ಪಂಜಿಕಲ್ಲು ಗ್ರಾಮದ ಕೋಲ್ದೋಡಿ ನಿವಾಸಿ ಕೇಶವ ಪೂಜಾರಿ ನಾಪತ್ತೆ-ಕಹಳೆ ನ್ಯೂಸ್
ಬಂಟ್ವಾಳ : ವ್ಯಕ್ತಿಯೊಬ್ಬರು ಮದುವೆಗೆ ಹೋಗುವುದಾಗಿ ಹೇಳಿ ಹೋದವರು ಮರಳಿ ಬಾರದೆ ನಾಪತ್ತೆಯಾಗಿದ್ದಾರೆ. ಇವರು ಪಂಜಿಕಲ್ಲು ಗ್ರಾಮದ ಕೋಲ್ದೋಡಿ ನಿವಾಸಿ 36 ವರ್ಷದ ಕೇಶವ ಪೂಜಾರಿ ಎಂದು ತಿಳಿದುಬಂದಿದೆ. ಅವರು ಇಂಟರ್‍ಲಾಕ್ ಕೆಲಸ ಮಾಡಿಕೊಂಡಿದ್ದು, ಜನವರಿ 3ರಂದು ಬೆಳಗ್ಗೆ 10.30ಕ್ಕೆ ಮದುವೆಗೆಂದು ತೆರಳಿದ್ದಾರೆ. ಬಳಿಕ ಮರಳಿ ಮನೆಗೆ ಬಂದಿಲ್ಲ. ಹಾಗಾಗಿ ನೆರೆಕರೆಯವರು, ಸಂಬಂಧಿಕರ ಮನೆಯಲ್ಲಿ ಹುಡುಕಿದರೂ ಅವರು ಪತ್ತೆಯಾಗಿಲ್ಲ. ಈ ಹಿಂದೆಯೂ ಅವರು 3-4 ಬಾರಿ ಇದೇ ರೀತಿ ಮನೆ...







