ನಾವು ಹಿಂದೂಗಳಲ್ಲ: ಎಂ ಬಿ ಪಾಟೀಲ್
ವಿಜಯಪುರ (ಡಿ.10): ನಾವು ಹಿಂದೂ ಧರ್ಮದವರಲ್ಲ. ಹಾಗಂತ ಹಿಂದೂ ವಿರೋಧಿಗಳಲ್ಲ. ನಾವು ಲಿಂಗಾಯತರು ಸ್ವತಂತ್ರರು. ನಮ್ಮದು ಲಿಂಗಾಯತ ಸ್ವತಂತ್ರ ಧರ್ಮ ಎಂದು ಸಚಿವ ಎಂ ಬಿ ಪಾಟೀಲ್ ಲಿಂಗಾಯಿತ ಸಮಾವೇಶದಲ್ಲಿ ಹೇಳಿದ್ದಾರೆ. ಲಿಂಗಾಯಿತ ಧರ್ಮ ಮೊದಲು ಪ್ರತ್ಯೇಕ ಧರ್ಮವಾಗಿಯೇ ಇತ್ತು. ಸದ್ಯ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ಸಿಗಬೇಕು. ಬೇರೆಯವರಂತೆ ಗೊಡ್ಡು ಪುರಾಣ ಹೇಳುತ್ತಿಲ್ಲ. ಸತ್ಯವನ್ನ ಹೇಳುತ್ತಿದ್ದೇವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ...







