ಪ್ರಿಯಾಂಕ್ ಖರ್ಗೆ ಮನಸ್ಸು ಮಾಡಿದ್ರೆ ಕಲಬುರಿಯಲ್ಲಿ ಏರ್ಪೋರ್ಟ್ ಆರಂಭವಾಗುತ್ತೆ: ಬಿ.ವೈ.ವಿಜಯೇಂದ್ರ -ಕಹಳೆ ನ್ಯೂಸ್
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಮನಸ್ಸು ಮಾಡಿದರೆ ಕಲಬುರಗಿ ಏರ್ಪೋರ್ಟ್ ಆರಂಭವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಹೇಳಿದರು. ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಬಜೆಟ್ಗೆ ಆಡಳಿತ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ. ರಾಜ್ಯದ ಜನರ ಭರವಸೆ ನುಚ್ಚು ನೂರು ಮಾಡಿದೆ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಸಿದ್ದರಾಮಯ್ಯ ಬಜೆಟ್ ದೂರದೃಷ್ಟಿ ಇಲ್ಲದ ಬಜೆಟ್ ಎಂದು ಟೀಕಿಸಿದರು. ಕಲ್ಯಾಣ ಕರ್ನಾಟಕ ಅಭಿವೃದ್ಧಿಯಾಗಿಲ್ಲ. ಸಚಿವ ಪ್ರಿಯಾಂಕ್ ಖರ್ಗೆ ಮೋದಿ...






