ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ನಡೆದ ಶಿಕ್ಷಕರ ಹಾಗೂ ಪದವೀಧರ ಚುನಾವಣಾ ಪ್ರಚಾರ – ಕಹಳೆ ನ್ಯೂಸ್
ಸುರತ್ಕಲ್: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನೇತೃತ್ವದ ಸರಕಾರವು ಅಭಿವೃದ್ಧಿಗೆ ಅನುದಾನ ನೀಡದೆ ಒಂದೆಡೆ ಸತಾಯಿಸುತ್ತಿದ್ದರೆ, ಇನ್ನೊಂದೆಡೆ ಸಾಲವನ್ನು ಎತ್ತಲು ರಾಜ್ಯದ ಜಿಡಿಪಿಯನ್ನು ಸುಳ್ಳು ಲೆಕ್ಕದ ಮೂಲಕ ತೋರಿಸಲು ಮುಂದಾಗಿದೆ ಎಂದು ಡಾ. ಭರತ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ. ಸುರತ್ಕಲ್ ನ ಗೋವಿಂದದಾಸ ಕಾಲೇಜಿನಲ್ಲಿ ಶಿಕ್ಷಕರ ಹಾಗೂ ಪದವೀಧರ ಚುನಾವಣೆಯ ಪ್ರಚಾರಾರ್ಥ ಅವರು ಮಾತನಾಡಿದರು. ರಾಜ್ಯದ ಮೇಲ್ಮನೆಯಲ್ಲಿ ಅಸಂಬದ್ಧ ಕಾನೂನು ತರುವುದನ್ನು ತಡೆಯಲು ಬಿಜೆಪಿಗೆ ಬೆಂಬಲದ ಅಗತ್ಯವಿದೆ. ಶಿಕ್ಷಕರ...







