Recent Posts

Saturday, May 9, 2026

ಪ್ರಾದೇಶಿಕ

ಬಂಟ್ವಾಳ

ವಿಟ್ಲದ ಪಡೂರು ಗ್ರಾಮದ ಕೊಡಂಗಾಯಿಯಲ್ಲಿ ಡ್ರಗ್ ಪೆಡ್ಲರ್ ಬಂಧನ; 2 ಕೆ.ಜಿ ಗಾಂಜಾ ವಶ-ಕಹಳೆ ನ್ಯೂಸ್

ಬಂಟ್ವಾಳ : ವಿಟ್ಲದ ಪಡೂರು ಗ್ರಾಮದ ಕೊಡಂಗಾಯಿಯಲ್ಲಿ ಏ. 6ರಂದು ರಾತ್ರಿ 7.30ಕ್ಕೆ ಪೊಲೀಸರು ವಾಹನ ತಪಾಸಣೆ ನಡೆಸುವ ವೇಳೆ ಕಾರಿನಲ್ಲಿ ಸಾಗಿಸುತ್ತಿದ್ದ ಅಕ್ರಮ ಗಾಂಜಾವನ್ನು ಪೊಲೀಸರು ಪತ್ತೆಹಚ್ಚಿ, ಸೊತ್ತುಗಳ ಸಹಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಮಂಜೇಶ್ವರ ತಾಲೂಕಿನ್ ಅಪಾತೂರು ಕಜೆ ನಿವಾಸಿ ನಾಸಿರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯ ನ್ಯಾಯಾಂಗ ಬಂಧನದಲ್ಲಿ ವಿಧಿಸಲಾಗಿದ್ದು, ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಬಾಕ್ರಬೈಲಿನ ಬಾರಿಕ್ ಮತ್ತು ಪಾತೂರಿನ...
ಬೆಳ್ತಂಗಡಿ

ಬೆಳ್ತಂಗಡಿ ಇಲ್ಲಿನ ಹೊಸಂಗಡಿ ವ್ಯಾಪ್ತಿಯಲ್ಲಿ ಗಾಳಿ-ಗುಡುಗು ಸಹಿತ ಭಾರಿ ಮಳೆ ; ಅಪಾರ ಪ್ರಮಾಣದ ಹಾನಿ-ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿ ಇಲ್ಲಿನ ಹೊಸಂಗಡಿ ಹಾಗೂ ಕಾಶಿಪಟ್ಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಂಗಡಿ, ಬಡಕೋಡಿ, ಕಾಶಿಪಟ್ಣ, ಪೆರಾಡಿ ವ್ಯಾಪ್ತಿಯಲ್ಲಿ ಬುಧವಾರ ಸಾಯಂಕಾಲ ಗಾಳಿ-ಗುಡುಗು ಸಹಿತ ಭಾರಿ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಕಾಶಿಪಟ್ಣ ಗ್ರಾಮದಲ್ಲಿ 30ಕ್ಕಿಂತ ಅಧಿಕ ಮನೆಯ ತೋಟಗಳಿಗೆ ಹಾನಿಯಾಗಿದ್ದು, ಎರಡು ಟ್ರಾನ್ಸ್‍ಫಾರ್ಮರ್ ಸೇರಿ 20ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ಮೆಸ್ಕಾಂ ಗೆ ಅಪಾರ ನಷ್ಟ ಸಂಭವಿಸಿದೆ. ಸುಮಾರು 20ಕ್ಕೂ ಅಧಿಕ ಮನೆಗಳ...
ಬೆಳ್ತಂಗಡಿ

ಬೆಳ್ತಂಗಡಿಯ ಲಾಯಿಲದಲ್ಲಿ ಮನೆ ಬಿಟ್ಟು ಬರಲು ಒಪ್ಪದ ಪ್ರೇಯಸಿ ; ಮನೆಗೆ ನುಗ್ಗಿ ಪ್ರೇಯಸಿಗೆ ಚೂರಿಯಿಂದ ಇರಿದ 22 ವರ್ಷದ ಯುವಕ-ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳ್ತಂಗಡಿಯ ಲಾಯಿಲ ಸಮೀಪ ಏ.6ರಂದು ಮಂಗಳವಾರ ರಾತ್ರಿ ಮದುವೆಯಾಗಲು ಮನೆ ಬಿಟ್ಟು ಬರಲು ಒಪ್ಪದ ಪ್ರೇಯಸಿಯ ಮನೆಗೆ ನುಗ್ಗಿದ ಯುವಕನೋರ್ವ ಸಿಟ್ಟಿಗೆದ್ದು ಆಕೆಗೆ ಚೂರಿ ಇರಿದ ಘಟನೆ ನಡೆದಿದೆ. ಚೂರಿ ಇರಿದ ಯುವಕ ಪುಂಜಾಲಕಟ್ಟೆಯ ನಿವಾಸಿ 22ವರ್ಷದ ಶಮೀರ್ ಎಂದು ತಿಳಿದುಬಂದಿದೆ. ಈತ ತನ್ನದೇ ಸಮುದಾಯದ ಲಾಯಿಲ ಗ್ರಾಮದ ನಿವಾಸಿ 21 ವರ್ಷದ ಯುವತಿಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು ಮದುವೆಯಾಗಲು ಮನೆಬಿಟ್ಟು ಬರಲು ಒತ್ತಾಯಿಸುತ್ತಿದ್ದ. ಆದರೆ...
ಪುತ್ತೂರು

ಬೆಳ್ತಂಗಡಿ ಮತ್ತು ಪುತ್ತೂರು ಮುಳಿಯದಲ್ಲಿ ಎಪ್ರಿಲ್ 9 ರಿಂದ ಮೇ 9ರವರೆಗೆ ನಡೆಯಲಿದೆ ಮುಳಿಯೋತ್ಸವ-ಕಹಳೆ ನ್ಯೂಸ್

ಪುತ್ತೂರು : ಇಲ್ಲಿನ ಸುಪ್ರಸಿದ್ಧ ಚಿನ್ನದ ಮಳಿಗೆ ಮುಳಿಯ ಜ್ಯುವೆಲ್ಸ್‍ನಲ್ಲಿ ಚಿನ್ನ, ಬೆಳ್ಳಿ ಮತ್ತು ವಜ್ರಾಭರಣಗಳ ಅನೂಹ್ಯ ಸಂಭ್ರಮ ಮುಳಿಯೋತ್ಸವವು ಎಪ್ರಿಲ್ 9 ರಿಂದ ಮೇ 9ರವರೆಗೆ ನಡೆಯಲಿದೆ. ಪ್ರತೀ ವರ್ಷ ಎಪ್ರಿಲ್ ತಿಂಗಳಲ್ಲಿ ಮುಳಿಯ ಜ್ಯುವೆಲ್ಸ್ ನಲ್ಲಿ ಚಿನ್ನೋತ್ಸವ ಕಾರ್ಯಕ್ರಮವು ನಡೆಯಲ್ಲಿದ್ದು, ಈ ಬಾರಿ ಇದನ್ನು ವಿಭಿನ್ನವಾಗಿ ಮುಳಿಯೋತ್ಸವವಾಗಿ ಆಚರಿಸುತ್ತಿದ್ದೇವೆ. ಈ ಬಾರಿಯ ಮುಳಿಯೋತ್ಸವದಲ್ಲಿ ಗ್ರಾಹಕರಿಗೆ ವಿಶೇಷ ಆಭರಣಗಳ ಅನನ್ಯ ಸಂಗ್ರಹವಿದ್ದು ತಮಗಿಷ್ಟವಾದ ಆಭರಣಗಳ ವಿಪುಲ ಆಯ್ಕೆಗೆ ಅವಕಾಶವಿರುತ್ತದೆ....
ಬಂಟ್ವಾಳ

ಸಾರಿಗೆ ಸಂಚಾರ ಬಂದ್ ಹಿನ್ನಲೆ ಖಾಸಗಿ ಬಸ್, ಕ್ಯಾಬ್‍ಗಳತ್ತ ಬಂಟ್ವಾಳದ ಜನತೆ- ಕಹಳೆ ನ್ಯೂಸ್

ಬಂಟ್ವಾಳ : ಸಾರಿಗೆ ನೌಕರರ ಮುಷ್ಕರದ ಪರಿಣಾಮ ಕೆಎಸ್‍ಆರ್‍ಟಿಸಿ ಬಸ್ಸುಗಳ ಓಡಾಟ ಸ್ಥಗಿತಗೊಂಡಿದ್ದು, ಜನಸಮಾನ್ಯರು ಖಾಸಗಿ ಬಸ್ಸುಗಳು ಮತ್ತು ಇತರ ವಾಹನಗಳ ಮೊರೆಹೋಗಿದ್ದಾರೆ. ಖಾಸಗಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿದೆ. ಹಾಗಾಗಿ ಹೆಚ್ಚಿನ ತೊಂದರೆ ಕಂಡುಬಂದಿಲ್ಲ. ಆದರೆ ಓಡಾಟ ನಡೆಸುವ ಬಸ್ಸುಗಳಲ್ಲಿ ಹೆಚ್ಚಿನ ಜನಸಂಖ್ಯೆ ಕಂಡುಬಂದಿದೆ. ಪುತ್ತೂರು, ವಿಟ್ಲ, ಉಪ್ಪಿನಂಗಡಿ ಭಾಗಕ್ಕೆ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸುಗಳಿದ್ದರೆ, ಬಿ.ಸಿ.ರೋಡಿನಿಂದ ಧರ್ಮಸ್ಥಳ ರಸ್ತೆಯ ಪುಂಜಾಲಕಟ್ಟೆ, ಮಡ್ಯಂತಾರು ಭಾಗಕ್ಕೆ ಕಾರು, ಮ್ಯಾಕ್ಸಿಕ್ಯಾಬ್ ನಂತಹ ವಾಹನಗಳು ಓಡಾಡುತ್ತಿದ್ದು,...
ಪುತ್ತೂರು

ಬಂಟ್ವಾಳ ತಾಲೂಕಿನ ನಿವಾಸಿ ನಾಗಪ್ಪ ರವರ ಪತ್ನಿ ರಾಧ.ಆರ್ ಇವರಿಗೆ ಸ್ವ ಉದ್ಯೋಗ ಮಾಡಲು ನೆರವಿನ ಚೆಕ್ಕನ್ನು ನೀಡಿದ ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ-ಕಹಳೆ ನ್ಯೂಸ್

ಪುತ್ತೂರು : ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಕಲ್ಲಂದಡ್ಕ ನಿವಾಸಿ ನಾಗಪ್ಪ ರವರ ಪತ್ನಿ ರಾಧ .ಆರ್ ಇವರಿಗೆ ಸ್ವ ಉದ್ಯೋಗ ಮಾಡಲು ತಳ್ಳುವ ಕೈಗಾಡಿ ಖರೀದಿಸಲು ಉದ್ಯಮಿ, ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ತನ್ನ ರೈ ಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ದರ್ಬೆಯ ಕಛೇರಿಯಲ್ಲಿ ನೆರವಿನ ಚೆಕ್ಕನ್ನು ನೀಡಿದರು....
ಬಂಟ್ವಾಳ

ಬಿ.ಸಿ.ರೋಡು : ಯುವಕನ ಕೊಲೆಯತ್ನ ಪ್ರಕರಣ , ನೈಜ ಆರೋಪಿಗಳ ಪತ್ತೆಗೆ ಪೋಷಕರ ಆಗ್ರಹ ; ಅಪಪ್ರಚಾರ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಲು ಸಿದ್ಧತೆ –ಕಹಳೆ ನ್ಯೂಸ್

ಬಂಟ್ವಾಳ : ಇಲ್ಲಿನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಅಜ್ಜಿಬೆಟ್ಟು ತಿರುವು ಬಳಿ ಇದೇ 4ರಂದು ರಾತ್ರಿ ಸುಮಾರು 7.30 ಗಂಟೆಗೆ ಅಪರಿಚಿತ ದುಷ್ಕರ್ಮಿಗಳಿಂದ ತಲೆಗೆ ಸೇರಿದಂತೆ ಕೆನ್ನೆ ಮತ್ತು ಕೈಗಳಿಗೆ ಹರಿತವಾದ ಕತ್ತಿಯಿಂದ ಹಲ್ಲೆಗೀಡಾದ ಮನೋಜ್ ಗಾಣಿಗ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಈ ಕೃತ್ಯದ ಹಿಂದಿರುವ ನೈಜ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು ಗಾಯಾಳುವಿನ ತಂದೆ ಭೋಜ ಸಪಲ್ಯ ಬ್ರಹ್ಮರಕೂಟ್ಲು ಇವರು ಆಗ್ರಹಿಸಿದ್ದಾರೆ. ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು...
ಪುತ್ತೂರು

ಮೊಟ್ಟೆತಡ್ಕ ಜೋರಾಬಿರವರ ಮಗಳ ಮದುವೆಗೆ ಆರ್ಥಿಕ ಸಹಾಯಧನ ನೀಡಿದ ಎಂ ಜಾರ್ಜ್ ಫೌಂಡೇಶನ್ ಹಾಗೂ ಮುತ್ತೂಟ್ ಫೈನಾನ್ಸ್ ಪುತ್ತೂರು ದರ್ಬೆ ಶಾಖೆ-ಕಹಳೆ ನ್ಯೂಸ್

ಪುತ್ತೂರು : ಎಂ ಜಾರ್ಜ್ ಫೌಂಡೇಶನ್ ಇದರ ವತಿಯಿಂದ ಮತ್ತು ಮುತ್ತೂಟ್ ಫೈನಾನ್ಸ್ ಪುತ್ತೂರು ದರ್ಬೆ ಶಾಖೆ ಇದರ ವತಿಯಿಂದ ರೂ. 15000/- ಆರ್ಥಿಕ ಸಹಾಯವನ್ನು ಮೊಟ್ಟೆತಡ್ಕ ಜೋರಾಬಿರವರ ಮಗಳ ಮದುವೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ಮೊಟ್ಟೆತಡ್ಕ ವಾರ್ಡ್ ಕೌನ್ಸಿಲರ್ ಶೈಲಾ ಪೈ, ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೆಣೈ, ಶಾಖಾ ಪ್ರಬಂಧಕರಾದ ಮಧುರ ಪಿ ಯರವರು ಮತ್ತು ಸಿಬ್ಬಂದಿಗಳಾದ ಕಾರ್ತಿಕ್ ಹಾಗೂ ವಿನೋದ್ ಅವರು ಉಪಸ್ಥಿತರಿದ್ದರು....
1 766 767 768 769 770 874
Page 768 of 874