Monday, May 4, 2026

ಪ್ರಾದೇಶಿಕ

ಬೆಳ್ತಂಗಡಿ

ಬೆಳ್ತಂಗಡಿ ತಾಲೂಕಿನ ಮುಂಡಾಜೆಯಲ್ಲಿ ಕಾಡಾನೆ ದಾಳಿ ಕೃಷಿ ತೋಟಗಳಿಗೆ ಹಾನಿ-ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ದೂಂಬೆಟ್ಟು ಕಜೆ ಪ್ರದೇಶದಲ್ಲಿ ಗುರುವಾರ ಕೃಷಿ ತೋಟಗಳಿಗೆ ಕಾಡಾನೆ ದಾಳಿ ನಡೆಸಿ, ಬಾಳೆ, ಅಡಿಕೆ ಸಸಿ ಸಹಿತ ಇತರ ಕೃಷಿಯನ್ನು ಹಾಳು ಮಾಡಿದೆ. ರತ್ನಾ, ಬಾಬು ಗೌಡ, ಜಿನ್ನಮ್ಮ ಮೊದಲಾದವರ ಅಡಿಕೆ, ತೆಂಗು ಮತ್ತು ಬಾಳೆ ಕೃಷಿಗೆ ಹಾನಿಯಾಗಿದೆ. ಆನೆ ದಾಳಿ ನಡೆಸಿರುವುದು ಗಮನಕ್ಕೆ ಬಂದಂತೆ ಅಕ್ಕಪಕ್ಕದ ಮನೆಗಳಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳೀಯರು ದೊಂದಿ ಹಿಡಿದು, ಪಟಾಕಿ ಸಿಡಿಸಿ ಆನೆಯನ್ನು...
ಬಂಟ್ವಾಳ

ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಮಹಾ ರಥೋತ್ಸವ-ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಪುರಾಣ ಪ್ರಸಿದ್ಧ ಅರಳ ಮತ್ತು ಕೊಯಿಲ ಗ್ರಾಮದ ಗ್ರಾಮದೇವತೆ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ರಾತ್ರಿ ಮಹಾ ರಥೋತ್ಸವ ನಡೆಯಿತು. ಕಳೆದ ಭಾನುವಾರ ಬೆಳಿಗ್ಗೆ ಧ್ವಜಾರೋಹಣ ಮೂಲಕ ಜಾತ್ರೆ ಆರಂಭಗೊಂಡು, ನಡುಬಲಿ ಉತ್ಸವ, ಚಂದ್ರ ಮಂಡಲೋತ್ಸವ, ಯಕ್ಷಗಾನ ಬಯಲಾಟ, ಭಜನೆ, ರಂಗಪೂಜೆ, ಚಂಡಿಕಾಯಾಗ, ಧೂಮಾತಿ ದೈವದ ನೇಮೋತ್ಸವ ಸಹಿತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗುರುವಾರ...
ಪುತ್ತೂರು

ಪ್ರತಿಭೆಗೆಳನ್ನು ಬೆಳೆಸಲು ವಿದ್ಯಾರ್ಥಿಗಳು ಸಂಘಗಳಲ್ಲಿ ತೊಡಗಿಸಿಕೊಳ್ಳಬೇಕು; ಹರೀಶ್ ಶಾಸ್ತ್ರಿ-ಕಹಳೆ ನ್ಯೂಸ್

ಪುತ್ತೂರು : ಕಾಲೇಜಿನಲ್ಲಿರುವ ಸಂಘಗಳು ವಿದ್ಯಾರ್ಥಿಗಳ ಜೀವನವನ್ನು ರೂಪಿಸುವ ಒಂದು ಮಾರ್ಗವಾಗಿದೆ. ಹಾಗಾಗಿ, ವಿದ್ಯಾರ್ಥಿಗಳು ಸಂಘಗಳಲ್ಲಿ ಸೇರಿಕೊಂಡು, ತಮ್ಮಲ್ಲಿರುವ ಪ್ರತಿಭೆಯನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಅವರ ಶಕ್ತಿ, ಸೋಲು ಮತ್ತು ಪ್ರತಿಭೆಯ ಬಗ್ಗೆ ತಿಳಿಯುತ್ತದೆ ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಭೌತಶಾಸ್ತ್ರದ ಮುಖ್ಯಸ್ಥ ಹರೀಶ ಶಾಸ್ತ್ರಿ ಹೇಳಿದರು. ಇಲ್ಲಿನ ವಿವೇಕಾನಂದ ಪದವಿ ಕಾಲೇಜಿನ ಐಕ್ಯುಎಸಿ ಘಟಕ ಹಾಗೂ ವಿಜ್ಞಾನ ಸಂಘದ ಆಶ್ರಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿಜ್ಞಾನ ಸಂಘವನ್ನು ಉದ್ಘಾಟಿಸಿ,...
ಪುತ್ತೂರು

ವಿವೇಕಾನಂದ ಸ್ನಾತಕೋತ್ತರ ಕೇಂದ್ರದಲ್ಲಿ ಪತ್ರಕರ್ತ ಮೇಷ್ಟ್ರು ಕಾರ್ಯಕ್ರಮ, ಪತ್ರಿಕೋದ್ಯಮದಲ್ಲಿ ವಿಪುಲವಾದ ಅವಕಾಶಗಳಿವೆ; ಗಂಗಾಧರ ಕಲ್ಲಪಳ್ಳಿ-ಕಹಳೆ ನ್ಯೂಸ್

ಪುತೂರು : ಪತ್ರಿಕೋದ್ಯಮ ಎನ್ನುವುದು ಸಾಗರವಿದ್ದಂತೆ. ಕಲಿಯಲು ತುಂಬಾ ವಿಷಯವಿದೆ. ಪತ್ರಕರ್ತ ಅಭ್ಯಾಸ ಮಾಡಿದಷ್ಟು ಪತ್ರಿಕೋದ್ಯಮದಲ್ಲಿ ಪಕ್ವತೆಯನ್ನು ಗಳಿಸಲು ಸಾಧ್ಯ. ಪತ್ರಿಕೋದ್ಯಮ ಪಲಾಪೇಕ್ಷೆ ಇಲ್ಲದೇ ಕಾರ್ಯ ಮಾಡುತ್ತಿತ್ತು. ತಂತ್ರಜ್ಞಾನ ಯುಗದಿಂದಾಗಿ ಪತ್ರಿಕೋದ್ಯಮದಲ್ಲಿ ಅಗಾಧ ಬದಲಾವಣೆಯಾಗಿದೆ ಎಂದು ಪತ್ರಕರ್ತ ಗಂಗಾಧರ ಕಲ್ಲಪಳ್ಳಿ ಹೇಳೀದರು. ಇಲ್ಲಿನ ವಿವೇಕಾನಂದ ಕಾಲೇಜಿನ ಐಕ್ಯೂಎಸಿ ಘಟಕ ಹಾಗು ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ ‘ಪತ್ರಕರ್ತ ಮೇಷ್ಟ್ರು’ ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಆಗಮಿಸಿ...
ಪುತ್ತೂರು

ಅಂಬಿಕಾ ಪದವಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘ ಉದ್ಘಾಟನೆ,ಜ್ಞಾನ ಪಸರಿಸುವಿಕೆಯಲ್ಲಿ ತತ್ವಶಾಸ್ತ್ರದ ಪಾತ್ರ ಮಹತ್ವದ್ದು ; ರಾಜಶ್ರೀ ನಟ್ಟೋಜ-ಕಹಳೆ ನ್ಯೂಸ್

ಪುತ್ತೂರು : ಜ್ಞಾನ ಪಸರಿಸುವಿಕೆಯ ಪ್ರಕ್ರಿಯೆಯಲ್ಲಿ ತತ್ವಶಾಸ್ತ್ರದ ಅಧ್ಯಯನ ಅತ್ಯಂತ ಅಗತ್ಯವಾದದ್ದು. ತತ್ವಶಾಸ್ತ್ರದ ಹಿನ್ನೆಲೆಯಿದ್ದಾಗ ಉತ್ತಮ ವ್ಯಕ್ತಿತ್ವವೊಂದರ ರೂಪುಗೊಳ್ಳುವಿಕೆ ಸುಲಭ ಸಾಧ್ಯವೆನಿಸುತ್ತದೆ. ಉತ್ತಮ ಸಮಾಜದ ನಿರ್ಮಾಣದಲ್ಲಿ ತತ್ವಶಾಸ್ತ್ರ ಪ್ರಮುಖ ಪಾತ್ರ ವಹಿಸಬಲ್ಲುದು ಎಂದು ಅಂಬಿಕಾ ಸಮೂಹ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಹೇಳಿದರು. ಅವರು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಬುಧವಾರ ಮಾತನಾಡಿದರು. ಇಂದು...
ಸುಬ್ರಹ್ಮಣ್ಯ

ಕಡಬ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಸಮ್ಯಕ್ತ್ ಜೈನ್ ಆಯ್ಕೆ-ಕಹಳೆ ನ್ಯೂಸ್

ಸುಬ್ರಹ್ಮಣ್ಯ : ಕಡಬ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನವು ಫೆಬ್ರವರಿ 24 ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆದಿದ್ದು, ಈ ಸಮ್ಮೇಳನದ ಕವಿಗೋಷ್ಠಿಗಾಗಿ ನೂಜಿಬಾಳ್ತಿಲದ ಯುವ ಸಾಹಿತಿ ಸಮ್ಯಕ್ತ್ ಜೈನ್ ರವರು ಆಯ್ಕೆಯಾಗಿದ್ದರು. ಸಾಫಿಯೆನ್ಶಿಯಾ ಬೆಥನಿ ಕಾಲೇಜು ನೆಲ್ಯಾಡಿಯಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿರುವ ಇವರು ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗು ಮಂಜುಳಾ ದಂಪತಿಯ ಪುತ್ರರಾಗಿದ್ದಾರೆ. ಎಳೆ ವಯಸ್ಸಿನಲ್ಲಿಯೇ ಮೂರು ಸಾಹಿತ್ಯ ಕೃತಿ ಬರೆದು ಬಿಡುಗಡೆಗೊಳಿಸಿ ಸಾಹಿತ್ಯ...
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ‘ವಾಯ್ಸ್ ಆಕ್ಟಿಂಗ್’ ಕಾರ್ಯಾಗಾರ, ವೇದಿಕೆ ಯಾವುದೇ ಆಗಿರಲಿ, ಮಾತನಾಡುವಾಗ ಜವಾಬ್ದಾರಿಯುತನಾಗಿರಬೇಕು; ಬಡೆಕ್ಕಿಲ ಪ್ರದೀಪ್-ಕಹಳೆ ನ್ಯೂಸ್

ಪುತ್ತೂರು : ಮಾತಿನ, ಧ್ವನಿಯ ಬೆಲೆ ವೇದಿಕೆ ಆಧಾರದ ಮೇಲೆ ಬದಲಾಗುತ್ತದೆ. ಪ್ರತಿಯೊಂದು ಕ್ಷೇತ್ರದಲ್ಲೂ ಧ್ವನಿಯನ್ನು ಬಳಸಿಕೊಂಡು ಜನರನ್ನು ಆಕರ್ಷಿಸುತ್ತಾರೆ. ಹಿನ್ನಲೆ ಧ್ವನಿ, ಸಮೂಹ ಮಾಧ್ಯಮದ ಅವಿಭಾಜ್ಯ ಅಂಗವಾಗಿದೆ. ಹಿನ್ನಲೆ ಧ್ವನಿ ಕಲಾವಿದರಿಗೆ ಧ್ವನಿಯ ಜೊತೆಗೆ ಭಾಷಾ ಜ್ಞಾನ, ಭಾಷ ಸ್ಪಷ್ಟತೆಯ ಆವಶ್ಯಕವಾಗಿದೆ. ಹಿನ್ನಲೆ ಧ್ವನಿ ಅನ್ನುವುದು ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಚಾಲನೆಯಲ್ಲಿದೆ. ವೇದಿಕೆ ಯಾವುದೇ ಆಗಿರಲಿ, ಮಾತನಾಡುವಾಗ ನಾವು ಜವಾಬ್ದಾರಿಯುತನಾಗಿರಬೇಕು ಎಂದು ಹಿನ್ನಲೆ ಧ್ವನಿ ಕಲಾವಿದ, ಪತ್ರಕರ್ತ ಬಡೆಕ್ಕಿಲ...
ಮೂಡಬಿದಿರೆ

ಹಾವುಗಳು ಉಪದ್ರವಿಯಲ್ಲ, ಪರಿಸರ ಸ್ನೇಹಿಗಳು; ಅರಣ್ಯ ಸಹ ಸಂರಕ್ಷಣಾಧಿಕಾರಿ ಪ್ರಶಾಂತ್ -ಕಹಳೆ ನ್ಯೂಸ್

ಮೂಡಬಿದಿರೆ : ವಿಷಕಾರಿ ಹಾವುಗಳಿಂದ ಯಾವುದೇ ಅಪಾಯವಿಲ್ಲ. ಅವುಗಳು ತಮ್ಮ ಆತ್ಮ ರಕ್ಷಣೆಗಾಗಿ ಧಾಳಿ ಮಾಡುತ್ತಾವೆಯೇ ಹೊರತು ಯಾವುದೇ ಪೂರ್ವದ್ವೇಷಗಳಿಂದಲ್ಲ. ಹಾವುಗಳ ಬಗ್ಗೆ ನಮಗಿರುವ ತಪ್ಪು ಮಾಹಿತಿಗಳನ್ನು ನಮ್ಮ ಮನಸ್ಸಿನಿಂದ ಅಳಿಸಿ ಹಾಕಬೇಕು ಎಂದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಕಲ್ಲಬೆಟ್ಟು, ಮೂಡಬಿದಿರೆಯಲ್ಲಿ ನಡೆದ ಹಾವು-ನಾವು ಕಾರ್ಯಕ್ರಮದಲ್ಲಿ ಅರಣ್ಯ ಸಹ ಸಂರಕ್ಷಣಾಧಿಕಾರಿಗಳಾದ ಪ್ರಶಾಂತ್ ರವರು ಹೇಳಿದರು. ಸರಕಾರೇತರ ಸಂಸ್ಥೆಯ ಸದಸ್ಯರುಗಳಾದ ಉರಗ ತಜ್ಞ ವಿಪಿನ್ ರಾಯ್ ಹಾಗೂ...
1 792 793 794 795 796 873
Page 794 of 873