Monday, April 27, 2026

ಪ್ರಾದೇಶಿಕ

ಪುತ್ತೂರು

ಪುತ್ತೂರು : ಅಕ್ಟೋಬರ್ 1 ಮತ್ತು 3ರಂದು ಬೆಳಿಗ್ಗೆ 10ರಿಂದ ಸಂಜೆ 5ಗಂಟೆ ತನಕ ವಿದ್ಯುತ್ ನಿಲುಗಡೆ; ಮೆಸ್ಕಾಂ ಮಾಹಿತಿ- ಕಹಳೆ ನ್ಯೂಸ್

ಪುತ್ತೂರು: 33ಕೆ.ವಿ ಪುತ್ತೂರು-ಕಡಬ ಹಾಗೂ ಮಾಡಾವು ಕಟ್ಟೆ-ಬೆಳ್ಳಾರೆ ಏಕಮಾರ್ಗವನ್ನು ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಅಕ್ಟೋಬರ್.1ರ ಗುರುವಾರದಂದು ಹಾಗೂ ಅಕ್ಟೋಬರ್.3ರ ಶನಿವಾರದಂದು ವಿದ್ಯುತ್ ನಿಲುಗಡೆಯಾಗಲಿದೆ. ಅ.1 ಹಾಗೂ 3ರಂದು ಬೆಳಿಗ್ಗೆ ಗಂಟೆ 10ರಿಂದ ಸಂಜೆ 6 ಗಂಟೆಯ ತನಕ 33ಕೆ.ವಿ ಪುತ್ತೂರು-ಕಡಬ ದ್ವಿಮಾರ್ಗಗೊಳಿಸುವ ನಿಟ್ಟಿನಲ್ಲಿ ಮಾಡಾವು ಕಟ್ಟೆ-ಬೆಳ್ಳಾರೆ ದ್ವಿಮಾರ್ಗಗೊಳಿಸುವ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ವಿದ್ಯುತ್ ನಿಲುಗಡೆಯಾಗಲಿದೆ. ಹಾಗಾಗಿ 33/11ಕೆ.ವಿ ಕಡಬ, ನೆಲ್ಯಾಡಿ, ಸುಬ್ರಹ್ಮಣ್ಯ ಹಾಗೂ ಬೆಳ್ಳಾರೆ ವಿದ್ಯುತ್ ಉಪಕೇಂದ್ರದಿಂದ ವ್ಯಾಪ್ತಿಯ ಎಲ್ಲಾ 11ಕೆವಿ...
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ – 2020 ಮಾಹಿತಿ ಕಾರ್ಯಾಗಾರ-ಕಹಳೆ ನ್ಯೂಸ್

ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ವತಿಯಿಂದ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರುತ್ತಿರುವ “ರಾಷ್ಟ್ರೀಯ ಶಿಕ್ಷಣ ನೀತಿ – 2020” ಕುರಿತು ಮಾಹಿತಿ ಕಾರ್ಯಗಾರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ವಿದ್ಯಾ ಭಾರತಿ ಸಹಯೋಗದೊಂದಿಗೆ ವಿವೇಕಾನಂದ ಪದವಿ ಕಾಲೇಜಿನ ಸುವರ್ಣಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯ “ಶಿಕ್ಷಣದಲ್ಲಿ ಭಾರತೀಯತೆಯನ್ನು ಮತ್ತೊಮ್ಮೆ ತರುವ ನಿಟ್ಟಿನಲ್ಲಿ ಕೇಂದ್ರ...
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ನೆರವೇರಿದ ಸಂಸ್ಕOತಿ – ಪ್ರಸ್ತುತಿ ಸರಣಿ ಕಾರ್ಯಾಗಾರ -ಕಹಳೆ ನ್ಯೂಸ್

ಪುತ್ತೂರು: ಸಂಸ್ಕೃತಿ- ಪ್ರಸ್ತುತಿ ಇಂದಿನ ಕಾಲಕ್ಕೆ ಅತೀ ಅಗತ್ಯ ಎನಿಸುವಂತದ್ದು, ಸಂಸ್ಕೃತಿ ನಮ್ಮನ್ನು ಗಟ್ಟಿಗೊಳಿಸುವಂತ ಶಕ್ತಿಯನ್ನು ಹೊಂದಿದೆ. ಪ್ರಸ್ತುತ ಉಪನ್ಯಾಸಕನಾದವ ವಿಚಾರ ಪ್ರಸ್ತುತಿಯಲ್ಲಿ ಎಂದು ಎಡವಬಾರದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೆ. ಎನ್ ಹೇಳಿದ್ದಾರೆ. ನಿನ್ನೆ ವಿವೇಕಾನಂದ ಕಾಲೇಜಿನಲ್ಲಿ ಐಕ್ಯೂಎಸಿ, ಫ್ಯಾಕಲ್ಟಿ ಡೆವಲಪ್ಮೆಂಟ್ ಸೆಲ್ ಮತ್ತು ಹ್ಯುಮ್ಯಾನಿಟಿ ಅಸೋಸಿಯೇಷನ್ ನ ಆಶ್ರಯದಲ್ಲಿ ನಡೆದ ಸಂಸ್ಕೃತಿ -ಪ್ರಸ್ತುತ ಸರಣಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಇವರು...
ಪುತ್ತೂರು

ಇಂದು ಸಂಜೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ನರಕಾಸುರ ಮೋಕ್ಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ಕೊರೋನ ವೈರಸ್‍ನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ , ಕಾಲೇಜುಗಳು ಆರಂಭಗೊಳ್ಳದೆ ಶಿಕ್ಷಣವನ್ನು ಆನ್‍ಲೈನ್ ಮೂಲಕ ಕಲಿಯುವ ಅರ್ನಿವಾಯತೆ ಸೃಷ್ಠಿಯಾಗಿದೆ. ಆದ್ರೆ ಈ ಸಾಂಸ್ಕ0ತಿಕ ರಸದೌತಣಕ್ಕೆ ಕಡಿವಾಣ ಹಾಕದೆ ಯೂಟ್ಯೂಬ್ ಮೂಲಕ ನಿಮ್ಮನ್ನು ,ಮನರಂಜಿಸಲು ಇಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನರಕಾಸುರ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ನಡೆಸಲಿದ್ದಾರೆ. ಈ ಕಾರ್ಯಕ್ರಮ ಸಂಜೆ ಆರು ಗಂಟೆಗೆ ಪ್ರಸಾರವಾಗಲಿದ್ದು, http://youtu.be/lr7i3SKQCBo ಲಿಂಕ್ ಓಪನ್ ಮಾಡುವ ಮೂಲಕ ಅಥವಾ Vpuc Puttur...
ಬಂಟ್ವಾಳ

ಬಂಟ್ವಾಳದಲ್ಲಿ ಎಬಿವಿಪಿ ವತಿಯಿಂದ ಪತ್ರ ಚಳುವಳಿ ಅಭಿಯಾನ-ಕಹಳೆ ನ್ಯೂಸ್

ಬಂಟ್ವಾಳ : ಎಬಿವಿಪಿ ಬಂಟ್ವಾಳ ಶಾಖಾ ವತಿಯಿಂದ ಬಿಸಿರೋಡು ಹಾಗೂ ಸಿದ್ದಕಟ್ಟೆ ಅಂಚೆ ಕಚೇರಿ ಬಳಿ 'ಡ್ರಗ್ಸ್ ಮುಕ್ತ ಕರ್ನಾಟಕ' ಕ್ಕೆ ಆಗ್ರಹಿಸಿ ಪತ್ರ ಚಳುವಳಿ ಶನಿವಾರ ನಡೆಯಿತು. ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾಗೆ ಸೂಕ್ತ ಕಾನೂನನ್ನು ರೂಪಿಸಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ರಾಜ್ಯಾದ್ಯಂತ ಪತ್ರ ಚಳುವಳಿಗೆ ಕರೆ ನೀಡಿತ್ತು. ಇದರ ಅಂಗವಾಗಿ ಈ ಪತ್ರ ಚಳುವಳಿ ನಡೆಯಿತು....
ಪುತ್ತೂರು

ನೂತನ ಶಿಕ್ಷಣ ನೀತಿಯ ಕುರಿತು ಅಂಬಿಕಾ ವಿದ್ಯಾಲಯದಲ್ಲಿ ಮಾಹಿತಿ ಕಾರ್ಯಾಗಾರ- ಕಹಳೆ ನ್ಯೂಸ್

ಪುತ್ತೂರು : ನೂತನ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ಬೇಕಾದ ಪರಿಕರಗಳನ್ನೊದಗಿಸುವುದು, ಬೇಕಾದ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ ತಾವೇ ಕಲಿಯಲು ಅನುವು ಮಾಡಿಕೊಡಬೇಕಾದದ್ದು ಶಿಕ್ಷಕನ ಕೆಲಸ ಎಂದು ಅಂಬಿಕಾ ವಿದ್ಯಾಲಯದಲ್ಲಿ ನಡೆದ ಕಾರ್ಯಾಗಾರವೊಂದರಲ್ಲಿ ಪಾಂಡುರಂಗ ಅವರು ಹೇಳಿದ್ದಾರೆ. ಮುಂದಿನ ದಿನದಲ್ಲಿ ಕಾರ್ಯಗತಗೊಳ್ಳುವ ನೂತನ ಶಿಕ್ಷಣ ನೀತಿಯ ಕುರಿತಾಗಿ ನಡೆದ ಮಾಹಿತಿ ಕಾರ್ಯಗಾರದಲ್ಲಿ ಪಾಂಡುರಂಗ, ಶಿಕ್ಷಕ ಶ್ರೀನಿವಾಸ ಹಾಗೂ ವಿಜಯಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ರು. ಈ ಕಾರ್ಯಾಗಾರದಲ್ಲಿ ಸಾಂದೀಪನೀ ವಿದ್ಯಾಸಂಸ್ಥೆಯ ಶಿಕ್ಷಕರೂ,...
ಪುತ್ತೂರು

ಆನ್ ಲೈನ್‍ನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಾಗಾರ ನಡೆಸಿದ ಸಂತ ಫಿಲೋಮಿನಾ ಕಾಲೇಜ್-ಕಹಳೆ ನ್ಯೂಸ್

ಪುತ್ತೂರು: ಯುವ ಜನತೆಯು ರಾಷ್ಟ್ರೀಯ ಭಾವೈಕ್ಯತೆಯನ್ನು ಸಾಕಾರಗೊಳಿಸುವ ಮೂಲಕ ದೇಶ ಕಟ್ಟುವ ಕೈಂಕರ್ಯದಲ್ಲಿ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಸಂತ ಫಿಲೋಮಿನಾ ಕಾಲೇಜಿನ ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್‍ರೈ ಹೇಳಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ನಿನ್ನೆ ಆಯೋಜಿಸಿದ 51ನೇ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಆನ್ ಲೈನ್ ವೇದಿಕೆಯಲ್ಲಿ ಮಾತನಾಡಿದ...
ಪುತ್ತೂರು

ನಾಟಾ, ಬಿ.ಆರ್ಕ್ ಫಲಿತಾಂಶ : ಉತ್ತಮ ಸಾಧನೆಗೈದ ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳು-ಕಹಳೆ ನ್ಯೂಸ್

ನ್ಯಾಷನಲ್ ಆಪ್ಟಿಟ್ಯೂಡ್ ಟೆಸ್ಟ್ ಫಾರ್ ಆರ್ಕಿಟೆಕ್ಚರ್ (ಓಂಖಿಂ) ಹಾಗೂ ಬಿ.ಆರ್ಕ್ (ಜೆ.ಇ.ಇ. ಪೇಪರ್-2) - 2020 ರಾಷ್ಟ್ರೀಯ ಮಟ್ಟದ ಪರೀಕ್ಷೆಯಲ್ಲಿ ಪುತ್ತೂರಿನ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಾದ ನಿಖಿಲ್ ಬಳ್ಳಕುರಾಯ (123 ಅಂಕ), ವರ್ಷ ಎನ್.ವಿ. (122.5 ಅಂಕ), ವಿಶಾಖ್ ನವೀನ್ ಕೆ (112.5 ಅಂಕ), ಆತ್ಮಿ ರೈ (105 ಅಂಕ), ನಿರೀಕ್ಷಾ ಎಂ.ಎಸ್. (92.5 ಅಂಕ) ಉತ್ತಮ ಫಲಿತಾಂಶ ಪಡೆದಿದ್ದಾರೆ. ಜೆ.ಇ.ಇ.(ಬಿ.ಆರ್ಕ್) ವಿಭಾಗದಲ್ಲಿ 958ನೇ ರ್ಯಾಂಕ್ ಗಳಿಸುವ...
1 850 851 852 853 854 872
Page 852 of 872