ಸಾಹಿತ್ಯ ಮಂಟಪವೆನ್ನುವುದು ಹೊಸತನ ತರುವ ಕಾರ್ಯಕ್ರಮ ; ಡಾ. ಮನಮೋಹನ ಎಂ.-ಕಹಳೆ ನ್ಯೂಸ್
ಪುತ್ತೂರು : ಬದುಕಿನಲ್ಲಿ ಸಾಹಸ ಪ್ರವೃತ್ತಿಯನ್ನು ಬೆಳೆಸಿಕೊಂಡು, ಹೊಸ ಪ್ರಯತ್ನ ಮಾಡಬೇಕು. ಆಗ ನಮ್ಮ ಕೆಲಸ ಪರಿಪೂರ್ಣವಾಗುತ್ತದೆ. ನಾವು ಮುಂದೆ ಏನಾಗಬೇಕು ಎಂದು ನಮಗೆ ತಿಳಿದಿರಬೇಕು. ಅದು ನಮ್ಮ ಗೌರವವನ್ನು ಎತ್ತಿ ತೋರುತ್ತದೆ. ನಾಳೆಯ ಚಿಂತೆ ಬಿಟ್ಟು ಇಂದಿನ ಕೆಲಸದಲ್ಲಿ ತೊಡಗುವುದು ಉತ್ತಮ. ಎಂದು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಡಾ. ಮನಮೋಹನ ಎಂ ಹೇಳಿದರು. ಕಾಲೇಜಿನ ಐಕ್ಯೂಎಸಿ, ಕನ್ನಡ ವಿಭಾಗ ಮತ್ತು ಕನ್ನಡ ಸಂಘದ ಸಂಯುಕ್ತ ಆಶ್ರಯದಲ್ಲಿ...







