ಕುಶಾಲನಗರ : ಮನೆ ಬಳಿ ನಿಲ್ಲಿಸಿದ್ದ ಆಟೋ ಜಖಂಗೊಳಿಸಿದ ಒಂಟಿ ಸಲಗ- ಕಹಳೆ ನ್ಯೂಸ್
ಮಡಿಕೇರಿ: ಕುಶಾಲನಗರದ ನೆಲ್ಲಿ ಹುದಿಕೇರಿ ಗ್ರಾಮದಲ್ಲಿ ಒಂಟಿ ಸಲಗವೊಂದು ಮನೆ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾದ ಮೇಲೆ ದಾಳಿ ನಡೆಸಿ ಜಖಂಗೊಳಿಸಿದೆ. ಬೆಟ್ಟದ ಕಾಡು ನಿವಾಸಿ ಹೆಚ್.ಟಿ. ಸುನಿಲ್ ಎಂಬವರಿಗೆ ಸೇರಿದ ಆಟೋ ಮೇಲೆ ಕಾಡಾನೆ ದಾಳಿ ಮಾಡಿದೆ. ದಂತದಿಂದ ಗುದ್ದಿದ ಪರಿಣಾಮ ಆಟೋ ಜಖಂಗೊಂಡಿದೆ. ಗ್ರಾಮದ ಶ್ರೀ ಸತ್ಯನಾರಾಯಣ ದೇವಾಲಯದ ಸುತ್ತಮುತ್ತಲಿನಲ್ಲಿ ಹಾಗೂ ಎಂ.ಜಿ.ಕಾಲೋನಿ ಸುತ್ತಮುತ್ತ ಸಂಚರಿಸಿ ಕಾಫಿ ತೋಟದೊಳಗೂ ದಾಂಧಲೆ ನಡೆಸಿದೆ. ಸಲಗವನ್ನು ಕಂಡ ಗ್ರಾಮಸ್ಥರು ದಿಕ್ಕಪಾಲಾಗಿ...







