Wednesday, July 29, 2026

ಕ್ರೈಮ್

ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಉಪ್ಪಿನಂಗಡಿ ಠಾಣಾ ವ್ಯಪ್ತಿಯ ಇಳಂತಿಲ ಪ್ರದೇಶದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಾರಿನಲ್ಲಿ ಕೂರಿಸಿ ಲೈಂಗಿಕ ಕಿರುಕುಳ ನೀಡಿದ ಕೊಕ್ಕಡದ ನಿವಾಸಿ..! ; ಆರೋಪಿ ಪೋಲೀಸ್ ವಶಕ್ಕೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಾರಿನಲ್ಲಿ ಕೂರಿಸಿ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿರುವ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಬಾಲಕಿಯ ತಂದೆ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಇಳಂತಿಲ ಪ್ರದೇಶದ ಬಾಲಕಿಯನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ಕೊಕ್ಕಡದ ನಿವಾಸಿಯೊಬ್ಬ ಕಾರಿನಲ್ಲಿ ಬಂದು ತನ್ನ ಕಾರಿನಲ್ಲಿ ಬರಬೇಕು ಎಂದು ಒತ್ತಾಯಿಸಿದ್ದಾನೆ. ಈ ಸಂದರ್ಭದಲ್ಲಿ ಬಾಲಕಿ ಒಪ್ಪದೇ ಇದ್ದಾಗ ಆಕೆಯನ್ನು ಬೆದರಿಸಿ ಬಲವಂತವಾಗಿ ಕಾರಿನಲ್ಲಿ ಉಪ್ಪಿನಂಗಡಿ...
ಕ್ರೈಮ್ರಾಷ್ಟ್ರೀಯಸುದ್ದಿ

ಮದುವೆ ನಿಲ್ಲಿಸಲು ಎರಡು ವರ್ಷ ಹಿಂದಿನ ಅತ್ಯಾಚಾರ ವಿಡಿಯೋ ಸೋರಿಕೆ ಮಾಡಿದ ನೀಚರು – ಕಹಳೆ ನ್ಯೂಸ್

ತಾನು ಇಷ್ಟಪಟ್ಟ ಹುಡುಗಿ ಬೇರೆ ಹುಡುಗನ ಜೊತೆ ಮದುವೆಯಾಗಬಾರದೆಂಬ ಕಾರಣಕ್ಕೆ ಎರಡು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವಿಡಿಯೋವನ್ನು ಐವರು ಆರೋಪಿಗಳಲ್ಲಿ ಒಬ್ಬರು ಶೇರ್ ಮಾಡಿ ಮದುವೆ ತಪ್ಪಿಸಲು ಮುಂದಾಗಿರುವ ಘಟನೆ ಪಾಟ್ನಾದ ಗೋಪಾಲ್‍ಗಂಜ್‍ನಲ್ಲಿ ನಡೆದಿದೆ. ಐವರು ಸೇರಿ ಈ ಕೃತ್ಯ ಎಸಗಿದ್ದು, ಇದರಲ್ಲಿ ಇಬ್ಬರು 20 ವರ್ಷದೊಳಗಿನವರು. ಇವರು ಮಧ್ಯಪ್ರಾಚ್ಯ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನು ಅಭಿಷೇಕ್ ಶರ್ಮಾ, ದೀಪು...
ಕ್ರೈಮ್ದಕ್ಷಿಣ ಕನ್ನಡಬೆಂಗಳೂರುರಾಜಕೀಯರಾಜ್ಯಸುದ್ದಿ

ನಿನ್ನೆತಾನೆ ಮಂಗಳೂರಿಗೆ ಆಗಮಿಸಿದ್ದ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ವಿರುದ್ಧ ಎಫ್‍ಐಆರ್ ದಾಖಲು – ಕಹಳೆ ನ್ಯೂಸ್

ಬೆಂಗಳೂರು: ಸಂಜಯನಗರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ರಾಷ್ಟ್ರಿಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ ಶ್ರೀನಿವಾಸ್, ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ ಸೇರಿ ಒಟ್ಟು 17 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್ 188 ಹಾಗೂ ಎನ್.ಡಿ.ಎಂ.ಎ ಆಕ್ಟ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ಜುಲೈ 12 ರಂದು ಬೆಲೆ ಏರಿಕೆ ವಿರುದ್ಧ ಯೂತ್ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು....
ಕ್ರೈಮ್ರಾಜ್ಯಸುದ್ದಿ

ವಿವಾಹಿತ ಮಹಿಳೆ ಝಕಿಯಾಳೊಂದಿಗೆ ಜಾಬೀರ್ ಅಕ್ರಮ ಸಂಬಂಧ ; ತಿಂಗಳ ಹಿಂದಷ್ಟೇ ಜಾಬೀರ್ ಮದುವೆ, ಆಂಟಿಯಿಂದ ಸುಪಾರಿ, ಯುವಕನ ಕೊಲೆ – ಕಹಳೆ ನ್ಯೂಸ್

ಕೋಲಾರ: ದಷ್ಟ ಪುಷ್ಟವಾಗಿ, ಜಿಮ್ ಬಾಡಿ ಮೆಂಟೈನ್ ಮಾಡುತ್ತ, ಇತ್ತೀಚೆಗಷ್ಟೇ ಮದುವೆಯಾಗಿದ್ದ ನವ ವಿವಾಹಿತನಿಗೆ ಸುಂದರವಾದ ಪ್ರೇಯಸಿಯ ಪ್ರೀತಿಯೇ ಅವನ ಕೊಲೆಗೆ ಕಾರಣವಾಗಿದೆ. ಮದುವೆಯ ಮನೆ ಈಗ ಸೂತಕದ ಮನೆಯಾಗಿದೆ. ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಜಾಬೀರ್ ಪ್ರೇಯಸಿ ನೀಡಿದ ಸುಪಾರಿಯಿಂದಲೇ ಕೊಲೆಯಾದವ. ಕೋಲಾರದಿಂದ ದೂರದ ಬೀದರ್‍ನ ನಿಡುವಂಚಿ ಗ್ರಾಮದ ಅಜ್ಞಾತ ಸ್ಥಳದಲ್ಲಿ ಭೀಕರವಾಗಿ ಕೊಲೆ ಮಾಡಲಾಗಿದೆ. ಮಗ ಕಾಣೆಯಾದ ಬಗ್ಗೆ ಜಾಬೀರ್ ಪೋಷಕರು ಕೋಲಾರದ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ...
ಕ್ರೈಮ್ಪುತ್ತೂರು

ಪುತ್ತೂರಿನ ಬನ್ನೂರಿನಲ್ಲಿ ಝಳಪಿಸಿತೇ ತಲ್ವಾರ್..!? ; ಯುವಕರು ಕೈ, ಕೈ ಮಿಲಾಯಿಸಿದ್ದು, ನಿಜಾನಾ..!? ಪೋಲಿಸರಿಗೆ ಫಯಾಝ್ ದೂರು | ಗಾಲಾಟೆ ಮಾಡಿದ್ದು ಅವರೇ, ದೂರು ನೀಡಿದ್ದು ಅವರೇ..!? ಗಾಂಜಾ ವ್ಯಸನಿಗಳಿಂದ ಘಟನೆ.!? – ಕಹಳೆ ನ್ಯೂಸ್

ಪುತ್ತೂರು: ಬನ್ನೂರು ಜೈನರಗುರಿ ಸಮೀಪ ಯುವಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಇಬ್ಬರು ಯುವಕರು ತಲವಾರಿನಲ್ಲಿ ಹಲ್ಲೆಗೆ ಯತ್ನಿಸಿ ಪರಾರಿಯಾಗಿರುವುದಾಗಿ ಪುತ್ತೂರು ಠಾಣೆಗೆ ಯುವಕನೊಬ್ಬ ದೂರು ನೀಡಿದ ಘಟನೆ ನಿನ್ನೆ ತಡರಾತ್ರಿ ವರದಿಯಾಗಿದೆ. ಏನಿದು ಘಟನೆ..!? ಸತ್ಯ ಅಸತ್ಯತೆ ಏನು..!? ಬನ್ನೂರಿನ ಕೆಲ ಭಾಗಗಳಲ್ಲಿ ಪಡ್ಡೆಯುವಕರು, ಗಾಂಜಾ ಸೇದಿಕೊಂಡು ಸಮಾಜಘಾತುಕ ಕೃತ್ಯಗಳನ್ನು ನಡೆಸುತ್ತಿರುವ ಕುರಿತು ಹಿಂದೆ ಅನೇಕ ಭಾರಿ ವರದಿಯಾಗಿತ್ತು, ಪೋಲೀಸ್ ದಾಳಿಗಳೂ ನಡೆದಿತ್ತು. ಇಂದು ಅಂತಹುದೇ ‌ಘಟನೆಯೊಂದು...
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಆಮರ್ ಜವಾನ್ ಜ್ಯೋತಿ ಸ್ಮಾರಕಕ್ಕೆ ಹಾನಿ ; ರಾಷ್ಟ್ರದ್ರೋಹಿ ಕೃತ್ಯವೆಸಗಿದ ಕಿಡಿಗೇಡಿಗಳು ಯಾರು..!? – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಕಿಲ್ಲೇ ಮೈದಾನದ ಬಳಿ ಇರುವ ಅಮರ್ ಜವಾನ್ ಜ್ಯೋತಿಗೆ ಹಾನಿ ಆಗಿರುವ ಘಟನೆ ಜು.6ರಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಪುತ್ತೂರಿನ ನಟ್ಟೋಜ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮುಂದಾಳತ್ವದ ಅಂಬಿಕಾ ವಿದ್ಯಾಲಯದ ಆಶ್ರಯದಲ್ಲಿ ಭಾರತೀಯ ವೀರ ಯೋಧರ ಸ್ಮರಣಾರ್ಥ 2017 ರಲ್ಲಿ ಲೋಕಾಪರ್ಣೆಗೊಂಡ ಅಮರ್ ಜವಾನ್ ಜ್ಯೋತಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಇಂದು ಬೆಳಿಗ್ಗೆ ಅಂಬಿಕಾ ವಿದ್ಯಾಸಂಸ್ಥೆಯ‌ ಮೆನೇಜರ್ ರವೀಂದ್ರರವರು ಸ್ಮಾರಕದ ಶುಚಿತ್ವಕ್ಕೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ....
ಕ್ರೈಮ್ದಕ್ಷಿಣ ಕನ್ನಡಪುತ್ತೂರುಸುದ್ದಿ

ಈವರೇ ನೋಡಿ ಹನಿಟ್ರ್ಯಾಪ್ ತಲೆಹಿಡುಕರು | ಯೌವನ ತುಂಬಿದ ಹೆಣ್ಣಿನ ನಗ್ನ ದೇಹದ ವಿಡಿಯೋ ತೋರಿಸಿ 30 ಲಕ್ಷ ಪೀಕಿದವರು – ಕಹಳೆ ನ್ಯೂಸ್

ಪುತ್ತೂರು: ಅನಾಮಧೇಯ ನಂಬರ್‌ನಿಂದ ಯುವಕರೊಬ್ಬರಿಗೆ ಮಸೇಜ್ ಕಳುಹಿಸಿ ಪರಿಚಯ ಮಾಡಿಸಿಕೊಂಡು ಬಳಿಕ ವಿಡಿಯೋ ಕಾಲ್ ಮಾಡಿ ಬಟ್ಟೆ ಬರೆಗಳನ್ನು ಬಿಚ್ಚಲು ಪ್ರೇರೇಪಿಸಿ ನಗ್ನ ದೇಹದ ವಿಡಿಯೋವನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ತನ್ನ ಸಹಚರದೊಂದಿಗೆ ಸೇರಿಕೊಂಡು ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ರೂ. 30ಲಕ್ಷ ಹಣ ಪಡೆದು ಕೊಂಡ ವಿಚಾರದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸಂತ್ರಸ್ತ ಯುವಕನ ದೂರಿಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಸಂಪ್ಯ ಪೊಲೀಸರು ಬಂಧಿಸುವಲ್ಲಿ...
ಕಾಸರಗೋಡುಕ್ರೈಮ್ಸುದ್ದಿ

ಕಾಸರಗೋಡು ಉಳಿಯತ್ತಡ್ಕ ಪರಿಸರದ 14ರ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ; ಮುಹಮ್ಮದ್ ಹನೀಫ್ ಸಹಿತ ನಾಲ್ವರು ಕಾಮುಕರ ಬಂಧನ – ಕಹಳೆ ನ್ಯೂಸ್

ಕಾಸರಗೋಡು, ಜು 05 : ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.   ಉಳಿಯತ್ತಡ್ಕದ ಎ.ಕೆ ಮುಹಮ್ಮದ್ ಹನೀಫ್ (58), ಮಧೂರು ಚೇನೆಕ್ಕೋಡ್‌ನ ಸಿ. ಎ ಅಬ್ಬಾಸ್ (49), ಉಸ್ಮಾನ್ (55) ಮತ್ತು ಉಳಿಯತ್ತಡ್ಕ ಎಸ್. ಪಿ ನಗರದ ಸಿ. ಅಬ್ಬಾಸ್ (55) ಬಂಧಿತರು. ಉಳಿಯತ್ತಡ್ಕ ಪರಿಸರದ 14 ರ ಹರೆಯದ ಬಾಲಕಿಗೆ ಆಮಿಷ ತೋರಿಸಿ ಕರೆದೊಯ್ದು ಕೃತ್ಯ ನಡೆಸಲಾಗಿತ್ತು. ಜೂನ್ 26...
1 117 118 119 120 121 129
Page 119 of 129