ಪುಣಚ ಪಾಲಾಸ್ತಡ್ಕದಲ್ಲಿ ಇಂಟರ್ ಲಾಕ್ ಘಟಕದ ಸಿಸಿ ಕ್ಯಾಮಾರದ ಡಿವಿಆರ್ ನ್ನು ಮತ್ತು ದೇವರ ಪೋಟೋವನ್ನು ನೆಲದ ಮೇಲೆ ಸುಟ್ಟ ಪ್ರಕರಣ; ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದ ಪೋಲೀಸರು -ಕಹಳೆ ನ್ಯೂಸ್
ಪುಣಚ : ಪಿರ್ಯಾದಿದಾರರಾದ ಆನಂದಗೌಡರವರು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಪಾಲಾಸ್ತಡ್ಕ ಎಂಬಲ್ಲಿ ಪತ್ನಿ ಹೆಸರಿನಲ್ಲಿ ಪಿ ಬಿ ಇಂಡಸ್ಟ್ರೀಸ್ ಇಂಟರ್ ಲಾಕ್ ಘಟಕವನ್ನು ನಡೆಸುತ್ತಿದ್ದು ಸದ್ರಿ ಘಟಕಕ್ಕೆ ಸಿಸಿ ಕ್ಯಾಮಾರವನ್ನು ಅಳವಡಿಸಿರುತ್ತಾರೆ. ದಿನಾಂಕ:28-09-2025 ರಂದು ಬೆಳಿಗ್ಗೆ 11.00 ಗಂಟೆಗೆ ಪಿರ್ಯಾದಿದಾರರು ಇಂಟರ್ ಲಾಕ್ ಘಟಕವನ್ನು ಪರೀಶಿಲಿಸಿ ನಂತರ 6.00 ಗಂಟೆಗೆ ಇಂಟರ್ ಲಾಕ್ ಘಟಕಕ್ಕೆ ಹೋದಾಗ ಯಾರೋ ಘಟಕದ ಬಾಗಿಲನ್ನು ಮುರಿದು ಇಂಟರ್ ಲಾಕ್ ಘಟಕಕ್ಕೆ ಅಕ್ರಮ ಪ್ರವೇಶ...







