ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಸತಿ ನಿಲಯದಲ್ಲಿ ಸಮಾಲೋಚನಾ ಸಭೆ-ಕಹಳೆ ನ್ಯೂಸ್
ಪುತ್ತೂರು : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಸತಿ ನಿಲಯದ ಆಡಳಿತ ಸಮಿತಿ ಮತ್ತು ಕಾಲೇಜಿನ ಉಪನ್ಯಾಸಕರ ಜೊತೆ ಸಮಾಲೋಚನಾ ಸಭೆಯು ನಡೆಯಿತು. ವಸತಿ ನಿಲಯದ ಕಾರ್ಯದರ್ಶಿ ಅಚ್ಯುತ ನಾಯಕ್ ಮಾತನಾಡಿ ಆಪ್ತ ಸಮಾಲೋಚನೆಯ ಮೂಲಕ ಸ್ನೇಹ ಸಂಬಂಧ ಬೆಳೆಸಿ ಮನೆಯ ವಾತಾವರಣ ಮೂಡಿಸಿದಾಗ ಮಕ್ಕಳು ಪ್ರೇರೇಪಿತರಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ರಾಜ್ಯದ ವಿವಿಧಡೆಯಿಂದ ವಸತಿ ನಿಲಯದಲ್ಲಿ ನೆಲೆಸಿರುವ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಲು ವಿವೇಕಾನಂದ ವಿದ್ಯಾ ಸಂಸ್ಥೆಯ...







