200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗು ಜನನ : ರಥದಲ್ಲಿ ಕೂರಿಸಿ ಅದ್ದೂರಿ ಸ್ವಾಗತ – ಕಹಳೆ ನ್ಯೂಸ್
ಮುಂಬೈ: ಹೆಣ್ಣು ಮಗು ಬೇಡ ಎಂದು ಭ್ರೂಣ ಹತ್ಯೆ ಮಾಡಿಸುವ ಈ ಕಾಲದಲ್ಲಿ ಹೆಣ್ಣು ಮಗು ಜನಿಸಿದೆ ಎಂದು ಕುಟುಂಬವೊಂದು ರಥದಲ್ಲಿ ಕೂರಿಸಿ ಅದ್ದೂರಿಯಾಗಿ ಸ್ವಾಗತಿಸಿರುವ ಘಟನೆ ಮಹಾರಾಷ್ಟ್ರದ ಬೀಡ್ನಲ್ಲಿ (Beed) ನಡೆದಿದೆ. ಹೌದು, ಈ ಕುಟುಂಬದಲ್ಲಿ ಸುಮಾರು 200 ವರ್ಷಗಳ ಅಂದರೆ ನಾಲ್ಕು ತಲೆಮಾರುಗಳ ಬಳಿಕ ಹೆಣ್ಣು ಮಗು ಜನಿಸಿದೆ. ಹೆರಿಗೆಯಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕುಟುಂಬಸ್ಥರು ಮಗು ಹಾಗೂ ತಾಯಿಯನ್ನು ರಥದಲ್ಲಿ ಕೂರಿಸಿ, ತಾಳ-ವಾದ್ಯಗಳು ಹಾಗೂ ನೃತ್ಯದೊಂದಿಗೆ...






