Tuesday, April 28, 2026

ಪ್ರಾದೇಶಿಕ

ಪುತ್ತೂರು

ಮೊಟ್ಟೆತ್ತಡ್ಕ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತ್ಯು-ಕಹಳೆ ನ್ಯೂಸ್

ಪುತ್ತೂರು : ಮೊಟ್ಟೆತ್ತಡ್ಕ ರಸ್ತೆಯಲ್ಲಿ ದ್ವಿಚಕ್ರ ವಾಹನ ಮತ್ತು ಪಿಕಪ್ ನಡುವೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಪುತ್ತೂರು ನಿವಾಸಿ ಸಿಂಧು ಸಾಫ್ಟ್ ಡ್ರಿಂಕ್ಸ್ ನ ಪ್ರಸಾದ್ ಎಂದು ತಿಳಿದುಬಂದಿದೆ....
ಪುತ್ತೂರು

ಶಾಸಕ ಸಂಜೀವ ಮಠಂದೂರುವರಿಂದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ದೂರು; ಸಮಸ್ಯೆಗಳ ಬಗ್ಗೆ ಜನಸಂಪರ್ಕ ಸಭೆ-ಕಹಳೆ ನ್ಯೂಸ್

ಪುತ್ತೂರು : ಕೆಎಸ್‌ಆರ್‌ಟಿಸಿ ಬಸ್ಸಿಗೆ ಸಂಬಂಧಪಟ್ಟಂತೆ ಸಾರ್ವಜನಿಕ ದೂರು, ಅಹವಾಲು, ಹಾಗೂ ಸಮಸ್ಯೆಗಳ ಬಗ್ಗೆ ಜನಸಂಪರ್ಕ ಸಭೆಯನ್ನು ಇದೇ ತಿಂಗಳು 10 ರಂದು ಬುಧವಾರ ಪೂರ್ವಾಹ್ನ 11 ಗಂಟೆಗೆ ಶಾಸಕ ಸಂಜೀವ ಮಠಂದೂರು ನಡೆಸಲಿದ್ದಾರೆ. ಈ ಸಭೆಯಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ಮತ್ತು ಮಂಗಳೂರು ವಿಭಾಗ ನಿಯಂತ್ರಕರು ಭಾಗವಹಿಸಲಿದ್ದು, ಈ ಬಗ್ಗೆ ಅಹವಾಲು ಸಾರ್ವಜನಿಕರು ಸದರಿ ಸಭೆಯಲ್ಲಿ ಅಥವಾ ಸಭೆಗೆ ಮುಂಚಿತವಾಗಿ ಪುತ್ತೂರು ಶಾಸಕರ ಕಛೇರಿಯಲ್ಲಿ ನೀಡಬಹುದಾಗಿದೆ....
ಪುತ್ತೂರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಆಡಳಿತ ಅಧ್ಯಕ್ಷರಾಗಿ ಮುಳಿಯ ಕೇಶವ ಪ್ರಸಾದ್ ಆಯ್ಕೆ-ಕಹಳೆ ನ್ಯೂಸ್

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಯ ಆಡಳಿತ ಅಧ್ಯಕ್ಷರಾಗಿ ಮುಳಿಯ ಕೇಶವ ಪ್ರಸಾದ್ ಅವರು ಆಯ್ಕೆಯಾಗಿದ್ದಾರೆ....
ಪುತ್ತೂರು

ಅಂಬಿಕಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ‘ಅನುಪಮ’ ಭಿತ್ತಿಪತ್ರಿಕೆ ಅನಾವರಣ ಪತ್ರಿಕೋದ್ಯಮದಲ್ಲಿ ಸೃಜನಶೀಲತೆ ಮತ್ತು ಕೌಶಲ್ಯ ಅಗತ್ಯ; ಡಾ.ಜಿ.ಎನ್.ಭಟ್-ಕಹಳೆ ನ್ಯೂಸ್

ಪುತ್ತೂರು : ಪತ್ರಿಕೋದ್ಯಮದಲ್ಲಿ ಸೃಜಶೀಲತೆ ಹೆಚ್ಚು ಮಹತ್ವದ್ದು. ವಿದ್ಯಾರ್ಥಿ ಜೀವನದಲ್ಲಿ ಭಿತ್ತಿಪತ್ರಿಕೆಯನ್ನು ರೂಪಿಸುವುದು ಕೌಶಲ್ಯ ಅಭಿವೃದ್ಧಿ ಪಡಿಸುವುದಕ್ಕಿರುವ ಒಂದು ದಾರಿ. ನಾಳಿನ ಅತ್ಯುತ್ತಮ ಪತ್ರಕರ್ತರ ಸೃಷ್ಟಿಗೆ ಇಂತಹ ಪ್ರಾಯೋಗಿಕ ಅನುಭವಗಳು ಸಹಾಯ ಮಾಡುತ್ತವೆ. ಮಾಧ್ಯಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕಾರ್ಯಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಬೆಂಗಳೂರಿನ ಎಸ್. ವ್ಯಾಸ ಸಂಸ್ಥೆಯ ನಿವೃತ್ತ ಡೀನ್ ಡಾ.ಜಿ.ಎನ್. ಭಟ್ ಹೇಳಿದರು. ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ...
ಪುತ್ತೂರು

ಮನೆಯಲ್ಲಿ ಶುರುವಾದ ಜವಾಬ್ದಾರಿಯು ಸಾಮಾಜಿಕ ಜವಬ್ದಾರಿಯನ್ನು ನಿಭಾಯಿಸುವುದನ್ನು ತಿಳಿಸುತ್ತದೆ; ವಿದ್ಯಾ ಎಸ್.-ಕಹಳೆ ನ್ಯೂಸ್

ಪುತ್ತೂರು : ಸಮಾಜದ ದೃಷ್ಟಿಯಲ್ಲಿ ಹೆಣ್ಣು ಗಂಡು ಸಮಾನವೆಂದರೂ ಹೆಣ್ಣಿಗೆ ಜವಬ್ದಾರಿಯು ತುಸು ಜಾಸ್ತಿಯಾಗಿರುತ್ತದೆ. ಆದುದರಿಂದ ಹೆಣ್ಣು ಜವಬ್ದಾರಿಯನ್ನು ಹೇರಿದಾಗ ಅದನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎಂಬುದನ್ನು ಅರ್ಥೈಯಿಸಿಕೊಳ್ಳಬೇಕು. ಮನೆಯಲ್ಲಿ ಶುರುವಾದ ಜವಾಬ್ದಾರಿಯು ಸಮಾಜದಲ್ಲಿ, ಸಾಮಾಜಿಕ ಜವಬ್ದಾರಿಯನ್ನು ನಿಭಾಯಿಸುವುದನ್ನು ತಿಳಿಸುತ್ತದೆ ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಎಸ್. ಹೇಳಿದರು. ಅವರು ಕಾಲೇಜಿನ ಮಹಿಳಾ ಘಟಕ ಮತ್ತು ವ್ಯವಹಾರ ಆಡಳಿತ ವಿಭಾಗದಿಂದ ಆಯೋಜಿನ ಮಹಿಳೆ ಮತ್ತು...
ಪುತ್ತೂರು

ಸತತ ಪರಿಶ್ರಮ ಮತ್ತು ಸಂಸ್ಕಾರದಿಂದ ಕೂಡಿದ ಜೀವನ ನಮ್ಮದಾಗಿರಬೇಕು; ರಾಜ್ ಮನೋಹರ್-ಕಹಳೆ ನ್ಯೂಸ್

ಪುತ್ತೂರು : ವಿದ್ಯಾಥಿಗಳಿಗೆ ಸಣ್ಣ ವಯಸ್ಸಿನಲ್ಲಿರುವಾಗ ಶಿಕ್ಷಣಕ್ಕಿಂತ ಇತರ ವಿಷಯಗಳಲ್ಲೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ. ಯುವಕರಿಗೆ ಉತ್ತಮ ಜ್ಞಾನದ ಜೊತೆಗೆ ಶ್ರದ್ಧೆ, ಸಹನೆ, ನಡತೆಯಿಂದ ಕೂಡಿದ ಜೀವನ ಅತೀ ಮುಖ್ಯವಾಗಿರುತ್ತದೆ. ನಮ್ಮ ದಿನನಿತ್ಯದ ದಿನಚರಿಯಿಂದ ಹಾಗೂ ಶಿಸ್ತಿನಿಂದ ಕೂಡಿದ ಜೀವನದಿಂದ ನಮ್ಮ ಬದುಕು ಸುಗಮವಾಗುತ್ತದೆ ಎಂದು ಯಚ್.ಎಸ್.ಯಮ್. ಹಾಸನದ ಎ1 ಲೈಫ್ ಕೇರ್ ಟೆಕ್ನಾಲಾಜಿ ಸಹಸಂಸ್ಥಾಪಕ ಮತ್ತು ಸಿನಿಯರ್ ಇಂಜಿನಿಯರ್, ರಾಜ್ ಮನೋಹರ್ ಹೇಳಿದರು. ಅವರು ಇಲ್ಲಿನ ವಿವೇಕಾನಂದ ಕಾಲೇಜಿನ...
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ಐಸಿಟಿ ಅಕಾಡೆಮಿಯಿಂದ ‘ಗೆಟ್ ಸೆಟ್ ಗೊ ಇಂಡಕ್ಷನ್’ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು : ವಿವೇಕಾನಂದ ಕಾಲೇಜಿನ ಫ್ಲೇಸ್‍ಮೆಂಟ್ ಮತ್ತು ಟ್ರೈನಿಂಗ್ ಸೆಲ್ ನವರು ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಅನ್ ಲೈನ್ ನಲ್ಲಿ ಆಯೋಜಿಸಿದ ಐಸಿಟಿ ಅಕಾಡೆಮಿಯ ‘ಗೆಟ್ ಸೆಟ್ ಗೊ ಇಂಡಕ್ಷನ್’ ಕಾರ್ಯಕ್ರಮ ಶನಿವಾರ ನಡೆಯಿತು. ಟಾಟಾ ಸಲಹಾ ಸೇವೆಯ ಮಾನವ ಸಂಪನ್ಮೂಲ ಅಧಿಕಾರಿ ವಾಸುದೇವನ್ ಆರ್. ಮಾತನಾಡಿ ಕ್ಷೇತ್ರ ಕಾರ್ಯಗಳಿಗೆ ಹೋದಾಗ ವಿವಿಧ ಕೌಶಲ್ಯಗಳು ಬೇಕಾಗುತ್ತದೆ. ಆದರೆ ಕೆಲವೊಂದು ಸಮಯದಲ್ಲಿ ಕೌಶಲ್ಯಗಳು ಇದ್ದರೂ ಅದನ್ನು ಬಳಕೆ ಮಾಡುವ ಶೈಲಿ ತಿಳಿದಿರಬೇಕು....
ಬಂಟ್ವಾಳ

ಮಂಗಳೂರಿನಲ್ಲಿ ಇಂದು ದಯಾನಂದ ಕತ್ತಲ್ ಸಾರ್ ಅವರ ಕಾರಿಗೆ ಮೀನಿನ ಲಾರಿ ಡಿಕ್ಕಿ-ಕಹಳೆ ನ್ಯೂಸ್

ಬಂಟ್ವಾಳ : ಮಂಗಳೂರಿನಲ್ಲಿ ಮುಂಜಾನೆ ವೇಳೆ ಲಾರಿ ಮತ್ತು ಕಾರಿನ ನಡುವೆ ಅಪಘಾತ ನಡೆದ ಘಟನೆ ನಡೆದಿದೆ. ಈ ಅಪಘಾತದಲ್ಲಿ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಅವರು ಗಾಯಗೊಂಡಿದ್ದು, ಅವರನ್ನು ಮಂಗಳೂರು ಖಾಸಗಿ ಆಸ್ವತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 5.15 ರ ಸುಮಾರಿಗೆ ನಂತೂರು ಜಂಕ್ಷನ್ ಬಳಿ ಮೀನಿನ ಲಾರಿ ದಯಾನಂದ ಕತ್ತಲ್ ಸಾರ್ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ದಯಾನಂದ ಕತ್ತಲ್ ಅವರು ತಮ್ಮ...
1 805 806 807 808 809 872
Page 807 of 872