Thursday, May 14, 2026

archivekahale news

ಕ್ರೀಡೆಸುದ್ದಿ

ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಿಂಚಿದ ಅಡ್ಯನಡ್ಕ ಜನತಾ ಪ್ರೌಢ ಶಾಲೆಯ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಮಂಗಳೂರು: ಅ.9 ಮತ್ತು 10ರಂದು ನಡೆದ ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಅಡ್ಯನಡ್ಕ ಜನತಾ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಸಾಧನೆ ಮಾಡಿದ್ದಾರೆ. ಕೋಲು ಜಿಗಿತದಲ್ಲಿ ಡೀಪ್ನಾ ಡಿಸೋಜ ಪ್ರಥಮ, ಪ್ರತೀಕ್ಷಾ ದ್ವಿತೀಯ; ಸಹನಾಕುಮಾರಿ ಜಾವೆಲಿನ್ ಎಸೆತ ದ್ವಿತೀಯ ಮತ್ತು ಸುತ್ತಿಗೆ ಎಸೆತದಲ್ಲಿ ತೃತೀಯ; ಅಡೆತಡೆ ಓಟದಲ್ಲಿ ಪ್ರತೀಕ್ಷಾ ತೃತೀಯ ಬಹುಮಾನ. ಶಾಲಾ ಸಂಚಾಲಕರು, ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು ತರಬೇತಿ ನೀಡಿದ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ....
ಸಿನಿಮಾಸುದ್ದಿ

‘ನೋ ಫಿಲ್ಟರ್ ನೆಹಾ’ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಕತ್ರೀನಾ ಕೈಫ್: ಜೀವನದ ಹಲವು ರಹಸ್ಯ ಬಹಿರಂಗ – ಕಹಳೆ ನ್ಯೂಸ್

ಬೆಂಗಳೂರು: ನಟಿ ಕತ್ರೀನಾ ಕೈಫ್ ಈ ಬಾರಿ ನೆಹಾ ದುಪಿಯಾ ಅವರು ನಡೆಸಿಕೊಡುವ 'ನೋ ಫಿಲ್ಟರ್ ನೆಹಾ ' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕತ್ರೀನಾ ತನ್ನ ಜೀವನದ ಹಲವು ರಹಸ್ಯಗಳನ್ನು ಕೂಡ ಬಹಿರಂಗಪಡಿಸಿದ್ದಾರಂತೆ. ಒಂದು ಮೂಲಗಳ ಪ್ರಕಾರ, ನೆಹಾ ಕೇಳುವ ಪ್ರತಿಯೊಂದು ಪ್ರಶ್ನೆಗೂ ಯಾವುದೇ ಮುಜುಗರವಿಲ್ಲದೆ ಕತ್ರೀನಾ ಕೈಫ್ ಉತ್ತರಿಸಲಿದ್ದಾರಂತೆ. ಈ ಕುರಿತಾದ ವರದಿ ಇಲ್ಲಿದೆ. ನೆಹಾ ದುಪಿಯಾರ ಶೋ ನೋ ಫಿಲ್ಟರ್ ನೇಹಾದಲ್ಲಿ ಕತ್ರಿನಾ ಕೈಫ್‍ಗೆ...
ಸುದ್ದಿ

ಸಹಕಾರ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಗಮನಾರ್ಹ ಸಾಧನೆ: ಸಚಿವ ಬಂಡೆಪ್ಪ ಕಾಶೆಂಪೂರ – ಕಹಳೆ ನ್ಯೂಸ್

ಮಂಗಳೂರು: ಸಹಕಾರ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಗಮನಾರ್ಹ ಸಾಧನೆ ಮಾಡಿದ್ದು ಸಮ್ಮಿಶ್ರ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿದೆ. ಸರಿಸುಮಾರು 40,000 ಕೋಟಿ ರೈತರ ಸಾಲಮನ್ನಾ ಆಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದರು. ಮಂಗಳೂರಿನಲ್ಲಿ ಮಾತಾಡಿದ ಸಚಿವರು ಸ್ವಸಹಾಯ ಸಂಘಗಳಿಗೂ ಸಹಾಯಹಸ್ತ ನೀಡುವ ಬಗ್ಗೆ ಚಿಂತನೆ ನಡೆಸಿದ್ದೇವೆ. ದೀಪಾವಳಿ ಪ್ರಯುಕ್ತ ರಾಜ್ಯದಲ್ಲಿನ ಬೀದಿ ವ್ಯಾಪಾರಿಗಳಿಗೆ 'ಬಡವರ ಬಂಧು' ಮೂಲಕ ಸಹಾಯಧನ ವಿತರಿಸಲಿದ್ದೇವೆ ಎಂದರು....
ಸುದ್ದಿ

ಬಿಜೆಪಿ ಮುಖಂಡ ಅನ್ವರ್ ಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಒತ್ತಾಯ – ಕಹಳೆ ನ್ಯೂಸ್

ಚಿಕ್ಕಮಗಳೂರು: ಮೂರು ತಿಂಗಳ ಹಿಂದೆ ಘಟಿಸಿದ ಬಿಜೆಪಿ ಮುಖಂಡ ಅನ್ವರ್‌ನ ಹತ್ಯೆಯ ಆರೋಪಿಗಳನ್ನು ಬಂದಿಸುವಂತೆ ಚಿಕ್ಕಮಗಳೂರಿನ ತಾಲೂಕು ಕಚೇರಿಯಿಂದ ಅಜಾದ್ ಪಾರ್ಕ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಬಿಜೆಪಿ ಕಾರ್ಯಕರ್ತರು ನಡೆಸಿದ ಈ ಮೆರವಣಿಗೆಯಲ್ಲಿ, ಮೂರು ತಿಂಗಳು ಕಳೆದ್ರು ಆರೋಪಿಗಳ ಬಂಧನವಾಗಿಲ್ಲ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು. ಕಪ್ಪು ಪಟ್ಟಿಯನ್ನು ಧರಿಸಿ ಮೌನವಾಗಿಯೇ ಪ್ರತಿಭಟನೆ ನಡೆಸಿದ್ರು. ಈ ವೇಳೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಹಾಗೂ ಅನ್ವರ್ ಕುಟುಂಬಸ್ಥರು ಭಾಗಿಯಾಗಿದ್ದರು....
ಸುದ್ದಿ

ಪಶ್ಚಿಮ ಕರಾವಳಿಗೂ ತಿತ್ಲಿ ಚಂಡಮಾರುತದ ಪ್ರಭಾವ: ಹಲವೆಡೆ ಕಡಲಿನ ಅಬ್ಬರ – ಕಹಳೆ ನ್ಯೂಸ್

ಮಂಗಳೂರು: ತಿತ್ಲಿ ಚಂಡಮಾರುತದ ಪ್ರಭಾವ ಪಶ್ಚಿಮ ಕರಾವಳಿಯ ಮೇಲೂ ಬೀರಿದೆ. ಮಂಗಳೂರಿನ ಪಣಂಬೂರು, ಉಳ್ಳಾಲ, ಸೋಮೇಶ್ವರ-ಉಚ್ಚಿಲದ ಹಲವು ಕಡೆ ಕಡಲಿನ ಅಬ್ಬರ ಮಿತಿ ಮೀರಿದೆ. ಈ ಹಿಂದೆ ಎಂದೂ ಕೂಡಾ ಕಂಡರಿಯದಂತಹ ವಾತಾವರಣ ಕಡಲ ತೀರದಲ್ಲಿ ಕಂಡು ಬಂದಿದೆ. ಸಮುದ್ರದ ಅಲೆಗಳು ಭಾರೀ ಎತ್ತರಕ್ಕೆ ಅಪ್ಪಳಿಸುತ್ತಿದ್ದು, ಮೀನುಗಾರರು ಭಯಭೀತಿಗೊಂಡು ಸಮುದ್ರಕ್ಕಿಳಿಯಲಿಲ್ಲ. ಇನ್ನು ಪಣಂಬೂರು ಬೀಚ್‌ನಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ. ಈ ನಡುವೆ ಕರಾವಳಿಯಲ್ಲಿ ಭಾರೀ ಮಳೆಯಾಗುವ...
ಸುದ್ದಿ

ಮಂಗಳೂರು ಬೆಂಗಳೂರು ರೈಲು ಸಂಚಾರ ಆರಂಭ – ಕಹಳೆ ನ್ಯೂಸ್

ಮಂಗಳೂರು: ಬೆಂಗಳೂರು -ಮಂಗಳೂರು ನಡುವೆ ಕೊನೆಗೂ ಸಂಚಾರ ಆರಂಭಗೊಂಡಿದೆ. ರಾಜ್ಯದಲ್ಲಿ ಸುರಿದ ಮಹಾಮಳೆಗೆ ಗುಡ್ಡ ಕುಸಿತ ಉಂಟಾಗಿತ್ತು. ಇದರಿಂದ ರೈಲು ಸಂಚಾರ ಕಳೆದೆರಡು ತಿಂಗಳಿನಿಂದ ಸ್ಥಗಿತಗೊಂಡಿತ್ತು. ಆದರೆ ರೈಲ್ವೆ ಇಲಾಖೆ ಸಮರೋಪಾಧಿಯಲ್ಲಿ ದುರಸ್ತಿ ಕಾರ್ಯ ನಡೆಸಿದ ಕಾರಣ ಒಂದುವರೆ ತಿಂಗಳ ಬಳಿಕ ಮತ್ತೆ ರೈಲು ಸಂಚಾರ ಅರಂಭವಾಗಿದೆ. ಸಕಲೇಶಪುರ ಘಾಟಿ ಮಾರ್ಗದಲ್ಲಿ ಮಂಗಳೂರು-ಬೆಂಗಳೂರು ರೈಲು ಪುನಾರಂಭಗೊಂಡಿದ್ದು, ಕಾರವಾರ- ಕಣ್ಣೂರು ಕೆಎಸ್‌ಆರ್ ಬೆಂಗಳೂರು ರೈಲು ಇಂದು. ಸಂಚಾರ ಆರಂಭಿಸಲಿದೆ. ಇದೇ 12ರಿಂದ...
ಸುದ್ದಿ

ವಿದ್ಯುತ್ ತಂತಿ ತಗುಲಿ ಡಿಎಸ್‌ಪಿಐ ನಾಯಕ ಸಾವು – ಕಹಳೆ ನ್ಯೂಸ್

ಪುತ್ತೂರು: ಫ್ಲೆಕ್ಸ್ ಕಟ್ಟುತ್ತಿದ್ದ ವೇಳೆ ತಂತಿ ತಗುಲಿ ವಿದ್ಯುತ್ ಶಾಕ್ ಡಿ ಎಸ್‌ ಐ ಪಿ ನಾಯಕ ಸಾವನಪ್ಪಿದ ಘಟನೆ ದಕ್ಷಿಣ ಕನ್ನಡದ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ. ಪುತ್ತೂರಿನ ದರ್ಬೆ ಪೆಟ್ರೋಲ್ ಬಂಕ್ ಬಳಿ ಎಸ್ಡಿಪಿಐ ಪಕ್ಷದ ಕಾರ್ಯಕರ್ತರು ಸಮಾವೇಶಕ್ಕೆಂದು ಕಬ್ಬಿಣದ ಚೌಕಟ್ಟು ಹಾಕಿದ್ದ ಫ್ಲೆಕ್ಸ್ ಕಟ್ಟುತ್ತಿದ್ದರು. ಈ ವೇಳೆ ಎಸ್‌ಡಿಪಿಐ ಪುತ್ತೂರು ನಗರ ಅಧ್ಯಕ್ಷ ಹಂಝ ಅಫ್ನಾನ್ ವಿದ್ಯುತ್ ಶಾಕ್‌ನಿಂದ ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಜೊತೆಗೊದ್ದ ಉಳಿದ ಕಾರ್ಯಕರ್ತರು ಆಪಾಯದಿಂದ...
ಸುದ್ದಿ

ಮಂಗಳೂರಿನ ಯುವಕ ತಮಿಳುನಾಡಿನಲ್ಲಿ ಮೃತವಾಗಿ ಪತ್ತೆ: ಶೀಘ್ರ ನ್ಯಾಯಕ್ಕಾಗಿ ಒತ್ತಾಯ – ಕಹಳೆ ನ್ಯೂಸ್

ಮಂಗಳೂರು: ನಗರದ ಗಂಜಿಮಠದ ಬಳಿಯ ಬಡಗುಳಿ ನಿವಾಸಿ ಮಹಮ್ಮದ್ ಸಮೀರ್ ಎಂಬವರು ಬೆಂಗಳೂರಿನಿಂದ ನಾಪತ್ತೆಯಾಗಿ, ತಮಿಳುನಾಡಿನ ದೇವತಾನಪಟ್ಟಿಯಲ್ಲಿ ನಿಗೂಢವಾಗಿ ಮೃತದೇಹವಾಗಿ ಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ, ಅವರ ಕುಟುಂಬಿಕರು ಶೀಘ್ರವಾಗಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಮಂಗಳೂರು ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರಿಗೆ ಇಂದು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ....
1 1,345 1,346 1,347 1,348 1,349 1,459
Page 1347 of 1459