Tuesday, April 28, 2026

ಪ್ರಾದೇಶಿಕ

ಪುತ್ತೂರು

ಪುತ್ತೂರಿನ ಎಪಿಎಂಸಿ ರಸ್ತೆಯಲ್ಲಿ ಹಲವರಿಗೆ ನಾಯಿ ಕಡಿತ-ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಎಪಿಎಂಸಿ ರಸ್ತೆಯಲ್ಲಿ ಇಂದು ನಾಯಿಯೊಂದು ಸಾರ್ವಜನಿಕರಿಗೆ ಕಚ್ಚಿದ ಘಟನೆ ನಡೆದಿದೆ. ಈ ಘಟನೆ ಆದರ್ಶ ಆಸ್ವತ್ರೆಯ ಬಳಿಯ ಬೀದಿ ನಾಯಿಗಳಿಗೆ ಕಚ್ಚಿದ ನಾಯಿಯೊಂದು ಸಾರ್ವಜನಿಕರಿಗೆ ಕಚ್ಚಿದೆ....
ಕಡಬ

ಕಡಬದ ಕೈಕಂಬದಲ್ಲಿ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆ ಶೌಚಾಲಯದಲ್ಲಿ ಬಂಧಿ-ಕಹಳೆ ನ್ಯೂಸ್

ಕಡಬ : ಕಡಬದ ಕೈಕಂಬದಲ್ಲಿ ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಸಾಕು ನಾಯಿಯ ಜೊತೆ ಮನೆಯ ಶೌಚಾಲಯದಲ್ಲಿ ಬಂಧಿಯಾದ ಘಟನೆ ನಡೆದಿದೆ. ಈ ಘಟನೆ ಸುಬ್ರಹ್ಮಣ್ಯ ಸಮೀಪದ ಕೈಕಂಬ ನಿವಾಸಿ ರೇಗಪ್ಪ ಎಂಬವರ ಮನೆಯ ಸಮೀಪ ಸಾಕು ನಾಯಿಯನ್ನು ಚಿರತೆಯೊಂದು ಅಟ್ಟಿಸಿಕೊಂಡು ಬಂದಿದ್ದು, ಸಾಕುನಾಯಿಯು ಚಿರತೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮನೆಯ ಹೊರಗಿದ್ದ ಶೌಚಾಲಯವನ್ನು ಹೊಕ್ಕಿದ್ದು, ಚಿರತೆಯು ನಾಯಿಯನ್ನು ಹಿಂಬಾಲಿಸಿ ಶೌಚಾಲಯದ ಒಳಗೆ ಬಂದಿದೆ. ಇದನ್ನು ಗಮನಿಸಿದ ಮನೆಯವರು ಹೊರಗಿನಿಂದ...
ಪುತ್ತೂರು

ಪುಸ್ತಕಗಳನ್ನು ಓದುವ ಪರಿಪಾಠ ಮಾಡಿಕೊಳ್ಳುವುದು ಒಳ್ಳೆಯದು; ಡಾ. ಶ್ರೀಧರ್ ಹೆಚ್.ಜಿ-ಕಹಳೆ ನ್ಯೂಸ್

ಪುತ್ತೂರು : ಒಬ್ಬ ಸಾಹಿತ್ಯ ವಿದ್ಯಾರ್ಥಿ ಹಲವು ಪುಸ್ತಕಗಳನ್ನು ಓದುವ ಪರಿಪಾಠ ಮಾಡಿಕೊಳ್ಳಬೇಕು. ಆಗ ಮಾತ್ರ ಆತನಿಗೆ ವಿವಿಧ ರೀತಿಯ ಶೈಲಿ, ಕಥೆಯ ಬೆಳವಣಿಗೆ, ಭಾಷೆ ಪರಿಚಯವಾಗಲು ಸಾಧ್ಯವಾಗುತ್ತದೆ. ಇದರಿಂದ ಆತನ ಬರವಣಿಗೆಯ ಕೌಶಲ್ಯವು ಅಭಿವೃದ್ಧಿ ಹೊಂದುತ್ತದೆ ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಹೆಚ್. ಜಿ ಹೇಳಿದರು. ಅವರು ಇಲ್ಲಿನ ಕನ್ನಡ ಸಂಘ ಮತ್ತು ಕನ್ನಡ ವಿಭಾಗಗಳ ಆಶ್ರಯದಲ್ಲಿ ತೃತೀಯ ಐಚ್ಛಿಕ ಕನ್ನಡದ ವಿದ್ಯಾರ್ಥಿಗಳು...
ಪುತ್ತೂರು

ಪ್ರಕೃತಿಯಲ್ಲಿನ ಹೊಸತನವನ್ನು ಹೊರಹಾಕಬೇಕು ; ದೀಪಕ್ ನಾಯ್ಕ್-ಕಹಳೆ ನ್ಯೂಸ್

ಪುತ್ತೂರು : ಪ್ರತಿದಿನ ನಾವು ಪ್ರಕೃತಿಯನ್ನು ಅನ್ವೇಷಿಸುತ್ತ ಹೋದಾಗೆ ಹಲವು ವಿಷಯಗಳು ಸಿಗುತ್ತದೆ, ಅದರಿಂದ ಸಂಶೋಧನೆಯು ಅಭಿವೃದ್ಧಿ ಗೊಳ್ಳುವುದರಲ್ಲಿ ಸಂಶಯವಿಲ್ಲ. ಹೊಸದಾಗಿ ಏನಾದರೂ ಕಂಡಾಗ ಅದರ ಬಗ್ಗೆ ಮಾಹಿತಿ ಕಲೆ ಹಾಕಬೇಕು. ಯಾವುದೇ ವಸ್ತುವನ್ನು ವೀಕ್ಷಿಸಿದ ಕೂಡಲೇ ಆದನ್ನು ನೋಡಿದ ಬೇರೊಬ್ಬ ರಲ್ಲಿ ಕೇಳಿ ಹೆಚ್ಚಿನ ಅನುಭವದ ಮಾತುಗಳು ಪಡೆಯುವುದು ಸೂಕ್ತ. ಸಂಶೋಧನೆಗೆ 'ನೆಚರ್ ಕ್ಲಬ್' ಉನ್ನತ ರೀತಿಯಲ್ಲಿ ಸಹಾಯ ಮಾಡುತ್ತದೆ, ಇದರಲ್ಲಿ ಸ್ಪಷ್ಟವಾಗಿ ಸಂಶೋಧಿಸಿ ಅರಿವು ಮೂಡಿಸುವ ಕಾರ್ಯಕ್ರಮವನ್ನು...
ಪುತ್ತೂರು

ನಾವು ಅಂದುಕೊಂಡಂತೆ ಜೀವನ ಎಂದಿಗೂ ಇರುವುದಿಲ್ಲ; ಡಾ. ಗೀತಾಕುಮಾರಿ ಟಿ.-ಕಹಳೆ ನ್ಯೂಸ್

ಪುತ್ತೂರು : ಜೀವನವೆಂಬುದು ಅನಿರೀಕ್ಷಿತಗಳನ್ನು ಹೊಂದಿರುವ ಸರಮಾಲೆ, ನಾವು ಅಂದುಕೊಂಡಂತೆ ಎಂದಿಗೂ ಜೀವನ ಇರುವುದಿಲ್ಲ. ಹಾಗೆಯೇ ಕೊರೊನ ಎಂಬ ಮಹಾಮಾರಿ ಬಂದು ಎಲ್ಲ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಯೊಂದಿಗೆ ಸಂಕಷ್ಟವನ್ನು ತರಿಸಿದೆ. ಈ ರೀತಿಯಲ್ಲಿ ಸಮಸ್ಯೆಗಳು ಅನಿರೀಕ್ಷಿತವಾಗಿ ಬಂದರೂ ಆ ಸವಾಲುಗಳನ್ನು ಎದುರಿಸುವ ಪ್ರಯತ್ನ ಮಾಡಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾಕುಮಾರಿ ಟಿ. ಹೇಳಿದರು. ಅವರು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ತೃತೀಯ ಪತ್ರಿಕೋದ್ಯಮ...
ಬೆಳ್ತಂಗಡಿ

ಬೆಳ್ತಂಗಡಿಯ ಕುಕ್ಕೇಡಿ ಎಂಬಲ್ಲಿ ನೀರಿನಲ್ಲಿ ಮುಳುಗಿ ಯುವಕ ಸಾವು-ಕಹಳೆ ನ್ಯೂಸ್

ಬೆಳ್ತಂಗಡಿ : ಮಾಲಾಡಿ ಬಳಿಯ ಕುಕ್ಕೇಡಿ ಎಂಬಲ್ಲಿ ನದಿಯಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ಮಾಲಾಡಿ ಗ್ರಾಮದ ನಿವಾಸಿ 26 ವರ್ಷದ ರವೀಂದ್ರ ಎಂದು ಗುರುತಿಸಲಾಗಿದೆ. ಈ ಘಟನೆ ಕುಕ್ಕೇಡಿಯ ಉಮಿಲಾಯಿ ಡ್ಯಾಮ್ ಬಳಿ ನದಿ ನೀರಿನಲ್ಲಿ ಯುವಕನು ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ....
ಕಡಬ

ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೆನ್ನಪ್ಪ ಅವರು ನಾಪತ್ತೆ-ಕಹಳೆ ನ್ಯೂಸ್

ಕಡಬ : ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟನ ಅಂಚೆಯ ತಿಮ್ಮಡ್ಕ್ ಮನೆಯ ನಿವಾಸಿ 75 ವರ್ಷದ ಚೆನ್ನಪ್ಪ ಅವರು ಕಾಣೆಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣಾಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ....
ಕುಂದಾಪುರ

ಕುಂದಾಪುರದ ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ನಾರಾಯಣ ಗಾಣಿಗ ನಿಧನ-ಕಹಳೆ ನ್ಯೂಸ್

ಕುಂದಾಪುರ : ಹಿರಿಯ ಯಕ್ಷಗಾನದ ಸ್ತ್ರೀವೇಷಧಾರಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಂಡ್ಸೆ ನಾರಾಯಣ ಗಾಣಿಗ ಅವರು ಸೋಮವಾರ ನಿಧನರಾಗಿದ್ದಾರೆ. ಇವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಕೊಲ್ಲೂರಿನ ವಂಡ್ಸೆ ಗ್ರಾಮದವರಾಗಿದ್ದು, ಸುಮಾರು 28 ವಷರ್Àಗಳ ಕಾಲ ಅನೇಕ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಇನ್ನು ಚಿತ್ರಾಂಗದೆ, ದ್ರೌಪದಿ, ಶಶಿಪ್ರಭೆ, ಮಂಡೋದರಿ, ಮೀನಾಕ್ಷಿ, ತಾರೆ ಮುಂತಾದ ಪಾತ್ರಗಳಲ್ಲಿ ಮಿಂಚಿರುವ ನಾರಾಯಣ ಗಾಣಿಗ ಅವರಿಗೆ 2008ನೇ ಸಾಲಿನಲ್ಲಿ ಯಕ್ಷಗಾನ ಅಕಾಡೆಮಿ ಪುರಸ್ಕಾರ, 2013ರಲ್ಲಿ ಮಕ್ಕಳ...
1 808 809 810 811 812 872
Page 810 of 872