ವೇಶ್ಯಾವಾಟಿಕೆ ಮಾಡುವಂತೆ ಅತ್ತೆಯಿಂದ ಕಿರುಕುಳ : ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸೊಸೆ -ಕಹಳೆ ನ್ಯೂಸ್
ಬೀದರ್: ಗಂಡನ ಮನೆಯವರ ಮಾನಸಿಕ ಕಿರುಕುಳದಿಂದಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಬಸವಕವಲ್ಯಾಣ ನಗರದ ಓಂ ನಗರದಲ್ಲಿ ನಡೆದಿದೆ. ಅಂಜನಾಬಾಯಿ ಪಾಟೀಲ್ (22) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿಯಾಗಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದು ಮೃತಪಟ್ಟಿದ್ದಾರೆ. ಮೃತಳ ಗಂಡ ಶೇಖರ್, ಅತ್ತೆ ಅರುಣಾಬಾಯಿ, ಮಾವ ಚಂದ್ರಕಾಂತ ಅವರ ಕಿರುಕುಳದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಂದೆ ವಿಜಯ್ ಕುಮಾರ್ ಬಸವಕಲ್ಯಾಣ ಠಾಣೆಯಲ್ಲಿ...







