Wednesday, June 10, 2026

archivekahale news

ಸುದ್ದಿ

ಬೆಂಕಿ ಅವಘಡ: ಶಾರ್ಟ್ ಸರ್ಕ್ಯೂಟ್‌ ನಿಂದ ಮೆಡಿಕಲ್ ಶಾಪ್‌ ಬೆಂಕಿಗೆ ಆಹುತಿ – ಕಹಳೆ ನ್ಯೂಸ್

ಮಂಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದ ಮೆಡಿಕಲ್ ಶಾಪ್‌ವೊಂದು ಬೆಂಕಿಗೆ ಆಹುತಿಯಾದ ಘಟನೆಯು ನಡೆದಿದೆ. ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ರಸ್ತೆಯಲ್ಲಿರುವ ಮೆಡಿಕಲ್ ಶಾಪ್‌ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದ್ದು, ಅಂಗಡಿಯಲ್ಲಿದ್ದ ಔಷಧಿ, ಪಿಠೋಪಕರಣ ಬೆಂಕಿಗಾಹುತಿಯಾಗಿದ್ದು ಎರಡು ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.  ...
ಸುದ್ದಿ

ಹಬ್ಬದ ಸೀಸನ್ ಮುಗಿದ ಬಳಿಕ ಚಿನ್ನ, ಬೆಳ್ಳಿಯ ಬೆಲೆ ಇಳಿಕೆ – ಕಹಳೆ ನ್ಯೂಸ್

ದೆಹಲಿ: ಹಬ್ಬದ ಸೀಸನ್ ಮುಗಿದ ಬಳಿಕ ಚಿನ್ನ ,ಬೆಳ್ಳಿಯ ಬೇಡಿಕೆ ತಗ್ಗಿದ್ದು, ಚಿನ್ನ ಪ್ರಿಯರಿಗೆ ಇಂದಿನಿಂದ ಶುಭ ಸುದ್ದಿ ಸಿಕ್ಕಿದೆ. ಬಂಗಾರ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆ ಪ್ರತಿ 10 ಗ್ರಾಂಗೆ 50 ರೂಪಾಯಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ಬೆಲೆ 100 ರೂಪಾಯಿ ಪ್ರತಿ ಕೆಜಿಗೆ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 29,800ರು,...
ಸುದ್ದಿ

ಎಂ.ಎಸ್ ಧೋನಿ ವಿಕೆಟ್ ಕೀಪಿಂಗ್‌ನಲ್ಲಿರೋ ವೇಗ ವಿಶ್ವದ ಯಾವ ವಿಕೆಟ್ ಕೀಪರ್‌ಗೂ ಇಲ್ಲ: ಎಬಿ ಡಿವಿಲಿಯರ್ಸ್ – ಕಹಳೆ ನ್ಯೂಸ್

ದೆಹಲಿ: ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್ ಧೋನಿ ಕೊಡಗೆ ಏನು ಅನ್ನೋದನ್ನ ಬಿಡಿಸಿ ಹೇಳಬೇಕಾಗಿಲ್ಲ. ಸದ್ಯ ಬ್ಯಾಟಿಂಗ್‌ನಲ್ಲಿ ಕೊಂಚ ಹಿನ್ನಡೆ ಅನುಭವಿಸಿರುವ ಧೋನಿ ಬದಲು ಯುವ ಆಟಗಾರರಿಗೆ ಸ್ಥಾನ ನೀಡಿ ಅನ್ನೋ ಮಾತುಗಳು ಕೇಳಿಬಂದಿತ್ತು. ಇದಕ್ಕೆ ಸೌತ್‌ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಪ್ರತಿಕ್ರಿಯಿಸಿದ್ದಾರೆ. ಎಂ.ಎಸ್ ಧೋನಿ ವಿಕೆಟ್ ಕೀಪಿಂಗ್‌ನಲ್ಲಿರೋ ವೇಗ ವಿಶ್ವದ ಯಾವ ವಿಕೆಟ್ ಕೀಪರ್‌ಗೂ ಇಲ್ಲ. ಧೋನಿ ಅನುಭವ, ಡಿಆರ್‌ಎಸ್ ಜಡ್ಜ್ಮೆಂಟ್ ಹಾಗೂ ಯುವ ಕ್ರಿಕೆಟಿಗರಿಗೆ...
ಸುದ್ದಿ

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದ ಕುಸ್ತಿಪಟು ಬಜರಂಗ್ ಪೂನಿಯಾ – ಕಹಳೆ ನ್ಯೂಸ್

ದೆಹಲಿ: ಭಾರತದ ಭರವಸೆಯ ಕುಸ್ತಿಪಟು ಬಜರಂಗ್ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದರು. 2013ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಪೂನಿಯಾ, ಸೋಮವಾರ ಬೆಳ್ಳಿಪದಕ ಗೆಲ್ಲುವ ಮೂಲಕ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪದಕ ಗೆದ್ದ ಭಾರತದ ಏಕೈಕ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು....
ಸುದ್ದಿ

ಪುತ್ರನ ಸಾವಿನಿಂದ ಮಹಿಳೆ ಆತ್ಮಹತ್ಯೆ – ಕಹಳೆ ನ್ಯೂಸ್

ಮಂಗಳೂರು: ಪುತ್ರನ ಸಾವಿನಿಂದ ತೀವ್ರವಾಗಿ ನೊಂದಿದ್ದ ಮಹಿಳೆಯೋರ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಮೇಶ್ವರ ಕೊಲ್ಯ ನಿವಾಸಿ ನರಸಿಂಹ ಆಳ್ವ ಎಂಬವರ ಪತ್ನಿ ನೀತಾ ಆಳ್ವ ಆತ್ಮಹತ್ಯೆ ಮಾಡಿಕೊಂಡವರು. ಇವರ ಪುತ್ರ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ನಮನ್ ಆಳ್ವ ಐದು ತಿಂಗಳ ಹಿಂದೆ ಕಾಯಿಲೆಯಿಂದ ಮೃತಪಟ್ಟಿದ್ದ. ಏಕೈಕ ಪುತ್ರನನ್ನು ಕಳೆದುಕೊಂಡು ಖಿನ್ನತೆ ಅನುಭವಿಸುತ್ತಿದ್ದ ನೀತಾ ಅವರು ಸೋಮವಾರ ಪತಿ ಮನೆಯಿಂದ ಹೊರ ಹೋಗಿದ್ದ ಸಂದರ್ಭ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳ್ಳಾಲ ಠಾಣೆಯಲ್ಲಿ...
ಸುದ್ದಿ

ಎಫ್‌ಐಆರ್‌ ದಾಖಲಿಸಲು ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಣೆ – ಕಹಳೆ ನ್ಯೂಸ್

ಬೆಂಗಳೂರು: ಸುನಾಮಿ ಅಲೆ ಎಬ್ಬಿಸಿರುವ ಮೀ ಟೂ ಲೈಂಗಿಕ ಕಿರುಕುಳ ಪ್ರಕರಣಗಳು ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಲೈಂಗಿಕ ದುರ್ವರ್ತನೆ ಮತ್ತು ಹಲ್ಲೆ ಆರೋಪಗಳ ಆಧಾರದ ಮೇಲೆ ಎಫ್‌ಐಆರ್‌ಗಳನ್ನು ದಾಖಲಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಈ ಕುರಿತು ಹಿರಿಯ ವಕೀಲ ಎಂ.ಎಲ್.ಶರ್ಮ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೈ ಮತ್ತು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರನ್ನು ಒಳಗೊಂಡ ಪೀಠವು ತಳ್ಳಿ ಹಾಕಿದೆ....
ಕ್ರೀಡೆಸುದ್ದಿ

ಭಾರತದ ಮೊದಲ ಮಹಿಳಾ ಅಂಪೈರ್‌ ಕೀರ್ತಿಗೆ ಪಾತ್ರರಾದ ಮುಂಬೈನ ವೃಂದಾ ರತಿ – ಕಹಳೆ ನ್ಯೂಸ್

ಭಾರತದ ಕ್ರಿಕೆಟ್ ಲೋಕದಲ್ಲಿ ಪುರುಷರೇ ಅಂಪೈರ್‌ಗಳಾಗೋದು ಮಾತು. ಆದ್ರೆ ಈ ಮಾತನ್ನು ಈಗ ಹೇಳುವಂತಿಲ್ಲ ಯಾಕೆಂದ್ರೆ ಮುಂಬೈನ ವೃಂದಾ ರತಿ ಭಾರತದ ಮೊದಲ ಮಹಿಳಾ ಅಂಪೈರ್‌ಗಳಲ್ಲಿ ಒಬ್ಬರು ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ. 29 ವರ್ಷದ ವೃಂದಾ ರತಿ ಬಿಸಿಸಿಐನ ಎರಡನೆಯ ಹಂತದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸುವ ಅರ್ಹತೆ ಪಡೆದುಕೊಂಡಿದ್ದಾರೆ. 2013 ರ ಮಹಿಳಾ ವಿಶ್ವಕಪ್‌ನಲ್ಲಿ ಸ್ಕೋರರ್ ಆಗಿ ಕಾರ್ಯನಿರ್ವಹಿಸಿದ್ದ ವೃಂದಾ, ಮುಂಬೈ...
ಸುದ್ದಿ

ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್ ವಜಾ – ಕಹಳೆ ನ್ಯೂಸ್

ಪುರುಷರಿಗೆ ಮದುವೆಗಾಗಿ ಕಾನೂನು ಪ್ರಕಾರ ನಿಗದಿ ಆಗಿರುವ ಕನಿಷ್ಠ ವಯಸ್ಸನ್ನು ಕಡಿತಗೊಳಿಸಬೇಕು ಎಂದು ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಪುರುಷರಿಗೆ ಮದುವೆಗೆ ಕನಿಷ್ಠ 21 ವರ್ಷ ಆಗಿರಬೇಕು ಎಂಬುದು ಸದ್ಯಕ್ಕೆ ಇರುವ ಕಾನೂನು. ಮಹಿಳೆಯರಿಗೆ ಇರುವಂತೆಯೇ ಪುರುಷರಿಗೆ ಮದುವೆ ಕನಿಷ್ಠ ವಯಸ್ಸನ್ನು 18 ಕ್ಕೆ ಇಳಿಸಬೇಕು ಎಂದು ಅರ್ಜಿ ಹಾಕಲಾಗಿತ್ತು. ಇಂಥ ಅರ್ಜಿ ಹಾಕಿದ್ದಕ್ಕಾಗಿ ವಕೀಲ ಅಶೋಕ್ ಪಾಂಡೆಗೆ 25 ಸಾವಿರ ರುಪಾಯಿ ದಂಡ...
1 1,323 1,324 1,325 1,326 1,327 1,459
Page 1325 of 1459