Wednesday, June 17, 2026

ಸುದ್ದಿ

ರಾಜ್ಯಸುದ್ದಿ

ನಾಳೆ ಪಿಎಂ ಮೋದಿ ಉದ್ಘಾಟಿಸಬೇಕಿದ್ದ 79,000 ಕೋಟಿ ಮೌಲ್ಯದ ತೈಲ ಶುದ್ಧೀಕರಣ ಘಟಕಕ್ಕೆ ಬೆಂಕಿ – ಕಹಳೆ ನ್ಯೂಸ್

ಜೈಪುರ: ನಾಳೆ (ಏ.21) ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಬೇಕಿದ್ದ ತೈಲ ಶುದ್ಧೀಕರಣ ಘಟಕಕ್ಕೆ ಬೆಂಕಿ ಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ, ರಾಜಸ್ಥಾನ ಸಿಎಂ ಬಜನ್ ಲಾಲ್ ಶರ್ಮಾ ಸೇರಿದಂತೆ ಪ್ರಮುಖ ನಾಯಕರು ನಾಳೆಯ 79,000 ಕೋಟಿ ಮೌಲ್ಯದ ತೈಲ ಶುದ್ಧೀಕರಣ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಸದ್ಯ ಅಗ್ನಿ ಅವಘಡದಲ್ಲಿ ರಿಫೈನರಿ ಘಟಕಕ್ಕೆ ಭಾರಿ ಹಾನಿಯಾಗಿದೆ. ಸದ್ಯ ಘಟಕಕ್ಕೆ ಬೆಂಕಿ ಬಿದ್ದಿರುವ ಪರಿಣಾಮ ನಾಳೆ ಮೋದಿ ಉದ್ಘಾಟನಾ...
ಸುದ್ದಿ

ಮರಕ್ಕೆ ಡಿಕ್ಕಿಯಾಗಿ ಖಾಸಗಿ ವಿಮಾನ ಪತನ -ಕಹಳೆ ನ್ಯೂಸ್

ರಾಯ್ಪುರ್‌: ಖಾಸಗಿ ವಿಮಾನವೊಂದು ಮರಕ್ಕೆ ಡಿಕ್ಕಿಯಾಗಿ ಪತನಗೊಂಡ ಘಟನೆ ಛತ್ತೀಸ್‌ಗಢದ ಜಶ್‌ಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಅಪಘಾತದ ವೇಳೆ ವಿಮಾನ ನೆಲದಿಂದ ಕೇವಲ 30 ಅಡಿ ಎತ್ತರದಲ್ಲಿ ಹಾರುತ್ತಿತ್ತು ಎಂದು ವರದಿಯಾಗಿದೆ. ನಾರಾಯಣಪುರ ಪೊಲೀಸ್ ಠಾಣೆ ಪ್ರದೇಶದ ಖುರಾಸಗಢ ಗ್ರಾಮದ ಬಳಿಯ ರತನ್‌ಪಹ್ಲಿ ಅರಣ್ಯದಲ್ಲಿ ಈ ಅವಘಡ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ವಿಮಾನವು ನೆಲದಿಂದ ಸುಮಾರು 30 ಅಡಿ ಎತ್ತರದಲ್ಲಿ ಹಾರುತ್ತ, ಮರಕ್ಕೆ ಡಿಕ್ಕಿಯಾಗಿದೆ. ವಿಮಾನ ಪತನಗೊಂಡ ಸ್ಥಳದಲ್ಲಿ...
ಸುದ್ದಿ

ಉತ್ತರ ಜಪಾನ್‌ನಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ :ಸುನಾಮಿ ಎಚ್ಚರಿಕೆ -ಕಹಳೆ ನ್ಯೂಸ್

ಟೋಕಿಯೊ: ಉತ್ತರ ಜಪಾನ್‌ನಲ್ಲಿ  ಸೋಮವಾರ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಜಪಾನ್‌ನ ಹವಾಮಾನ ಸಂಸ್ಥೆ (ಜೆಎಂಎ) ತಿಳಿಸಿದೆ. ಮೂರು ಮೀಟರ್ (10 ಅಡಿ) ಎತ್ತರದ ಅಲೆಗಳ ಸುನಾಮಿ ಎಚ್ಚರಿಕೆ ನೀಡಿದೆ. ಉತ್ತರ ಇವಾಟೆ ಪ್ರಾಂತ್ಯದ ಪೆಸಿಫಿಕ್ ಸಮುದ್ರದಲ್ಲಿ ಸಂಜೆ 4:53 ಕ್ಕೆ ಭೂಕಂಪ ಸಂಭವಿಸಿದೆ. ನೂರಾರು ಕಿಲೋಮೀಟರ್ ದೂರದಲ್ಲಿರುವ ಟೋಕಿಯೊದವರೆಗಿನ ದೊಡ್ಡ ಕಟ್ಟಡಗಳು ಕಂಪಿಸುವಷ್ಟು ಪ್ರಬಲವಾಗಿತ್ತು. ಆರಂಭಿಕ ಸುನಾಮಿ ಅಲೆಗಳು ಉತ್ತರ ಕರಾವಳಿಯನ್ನು ತಕ್ಷಣವೇ ತಲುಪಬಹುದು ಎಂದು...
ದೆಹಲಿರಾಜ್ಯಸುದ್ದಿ

ನಿಲ್ಲದ ಮಧ್ಯಪ್ರಾಚ್ಯ ಸಂಘರ್ಷ : ಭಾರತದಲ್ಲಿ LPG ಬಳಕೆ 13% ಕುಸಿತ -ಕಹಳೆ ನ್ಯೂಸ್

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷ ಮುಂದುವರಿದಿದ್ದು, ಭಾರತದಲ್ಲಿ ಎಲ್‌ಪಿಜಿ (LPG) ಬಳಕೆ 13% ರಷ್ಟು ಕುಸಿತ ಕಂಡಿದೆ. ಯುದ್ಧದಿಂದಾಗಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿರುವುದು ಎಲ್‌ಪಿಜಿ ಬಳಕೆ ತೀವ್ರ ಕುಸಿತಕ್ಕೆ ಕಾರಣವಾಗಿದೆ. ಭಾರತದಲ್ಲಿ ಮಾರ್ಚ್‌ನಲ್ಲಿ ಎಲ್‌ಪಿಜಿ ಬಳಕೆ ಶೇ.13ರಷ್ಟು ಕುಸಿತವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಎಲ್‌ಪಿಜಿ 2.729 ದಶಲಕ್ಷ ಟನ್ ಬಳಕೆಯಾಗಿತ್ತು. ಆದರೆ, ಈ ವರ್ಷದ ಮಾರ್ಚ್‌ನಲ್ಲಿ 2.379 ದಶಲಕ್ಷ ಟನ್ ಬಳಕೆಯಾಗಿದೆ. ಪೆಟ್ರೋಲಿಯಂ ಪ್ಲಾನಿಂಗ್ ಆ್ಯಂಡ್ ಅನಾಲಿಸಿಸ್ ಸೆಲ್ (ಪಿಪಿಎಸಿ) ದತ್ತಾಂಶಗಳಿಂದ...
ಸುದ್ದಿ

ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ನಿರ್ದೇಶಕ ಅಟ್ಲೀ ದಂಪತಿ -ಕಹಳೆ ನ್ಯೂಸ್

ನಿರ್ದೇಶಕ, ನಿರ್ಮಾಪಕ ಅಟ್ಲೀ  ಅವರ ಪತ್ನಿ ಪ್ರಿಯಾ ಅವರಿಂದು (ಏ.20) ಎರಡನೇ ಮಗುವಿಗೆ ಜನ್ಮ ನೀಡಿದ್ದು, ದಂಪತಿ ಹೆಣ್ಣು ಮಗುವನ್ನು ಬರಮಾಡಿಕೊಂಡಿದ್ದಾರೆ. ಈ ಕುರಿತು ಅಟ್ಲೀ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಗಾಗಲೇ ದಂಪತಿಗೆ 3 ವರ್ಷದ ಮೀರ್ ಎಂಬ ಮಗನಿದ್ದು, ವಿಭಿನ್ನವಾಗಿ ಕಾರ್ಟೂನ್ ಮೂಲಕ ಸಿಹಿ ಸುದ್ದಿಯನ್ನು ತಿಳಿಸಿದ್ದಾರೆ. ಪೋಸ್ಟ್‌ನಲ್ಲಿ, ನನಗೆ ಒಬ್ಬಳು ತಂಗಿ ಸಿಕ್ಕಳು.. ನಾನೀಗ ಬಿಗ್ ಬ್ರದರ್ ಮೀರ್ ಎಂದು ಬರೆದಿದ್ದು, ಪಕ್ಕದಲ್ಲಿ ಕಾರಿನ ಮೇಲೆ...
ದೆಹಲಿರಾಜ್ಯಸುದ್ದಿ

ಕತ್ತು ಸೀಳಿ ನಿವೃತ್ತ ಆರ್‌ಬಿಐ ಅಧಿಕಾರಿಯ ಬರ್ಬರ ಹತ್ಯೆ – ಕಹಳೆ ನ್ಯೂಸ್

ನವದೆಹಲಿ: ಕತ್ತು ಸೀಳಿ ನಿವೃತ್ತ ಆರ್‌ಬಿಐ ಅಧಿಕಾರಿಯನ್ನು  ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ  ಪಂಚಕುಯಿಯನ್ ಪ್ರದೇಶದಲ್ಲಿ ನಡೆದಿದೆ. ಮಾಧೋ ರಾಮ್ ಕೊಲೆಯಾದ ಅಧಿಕಾರಿ. ಎರಡು ವರ್ಷಗಳ ಹಿಂದೆ ಆರ್‌ಬಿಐ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಹೊಂದ್ದಿದ್ದರು ಎಂದು ತಿಳಿದುಬಂದಿದೆ. ಕುಟುಂಬಸ್ಥರ ಮಾಹಿತಿ ಪ್ರಕಾರ, ಮೃತರ ಪತ್ನಿ ಸೀಮಾಪುರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಮನೆಯಲ್ಲಿ ಮೃತ ವ್ಯಕ್ತಿ ಒಬ್ಬರೇ ಇದ್ದಾಗ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದರು....
ಜಿಲ್ಲೆದಕ್ಷಿಣ ಕನ್ನಡಮಂಗಳೂರುಸುದ್ದಿ

ಮಂಗಳೂರು : ಪಕ್ಷಾಂತರ ತಡೆ ಕಾಯ್ದೆ ಮೌಲ್ಯಮಾಪನ; ಒಡಿಶಾದಲ್ಲಿ ಸ್ಪೀಕರ್‌ಗಳ ಮಹತ್ವದ ಸಭೆ: ಯು.ಟಿ. ಖಾದ‌ರ್ -ಕಹಳೆ ನ್ಯೂಸ್   

ಮಂಗಳೂರು :  ಪಕ್ಷಾಂತರ ನಿಷೇಧ ತಿದ್ದುಪಡಿ ಕಾಯ್ದೆಯ ಮೌಲ್ಯಮಾಪನ ಹಾಗೂ ಬಲವರ್ಧನೆಗೆ ಸಂಬಂಧಿಸಿದಂತೆ ಲೋಕಸಭಾ ಸ್ಪೀಕ‌ರ್ ಮೂಲಕ ನೇಮಕಗೊಂಡ 5 ರಾಜ್ಯಗಳ ವಿಧಾನಸಭಾ ಅಧ್ಯಕ್ಷರ ಸಮಿತಿ ಸಭೆ ಒಡಿಶಾದ ಭುವನೇಶ್ವರದಲ್ಲಿ ಎ.22, 23ರಂದು ನಡೆಯಲಿದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಮುಂಬಯಿಯಲ್ಲಿ ಒಂದು ಸಭೆ ನಡೆದಿತ್ತು. ಇದೀಗ ಎರಡನೇ ಸಭೆ ಒಡಿಶಾದಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಒಡಿಶಾ, ಸಿಕ್ಕಿಂ, ಮಹಾರಾಷ್ಟ್ರ, ನಾಗಾಲ್ಯಾಂಡ್‌,...
ಬೆಂಗಳೂರುರಾಜ್ಯಸುದ್ದಿ

ನಲಪಾಡ್ ಮನೆ ಮೇಲೆ ಇಡಿ ದಾಳಿಗೆ ಆ 10 ಲಕ್ಷ ಕಾರಣಾನಾ?-ಕಹಳೆ ನ್ಯೂಸ್

ಬೆಂಗಳೂರು: ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್‌  ಮನೆ ಸೇರಿದಂತೆ 17 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ED) ಇಂದು (ಏ.20) ದಾಳಿ ನಡೆಸಿದ್ದಾರೆ. ಇದೀಗ ಇಡಿ ದಾಳಿಯ ಹಿಂದೆ 10 ಲಕ್ಷ ರೂ. ವಹಿವಾಟೊಂದರ ಶಂಕೆ ವ್ಯಕ್ತವಾಗಿದೆ. ಬಿಟ್‌ ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಹ್ಯಾಕರ್ ಶ್ರೀಕಿ ಜೊತೆಯಲ್ಲಿ ಆರ್ಥಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿದೆ. ಶ್ರೀಕಿ ಜೊತೆ ನಲಪಾಡ್ ಆರ್ಥಿಕ ವ್ಯವಹಾರ ಇಟ್ಟುಕೊಂಡಿದ್ದರು. 2020 ರಲ್ಲಿ...
1 64 65 66 67 68 3,395
Page 66 of 3395