂಡೆಪ್ಪ ಕಾಶಂಪರ್ – ಕಹಳೆ ನ್ಯೂಸ್

ಚಿಕ್ಕಮಗಳೂರು: ಸಚಿವ ಎನ್ ಮಹೇಶ್ ರಾಜೀನಾಮೆ ಮೈತ್ರಿ ಸರ್ಕಾರಕ್ಕೆ ಇನ್ನೊಂದು ತಲೆನೋವಾಗಿದೆ. ಇದರ ಬೆನ್ನಲ್ಲೆ ಸಹಕಾರ ಸಚಿವ ಈ ಘಟನೆಯ ಕುರಿತು ಮಾತನಾಡಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಚಿವ ಬಂಡೆಪ್ಪ ಕಾಶಂಪರ್, ಮಹೇಶ್ ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾಹಿತಿ ಇಲ್ಲ. ಹೈಕಮಾಂಡ್ ಆದೇಶದ ಮೇಲೆ ಅವರು ರಾಜೀನಾಮೆ ನಿರ್ಧಾರ ತೆಗೆದುಕೊಂಡಿರಬಹುದು. ದೇವೇಗೌಡ ಹಾಗೂ ಮಾಯವತಿಯವರು ಚರ್ಚಿಸಿ ಸರಿಪಡಿಸುತ್ತಾರೆ. ಮೈತ್ರಿಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ....
ಸುದ್ದಿ

ಗಂಗಾ ನದಿ ಉಳಿವಿನ ಹೋರಾಟಗಾರ, ಪರಿಸರವಾದಿ ಜಿ.ಡಿ.ಅಗರ್ವಾಲ್‌ ನಿಧನ – ಕಹಳೆ ನ್ಯೂಸ್

ಹೊಸದಿಲ್ಲಿ: ಗಂಗಾ ನದಿಯ ಉಳಿವಿಗಾಗಿ ಜೂನ್‌ 22ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸ್ವಾಮಿ ಜ್ಞಾನ ಸ್ವರೂಪ ಸಾನಂದ್‌ ಎಂದೇ ಹೆಸರುವಾಸಿಯಾಗಿದ್ದ ಐಐಟಿ ಮಾಜಿ ಪ್ರಾಧ್ಯಾಪಕ ಜಿ.ಡಿ.ಅಗರ್ವಾಲ್‌ (87) ಹೃಷಿಕೇಶದ ಏಮ್ಸ್‌ ಆಸ್ಪತ್ರೆಯಲ್ಲಿ ಗುರುವಾರ ಮೃತಪಟ್ಟಿದ್ದಾರೆ. ಐಐಟಿ ಕಾನ್ಪುರದಲ್ಲಿ ಪ್ರೊಫೆಸರ್‌ ಆಗಿ ಹಾಗೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಅಗರ್ವಾಲ್‌ ಅಪ್ಪಟ ಪರಿಸರವಾದಿಯಾಗಿ ತಮ್ಮ ಬದುಕನ್ನು ಗಂಗಾ ನದಿಯ ಉಳಿವಿನ ಹೋರಾಟಕ್ಕೆ ಮುಡುಪಾಗಿಟ್ಟಿದ್ದರು. ಅಭಿವೃದ್ಧಿಯ ಹೆಸರಿನಲ್ಲಿ ಗಂಗಾ ನದಿ ತೀರದ...
ಸುದ್ದಿ

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳ ಬಂಧನ – ಕಹಳೆ ನ್ಯೂಸ್

ಮಂಗಳೂರು: ಕಾಲೇಜು ಕ್ಯಾಂಪಸ್ ಬಳಿ ಗಾಂಜಾ ಮಾರಟ ಮಾಡುತ್ತಿದ್ದ ಆರೋಪಿಗಳನ್ನು ಗಾಂಜಾ ಸಹಿತ ಬಂಧಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಮಂಗಳೂರಿನಿಂದ ರಿಕ್ಷಾದಲ್ಲಿ ತಂದು ಉಪ್ಪಿನಂಗಡಿ ಕಾಲೇಜು ಸಮೀಪದ ವ್ಯಕ್ತಿಗೆ ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮಾರಟ ಮಾಡುತ್ತಿದ್ದ ವ್ಯಕ್ತಿಗಳು ಪರಾರಿಯಗಲು ವಿಫಲ ಯತ್ನ ನಡೆಸಿದ್ದಾರೆ. ಅಝೀದ್, ಮೊಹಮ್ಮದ್ ರಫೀಕ್, ಅಬೂಬಕ್ಕರ್ ಸಿದ್ದಿಕ್ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳಿಂದ ಎರಡು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿದ್ದ...
ಸುದ್ದಿ

ಕಾಂಗ್ರೆಸ್ ಪಕ್ಷದ ದ್ವಿಮುಖ ನೀತಿಯನ್ನು ಬಹಿರಂಗ ಪಡಿಸಲು ಹಿಂದೂ ಜನಜಾಗೃತಿಯಿಂದ ಮನವಿ – ಕಹಳೆ ನ್ಯೂಸ್

ಪುತ್ತೂರು : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮುಂದಿನ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕರಾದ ಶ್ರೀ. ಸಂಜೀವ ಮಠಂದೂರು ಅವರಿಗೆ ಮನವಿ ನೀಡಲಾಯಿತು. ಕರ್ನಾಟಕ ರಾಜ್ಯದಲ್ಲಿ ಕಳೆದ ರ‍್ಷ 23 ಕ್ಕೂ ಅಧಿಕ ಹಿಂದೂ ಕಾರ‍್ಯಕರ್ತರ ಬರ್ಬರ ಹತ್ಯೆ ಪ್ರಕರಣ ರಾಷ್ಟ್ರವ್ಯಾಪಿ ಸುದ್ಧಿಯಾಗಿತ್ತು. ಇದರಲ್ಲಿ ಕಾಂಗ್ರೆಸ್ ರ‍್ಕಾರವು ಈ ಬೀಕರ ಹತ್ಯೆಗಳ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಿ, ತಪ್ಪಿತಸ್ತರಿಗೆ ಸೂಕ್ತ ಶಿಕ್ಷೆ ನೀಡುವುದು ಅಪೇಕ್ಷಿತವಿತ್ತು. ಆದರೆ ಕಾಂಗ್ರೆಸ್ ರ‍್ಕಾರವು ಈ ಪ್ರಕರಣದಲ್ಲಿ ಅರೋಪಿಗಳಿಗೆ ಪರವಾಗಿ...
ಸುದ್ದಿ

ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೆ ಕುಸಿತ – ಕಹಳೆ ನ್ಯೂಸ್

ದೆಹಲಿ: ಅಮೆರಿಕ ಡಾಲರ್ ಎದುರು ಇಂದು ಭಾರತೀಯ ರೂಪಾಯಿ ಮೌಲ್ಯದಲ್ಲಿ ಮತ್ತೆ ಕುಸಿತ ಕಂಡಿದೆ. ಇಂದು ರೂಪಾಯಿ ಮೌಲ್ಯ 24 ಪೈಸೆಗಳಷ್ಟು ಕುಗ್ಗಿದ್ದು, ಇದು ಸಾರ್ವಕಾಲಿಕ ದಾಖಲೆಯ ಕುಸಿತ ಎನಿಸಿದೆ. ಅನಿಯಂತ್ರಿತ ವಿದೇಶಿ ನಿಧಿಗಳು ಹೊರ ಹರಿಯುವಿಕೆ ಮತ್ತು ದೇಶೀಯ ಷೇರು ಮಾರುಕಟ್ಟೆಯಲ್ಲಿ ತೀವ್ರ ನಷ್ಟದ ನಡುವೆಯೂ ಆಮದುದಾರರಿಂದ ಅಮೆರಿಕ ಕರೆನ್ಸಿ ಬೇಡಿಕೆ ತೀವ್ರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಗುರುವಾರ ಮತ್ತಷ್ಟು ಕುಸಿತ ಕಂಡುಬಂದಿತು....
ಸುದ್ದಿ

ಕನಿಷ್ಠ ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಪ್ರಚಾರ ಜಾಥ – ಕಹಳೆ ನ್ಯೂಸ್

ಮಂಗಳೂರು: ಬೀಡಿ ಕಾರ್ಮಿಕರ ಕನಿಷ್ಟ ಕೂಲಿ ಜಾರಿಗೊಳಿಸಲು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ ಮುಂದೆ ಎಐಟಿಯುಸಿ, ಸಿಐಟಿಯು, ಬಿಎಂಎಸ್, ಹೆಚ್‌ಎಂಎಸ್ ನೇತೃತ್ವದಲ್ಲಿ ಜಾಥಾಕ್ಕೆ ಕಾರ್ಮಿಕ ಮುಖಂಡ ಕೆ ಆರ್ ಶ್ರೀಯಾನ್ ಚಾಲನೆ ನೀಡಿದ್ರು. ಸಾವಿರ ಬೀಡಿಗೆ ರೂ 210 ಜಾರಿಗೊಳಿಸಲು ಆಗ್ರಹವನ್ನು ನಡೆಸಿದರು. ಈ ಜಾಥಾವು ಜಿಲ್ಲೆಯಾದ್ಯಂತ ಜಾಥಾ ನಡೆಯಲಿದೆ ಎಂಬ ಮಾತು ಕೇಳಿ ಬರ‍್ತಿದೆ....
ಸುದ್ದಿ

ಮೈಸೂರಿನಲ್ಲಿ ಎಲ್ಲೆಲ್ಲೂ ನವನವೀನ ಬೊಂಬೆಗಳ ದರ್ಬಾರ್ – ಕಹಳೆ ನ್ಯೂಸ್

ಮೈಸೂರು: ನವರಾತ್ರಿ ಸಮಯದಲ್ಲಿ ಮನೆಗಳಲ್ಲಿ ಬೊಂಬೆಗಳನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದ್ದು, ಮೈಸೂರಿನಲ್ಲಿ ಬೊಂಬೆಗಳ ದರ್ಬಾರ್ ಎಲ್ಲರ ಮನಸೆಳೆಯಿತು. ಈ ಕುರಿತಾದ ವಿಶೇಷ ವರದಿ ಇಲ್ಲಿದೆ. ನವನವೀನ ಬೊಂಬೆಗಳು ಮನೆಯನ್ನು ಶೋಭಿಸಿ ಮನೆಮಂದಿಗೆ ಮನೋಲ್ಲಾಸ ನೀಡುತ್ತವೆ. ಇವುಗಳನ್ನು ಕಣ್ತುಂಬಿಸಿಕೊಳ್ಳುವುದೇ ಒಂದು ಸಡಗರ. ಸಂಭ್ರಮ. ಒಂದೆಡೆ ಮನೆಗಳಲ್ಲಿ ಬೊಂಬೆಗಳ ದರ್ಬಾರ್ ನಡೆದರೆ ಮತ್ತೊಂದೆಡೆ ವಿವಿಧ ಬಗೆಯ, ವಿವಿಧ ನಮೂನೆಯ ಬೊಂಬೆಗಳನ್ನು ಸಾರ್ವಜನಿಕ ದರ್ಶನಕ್ಕಿಡುವುದು ನಗರಗಳಲ್ಲಿ ಕಂಡುಬರುತ್ತದೆ. ಇವುಗಳನ್ನು ಕಣ್ತುಂಬಿಸಿಕೊಂಡು...
1 1,344 1,345 1,346 1,347 1,348 1,459
Page 1346 of 1459