ಗೋವಾದಲ್ಲಿ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಗೌತಮ್ ಶೆಟ್ಟಿ & ಶಾಲಿನಿ ಶೆಟ್ಟಿ ಜೋಡಿಗೆ ಕಂಚಿನ ಪದಕ – ಕಹಳೆ ನ್ಯೂಸ್
ಗೋವಾ: ಮಾರ್ಚ್ 18 ರಿಂದ 25, 2020ರವರೆಗೆ ಗೋವಾದಲ್ಲಿ ನಡೆದ *“ಆಲ್ ಇಂಡಿಯಾ ಯೋನೆಕ್ಸ್ ಸನ್‌ರೈಸ್ 48ನೇ ಮಾಸ್ಟರ್ಸ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್”* ನಲ್ಲಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕರ್ನಾಟಕದ ಗೌತಮ್ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ ಜೋಡಿ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ದೇಶದ ವಿವಿಧ ರಾಜ್ಯಗಳಿಂದ ಬಂದ ಶ್ರೇಷ್ಠ ಆಟಗಾರರ ನಡುವೆ ನಡೆದ ಕಠಿಣ ಸ್ಪರ್ಧೆಯಲ್ಲಿ ಈ ಜೋಡಿ ಶಿಸ್ತಿನ ಆಟ, ಸಮನ್ವಯ ಮತ್ತು...







