Tuesday, April 28, 2026

ಪ್ರಾದೇಶಿಕ

ಬೆಳ್ತಂಗಡಿ

ಫೆಬ್ರವರಿ 7 ರಂದು ಬೆಳ್ತಂಗಡಿಗೆ ಆಗಮಿಸಲಿದ್ದಾರೆ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ-ಕಹಳೆ ನ್ಯೂಸ್

ಬೆಳ್ತಂಗಡಿ : ಫೆಬ್ರವರಿ 7 ರಂದು ಉಪಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ ಅವರು ಬೆಳ್ತಂಗಡಿಗೆ ಆಗಮಿಸಲಿದ್ದಾರೆ.   ಇವರು ಬೆಳಗ್ಗೆ ವಿಮಾನ ಮೂಲಕ ಮಂಗಳೂರಿಗೆ ಆಗಮಿಸಿ, 10-30ಕ್ಕೆ ಧರ್ಮಸ್ಥಳದಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿಮೀಸಲಾದ ಚತುಷ್ಟದ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ 11-30ಕ್ಕೆ ಬೆಳ್ತಂಗಡಿಯಲ್ಲಿ ನಿರ್ಮಾವಾಗಲಿರುವ ಪರಿವೀಕ್ಷಣಾ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೇರವೇರಿಸಲಿದ್ದು, ನಂತರ ಧರ್ಮಸ್ಥಳಕ್ಕೆ ಭೇಟಿ ನೀಡಿ ಸಂಜೆ ಬೆಂಗಳೂರಿಗೆ ಹಿಂದಿರುಗಲಿರುವರು ಎಂದು ತಿಳಿದು ಬಂದಿದೆ....
ಪುತ್ತೂರು

ಪುತ್ತೂರಿನ ದೇವಸ್ಯ ಎಂಬಲ್ಲಿ ಫೆಬ್ರವರಿ 5 ರಿಂದ 15 ವರೆಗೆ ವಾಹನ ಸಂಚಾರ ಸ್ಥಗಿತ, ಬದಲಿ ಸಂಚಾರ ವ್ಯವಸ್ಥೆಗೆ ಲೋಕೋಪಯೋಗಿ ಇಲಾಖೆ ಸೂಚನೆ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ತಾಲೂಕು ಆರ್ಯಾಪು ಗ್ರಾಮ ವ್ಯಾಪ್ತಿಯ ದೇವಸ್ಯ ಎಂಬಲ್ಲಿ ಕಿರಿದಾದ ಸೇತುವೆಯ ಅಗಲೀಕರಣದ ಹಿನ್ನಲೆ 11 ದಿನಗಳ ಕಾಲ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸುಬ್ರಹ್ಮಣ್ಯ ಹಾಗೂ ಮಂಜೇಶ್ವರ ರಾಜ್ಯ ಹೆದ್ದಾರಿಯ ದೇವಸ್ಯ ಎಂಬಲ್ಲಿ ಸೇತುವೆ ಅಗಲೀಕರಣ ಕಾಮಗಾರಿ ಹಿನ್ನಲೆ ಫೆಬ್ರವರಿ 5 ರಿಂದ 15 ರ ವರೆಗೆ ವಾಹನ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದ್ದು, ಈ ಬಗ್ಗೆ ಲೋಕೋಪಯೋಗಿ ಇಲಾಖೆ ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್‍ಗೆ ಪತ್ರ ಬರೆದಿದ್ದು...
ಬಂಟ್ವಾಳ

ಕಲ್ಲಡ್ಕದ ಪೂರ್ಲಿಪ್ಪಾಡಿಯಲ್ಲಿ ನಿನ್ನೆ ಖಾಲಿ ಗ್ಯಾಸ್ ಟ್ಯಾಂಕರ್ ಮತ್ತು ಕಂಟೈನರ್ ನಡುವೆ ಅಪಘಾತ-ಕಹಳೆ ನ್ಯೂಸ್

ಬಂಟ್ವಾಳ : ಸೂರಿಕುಮೇರುವಿನಲ್ಲಿ ಮಂಗಳವಾರ ಬೆಳಗ್ಗೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸುಮಾರು 10 ಗಂಟೆ ವಾಹನ ಸಂಚಾರ ಅಡಚಣೆಯ ಸಮಸ್ಯೆಯ ಬೆನ್ನಲ್ಲೇ ಕಲ್ಲಡ್ಕದಲ್ಲಿ ನಿನ್ನೆ ರಾತ್ರಿ ಮತ್ತೊಂದು ಅಪಘಾತ ನಡೆದಿದೆ. ಈ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ನಿನ್ನೆ ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಖಾಲಿಯಾಗಿರುವ ಅನಿಲ ಟ್ಯಾಂಕರ್ ಹಾಗೂ ಬೆಂಗಳೂರು ಕಡೆ ಹೋಗುತ್ತಿದ್ದ ಕಂಟೈನರ್ ನಡುವೆ ಅಪಘಾತ ಸಂಭವಿಸಿದ್ದು, ಇದರ ಪರಿಣಾಮ ಕೆಲ ಕಾಲ ನಿನ್ನೆ ರಾತ್ರಿ ಆತಂಕದ...
ಪುತ್ತೂರು

ಮೇ 15ರಿಂದ 21 ರವರೆಗೆ ಜೀರ್ಣೋದ್ಧಾರಗೊಳ್ಳುತ್ತಿರುವ ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಬ್ರಹ್ಮಕಲಶೋತ್ಸವ-ಕಹಳೆ ನ್ಯೂಸ್

ಪುತ್ತೂರು : ಜೀರ್ಣೋದ್ಧಾರಗೊಳ್ಳುತ್ತಿರುವ ಸರ್ವೆ ಶ್ರೀ ಸುಬ್ರಾಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೇ 15ರಿಂದ 21 ರವರೆಗೆ ನಡೆಯಲಿದ್ದು ಈ ಪ್ರಯುಕ್ತ ಭಕ್ತರ ಸಭೆ ಭಾನುವಾರ ದೇವಸ್ಥಾನದ ವಠಾರದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷೆ ನಳಿನಿ ಲೋಕಪ್ಪ ಗೌಡ ಕರೆಮನೆ ಮಾತನಾಡಿ, ದೇವಸ್ಥಾನದ ನಿರ್ಮಾಣದಲ್ಲಿ ಗ್ರಾಮಸ್ಥರ ಸಹಕಾರ ಮುಖ್ಯ. ಎಲ್ಲರೂ ಏಕಮನಸ್ಸಿನಿಂದ ದೇವತಾ ಕಾರ್ಯದಲ್ಲಿ ಶ್ರಮಿಸಿದಾಗ ಭವ್ಯ ದೇಗುಲದ ನಿರ್ಮಾಣ ಸಾಧ್ಯವಿದೆ. ಸರ್ವೆಯ ಸುಂದರ ದೇಗುಲದ...
ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ಹೆತ್ತ ತಾಯಿಯನ್ನು ಬೀದಿಯಲ್ಲಿ ಬಿಟ್ಟ ಪಾಪಿ ಮಕ್ಕಳು-ಕಹಳೆ ನ್ಯೂಸ್

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ಪಾಪಿ ಮಕ್ಕಳು ಹೆತ್ತ ತಾಯಿಯನ್ನು ಬೀದಿಯಲ್ಲಿ ಬಿಟ್ಟ ಅಮಾನವೀಯ ಘಟನೆ ನಡೆದಿದೆ. ಮೂಲತಃ ಕಳಿಯ ಗ್ರಾಮದ ಜನತಾ ಕಾಲೋನಿ ನಿವಾಸಿಯಾದ ವೃದ್ಧೆಯೊಬ್ಬರಿಗೆ ಐವರು ಮಕ್ಕಳಿದ್ದರೂ ಅನಾಥ ಪರಿಸ್ಥಿತಿ ಎದುರಾಗಿದ್ದು, ಅವರಿಗೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರಿದ್ದು, ಎಲ್ಲರಿಗೂ ವಿವಾಹವಾಗಿದೆ. ಈ ವೃದ್ಧೆ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರನ್ನು ಆರೈಕೆ ಮಾಡುವವರು ಯಾರು ಎಂಬ...
ಪುತ್ತೂರು

ಪುತ್ತೂರಿನಲ್ಲಿ ನಾಳೆ ಪ್ರೀತ್ ಡ್ರೆಸ್ಸಸ್ ಸಮೃದ್ಧಿ ಫ್ಯಾನ್ಸಿ & ಫೂಟ್ ವೇರ್ ಶುಭಾರಂಭ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರಿನ ಜಿ.ಎಲ್.ಟ್ರೇಡ್ ಸೆಂಟರ್, ಪ್ರಭು ಚರುಂಬುರಿ ಬಳಿ ಪ್ರೀತ್ ಡ್ರೆಸ್ಸಸ್ ಸಮೃದ್ಧಿ ಫ್ಯಾನ್ಸಿ & ಫೂಟ್ ವೇರ್ ನಾಳೆ ಅದ್ದೂರಿಯಾಗಿ ಶುಭಾರಂಭಗೊಳ್ಳಲಿದೆ. ಇಲ್ಲಿ ಹಲವಾರು ಶೈಲಿಯ ಡ್ರೆಸ್ಸಸ್ ಮತ್ತು ಫ್ಯಾನ್ಸಿ ಐಟಂಗಳನ್ನು ಇವೆ. ಹಾಗೂ ವಿವಿಧ ಶೈಲಿಯ ಫೂಟ್ ವೇರ್ ಗಳು ಇದೆ....
ಕಡಬ

ಕಡಬದಲ್ಲಿ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದು ಮನೆಯ ಶೌಚಾಲಯದಲ್ಲಿ ಬಂಧಿಯಾಗಿದ್ದ ಚಿರತೆಯೂ ಕಾರ್ಯಾಚರಣೆ ವೇಳೆ ಪರಾರಿ-ಕಹಳೆ ನ್ಯೂಸ್

ಕಡಬ : ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದು ಮನೆಯ ಶೌಚಾಲಯದಲ್ಲಿ ಬಂಧಿಯಾಗಿದ್ದ ಚಿರತೆಯೂ ಕಾರ್ಯಾಚರಣೆ ವೇಳೆ ಪರಾರಿಯಾಗಿದೆ. ಸುಬ್ರಮಣ್ಯ ಸಮೀಪದ ಕೈಕಂಬ ನಿವಾಸಿ ರೇಗಪ್ಪ ಅವರ ಮನೆಯ ಸಮೀಪ ಸಾಕು ನಾಯಿಯನ್ನು ಚಿರತೆಯೊಂದು ಅಟ್ಟಿಸಿಕೊಂಡು ಬಂದಿದ್ದು, ಚಿರತೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಸಾಕುನಾಯಿಯು ಮನೆಯ ಹೊರಗಿದ್ದ ಶೌಚಾಲಯಕ್ಕೆ ಹೊಕ್ಕಿದ್ದರಿಂದ ನಾಯಿಯನ್ನು ಹಿಂಬಾಲಿಸಿದ ಚಿರತೆಯು ಶೌಚಾಲಯದ ಒಳಗೆ ಬಂದಿತ್ತು. ಇದನ್ನು ಗಮನಿಸಿದ ಮನೆಯವರು ಹೊರಗಿನಿಂದ ಶೌಚಾಲಯದ ಬಾಗಿಲನ್ನು ಹಾಕಿದ್ದರು. ಈ ವೇಳೆ ನಾಯಿ...
ಪುತ್ತೂರು

ಶಾಂತಿಗೋಡಿನ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಮೂವರಲ್ಲಿ ಒಬ್ಬರು ನಾಪತ್ತೆ-ಕಹಳೆ ನ್ಯೂಸ್

ಪುತ್ತೂರು : ಶಾಂತಿಗೋಡಿನಲ್ಲಿ ಕುಮಾರಧಾರ ನದಿಗೆ ಮೀನು ಹಿಡಿಯಲು ಹೋದ ಮೂವರಲ್ಲಿ ಒಬ್ಬರು ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ವ್ಯಕ್ತಿ ಮುಂಡೂರು ಗ್ರಾಮದ ಕಡ್ಯ ತೌಡಿಂಜ ನಿವಾಸಿ ಕಾಂತರ ಎಂದು ತಿಳಿದುಬಂದಿದೆ. ಕಾಂತರ ಮತ್ತು ಅವರ ಪುತ್ರ ಹಾಗೂ ಅಳಿಯ ಸೇರಿ ಶಾಂತಿಗೋಡು ಕುಮಾರಧಾರ ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯಲು ಹೋಗಿದ್ದರು. ಮೀನಿಗೆ ಗಾಳ ಹಾಕುತ್ತಿದ್ದ ಕಾಂತರ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಕಣ್ಮರೆಯಾಗಿದ್ದು, ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು...
1 807 808 809 810 811 872
Page 809 of 872