Monday, April 27, 2026

ಪ್ರಾದೇಶಿಕ

ಪುತ್ತೂರು

ಮುಂಜಾನೆಯಿಂದ ಬಿರುಸಿನ ಗ್ರಾಮ ಪಂಚಾಯತ್ ಮತದಾನ; ಪುತ್ತೂರಿನಲ್ಲಿ ಬೂತ್ ಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ- ಕಹಳೆ ನ್ಯೂಸ್

ಪುತ್ತೂರು: ಗ್ರಾಮ ಪಂಚಾಯತ್ ಚುನಾವಣೆಯ 2ನೇ ಹಂತದ ಮತದಾನ ಇಂದೂ ಮುಂಜಾನೆಯಿಂದ ಬಿರುಸಿನಿಂದ ಸಾಗಿದ್ದು ಪುತ್ತೂರು ತಾಲೂಕಿನಲ್ಲಿಯೂ ಇಂದು ಮುಂಜಾನೆಯಿಂದ ಮತದಾನ ಪ್ರಾರಂಭಗೊಂಡಿದೆ. ಇದೇ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಇವರು ಪುತ್ತೂರಿನ ಹಲವು ಮತದಾನ ಬೂತ್ ಗಳಿಗೆ ಇಂದು ಭೇಟಿ ನೀಡಿದರು. ಬೂತ್ ಗಳಲ್ಲಿ ನಡೆಯುತ್ತಿರುವ ಮತದಾನದ ಕುರಿತು ವ್ಯವಸ್ಥೆಯ ಕುರಿತು ಪರಿಶೀಲಿಸಿದರು. ಇದಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾರ್ಥಮಿಕ...
ಪುತ್ತೂರು

ಪುತ್ತೂರಿನ ಹಂಟ್ಯಾರು ಮತಗಟ್ಟೆ ಆವರಣದಲ್ಲಿ ಪತ್ತೆಯಾದ ಚುನಾವಣಾ ಅಭ್ಯರ್ಥಿಯ ಚಿಹ್ನೆಯ ಚೀಟಿ : ಪ್ರಕರಣವನ್ನ ಪತ್ತೆ ಹಚ್ಚಿದ ಚುನಾವಣಾಧಿಕಾರಿ ಡಾ. ಯತೀಶ್ ಉಳ್ಳಾಲ್ – ಕಹಳೆ ನ್ಯೂಸ್

ಹಂಟ್ಯಾರು : ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಬಿರುಸಿನಿಂದ ನಡೆಯುತ್ತಿದೆ, ಕೆಲವು ಕಡೆ ಶಾಂತಿಯುತವಾಗಿ ಚುನಾವಣೆ ನಡಿತಾ ಇದೆ. ಆದರೆ ಪುತ್ತೂರಿನ ಹಂಟ್ಯಾರು ಶಾಲಾ ಮತಗಟ್ಟೆಯಲ್ಲಿ ಮತದಾನದ ಚೀಟಿ ನೀಡುತ್ತಿರುವಪ್ರಕರಣ ಬೆಳಕಿಗೆ ಬಂದಿದೆ.ಚುನಾವಣೆಗೆ ಸಂಬಂಧ ಪಟ್ಟಂತೆ ಮತಗಟ್ಟೆಗಳನ್ನು ಪರಿಶೀಲನೆ ಮಾಡಲೆಂದು ಚುನಾವಣಾಧಿಕಾರಿ ಡಾ. ಯತೀಶ್ ಉಳ್ಳಾಲ್ ಅವರು, ಪುತ್ತೂರು ತಾಲೂಕಿನ ಹಂಟ್ಯಾರು ಶಾಲಾ ಮತಗಟ್ಟೆಗೆ ಬೇಟಿ ನೀಡಿದರು, ಈ ವೇಳೆ ಮತಗಟ್ಟೆಯ ಹೊರಗೆ, ಮತದಾನ ಮಾಡಲೆಂದು ನಿಂತಿದ್ದ ವ್ಯಕ್ತಿಯೋರ್ವನ...
ದಕ್ಷಿಣ ಕನ್ನಡಪುತ್ತೂರು

Breaking News : ಪುತ್ತೂರಿನ ಕೋರ್ಟು ರಸ್ತೆಯಲ್ಲಿ ವಿದ್ಯುತ್ ಕಂಬಕ್ಕೆ ಹತ್ತಿದ BSNL  ನೌಕರ ವಿದ್ಯುತ್ ಶಾಕ್ ತಗುಲಿ ಸ್ಥಳದಲ್ಲೇ ಸಾವು ; ಕೇಬಲ್ ಸಂಸ್ಥೆಯ ಬೇಜವಾಬ್ದಾರಿತನದಿಂದ ಘಟನೆ, ವ್ಯಾಪಕ ಖಂಡನೆ – ಕಹಳೆ ನ್ಯೂಸ್

ಪುತ್ತೂರು : ನಗರದ ಕೋರ್ಟುರಸ್ತೆಯ ಮೀನಿನ ಮಾರುಕಟ್ಟೆ ಮುಂಭಾಗದಲ್ಲಿನ ವಿದ್ಯುತ್ ಕಂಬಕ್ಕೆ ಹತ್ತಿದ BSNL  ನೌಕರ ವಿದ್ಯುತ್ ಶಾಕ್ ಬಡಿದು ಮೃತ್ಯುವಾಗದ ಘಟನೆ ವರದಿಯಾಗಿದೆ. ಮೃತ ವ್ಯಕ್ತಿಯು ಆರ್ಲಪದವು ಮೂಲದ ಪದ್ಮನಾಭ ಪಾಣಾಜೆ ( 44 ) ಎಂದು ಗುರುತಿಸಲಾಗಿದ್ದು, ಬಿಎಸ್ಎನ್.ಎಲ್ ಗುತ್ತಿಗೆದಾರರಾದ ಶ್ರೀ ಅಸೋಸಿಯೇಟ್ಸ್ ನಲ್ಲಿ ಕಳೆದ ಮೂರು ವರ್ಷದಿಂದ ಕೆಲಸಮಾಡುತ್ತಿದ್ದು, ಕೆಲಸ ನಿರ್ವಹಿಸಿದ್ದ ವೇಳೆಯೇ ಘಟನೆ ಸಂಭವಿಸಿದೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಆಳವಡಿಸಿಕೊಳ್ಳದೆ, ವಿದ್ಯುತ್ ಕಂಬಕ್ಕೆ ಹತ್ತಿದ್ದೇ...
ಪುತ್ತೂರು

ವಿದ್ಯುತ್ ತಂತಿಗೆ ಸ್ಪರ್ಶಿಸಿದ ಅಲ್ಯೂಮಿನಿಯಮ್ ಕೊಕ್ಕೆ, ಅಜ್ಜಿಕಲ್ಲು ನಿವಾಸಿ ದುರ್ಮರಣ- ಕಹಳೆ ನ್ಯೂಸ್

ಪುತ್ತೂರು: ಅಲ್ಯೂಮಿನಿಯಮ್ ಕೊಕ್ಕೆಯ ಸಹಾಯದಿಂದ, ಮರದಿಂದ ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿಗೆ ತಗುಲಿ, ವಿದ್ಯುತ್ ಸ್ಪರ್ಷದಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಎಂಬಲ್ಲಿ ನಡೆದಿದೆ. ಬಾಬು ಪೂಜಾರಿ ಎಂಬುವರ ಪುತ್ರ ರವೀಂದ್ರ ಪೂಜಾರಿ (36) ಮೃತಪಟ್ಟ ದುರ್ದೈವಿ. ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಇವರು, ಕ್ರಿಸ್​ಮಸ್ ರಜೆಯ ನಿಮಿತ್ತ ಮನೆಗೆ ಬಂದಿದ್ದರು. ಈ ವೇಳೆ ತಮ್ಮ ಮನೆ ಸುತ್ತ ಅಡಿಕೆ ಕೊಯ್ಲು ಮಾಡುವ...
ಪುತ್ತೂರು

ಚಿನ್ನದ ಸರವನ್ನು ಅದರ ವಾರೀಸುದಾರರಿಗೆ ಹಿಂತಿರುಗಿಸಿ, ಪ್ರಾಮಾಣಿಕತೆ ಮೆರೆದ ಪಾಣಾಜೆ ‌ಆರೋಗ್ಯ ಕೇಂದ್ರದ ಚಾಲಕ ಸತೀಶ್ ಕುಮಾರ್ – ಕಹಳೆ ನ್ಯೂಸ್

ಪುತ್ತೂರು: ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಚಾಲಕ ಸತೀಶ್ ಕುಮಾರ್ ಅವರು ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಅದರ ವಾರೀಸುದಾರರಿಗೆ ಹಿಂತಿರುಗಿಸುವ ಮೂಲಕ ಪ್ರಮಾಣಿಕತೆ ಮೆರೆದಿದ್ದಾರೆ. ಡಿಸೆಂಬರ್ 20 ರಂದು ಸುಳ್ಯ ತಾಲೂಕಿನ ಸಂಪಾಜೆ ಗೂನಡ್ಕದ ದೀಕ್ಷಿತ್ ರವರು ಈಶ್ವರಮಂಗಲದ ಹನುಮಗಿರಿ ದೇವಸ್ಥಾನಕ್ಕೆ ಬಂದಿದ್ದ ವೇಳೆ ಸುಮಾರು 9 ಗ್ರಾಂ ತೂಕದ ಚಿನ್ನದ ಸರ ಕಳೆದುಹೋಗಿತ್ತು. ಈ ಸರವು ಮುಖ್ಯ ರಸ್ತೆಯ ದ್ವಾರದ ಬಳಿಯಲ್ಲಿ ಬಿದ್ದಿದ್ದು, ಆರೋಗ್ಯ ಕೇಂದ್ರದ ಚಾಲಕ...
ಪುತ್ತೂರು

ಕೋಡಿಂಬಾಡಿಯ ಅಶ್ವತ್ಥಕಟ್ಟೆ ಧರ್ಮ ಶ್ರೀ ಕಲಾವೃಂದದ ವತಿಯಿಂದ 10 ನೇ ವರ್ಷದ ರಕ್ತದಾನ ಶಿಬಿರ – ಕಹಳೆ ನ್ಯೂಸ್

ಪುತ್ತೂರು: ಕೋಡಿಂಬಾಡಿಯ ಅಶ್ವತಕಟ್ಟೆ ಧರ್ಮ ಶ್ರೀ ಕಲಾವೃಂದದ ವತಿಯಿಂದ ಹತ್ತನೇ ವರ್ಷದ ರಕ್ತದಾನ ಶಿಬಿರ ಚತುರ್ಥಿ ರಂಗಮಂದಿರದಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಬಾಲಕೃಷ್ಣ ಬೋರ್ಕರ್ ಭಾರತ ಮಾತೆಯ ಭಾವಚಿತ್ರದ ಎದುರು ದೀಪ ಬೆಳಗಿಸುವ ಮೂಲಕ , ಚಾಲನೆ ನೀಡಿದರು. ಹಾಗೂ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಹಾಗೆ...
ಕಡಬ

ಶಾಲೆಗೆಂದು ತೆರಳಿದ ಹೈಸ್ಕೂಲ್ ವಿದ್ಯಾರ್ಥಿನಿ ಕಡಬದಲ್ಲಿ ನಾಪತ್ತೆ – ಕಹಳೆ ನ್ಯೂಸ್

ಕಡಬ: ಶಾಲೆಗೆಂದು ತೆರಳಿದ ಹೈಸ್ಕೂಲ್ ವಿಧ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಕಡಬ ತಾಲೂಕಿನ ಮರ್ದಾಳದಲ್ಲಿ ನಡೆದಿದೆ. ನಾಪತ್ತೆಯಾಗಿರುವ ಬಾಲಕಿ ಐತ್ತೂರು ಗ್ರಾಮದ ಬೆತ್ತೋಡಿ ಸಿ.ಆರ್.ಸಿ ಕಾಲನಿಯ ನಿವಾಸಿ ಜಗದೀಶ ಎಂಬವರ ಪುತ್ರಿ 16 ವರ್ಷದ ನರ್ಮದಾ ಬಿ.ಜೆ ಎಂದು ತಿಳಿದು ಬಂದಿದೆ. ಈಕೆ ಮರ್ದಾಳದ ಹೈಸ್ಕೂಲ್ ವಿಧ್ಯಾರ್ಥಿನಿಯಾಗಿದ್ದು, ಬುಧವಾರ ಶಾಲೆಗೆಂದು ತೆರಳಿದವಳು, ಮನೆಗೆ ಬಾರದ ಕಾರಣ ಅಧ್ಯಾಪಕರಲ್ಲಿ ವಿಚಾರಿಸಿದಾಗ ಶಾಲೆಗೆ ರಜೆ ಇರುವುದಾಗಿ ತಿಳಿಸಿದ್ದಾರೆ. ನಾಪತ್ತೆಯಾಗಿರುವ ಮಗಳನ್ನು ಹುಡುಕಿಕೊಡುವಂತೆ ಬಾಲಕಿಯ ತಂದೆ...
ಬಂಟ್ವಾಳ

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ನಾಳೆ ಕಲ್ಲಡ್ಕಕ್ಕೆ ಭೇಟಿ – ಕಹಳೆ ನ್ಯೂಸ್

ಬಂಟ್ವಾಳ: ಕೇಂದ್ರ ರಸಗೊಬ್ಬರ ಖಾತೆ ಸಚಿವರೂ ಆಗಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ನಾಳೆ ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲು ಆಗಮಿಸಲಿದ್ದಾರೆ. ನಾಳೆ ಮಧ್ಯಾಹ್ನ ಈ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿರುವ ಡಾ.ಪ್ರಭಾಕರ ಭಟ್ , ಇಫ್ಕೋ ನಿರ್ದೇಶಕ ಡಾ.ಎಂ.ಎನ್ ರಾಜೇಂದ್ರ ಕುಮಾರ್, ಇಫ್ಕೋ ರಾಜ್ಯ ಮಾರಾಟ ವ್ಯವಸ್ಥಾಪಕ ಡಾ.ಸಿ....
1 827 828 829 830 831 872
Page 829 of 872