ಇನ್ಮುಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡೋಕೆ ಕನಿಷ್ಠ ʼ15 ವರ್ಷʼ ವಯಸ್ಸಾಗಿರ್ಲೇಬೇಕು – ಕಹಳೆ ನ್ಯೂಸ್
ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕನಿಷ್ಠ ವಯಸ್ಸಿನ ನೀತಿಯನ್ನ ಜಾರಿಗೆ ತಂದಿದೆ. ಈ ನಿಯಮದ ಪ್ರಕಾರ ಇಂಟರ್ನ್ಯಾಷನಲ್ ಕ್ರಿಕೆಟ್ ಆಡಬೇಕಾದರೆ ಆಟಗಾರನಿಗೆ ಕಡ್ಡಾಯವಾಗಿ 15 ವರ್ಷ ವಯಸ್ಸಾಗಿರಬೇಕು. ಐಸಿಸಿ ಈ ನಿಯಮವನ್ನ ಜಾರಿಗೊಳಿಸಿದ ಹೊರತಾಗಿಯೂ ದೇಶಗಳು ಇನ್ನೂ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಆಟಗಾರನನ್ನ ಕಣಕ್ಕಿಳಿಸುವ ಆಯ್ಕೆಯನ್ನ ಹೊಂದಿವೆ. ಆದ್ರೆ, ಅದು ಅಸಾಧಾರಣ ಸನ್ನಿವೇಶಗಳಲ್ಲಿ ಮಾತ್ರ. ಇನ್ನು ಇದಕ್ಕಾಗಿ ಐಸಿಸಿಗೆ ಆಯಾ ದೇಶಕ್ಕಾಗಿ ಆಡಲು ಅವಕಾಶ...







