Sunday, June 14, 2026

ಸುದ್ದಿ

ದೆಹಲಿರಾಜ್ಯಸುದ್ದಿ

ಹಾಸ್ಟೆಲ್ ಟೆರೇಸ್‌ನಿಂದ ಬಿದ್ದು ಎಂಬಿಎ ವಿದ್ಯಾರ್ಥಿನಿ ಸಾವು -ಕಹಳೆ ನ್ಯೂಸ್

ಲಕ್ನೋ: ಐಐಎಂಟಿ  ವಿಶ್ವವಿದ್ಯಾಲಯದ ಮಹಿಳೆಯರ ಹಾಸ್ಟೆಲ್‌ನ ಟೆರೇಸ್  ಮೇಲಿಂದ ಬಿದ್ದು ಎಂಬಿಎ ವಿದ್ಯಾರ್ಥಿನಿ  ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ  ಮೀರತ್‌ನಲ್ಲಿ ನಡೆದಿದೆ. ಅಂತಿಮ ವರ್ಷದ ಎಂಬಿಎ ವಿದ್ಯಾರ್ಥಿನಿ ಅನು ಗುಪ್ತಾ ಮೃತ ದುರ್ದೈವಿ. ಅನು ವಿಶ್ವವಿದ್ಯಾಲಯದ ಸರೋಜಿನಿ ನಾಯ್ಡು ಬಾಲಕಿಯರ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಳು. ಬುಧವಾರ 9:30ರ ಸುಮಾರಿಗೆ ಘಟನೆ ಸಂಭವಿಸಿದೆ. ಹಾಸ್ಟೆಲ್ ಕೆಲಸದಾಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿನಿಯನ್ನು ಕಂಡು ತಕ್ಷಣವೇ ಇತರೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಶ್ವವಿದ್ಯಾಲಯದ...
ಜಿಲ್ಲೆದಕ್ಷಿಣ ಕನ್ನಡಬೆಂಗಳೂರುರಾಜ್ಯಸುದ್ದಿ

ಬೆಂಗ್ಳೂರಲ್ಲಿ ಬೃಹತ್ ಡ್ರಗ್ಸ್ ಜಾಲ ಪತ್ತೆ  : 35 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ, ಎಂಟು ಜನ ಅರೆಸ್ಟ್ -ಕಹಳೆ ನ್ಯೂಸ್

ಬೆಂಗಳೂರು: ಹೆಬ್ಬಾಳ ಪೊಲೀಸರು  ದೆಹಲಿ ಮೂಲದ ಬೃಹತ್ ಡ್ರಗ್ಸ್‌ ಜಾಲವೊಂದನ್ನ ಭೇದಿಸಿ, ಎಂಟು ಆರೋಪಿಗಳನ್ನು ಬಂಧಿಸಿ, ಬರೋಬ್ಬರಿ 35 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ದೆಹಲಿಯಿಂದ  ಬೆಂಗಳೂರಿಗೆ  ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡ್ತಿದ್ದ ಗ್ಯಾಂಗ್‌ವೊಂದನ್ನು ಹೆಡೆಮುರಿ ಕಟ್ಟಿದ್ದಾರೆ. ಪೊಲೀಸರು ಒಟ್ಟು ಎಂಟು ಜನ ಆರೋಪಿಗಳನ್ನು ಅರೆಸ್ಟ್ ಮಾಡಿ, ಒಂದೇ ಗ್ಯಾಂಗ್‌ನಿಂದ ಸುಮಾರು 35 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ. ಮಾದಕ ವಸ್ತುಗಳ...
ರಾಜ್ಯಸುದ್ದಿ

ಮೆಲೋನಿಗೆ ‘ಮೆಲೋಡಿ’ ಚಾಕೋಲೇಟ್ ಗಿಫ್ಟ್ ಕೊಟ್ಟ ಮೋದಿ -ಕಹಳೆ ನ್ಯೂಸ್

ರೋಮ್: ಪ್ರಧಾನಿ ನರೇಂದ್ರ ಮೋದಿ  ಇಟಲಿಯ ರಾಜಧಾನಿ ರೋಮ್‌ಗೆ ಭೇಟಿ ನೀಡಿದ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ  ಭಾರತದ ಪ್ರಸಿದ್ಧ ‘ಮೆಲೋಡಿ’ ಚಾಕೋಲೇಟ್  ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮೋದಿ ಹಾಗೂ ಮೆಲೋನಿ ಉತ್ತಮ ಸ್ನೇಹಿತರಾಗಿದ್ದು, ಇವರಿಬ್ಬರ ಸ್ನೇಹವನ್ನು ಸಾಮಾಜಿಕ ಜಾಲತಾಣದಲ್ಲಿ ‘ಮೆಲೋಡಿ’ ಎಂದೇ ಕರೆಯಲಾಗುತ್ತಿತ್ತು. ಇದೀಗ ಮೋದಿ ‘ಮೆಲೋಡಿ’ ಚಾಕೋಲೇಟ್ ಕೊಡುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ...
ಬೆಂಗಳೂರುರಾಜ್ಯಸುದ್ದಿ

ಸಫಾರಿಗಳಲ್ಲಿ ಇನ್ಮುಂದೆ ತೆರೆದ ವಾಹನಕ್ಕೆ ಅವಕಾಶ ಇಲ್ಲ: ಈಶ್ವರ ಖಂಡ್ರೆ -ಕಹಳೆ ನ್ಯೂಸ್

ಬೆಂಗಳೂರು: ರಾಜ್ಯದ ಐದು ಹುಲಿ ಸಂರಕ್ಷಿತ ಪ್ರದೇಶ ಹಾಗೂ ವನ್ಯಜೀವಿಧಾಮಗಳ ಸಫಾರಿಯಲ್ಲಿ ತೆರೆದ ಕ್ಯಾಂಪರ್ ಬದಲಿಗೆ ಸುರಕ್ಷಿತ ಬಸ್ ಬಳಕೆ ಮಾಡುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ  ಸೂಚನೆ ನೀಡಿದ್ದಾರೆ. ದುಬಾರೆ ಆನೆ ಶಿಬಿರದಲ್ಲಿ ನಿನ್ನೆ ಎರಡು ಸಾಕಾನೆಗಳ ಕಾಳಗದ ವೇಳೆ ಪ್ರವಾಸಿ ಮಹಿಳೆ ಮೃತಪಟ್ಟ ಆಘಾತಕಾರಿ ಘಟನೆ ಹಿನ್ನೆಲೆಯಲ್ಲಿ ಸಫಾರಿಗಳಲ್ಲಿ ಪ್ರವಾಸಿಗರ ಸುರಕ್ಷತೆಗೂ ಹೆಚ್ಚಿನ ಗಮನ ಹರಿಸುವಂತೆ ಅರಣ್ಯ ಸಚಿವರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಬಂಡೀಪುರ,...
ದೆಹಲಿರಾಜ್ಯಸುದ್ದಿ

ರೈಲುಗಳಲ್ಲಿ ಸರಣಿ ಅಗ್ನಿ ಅವಘಡ : ಸಮಾಜ ವಿರೋಧಿ ಶಕ್ತಿಗಳು ಭಾಗಿಯಾಗಿ ವಿಧ್ವಂಸಕ ಕೃತ್ಯ ನಡೆಸ್ತಿರುವ ಶಂಕೆ: ರೈಲ್ವೇ ಇಲಾಖೆ -ಕಹಳೆ ನ್ಯೂಸ್

ನವದೆಹಲಿ: ದೇಶಾದ್ಯಂತ ಇತ್ತೀಚೆಗೆ ವರದಿಯಾದ ರೈಲ್ವೆ ಅಗ್ನಿ ಅವಘಡಗಳ ಸರಣಿಯು ವಿಧ್ವಂಸಕ ಕೃತ್ಯಗಳಂತೆ ಕಂಡುಬಂದಿದೆ ಎಂದು ಭಾರತೀಯ ರೈಲ್ವೆ  ಹೇಳಿಕೊಂಡಿದ್ದು, ಘಟನೆಗಳ ಹಿಂದೆ ಸಮಾಜ ವಿರೋಧಿ ಶಕ್ತಿಗಳ ಸಂಭಾವ್ಯ ಒಳಗೊಳ್ಳುವಿಕೆಯ ಸಾಧ್ಯತೆ ಇದೆ ಎಂದಿದೆ. ರೈಲ್ವೇ ಸಚಿವಾಲಯದ ಹೇಳಿಕೆಯಲ್ಲಿ, ಪ್ರಾಥಮಿಕ ತನಿಖೆ ವೇಳೆ ಕೆಲವು ಸಾಮಾಜಿಕ ವಿರೋಧಿ ಅಂಶಗಳು ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟುಮಾಡಿ, ಭಯ ಮತ್ತು ಅಸ್ತವ್ಯಸ್ಥತೆ ಸೃಷ್ಟಿಸಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಮತ್ತು ಸಂಬಂಧಪಟ್ಟ ಏಜೆನ್ಸಿಗಳು...
ಜಿಲ್ಲೆಮೈಸೂರುಸುದ್ದಿ

ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪ : ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಿರುದ್ಧ FIR -ಕಹಳೆ ನ್ಯೂಸ್

ಮೈಸೂರು: ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್  ವಿರುದ್ಧ ಎಫ್ಐಆರ್ ದಾಖಲಾಗಿದೆ. 55 ಲಕ್ಷ ಹಿಂದಿರುಗಿಸದ ಆರೋಪ ವಿಶ್ವನಾಥ್‌ ಮೇಲಿದೆ. ಸಾಲದ ಹಣ ವಾಪಸ್ ಕೇಳಲು ಹೋದ ವ್ಯಕ್ತಿ ಮೇಲೆ ವಿಧಾನ ಪರಿಷತ್ ಸದಸ್ಯ ಅಡಗೂರು ವಿಶ್ವನಾಥ್ ಹಲ್ಲೆ ನಡೆಸಿದ್ದಾರೆ ಎಂದು ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ವಿಶ್ವನಾಥ್ ಇರುವಾಗ ಹಣ ಕೇಳಲು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಭೆ. ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪ್ರಕಾಶ್ ಕಾರಂತ್ ನರಿಕೊಂಬು ಆಯ್ಕೆ-ಕಹಳೆ ನ್ಯೂಸ್

ಬಂಟ್ವಾಳ : ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ವೇದಿಕೆಯ ಸಭೆಯು ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಮೇ.20  ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮವನ್ನು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಎ ಸಿ ಭಂಡಾರಿ ಉದ್ಘಾಟಿಸಿದರು. ಜನಜಾಗೃತಿ ವೇದಿಕೆಯ ನೂತನ ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ರೊಟೇರಿಯನ್ ಪ್ರಕಾಶ್ ಕಾರಂತ್...
ಚಿಕ್ಕಮಂಗಳೂರುಜಿಲ್ಲೆಸುದ್ದಿ

8 ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ 24 ಗಂಟೆ ಆಂಬುಲೆನ್ಸ್‌ನಲ್ಲೇ ನರಳಾಡಿದ ಗಾಯಾಳು-ಕಹಳೆ ನ್ಯೂಸ್

ಚಿಕ್ಕಮಗಳೂರು: ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನಿಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ 24 ಗಂಟೆ ಆಂಬುಲೆನ್ಸ್‌ನಲ್ಲೇ ಕಾಲ ಕಳೆದ ಕರುಣಾಜನಕ ಘಟನೆಗೆ ಕಾಫಿನಾಡು  ಸಾಕ್ಷಿಯಾಗಿದೆ. ಚಿಕ್ಕಮಗಳೂರು ತಾಲೂಕಿನ ಅರೆನೂರು ಬಳಿ ರವಿ ಎಂಬಾತ ಬೈಕ್‌ನಲ್ಲಿ ಬಿದ್ದು ಗಂಭೀರ ಗಾಯಗೊಂಡಿದ್ದ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಮಂಗಳೂರಿಗೆ ರೆಫರ್ ಮಾಡಿದ್ದರು. ಆಂಬುಲೆನ್ಸ್‌ನಲ್ಲಿ ಮಂಗಳೂರಿಗೆ ಹೋದ ಗಾಯಾಳು ಯುವಕನಿಗೆ ಸುಮಾರು 8 ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಅದೇ ಆಂಬುಲೆನ್ಸ್‌ನಲ್ಲೇ ವಾಪಸ್ ಆಲ್ದೂರು ಗ್ರಾಮಕ್ಕೆ...
1 32 33 34 35 36 3,392
Page 34 of 3392