Recent Posts

Monday, June 8, 2026
ಜಿಲ್ಲೆತುಮಕೂರುಸುದ್ದಿ

ಮೇಲಾಧಿಕಾರಿಗಳಿಂದ ಕಿರುಕುಳ ಆರೋಪ : ವೀಡಿಯೋ ಮಾಡಿಟ್ಟು ಕಚೇರಿಯಲ್ಲೇ ನೇಣಿಗೆ ಶರಣಾದ ಅಧಿಕಾರಿ -ಕಹಳೆ ನ್ಯೂಸ್

ತುಮಕೂರು: ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪಾವಗಡದ  ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ವೀಡಿಯೋ ಮಾಡಿ ಸಹೋದ್ಯೋಗಿಗಳಿಗೆ ಕಳಿಸಿ ಕಚೇರಿಯಲ್ಲೇ ನೇಣಿಗೆ ಶರಣಾಗಿದ್ದಾರೆ.

ಜಾಹೀರಾತು
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್ ಆತ್ಮಹತ್ಯೆಗೆ ಶರಣಾದವರು. ಸಾವಿಗೂ ಮುನ್ನ ಮೇಲಾಧಿಕಾರಿಗಳ ಕಿರುಕುಳವೇ ಸಾವಿಗೆ ಕಾರಣವೆಂದು ವೀಡಿಯೋ ಮಾಡಿ, ಸಹೊದ್ಯೋಗಿಗಳಿಗೆ ಕಳಿಸಿದ್ದಾರೆ. ಬಳಿಕ ಪಾವಗಡ ಪಟ್ಟಣದ ಆಪ್ ಬಂಡೆಯಲ್ಲಿರುವ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ವೀಡಿಯೋದಲ್ಲಿ ತುಮಕೂರು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ಅವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ. ನಮ್ಮ ತಾಯಿ ಹೆಂಡತಿ ಮಕ್ಕಳು ನಮ್ಮ ಇಡೀ ಸಂಸಾರ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ನನಗೆ ಒಳ್ಳೆಯ ಬೆಲೆ ಕೊಟ್ಟಿದ್ದಾರೆ. ನಾನು ಅವರಿಗೆ ಇನ್ನು ಸಹಾಯ ಮಾಡಬೇಕಿತ್ತು ಆದ್ರೆ ಅದು ಆಗುತ್ತಿಲ್ಲ. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಪ್ಪ ನನಗೆ ತೊಂದರೆ ಕೊಟ್ಟಿರುವುದರಿಂದ ನಾನು ಈ ನಿರ್ಧಾರಕ್ಕೆ ಬಂದಿರುವೆ. ಅವರಿಗೆ ದೇವರೇ ಶಿಕ್ಷೆ ನೀಡುತ್ತಾನೆ. ಅವನು ತರ್ಲೆ ಇರುವುದರಿಂದ ನಮ್ಮ ಕುಟುಂಬದವರು ಏನು ಸೇಡು ತೀರಿಸಿಕೊಳ್ಳುವ ಅವಶ್ಯಕತೆ ಇಲ್ಲಾ. ಅವನಿಗೆ ದೇವರು, ಕಾನೂನು ಶಿಕ್ಷೆ ಕೊಟ್ಟೆ ಕೊಡುತ್ತದೆ ಎಂದು ವೀಡಿಯೋದಲ್ಲಿ ಉಲ್ಲೇಖಿಸಿದ್ದಾರೆ.
ಪಾವಗಡದ ಗುಂಡರ್ಲಾಹಳ್ಳಿ ಗ್ರಾಮದ ಮಲ್ಲಿಕಾರ್ಜುನ್, ಕಳೆದ 3 ವರ್ಷಗಳಿಂದ ಪಾವಗಡ ಸಮಾಜ ಕಲ್ಯಾಣ ಇಲಾಖೆಯಲ್ಲಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನು ಒಂದೇ ವಾರದಲ್ಲಿ ಇವರ ಸೇವಾ ಅವಧಿ ಮುಕ್ತಾಯವಾಗುತ್ತಿತ್ತು.

ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಗನ ಶವದ ಮುಂದೆ ಮಲ್ಲಿಕಾರ್ಜುನ್ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ