Thursday, May 14, 2026

archivekahale news

ಸುದ್ದಿ

ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅ.25ರಂದು ಬಿಸಿರೋಡಿನಲ್ಲಿ ಪ್ರತಿಭಟನೆ – ಕಹಳೆ ನ್ಯೂಸ್

ಮಂಗಳೂರು: ಶಬರಿಮಲೆಗೆ ಎಲ್ಲಾ ವಯಸ್ಸಿನ ಮಹಿಳೆಯರು ಹೋಗಬಹುದು ಎಂಬ ನೀತಿಗೆ ದೇಶಾದದ್ಯಂತ ಪ್ರತಿಭಟನೆಗಳು ನಡಿತಾ ಇದ್ದು ಅ.25ರಂದು ಬಿಸಿರೋಡಿನಲ್ಲಿ ನಡೆಯಲಿದೆ. ಅಯ್ಯಪ್ಪ ಭಕ್ತ ವೃಂದ ಬಿಸಿರೋಡ್ ವತಿಯಿಂದ ನಡಯಲಿದೆ ಎಂದು ಭಕ್ತವ್ರಂದದ ಪ್ರಮುಖ ಬೋಜಕುಲಾಲ್ ತಿಳಿಸಿದ್ದಾರೆ. ಶಬರಿಮಲೆ ಅಯ್ಯಪ್ಪ ದೇವಾಲಯ ಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರು ಹೋಗಬಹುದು ಎಂಬ ವಿವಾದದ ಹಿನ್ನೆಲೆಯಲ್ಲಿ ಕೋರ್ಟ ತೀರ್ಪು ವಿರೋಧಿಸಿ ಬಿಸಿರೋಡಿನ ಅಯ್ಯಪ್ಪ ಭಕ್ತವೃಂದದ ವತಿಯಿಂದ ಬಿಸಿರೋಡಿನ ಕೈಕಂಬ ದ್ವಾರದ ಬಳಿಯಿಂದ ಭಜನೆಯ ಮೂಲಕ...
ಸುದ್ದಿ

ಮತ್ತೆ ಸಿಮ್ ದೃಢೀಕರಣದ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ – ಕಹಳೆ ನ್ಯೂಸ್

ಮಂಗಳೂರು: ಆಧಾರ್ ಮೂಲಕ ಮೊಬೈಲ್ ಸಿಮ್ ಈಗಾಗಲೇ ದೃಢೀಕರಣವಾಗಿದ್ದರೆ ಮತ್ತೆ ದೃಢೀಕರಣದ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ದೂರ ಸಂಪರ್ಕ ಸಚಿವಾಲಯ ಮತ್ತು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಹೇಳಿದೆ. ಸುಪ್ರೀಂಕೋರ್ಟಿನ ತೀರ್ಪಿನ ಬಳಿಕ ಆಧಾರ್ ದೃಢೀಕರಣದ ಸಿಮ್‌ಗಳು ಸ್ಥಗಿತವಾಗಲಿವೆ. ಪರ್ಯಾಯ ದಾಖಲೆಗಳನ್ನು ನೀಡಿ ದೃಢೀಕರಿಸಬೇಕಾಗುತ್ತದೆ ಎನ್ನುವ ಗೊಂದಲಗಳು ಸೃಷ್ಟಿಯಾಗಿದ್ದವು. ಆದರೆ ಈಗ ಸಿಮ್ ದೃಢೀಕರಣದ ದಾಖಲೆಗಳನ್ನು ನೀಡುವ ಅಗತ್ಯವಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ...
ಸುದ್ದಿ

ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ನಾಲ್ವರು ಯೋಧರು – ಕಹಳೆ ನ್ಯೂಸ್

ಕಾಶ್ಮೀರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಪ್ರತ್ಯೇಕ ಎನ್ ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಭದ್ರತಾ ಪಡೆ ಹೊಡೆದು ಹಾಕಿದ್ದಾರೆ. ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಲಾರೂ ಬಳಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. 7 ಜನ ನಾಗರಿಕರು ಸಾವನ್ನಪ್ಪಿದ್ದಾರೆ. ಗಡಿ ನುಸಳಲು ಯತ್ನಿಸಿದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ನುಸುಳುಕೋರರನ್ನು ಸೇನೆ ಹೊಡೆದು ಹಾಕಿದ್ದು, ಗುಂಡಿನ ಕಾಳಗದಲ್ಲಿ...
ಸುದ್ದಿ

ಜಿ.ಎಸ್.ಟಿ. ತೆರಿಗೆ ವಿವರ ಸಲ್ಲಿಸಲು ಐದು ದಿನ ಕಾಲಾವಕಾಶ ವಿಸ್ತರಣೆ – ಕಹಳೆ ನ್ಯೂಸ್

ವರ್ತಕರಿಗೆ ಜಿ ಎಸ್ ಟಿ ತೆರಿಗೆ ವಿವರ ಸಲ್ಲಿಸಲು ಇದ್ದ ಅವಧಿಗೆ ಹೆಚ್ಚುವರಿಯಾಗಿ ಕಾಲಾವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರಕಾರ ಘೋಷಿಸಿದೆ. ಮಾರ್ಚ್ನಿಂದ ಜುಲೈ ವೇಳೆಯ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಬೆನಿಫಿಟ್ ಸಲ್ಲಿಸಲು ಅ.20 ರಂದು ಅಂತಿಮ ದಿನವಾಗಿತ್ತು. ಆದರೆ ಇದನ್ನು ಐದು ದಿನ ವಿಸ್ತರಿಸಿ ಅ.25 ರವರೆಗೆ ತೆರಿಗೆ ವಿವರ ಸಲ್ಲಿಸಲು ಅವಕಾಶ ನೀಡುವುದಾಗಿ ಕೇಂದ್ರ ಹಣಕಾಸು ಇಲಾಖೆ ತಿಳಿಸಿದೆ. ಇನ್ನಷ್ಟು ಅವಧಿಯ ಅವಶ್ಯಕತೆ ಬೇಕೆಂದು ಹಲವರು...
ಸುದ್ದಿ

ಮದುವೆ ಡೇಟ್‌ ಟ್ವಿಟ್ ಮಾಡಿದ ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ – ಕಹಳೆ ನ್ಯೂಸ್

ಬೆಂಗಳೂರು: ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ರಣ್‌ವೀರ್ ಜೊತೆಗೆ ಮದುವೆಯಾಗಲು ಒಪ್ಪಿರೋದು ಗೊತ್ತೆ ಇದೆ. ಆದ್ರೆ ಮದ್ವೆ ಯಾವಾಗ ಅಂತ ಹೇಳಿಕೊಂಡಿರಲಿಲ್ಲ. ಆದರೆ ಈಗ ಡಿಪ್ಪಿ ಮದುವೆ ಡೇಟ್‌ನ್ನು ಬಹಿರಂಗಗೊಳಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮಾಡಿರುವ ದೀಪಿಕಾ ನಾವಿಬ್ಬರು ಇಬ್ಬರೂ ವಿವಾಹವಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಉಭಯ ಕುಟುಂಬಗಳ ಆಶೀರ್ವಾದದೊಂದಿಗೆ ನ. 14 ಮತ್ತು 15ರಂದು ವಿವಾಹವಾಗುತ್ತಿದ್ದೇವೆ. ನಮ್ಮ ಪ್ರೀತಿಯ ಪ್ರಯಾಣದಲ್ಲಿ ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬಯಸುತ್ತೇವೆ....
ಸುದ್ದಿ

ಅ.24ರಂದು ಲಂಡನ್ ಗೆ ಪ್ರವಾಸ ಮಾಡಲಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ – ಕಹಳೆ ನ್ಯೂಸ್

ಬೆಂಗಳೂರು: ಐದು ದಿನಗಳ ಕಾಲ ಲಂಡನ್ ಪ್ರವಾಸಕ್ಕೆ ಇದೇ ತಿಂಗಳು 24ರಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ್ರು ತೆರಳಲಿದ್ದಾರೆ ಎನ್ನಲಾಗಿದೆ. ಲಂಡನ್‌ನಲ್ಲಿ ನಡೆಯಲಿರುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ್ರು ತೆರಳುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಉಪಚುನಾವಣೆಯ ಕಾವು ಹೆಚ್ಚಾಗಿದ್ದು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳು ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ದಾರೆ. ಆದ್ರೆ ದೇವೆಗೌಡರು ಈ ರೀತಿಮಾಡ್ತಾ ಇರೋದು ಮೈತ್ರಿ ಪಕ್ಷಗಳಿಗೆ ಬಲ ಕಡಿಮೆಯಾದಂತಿದೆ....
ಕ್ರೀಡೆಸುದ್ದಿ

ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಜಯಗಳಿಸಿದ ಟೀಮ್ ಇಂಡಿಯಾ – ಕಹಳೆ ನ್ಯೂಸ್

ದೆಹಲಿ: ನಾಯಕ ವಿರಾಟ್ ಕೊಹ್ಲಿ ಮತ್ತು ಉಪ ನಾಯಕ ರೋಹಿತ್ ಶರ್ಮಾ ಶತಕದ ನೆರವಿನಲ್ಲಿ ಟೀಮ್ ಇಂಡಿಯಾ ಗುಹಾವಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 8 ವಿಕೆಟ್‍ಗಳ ಜಯ ಗಳಿಸಿದೆ. ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗೆಲುವಿಗೆ 323 ರನ್‍ಗಳ ಸವಾಲನ್ನು ಪಡೆದ ಭಾರತ ಇನ್ನೂ 47 ಎಸೆತಗಳು ಬಾಕಿ ಇರುವಾಗ 2 ವಿಕೆಟ್ ನಷ್ಟದಲ್ಲಿ 326ರನ್ ಸೇರಿಸಿ ಗೆಲುವಿನ ದಡ ಸೇರಿತು. ಕೊಹ್ಲಿ ಮತ್ತು ರೋಹಿತ್ ಶರ್ಮಾ...
ಸುದ್ದಿ

ಟಿಟಿಡಿಗೆ ಸುತ್ತಿಕೊಂಡ ಹಗರಣ, ಲಡ್ಡು ಪ್ರಸಾದ ಮಾರಿದ ಆರೋಪ – ಕಹಳೆ ನ್ಯೂಸ್

ತಿರುಮಲ: ತಿಮ್ಮಪ್ಪನ ಸನ್ನಿಧಾನದಲ್ಲಿ ವೈಭವಯುತ ನವರಾತ್ರಿ ಆಚರಣೆಗಳು ಜರಗಿದ ಬೆನ್ನಲ್ಲೇ ಟಿಟಿಡಿಗೆ ಹಗರಣವೊಂದು ಸುತ್ತಿಕೊಂಡಿದೆ. ಭಕ್ತರಿಗೆ ನೀಡಲಾಗುವ ಲಡ್ಡು ಪ್ರಸಾದವನ್ನು ಟಿಟಿಡಿ ಸಿಬಂದಿಯೇ ಕಾಳಸಂತೆಯಲ್ಲಿ ಮಾರಿದ್ದಾರೆಂಬ ಆರೋಪಗಳು ಕೇಳಿಬಂದಿವೆ. ಪ್ರತಿಬಾರಿಯಂತೆ ಈ ಬಾರಿಯೂ ಜರಗುವ "ಗರುಡ ಸೇವೆ'ಯನ್ನು ನೋಡಲು ಅಪಾರ ಭಕ್ತರು ಆಗಮಿಸುವುದನ್ನು ಮೊದಲೇ ಮನಗಂಡಿದ್ದ ತಿರುಪತಿ ತಿರುಮಲ ದೇವಸ್ಥಾನ ಅಕ್ಟೋಬರ್ 14, 15, 16ರಂದು ಭಕ್ತರಿಗೆ ಅಂದಾಜು 30,000 ಲಡ್ಡುಗಳ ಹಂಚಿಕೆಗಾಗಿ 100 ರೂ. ಮತ್ತು 50 ರೂ....
1 1,326 1,327 1,328 1,329 1,330 1,459
Page 1328 of 1459