ಭಾರತ-ಚೀನಾ ಗಡಿ ಪ್ರದೇಶಕ್ಕೆ ಬರಲು ಕಣ್ಣೀರಿಡುತ್ತಾ ಬಸ್ ಹತ್ತಿದ ಚೀನಾ ಯೋಧರು-ವಿಡಿಯೋ ವೈರಲ್! – ಕಹಳೆ ನ್ಯೂಸ್
ನವದೆಹಲಿ: ಗಡಿಯಲ್ಲಿ ಚೀನಾದ ಕುತಂತ್ರಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಈ ನಡುವೆ ಭಾರತೀಯ ಯೋಧರನ್ನು ಕಂಡರೆ ಚೀನಾ ಯೋಧರು ಬೆಚ್ಚಿ ಬೀಳುತ್ತಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸುವಂತಹ ವಿಡಿಯೋ ಒಂದು ಸಾಮಾಜಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ. ಭಾರತ್-ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದಂತೆಲ್ಲಾ ಚೀನಾ ತನ್ನ ಸೇನಾ ಸಾಮರ್ಥ್ಯವನ್ನು, ಸಿಬ್ಬಂದಿಗಳನ್ನು ಹೆಚ್ಚಾಗಿ ನಿಯೋಜಿಸುವ ಕಾರ್ಯದಲ್ಲಿ ತೊಡಗಿದೆ. ಇದಕ್ಕಾಗಿ ಬೇರೆ ಪ್ರಾಂತ್ಯಗಳಿಂದ ಚೀನಾ ಸಿಬ್ಬಂದಿಗಳನ್ನು ಭಾರತ-ಚೀನಾ ಗಡಿಗೆ ನಿಯೋಜನೆ ಮಾಡುವುದಕ್ಕಾಗಿ ಹೊಸ...






