ನಟ ದರ್ಶನ್ ಗೆ ಸಂಕಷ್ಟದ ಮಧ್ಯೆ, ಸಾಮಾಜಿಕ ಜಾಲತಾಣದಲ್ಲಿ ವಿಜಯಲಕ್ಷ್ಮಿ ಪೋಸ್ಟ್ ವೈರಲ್ : ಅಂತದ್ದೆನಿದೆ?!- ಕಹಳೆ ನ್ಯೂಸ್
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ಗೆ ದಿನದಿಂದ ದಿನಕ್ಕೆ ಆಘಾತಗಳ ಸರಮಾಲೆಯೇ ಎದುರಾಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಹಾಗೂ ದರ್ಶನ್ ಅತ್ಯಾಪ್ತ ಎಂದೇ ಹೇಳಲಾದ ಪ್ರದೋಷ್, ಇದೀಗ ಮಾಫಿ ಸಾಕ್ಷಿಯಾಗಿ (Approver) ಸತ್ಯ ಹೇಳಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಈ ದಿಢೀರ್ ಬೆಳವಣಿಗೆಯಿಂದಾಗಿ ನಟ ದರ್ಶನ್ಗೆ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದ್ದು, ತನಿಖಾ ಸಂಸ್ಥೆಗೆ ಇದು ಪ್ರಮುಖ ಸಾಕ್ಷ್ಯವಾಗಲಿದೆ ಎಂದು...







