Wednesday, June 10, 2026

archivekahale news

ಸುದ್ದಿ

ವಿದೇಶದಲ್ಲಿ ಕಪ್ಪು ಹಣ ಹೂಡಿಕೆ ವಿರುದ್ಧ ಆದಾಯ ತೆರಿಗೆ ಇಲಾಖೆಯಿಂದ ಕಾರ್ಯಾಚರಣೆ – ಕಹಳೆ ನ್ಯೂಸ್

ದೆಹಲಿ: ವಿದೇಶದಲ್ಲಿ ಕಾನೂನು ಬಾಹಿರವಾಗಿ ಹಣ ಹೂಡಿದ ಹಾಗೂ ಆಸ್ತಿ ಮಾಡಿದ ಭಾರತೀಯರ ವಿರುದ್ಧ ಆದಾಯ ತೆರಿಗೆ ಇಲಾಖೆ ಕಾರ್ಯಾಚರಣೆಗೆ ಇಳಿದಿದೆ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಪ್ಪು ಹಣ ವಿರೋಧಿ ಕಾನೂನು ಹೊಸದಾಗಿ ಪರಿಚಯಿಸಲು ಚಿಂತನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವಿಧ ದೇಶದ ತೆರಿಗೆ ಇಲಾಖೆ ಜತೆಗೆ ಸಮನ್ವಯ ಸಾಧಿಸಿ, ತನಿಖೆ ನಡೆಸಲಾಗುತ್ತದೆ. ವಿದೇಶದಲ್ಲಿ ಬ್ಯಾಂಕ್ ಠೇವಣಿ ಮಾಡಿದ ಹಾಗೂ ಆಸ್ತಿ ಖರೀದಿಸಿದ ಸಾವಿರಾರು ಭಾರತೀಯರ...
ಸುದ್ದಿ

ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ಜನತೆಗೆ ಸರ್ಕಾರದಿಂದ ಸಿಹಿ ಸುದ್ದಿ – ಕಹಳೆ ನ್ಯೂಸ್

ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದೆ. ನವೆಂಬರ್ 1 ರ ಕನ್ನಡಿಗರ ಉತ್ಸವ ಆಚರಣೆಗೂ ಮುನ್ನವೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜ್ಯದ ಜನತೆಗೆ ಸಿಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಆಡಳಿತದಲ್ಲಿ ಸಂಪೂರ್ಣವಾಗಿ ಕನ್ನಡ ಜಾರಿಯಾಗಬೇಕೆಂದು ಬಹು ಕಾಲದಿಂದ ಬೇಡಿಕೆ ಕೇಳಿ ಬರುತ್ತಿದ್ದರೂ ಕೆಲ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಸರ್ಕಾರದ ಕಡತಗಳು ಇಂಗ್ಲೀಷಿನಲ್ಲಿ ಇರುತ್ತಿದ್ದವು. ಇದಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ನವೆಂಬರ್ 1 ರಿಂದ ಎಲ್ಲ ಇಲಾಖೆಗಳ ಕಡತಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು ಎಂದು...
ಸುದ್ದಿ

ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿರುವ ದೀಪಧಾರಿಣಿ, ಗೀತಾ ಹಲ್ದಂಕರ್ ನಿಧನ – ಕಹಳೆ ನ್ಯೂಸ್

ಮೈಸೂರು: ಮೈಸೂರಿನ ಜಗನ್ಮೋಹನ ಅರಮನೆಯ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿರುವ ಪ್ರಮುಖ ಆಕರ್ಷಣೆಯಾದ ಈ ಅದ್ಭುತ ಮೇರು ಕೃತಿ ಅಂದ್ರೆ ಅದು ದೀಪಧಾರಿಣಿಯ ಚಿತ್ರ. 1945-46 ರಲ್ಲಿ ರಚಿಸಲಾದ ಈ ಚಿತ್ರವನ್ನು ಬರೆದ ಮಹಾನ್ ಕಲಾವಿದ ದಿವಂಗತ ಎಸ್.ಎಲ್.ಹಲ್ದಂಕರ್. ಈ ಚಿತ್ರಕ್ಕೆ ರೂಪದರ್ಶಿಯಾಗಿದ್ದವರು ಹಲ್ದಂಕರ್ ಅವರ ಮೂರನೇ ಪುತ್ರಿ ಗೀತಾ ಹಲ್ದಂಕರ್. ಈ ಮಹಿಳೆಯ ಸೌಂದರ್ಯವನ್ನು ತಂದೆ ಸೊಗಸಾಗಿ ಬಿಡಿಸಿದ್ದು ಈಗ ಈ ರೂಪದರ್ಶಿ ತನ್ನ 102 ಇಳಿ ಪ್ರಾಯದಲ್ಲಿ ನಿಧರಾಗಿದ್ದಾರೆ....
ರಾಜಕೀಯಸುದ್ದಿ

ಇಬ್ಬರು ಕ್ರಿಕೆಟ್ ಆಟಗಾರರನ್ನು ರಾಜಕೀಯ ಅಖಾಡಕ್ಕೆ ಕರೆತರಲು ಬಿಜೆಪಿ ಪ್ಲಾನ್ – ಕಹಳೆ ನ್ಯೂಸ್

ದೆಹಲಿ: ಜನರ ಅಭಿಮಾನ ಗಳಿಸಿದ ಇಬ್ಬರು ಕ್ರಿಕೆಟ್ ಆಟಗಾರರನ್ನು ರಾಜಕೀಯ ಅಖಾಡಕ್ಕೆ ಕರೆತರಲು ಬಿಜೆಪಿ ಸಜ್ಜಾಗಿದೆ. ಟೀಂ ಇಂಡಿಯಾದ ಹಿರಿಯ ಆಟಗಾರರಾದ ಗೌತಮ್ ಗಂಭೀರ್ ಮತ್ತು ಎಂ.ಎಸ್. ಧೋನಿಯನ್ನು 2019 ರ ಲೋಕಸಭಾ ಚುನಾವಣೆಗೆ ಇಳಿಸಲು ಬಿಜೆಪಿ ಪ್ಲಾನ್ ಮಾಡಿದೆ. ಇವರಿಬ್ಬರ ಜತೆಗೆ ಮಾಜಿ ಆಪ್ ಮುಖಂಡ ಕವಿ ಕುಮಾರ್ ವಿಶ್ವಾಸ್ ಕೂಡ ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡ್ತಾ ಇದೆ. ಈ ಇಬ್ಬರು ಕ್ರಿಕೆಟ್ಟಿಗರು...
ಸುದ್ದಿ

ಅಕ್ರಮ ಮರಳು ಸಾಗಾಟ: ವಾಹನ ವಶಕ್ಕೆ – ಕಹಳೆ ನ್ಯೂಸ್

ಅಡ್ಯಾರ್ ಕಣ್ಣೂರಿಂದ ಕೇರಳಕ್ಕೆ ಸಾಗಿಸುತ್ತಿದ್ದ ಮರಳು ಟಿಪ್ಪರ್, ಲಾರಿಗಳನ್ನು ಸಂಚಾರಿ ಪೊಲೀಸರು ಮುಟ್ಟುಗೋಲು ಹಾಕಿದ ಘಟನೆ ನಡೆದಿದೆ. ಸಬ್ ಇನ್ ಸ್ಪೆಕ್ಟರ್ ಕಬ್ಬಲ್ ರಾಜ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ 10 ಚಕ್ರದ ಬೃಹತ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ತಲಪಾಡಿ ಬಳಿ ಮುಟ್ಟುಗೋಲು ಹಾಕಿಕೊಂಡರು. ಬುಕಾರಿ ಕರೀಮ್ ಎಂಬವರು ಅಕ್ರಮ ಸಾಗಾಟ ಮಾಡುತ್ತಿದ್ದು ದೇವಿನಗರ ಮೂಲಕ ಕೇರಳಕ್ಕೆ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದ್ದು ಟಿಪ್ಪರ್‌ನಲ್ಲೂ ಸಾಗಿಸಲಾಗುತ್ತಿತ್ತು. ಟಿಪ್ಪರನ್ನೂ ಪೊಲೀಸರು ವಶಕ್ಕೆ...
ಸುದ್ದಿ

ಪುತ್ತೂರಿನಲ್ಲಿ ನಡೆದ ರಾಷ್ಟ್ರೀಯ ಹಿಂದೂ ಆಂದೊಲನದಲ್ಲಿ ಒಕ್ಕೊರಳಿನ ಒತ್ತಾಯ – ಕಹಳೆ ನ್ಯೂಸ್

ಪುತ್ತೂರು: ಕೊಟ್ಯಾಂತರ ಹಿಂದೂಗಳ ಶ್ರದ್ಧಾಕೇಂದ್ರವಾದ ಶಬರಿಮಲೆಯ ಪರಂಪರೆಗೆ ಸರ್ವೋಚ್ಚ ನ್ಯಾಯಾಲಯದ ಮಹಿಳೆಯರ ಪ್ರವೇಶದ ತೀರ್ಪಿನಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಗಿದೆ. ಧಾರ್ಮಿಕ ವಿಷಯಗಳ ತೀರ್ಪು ನೀಡುವಾಗ ಶಬರಿಮಲೆ ದೇವಸ್ಥಾನದ ತಂತ್ರಿಗಳ, ರಾಜಮನೆತನ ಮತ್ತು ಹಿಂದೂ ಧರ್ಮಚಾರ್ಯರ ಅಬಿಪ್ರಾಯ ಪಡೆಯದಿರುವುದು ದುರದೃಷ್ಟಕರವಾಗಿದೆ. ಇಂದು ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಪರಂಪರೆಯನ್ನು ಭಗ್ನ ಮಾಡುವ ಷಡ್ಯಂತ್ರ್ಯವು ನಡೆಯುತ್ತಿದೆ. ಕೆಲವು ನಾಸ್ತಿಕರ ಸ್ವಾರ್ಥಕ್ಕೆ ಲಕ್ಷಾಂತರ ಮಹಿಳೆಯ ಧಾರ್ಮಿಕ ಶ್ರದ್ಧೆಯನ್ನು ಬಲಿಪಶು ಮಾಡುವುದು ಎಷ್ಟು ಸರಿ?....
ಸುದ್ದಿ

ಕೊಡಗಿನಲ್ಲಿ ಕಾಣಿಸಿಕೊಂಡ ಅನಾಹುತಕ್ಕೆ ಭೂಕಂಪನವೇ ಕಾರಣ – ಕಹಳೆ ನ್ಯೂಸ್

ಕೊಡಗು: ಕೊಡಗಿನಲ್ಲಿ ಕಾಣಿಸಿಕೊಂಡ ಮಹಾಮಳೆ ಎಲ್ಲರ ಎದೆಯಲ್ಲೂ ನಡುಕ ಹುಟ್ಟಿಸಿತ್ತು. ಇದಕ್ಕೆ ಕಾರಣವೇನು ಎಂಬುದು ಸಹ ತಿಳಿದಿರಲಿಲ್ಲ. ಈ ಅನಾಹುತ ಸಂಭವಿಸುವುದಕ್ಕೆ ಕಾರಣವೇನು ಎಂಬುದನ್ನು ತಿಳಿಯಲು ಬೆಂಗಳೂರಿನ ಭೂಗರ್ಭ ಶಾಸ್ತ್ರಜ್ಞರ ತಂಡ ಅಮೆರಿಕದ ಅತ್ಯಾಧುನಿಕ ಉಪಕರಣ ಬಳಸಿ ಈ ಸಮಸ್ಯೆಯ ಮೂಲ ಅರಿಯಲು ಪ್ರಯತ್ನಿಸಿದ್ದು,. ಭೂಕಂಪನವೇ ಇದಕ್ಕೆ ಕಾರಣ ಎಂದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರೊಫೆಸರ್ ರೇಣುಕಾಪ್ರಸಾದ್ ಮತ್ತು ಡಾ. ಪರಮೇಶ್ ನಾಯಕ್ ನೇತೃತ್ವದ ಭೂಗರ್ಭ ಶಾಸ್ತ್ರಜ್ಞರ ತಂಡವು ಅಡ್ವಾನ್ಸ್ ಸರ್ಫೇಸ್...
ಸುದ್ದಿ

ವ್ಯಾಪಕ ಚರ್ಚೆಗೊಳಗಾದ ಸಚಿವ ಗಿರಿರಾಜ್ ಸಿಂಗ್ ಹೇಳಿಕೆ – ಕಹಳೆ ನ್ಯೂಸ್

ಬಾಗ್‌ಪಥ್‌: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ರಾಜ್ಯ ಸಚಿವ ಗಿರಿರಾಜ್ ಸಿಂಗ್ ಬಾಗ್‌ಪಥ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ. ಜನಸಂಖ್ಯಾ ನಿಯಂತ್ರಣ ರ‍್ಯಾಲಿಯಲ್ಲಿ ಭಾಗವಹಿಸಿದ ಇವರು ಮುಸ್ಲಿಮರು ರಾಮನ ವಂಶಸ್ಥರು, ಮೊಘಲ್ ವಂಶಸ್ಥರಲ್ಲ. ಆದ್ದರಿಂದ ಅವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸಬೇಕು, ಹಿಂದೂಗಳು ಅವರನ್ನು ದ್ವೇಷಿಸುತ್ತಾರೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು. ಈ ದ್ವೇಷ ಹೆಚ್ಚಿದರೆ, ಪರಿಣಾಮ ಏನಾಗಬಹುದು ಎಂದು ಕಲ್ಪಿಸಿಕೊಳ್ಳಿ ಗಿರಿರಾಜ್ ಸಿಂಗ್ ವಿವಾದಾತ್ಮಕ...
1 1,324 1,325 1,326 1,327 1,328 1,459
Page 1326 of 1459