Thursday, June 18, 2026

ರಾಷ್ಟ್ರೀಯ

ಬೆಂಗಳೂರುರಾಜ್ಯಸುದ್ದಿ

ತುಪ್ಪದ ಬೆಲೆ ಏರಿಕೆ ಬೆನ್ನಲ್ಲೇ ಹಾಲಿನ ದರ ಏರಿಕೆ ಸುಳಿ ಕೊಟ್ಟ ಡಿ.ಕೆ.ಸುರೇಶ್‌ – ಕಹಳೆ ನ್ಯೂಸ್

ಬೆಂಗಳೂರು - ಬೇರೆ ರಾಜ್ಯಗಳಲ್ಲಿ ಹಾಲಿನ ದರ ನಮಗಿಂತಲೂ ಹೆಚ್ಚಿದೆ. ಹೀಗಾಗಿ ನಮಲ್ಲೂ ದರ ಪರಿಷ್ಕರಣೆಯಾಗಬೇಕೆಂದು ಕರ್ನಾಟಕ ಹಾಲು ಒಕ್ಕೂಟ ಮಹಾ ಮಂಡಳಿಗೆ ಮನವಿ ಮಾಡಲಾಗಿದೆ ಎಂದು ಮಾಜಿ ಸಂಸದ ಹಾಗೂ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಾಲಿನ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿಲ್ಲ. ಆದರೆ ಮಂಡಳಿಗೆ ಮನವಿ ಮಾಡಿದ್ದೇವೆ. ಅರ್ಧ ಲೀಟರ್‌ ಹಾಲು ಮಾರಿದರೆ ನಷ್ಟವಾಗುತ್ತಿದ್ದು, ಒಂದು ಲೀಟರ್‌ ಹಾಲು ಮಾರಿದರೆ ಲಾಭವಾಗುತ್ತದೆ. ತುಪ್ಪದ...
ಬೆಂಗಳೂರುರಾಜ್ಯಸುದ್ದಿ

ರಾಜ್ಯದಲ್ಲಿ ಇಂದಿನಿಂದ ಮತ್ತೆ 4-5 ದಿನ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ- ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನವೆಂಬರ್ 5 ರ ಇಂದಿನಿಂದ 4-5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ ಹಿನ್ನೆಲೆ...
ಕ್ರೀಡೆಬೆಂಗಳೂರುಮುಂಬೈಸುದ್ದಿ

ಭಾರತ ತಂಡಕ್ಕೆ ಆಯ್ಕೆಯಾದ ರಾಹುಲ್ ದ್ರಾವಿಡ್ ಪುತ್ರ- ಕಹಳೆ ನ್ಯೂಸ್

ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಭಾರತ ಅಂಡರ್-19 ಚಾಲೆಂಜರ್ ಟ್ರೋಫಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಅವರು ಸಿ ತಂಡದ ಪರ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹಾಗೂ ವಿಕೆಟ್‌ಕೀಪರ್ ಆಗಿ ಆಡಲಿದ್ದಾರೆ. ಇತ್ತೀಚೆಗೆ ಕರ್ನಾಟಕ ತಂಡದ ನಾಯಕರಾಗಿದ್ದ ಅನ್ವಯ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ನಿಂದ ಹೆಸರುವಾಸಿಯಾಗಿದ್ದಾರೆ. ಯುವ ಆಟಗಾರರ ಪ್ರತಿಭೆಗೆ ವೇದಿಕೆಯಾಗಿರುವ ಈ ಟೂರ್ನಿಯಲ್ಲಿ ಅನ್ವಯ್ ಸಾಮರ್ಥ್ಯ ಪ್ರದರ್ಶಿಸಲಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕ...
ದೆಹಲಿಸುದ್ದಿ

ಛತ್ತೀಸ್ ಗಢದಲ್ಲಿ ಎರಡು ರೈಲಿನ ನಡುವೆ ಭೀಕರ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ-ಕಹಳೆ ನ್ಯೂಸ್

ನವದೆಹಲಿ: ದೇಶದಲ್ಲಿ ಮತ್ತೊಂದು ಭೀಕರ ರೈಲು ಅಪಘಾತ ಎನ್ನುವಂತೆ ಛತ್ತೀಸ್ ಗಢದ ಬಿಲಾಸ್ ಪುರದಲ್ಲಿ ನಡೆದಿದೆ. ಪ್ರಯಾಣಿಕರ ಹಾಗೂ ಸರಕು ರೈಲಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಮಂಗಳವಾರ ಜೈರಾಮನಗರ ನಿಲ್ದಾಣದ ಬಳಿ ಪ್ರಯಾಣಿಕ ರೈಲು ಸರಕು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ, ಸ್ಥಳೀಯ ಪ್ರಯಾಣಿಕ ರೈಲು ಮತ್ತು...
ಬೆಂಗಳೂರುಸುದ್ದಿ

ಸೂರಜ್‌,ಸ್ಪಂದನಾ ಮನೆಯ ಪತ್ರವನ್ನು ನುಚ್ಚುನೂರು ಮಾಡಿದ ರಿಷಾ : ಸ್ಪರ್ಧಿಗಳು ಕಣ್ಣೀರು

ಬೆಂಗಳೂರು: ಬಿಗ್‌ ಬಾಸ್‌ ಮನೆಯ ಆಟ ಕಿಚ್ಚ ಸುದೀಪ್‌ (Kiccha Sudeep) ಅವರ ಆಜ್ಞೆಯಂತೆ ಈ ವಾರ ಯಾವುದೇ ಟಾಸ್ಕ್‌ ಇಲ್ಲದೆ ಸಾಗಲಿದೆ. ಅದರಂತೆ ಮುಖಕ್ಕೆ ಮಸಿ ಬಳಿದು ಯಾರು ಅರ್ಹರು ಯಾರು ಮನೆಯಲ್ಲಿ ಇರಲು ಅರ್ಹರಲ್ಲವೆನ್ನುವ ಅಭಿಪ್ರಾಯವನ್ನು ಸ್ಪರ್ಧಿಗಳು ತಿಳಿಸಿದ್ದಾರೆ. ಈ ವಿಚಾರದಲ್ಲಿ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾರ ಎಲ್ಲರೂ ನಾಮಿನೇಟ್‌ ಆಗಿದ್ದಾರೆ. ಮನೆಯ ನಿಯಮ ಉಲ್ಲಂಘನೆ ಆಗಿದೆ. ಇದರ ಶಿಕ್ಷೆಯೂ ಸ್ಪರ್ಧಿಗಳಿಗೆ ಸಿಗಲಿದೆ. ಮನೆಯಲ್ಲಿ...
ಬೆಂಗಳೂರುರಾಜ್ಯಸಂತಾಪಸುದ್ದಿ

ನಾಳೆ ಮಧ್ಯಾಹ್ನ 2 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶಾಸಕ ‘ಹೆಚ್.ವೈ ಮೇಟಿ’ ಅಂತ್ಯಕ್ರಿಯೆ : CM ಸಿದ್ದರಾಮಯ್ಯ-ಕಹಳೆ ನ್ಯೂಸ್

ಬೆಂಗಳೂರು : ನಾಳೆ ಮಧ್ಯಾಹ್ನ 2 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಶಾಸಕ ಹೆಚ್.ವೈ ಮೇಟಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೆಚ್.ವೈ.ಮೇಟಿಯವರ ಪಾರ್ಥಿವ ಶರೀರದ ದರ್ಶನ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಮಾಜಿ ಸಚಿವರು, ಹಿರಿಯ ನಾಯಕರು ಹಾಗೂ ಹಾಲಿ ಶಾಸಕರೂ ಆಗಿದ್ದ ಹೆಚ್.ವೈ.ಮೇಟಿಯವರು ಇಂದು 12.30 ಗೆ ನಿಧನರಾಗಿದ್ದಾರೆ. ನಾನು ಮೂರು ದಿನಗಳ ಹಿಂದೆ ಅವರನ್ನು ಭೇಟಿ ಮಾಡಿ ಅವರ ಆರೋಗ್ಯವನ್ನು ವಿಚಾರಿಸಿದ್ದೆ....
ಕ್ರೀಡೆಮುಂಬೈರಾಜ್ಯರಾಷ್ಟ್ರೀಯಸುದ್ದಿ

ವಿಶ್ವಕಪ್ ಗೆದ್ದ ರಾಜ್ಯದ ಆಟಗಾರ್ತಿಯರಿಗೆ ಬಹುಮಾನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ – ಕಹಳೆ ನ್ಯೂಸ್

ಮುಂಬೈ: ಮಹಿಳಾ ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ಶುಭಾಶಯಗಳನ್ನು ತಿಳಿಸಿರುವ ಮಹಾರಾಷ್ಟ್ರ ಸರ್ಕಾರ, ರಾಜ್ಯದ ಆಟಗಾರ್ತಿಯರಿಗೆ ನಗದು ಬಹುಮಾನ ನೀಡುವುದಾಗಿ ಮಂಗಳವಾರ ತಿಳಿಸಿದೆ. ಮೊದಲ ಬಾರಿ ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು. ತಂಡದಲ್ಲಿದ್ದ ಮಹಾರಾಷ್ಟ್ರ ಮೂಲದ ಆಟಗಾರ್ತಿಯರಾದ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್ ಹಾಗೂ ರಾಧಾ ಯಾದವ್‌ ಅವರಿಗೆ ನಗದು ಬಹುಮಾನ ನೀಡಿ, ಗೌರವಿಸಲಿದ್ದೇವೆ ಎಂದು ಮುಖ್ಯಮಂತ್ರಿ ಕಚೇರಿಯು ಹೇಳಿದೆ. ಆದರೆ, ಬಹುಮಾನದ ಮೊತ್ತವನ್ನು ಮುಖ್ಯಮಂತ್ರಿ ಕಚೇರಿಯು ತಿಳಿಸಿಲ್ಲ. ಮುಖ್ಯಮಂತ್ರಿ...
ಬೆಂಗಳೂರುರಾಜ್ಯಸಿನಿಮಾಸುದ್ದಿ

ಯಜಮಾನ ಚಿತ್ರಕ್ಕೆ ಆಧುನಿಕ ತಂತ್ರಜ್ಞಾನ ಸ್ಪರ್ಶ: 25 ವರ್ಷಗಳ ನಂತರ ರಿ-ರಿಲೀಸ್-ಕಹಳೆ ನ್ಯೂಸ್

ಸರಿಯಾಗಿ 25 ವರ್ಷಗಳ ಹಿಂದೆ 2000 ನೇ ಇಸವಿಯಲ್ಲಿ ತೆರೆಕಂಡ ಕರ್ನಾಟಕ ರತ್ನ ವಿಷ್ಣುವರ್ಧನ್ (Vishnuvardhan) ಅಭಿನಯದ, ಮೆಹರುನ್ನಿಸಾ ರೆಹಮಾನ್ ನಿರ್ಮಾಣದ ಹಾಗೂ ಆರ್.ಶೇಷಾದ್ರಿ – ರಾಧಾ ಭಾರತಿ ನಿರ್ದೇಶನದ ಯಜಮಾನ (Yajamana) ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ಮರು ಬಿಡುಗಡೆಯಾಗಲು ರೆಡಿ ಆಗಿದೆ. ಜನಮೆಚ್ಚಿದ ಈ ಚಿತ್ರ ಆಧುನಿಕ ತಂತ್ರಜ್ಞಾನದಿಂದ ಸಿಂಗಾರಗೊಂಡಿದೆ. ಮುನಿಸ್ವಾಮಿ ಎಸ್.ಡಿ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರದ ರಜತೋತ್ಸವವನ್ನು ಸಂಭ್ರಮಿಸಲು ಕಲಾವಿದರ ಸಂಘದಲ್ಲಿ ಅದ್ದೂರಿ...
1 72 73 74 75 76 346
Page 74 of 346