Wednesday, June 10, 2026

archivekahale news

ರಾಜಕೀಯಸುದ್ದಿ

ಸಂಗಬೆಟ್ಟು ಉಪಚುನಾವಣೆ: ಇವಿಎಂ ಮತಯಂತ್ರ ಅಳವಡಿಕೆ ಹಾಗೂ ಪರಿಶೀಲನೆ – ಕಹಳೆ ನ್ಯೂಸ್

ಸಂಗಬೆಟ್ಟು: ಅ, 28 ರಂದು ನಡೆಯುವ ಸಂಗಬೆಟ್ಟು ತಾಲೂಕು ಪಂಚಾಯತ್ ಉಪಚುನಾವಣೆ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಇವಿಎಂ ಮತಯಂತ್ರ ಅಳವಡಿಕೆ ಹಾಗೂ ಪರಿಶೀಲನಾ ಕಾರ್ಯ ನಡೆಯಿತು. ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಚುನಾವಣಾದಿಕಾರಿಗಳ ಸಹಯೋಗದಲ್ಲಿ ಇವಿಎಂ ಮತಯಂತ್ರ ಅಳವಡಿಕಾ ಕಾರ್ಯದಲ್ಲಿ ತೊಡಗಿಕೊಂಡರು. ಒಟ್ಟು 10 ಬೂತ್‌ಗಳಲ್ಲಿ ಚುನಾವಣೆಯಲ್ಲಿ ನಡೆಯಲಿದೆ. ಎರಡು ಸಾಮಾನ್ಯ ಮತಗಟ್ಟೆಗಳನ್ನು ಹೊರತು ಪಡಿಸಿದರೆ ಉಳಿದ ೮ ಮತಗಳು ಸೂಕ್ಷ್ಮ ಮತಗಟ್ಟೆಗಳಿವೆ ಎಂದು ತಹಶೀಲ್ದಾರ್ ಅವರು ಮಾಹಿತಿ...
ಸುದ್ದಿ

ಪೊಲೀಸರ ಅನುಚಿತ ವರ್ತನೆ: ಪ್ರಶ್ನೆ ಮಾಡಿದ್ದಕ್ಕೆ ಎಸ್ ಐ ನಿಂದ ವ್ಯಕ್ತಿಗೆ ಹಲ್ಲೆ – ಕಹಳೆ ನ್ಯೂಸ್

ಎಸ್ ಐ ನಿಂದ ಹಲ್ಲೆ ಚಿಕ್ಕಮಗಳೂರು: ಬಸ್ ನಿಲ್ದಾಣದಲ್ಲಿ ಪೊಲೀಸರಿಂದ ಅನುಚಿತ ವರ್ತನೆ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್ ಎಸ್ ಐ ಗರಂ ಆಗಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಚಿಕ್ಕಮಗಳೂರಿಂದ ಬೆಂಗಳೂರಿಗೆ ತೆರಳಲು ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಂದಿದ್ದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಣ್ಣ ಎಂಬಾತ ಪೊಲೀಸರ ಅನುಚಿತ ವರ್ತನೆಯನ್ನು ಪ್ರಶ್ನೆ ಮಾಡಿದ್ದಾನೆ. ಇದರಿಂದ ಕೋಪಗೊಂಡ ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ. ಎಸೈ ರಘು ಮತ್ತು ಪೇದೆಗಳು ರಾತ್ರಿ ಇಡೀ...
ಸುದ್ದಿ

ಪ್ರೊ ಕಬಡ್ಡಿ 2ನೇ ಇಂಟರ್ ಝೋನ್ ಪಂದ್ಯದಲ್ಲಿ ಯು ಮುಂಬಾ ತಂಡ ಗೆಲುವು – ಕಹಳೆ ನ್ಯೂಸ್

ಪುಣೆ: ಶ್ರೀ ಛತ್ರಪತಿ ಕ್ರೀಡಾಗ್ರಾಮದಲ್ಲಿ ನಡೆದ ಪ್ರೊ ಕಬಡ್ಡಿ 2ನೇ ಇಂಟರ್ ಝೋನ್ ಪಂದ್ಯದಲ್ಲಿತೆಲುಗು ಟೈಟಾನ್ಸ್ ವಿರುದ್ಧ ಬಲಿಷ್ಟ ಯು ಮುಂಬಾ ತಂಡ 41-20ರ ಗೆಲುವು ಸಾಧಿಸಿದೆ. ಇದು ಟೂರ್ನಿಯಲ್ಲಿ ಮುಂಬೈಯ ನಾಲ್ಕನೇ ಗೆಲುವು ಆಗಿದೆ.ಪಂದ್ಯದ ಆರಂಭದಿಂದಲೂ ಮುನ್ನಡೆ ಕಾದಿರಿಸಿಕೊಂಡ ಮುಂಬೈ, ಟೈಟಾನ್ಸ್ಗೆ ಸೋಲುಣಿಸಿತು. ಯು ಮುಂಬಾ ಪರ ಸಿದ್ಧಾರ್ಥ್ ದೇಸಾಯ್ ಆಕರ್ಷಕ ಆಟವಾಡಿದರು. ರೈಡಿಂಗ್‌ನಲ್ಲಿ ಮಿಂಚಿದ ಸಿದ್ಧಾರ್ಥ್ ಒಟ್ಟು 14 ಪಾಯಿಂಟ್‌ಗಳನ್ನು ತಂಡಕ್ಕೆ ಸೇರಿಸಿದರು. ಟೈಟಾನ್ಸ್ನ ರಾಹುಲ್ ಚೌಧರಿ...
ಸುದ್ದಿ

ಪಟಾಕಿ ಸಿಡಿಸುವುದಕ್ಕೆ ಅಸ್ತು ಎಂದ ಸುಪ್ರೀಂ ಕೋರ್ಟ್ – ಕಹಳೆ ನ್ಯೂಸ್

ದೆಹಲಿ: ವೈಭವದ ದಸರಾ ಕಳೆದಾಯ್ತು ಇನ್ನು ಬರೋದು ದೀಪಗಳ ಹಬ್ಬ ದೀಪಾವಳಿ. ದೀಪಾವಳಿ ಸಮಯದಲ್ಲಿ ದೇಶದಾದ್ಯಂತ ಪಟಾಕಿ ತಯಾರಿಕೆ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು ಕೋರಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ದೀಪಾವಳಿ ಹಬ್ಬದಲ್ಲಿ ದೇಶದಾದ್ಯಂತ ರಾತ್ರಿ 8 ರಿಂದ 10 ಗಂಟೆಯ ಮಧ್ಯೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಅದು ಆದೇಶಿಸಿದೆ. ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರಿದ್ದ ಪೀಠವು ಅರ್ಜಿಯ ವಿಚಾರಣೆ...
ಸುದ್ದಿ

ಪ್ರಕೃತಿ ವಿಸ್ಮಯ: ಹಾವಿನ ತಲೆಯಲ್ಲಿ ಬೆಂಕಿ ಗೋಚರ – ಕಹಳೆ ನ್ಯೂಸ್

ಚಿಕ್ಕಮಗಳೂರು: ಪ್ರಕೃತಿಯು ವಿಶಿಷ್ಟಗಳ ಆಗರವಾಗಿದ್ದು ಪ್ರಕೃತಿ ಮಾತೆಯು ಒಂದಲ್ಲ ಒಂದು ವಿಶೇಷತೆಗಳನ್ನು ತೋರಿಸ್ತಾ ಇರ‍್ತಾಳೆ. ಇದಕ್ಕೆ ಉದಾಹಣೆ ಎಂಬಂತೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೊಳೆಮಕ್ಕಿ ಗ್ರಾಮದಲ್ಲಿ ಪ್ರಕೃತಿ ವಿಸ್ಮಯ ಕಂಡುಬಂದಿದೆ. ಶ್ವಾನ ಮತ್ತು ನಾಗರಾಜ ನಡುವೆ ಜಗಳವೇರ್ಪಟ್ಟಾಗ ಸೂರ್ಯನ ಕಿರಣಕ್ಕೆ ಹಾವಿನ ತಲೆಯಲ್ಲಿ ಬೆಂಕಿಯಿರುವಂತೆ ಭಾಸವಾಗಿದೆ. ಈ ವಿಸ್ಮಯವನ್ನು ಅವಿನಾಶ್ ಎಂಬುವವರು ಕ್ಲಿಕ್ಕಿಸಿದ್ದಾರೆ....
ಸುದ್ದಿ

ಮಸೀದಿಯಲ್ಲಿ ಮಕ್ಕಳನ್ನು ತರಗತಿಯಿಂದ ಹೊರಹಾಕಿದ್ದಕ್ಕೆ ಗುರುಗಳಿಗೆ ಹಲ್ಲೆ – ಕಹಳೆ ನ್ಯೂಸ್

ಮಂಗಳೂರು: ಮಸೀದಿಯಲ್ಲಿ ಮಕ್ಕಳನ್ನು ತರಗತಿಯಿಂದ ಹೊರಹಾಕಿದ ವಿಚಾರ ಹಿನ್ನಲೆಯಲ್ಲಿ ತಂಡವೊಂದು ಮಸೀದಿ ಗುರುಗಳಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮಂಗಳೂರಿನ ಕುಪ್ಪೆಪದವು ಮಸೀದಿಯಲ್ಲಿ ಕಳೆದ ಎರಡು ತಿಂಗಳಿಂದ ಶೇಖ್ ಅಬ್ದುಲ್ಲಾ ಅವರ ಮಕ್ಕಳನ್ನು ತರಗತಿಯಿಂದ ಹೊರಹಾಕಿದ ವಿಚಾರಲ್ಲಿ ಕೋಟಿ ರಝಾಕ್ ಮತ್ತು ತಂಡದಿಂದ ಹಲ್ಲೆ ನಡೆದಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಮಂಗಳೂರಿನ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಸುದ್ದಿ

ಚೀನಾದ ವಿರುದ್ದ ಕಾರ್ಯತಂತ್ರ ರೂಪಿಸಲು ಭಾರತ, ಜಪಾನ್ ಸಿದ್ದತೆ – ಕಹಳೆ ನ್ಯೂಸ್

ದೆಹಲಿ: ಹಿಂದು ಮಹಾಸಾಗರದಲ್ಲಿ ಅಧಿಪತ್ಯ ಸ್ಥಾಪಿಸಲು ಯತ್ನಿಸುತ್ತಿರುವ ಚೀನಾದ ವಿರುದ್ದ ಕಾರ್ಯತಂತ್ರ ರೂಪಿಸಲು ಭಾರತ ಮತ್ತು ಜಪಾನ್ ಸಿದ್ದವಾಗುತ್ತಿದೆ. ಹೌದು, ಚೀನಾದ ವಿರುದ್ದ ಕಾರ್ಯತಂತ್ರ ರೂಪಿಸಲು ಮತ್ತು ದೇಶದ ನೌಕಾವ್ಯವಸ್ಥೆ ಬಲಿಪಡಿಸಿ, ರಕ್ಷಣಾ ಸಹಕಾರ ವೃದ್ಧಿಸಲು ಭಾರತ ಮತ್ತು ಜಪಾನ್ ಒಪ್ಪಂದ ಮಾಡಿಕೊಳ್ಳಲಿದೆ. ಈ ವಾರದ ಕೊನೆಯ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಜಪಾನ್‌ಗೆ ತೆರಳಿ ಅಲ್ಲಿನ ಪ್ರಧಾನಿ ಶಿಂಜೋ ಅಬೆಯವರನ್ನು ಭೇಟಿಯಾಗಲಿದ್ದಾರೆ. ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ...
ಸುದ್ದಿ

ಶಿಷ್ಯವೇತನ ಪಾವತಿಯಾಗಿಲ್ಲ ಎಂದು ಆಗ್ರಹಿಸಿ ವೈದ್ಯ ವಿದ್ಯಾರ್ಥಿಗಳ ಪ್ರತಿಭಟನೆ – ಕಹಳೆ ನ್ಯೂಸ್

ಮಂಗಳೂರು: ಸರಕಾರಿ ಆಸ್ಪತ್ರೆಗಳಲ್ಲಿ ಕ್ಲಿನಿಕಲ್ ಸೌಲಭ್ಯ ಪಡೆಯುತ್ತಿರುವ ಖಾಸಗಿ ವೈದ್ಯಕೀಯ ಕಾಲೇಜಿನ ಸರಕಾರಿ ಕೋಟಾದ ಗೃಹವೈದ್ಯರು ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ 8 ತಿಂಗಳಿನಿಂದ ಶಿಷ್ಯವೇತನ ಪಾವತಿಯಾಗಿಲ್ಲ ಎಂದು ಆಗ್ರಹಿಸಿ ಇಂದು ವೈದ್ಯ ವಿದ್ಯಾರ್ಥಿಗಳು ಇಂದು ನಗರದ ವೆನ್ಲಾಕ್ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಮಾತನಾಡಿದ ವೈದ್ಯ ವಿದ್ಯಾರ್ಥಿಗಳು, ದಿನದ 24 ಗಂಟೆಗಳ ಕಾಲ ದುಡಿಯುತ್ತೇವೆ. ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂಬ ಭೀತಿಯಿದೆ, ಆದರೂ ನಾವು ಎಲ್ಲಾ...
1 1,322 1,323 1,324 1,325 1,326 1,459
Page 1324 of 1459