ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಪಾಲ್ಗೊಂಡ ಎನ್‍ಸಿಸಿ ಕೆಡೆಟ್ ರಕ್ಷಾ ಅಂಚನ್ ಗೆ ಅಭಿನಂದನೆ –ಕಹಳೆ ನ್ಯೂಸ್
ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನ ವಿಜ್ಞಾನ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿ ಸೀನಿಯರ್ ಕೆಡೆಟ್ ಅಂಡರ್ ಆಫೀಸರ್ ರಕ್ಷಾ ಅಂಚನ್ ಇವರು ನವದೆಹಲಿಯಲ್ಲಿ ಜನವರಿ 26ರಂದು ಜರಗಿದ ಪ್ರತಿಷ್ಠಿತ ಗಣರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ಪಾಲ್ಗೊಂಡು, ಕಾಲೇಜಿಗೆ ಆಗಮಿಸುವ ಸಂದರ್ಭದಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ, ಅಭಿನಂದನೆ ಸಲ್ಲಿಸುವ ಕಾರ್ಯಕ್ರಮವನ್ನು ಫೆಬ್ರವರಿ 10 ರಂದು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಸಂಚಾಲಕರಾದ ವಂ. ಲಾರೆನ್ಸ್ ಮಸ್ಕರೇನಸ್ ಇವರು ಅಭಿನಂದನೆಯನ್ನು ಸಲ್ಲಿಸಿ, ಶುಭ ಹಾರೈಸಿದರು. ಈ...







